Asianet Suvarna News Asianet Suvarna News

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ 11 ಬೆಕ್ಕುಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್, ಕೇಸ್‌ ಜಡಿದ ಪೊಲೀಸ್‌

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ  ಫ್ಲಾಟ್‌ನಲ್ಲಿ ಹಠಾತ್ ಅಸ್ವಸ್ಥಗೊಂಡು ಏಳು ಮರಿ ಬೆಕ್ಕುಗಳು ಸೇರಿದಂತೆ ಹನ್ನೊಂದು ಸಾಕು ಬೆಕ್ಕುಗಳು ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

Eleven pet cats poisoned to death at an apartment in Bengaluru gow
Author
First Published Feb 19, 2024, 12:09 PM IST

ಬೆಂಗಳೂರು (ಫೆ.19): 2023ರ ನವೆಂಬರ್‌ನಲ್ಲಿ ರಾಜರಾಜೇಶ್ವರಿನಗರದಲ್ಲಿರುವ ತಮ್ಮ ಪೋಷಕರ ಫ್ಲಾಟ್‌ನಲ್ಲಿ ಹಠಾತ್ ಅಸ್ವಸ್ಥಗೊಂಡು ಏಳು ಮರಿ ಬೆಕ್ಕುಗಳು ಸೇರಿದಂತೆ ಹನ್ನೊಂದು ಸಾಕು ಬೆಕ್ಕುಗಳು ನಿಗೂಢವಾಗಿ ಸಾವನ್ನಪ್ಪಿದ್ದವು. ಇದೀಗ, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಮತ್ತು ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಯ ವರದಿಗಳು ವಿಷ ಸೇವಿಸಿ ಸಾವನ್ನಪ್ಪಿವೆ ಎಂದು ದೃಢಪಡಿಸಿವೆ. ಅದೇ ಅಪಾರ್ಟ್‌ಮೆಂಟ್‌ನ ಮಹಿಳೆಯ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಕ್ಕುಗಳ ಮಾಲೀಕರಾಗಿರುವ ಉದ್ಯಮಿ ಶ್ಯಾಮ್‌ವೀರ್ ಶರ್ಮಾ  ಅವರು ತಮ್ಮ ಸಾಕುಪ್ರಾಣಿಗಳಿಗೆ ವಿಷ ನೀಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ದೂರು ದಾಖಲಿಸಿದ್ದಾರೆ. 

ಶ್ಯಾಮ್‌ವೀರ್ ಶರ್ಮಾ   ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದು,  ನ.10 ರಂದು ಹೆಚ್ಚಿನ ಬೆಕ್ಕುಗಳಿಗೆ ಅಸ್ವಸ್ಥತೆ ಉಂಟಾಗಿದೆ ಮತ್ತು ರಾತ್ರಿ ಒಂದು ಸತ್ತಿದೆ. ಅಂದಿನಿಂದ ಒಂದೊಂದಾಗಿ ಇತರ ಬೆಕ್ಕುಗಳು ಐದು ದಿನಗಳ ಅವಧಿಯಲ್ಲಿ ಸತ್ತವು. ನಾವು ಅವುಗಳನ್ನು ಜೆಪಿ ನಗರ ಮತ್ತು  ಆರ್.ಆರ್.ನಗರದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ನಮ್ಮ ಬೆಕ್ಕುಗಳನ್ನು ಬದುಕಿಸಿಕೊಳ್ಳಬೇಕೆಂದು ಚಿಕಿತ್ಸೆಗಾಗಿ 70,000 ರೂಪಾಯಿಗಳನ್ನು ಖರ್ಚು ಮಾಡಿದೆವು. ಆದರೆ ಎಲ್ಲವೂ ವ್ಯರ್ಥವಾಯಿತು ಎಂದು ಬೇಸರ ವ್ಯಕ್ತಪಡಸಿದ್ದಾರೆ. 

ಅದೇ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಬೆಕ್ಕುಗಳಿಗೆ ಆಹಾರ ನೀಡಲು ಉದ್ದೇಶಿಸಿರುವ ಬಟ್ಟಲುಗಳಿಗೆ ಪೌಡರ್ ಎಸೆದಿದ್ದು, ಅವುಗಳ ಮಾರಣಾಂತಿಕ ಕಾಯಿಲೆ ಮತ್ತು ನಂತರದ ಸಾವಿಗೆ ಕಾರಣವಾಯಿತು ಎಂದು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಪಡಿಸಿವೆ. ಶರ್ಮಾ ನೀಡಿದ ದೂರು ಅಪಾರ್ಟ್ಮಮೆಂಟ್‌ ಅಸೋಸಿಯೇಷನ್‌ಗೂ ತಲುಪಿತು. ನಮ್ಮ ಫ್ಲಾಟ್ ಮತ್ತು ಸಂಪರ್ಕ ಕಾರಿಡಾರ್‌ಗಳು ಸೇರಿದಂತೆ ಇಡೀ ಅಪಾರ್ಟ್‌ಮೆಂಟ್ ಅನ್ನು ಪರಿಶೀಲಿಸಿದ ಮ್ಯಾನೇಜರ್, ನಮ್ಮ ಬೆಕ್ಕುಗಳು ಅಪಾರ್ಟ್ಮೆಂಟ್ ಅನ್ನು ಎಂದಿಗೂ ಕೊಳಕು ಮಾಡಿಲ್ಲ ಎಂದು ವರದಿ ಮಾಡಿದ್ದಾರೆ.

ಆದರೂ, ಮಹಿಳೆ ಬೆಕ್ಕುಗಳನ್ನು ನಿಂದಿಸುವುದನ್ನು ಮುಂದುವರೆಸಿದ್ದು, ಆಕೆ ಹಾಕಿದ ವಿಷದ ಪೌಡರ್‌  ಸತು ಫಾಸ್ಫೇಟ್ ಮೂತ್ರಪಿಂಡಗಳು, ಶ್ವಾಸಕೋಶಗಳು, ಹೃದಯಗಳು ಮತ್ತು ಬೆಕ್ಕುಗಳ ಇತರ ಅಂಗಗಳನ್ನು ತೀವ್ರವಾಗಿ ಹಾನಿಗೊಳಿಸಿತು ಮತ್ತು ಬೆಕ್ಕುಗಳ ಸಾವಿಗೆ ಕಾರಣವಾಯಿತು.

ಶರ್ಮಾ ಅವರ ಫ್ಲಾಟ್ ಕಾರಿಡಾರ್‌ನಲ್ಲಿ ಫೀಡಿಂಗ್ ಬೌಲ್‌ಗಳನ್ನು ಬೆಕ್ಕಿಗಾಗಿ ಇರಿಸಿದ್ದರು. ಪ್ರತಿದಿನ ಬೆಕ್ಕುಗಳಿಗೆ ನೀರು ಅಥವಾ ಆಹಾರವನ್ನು ಒದಗಿಸುತ್ತಾರೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಭಾಗಿಯಾಗಿರುವ ಶಂಕಿತ ಮಹಿಳೆಯನ್ನು ವಿಚಾರಣೆಗೆ ಒಳಪಡಿಸುವ ಪ್ರಯತ್ನಕ್ಕೆ ಹಲವು ಅಡೆತಡೆಗಳು ಎದುರಾದವು. ಏಕೆಂದರೆ ಅವಳು ವೈಯಕ್ತಿಕವಾಗಿ ಹಾಜರಾಗುವ ಬದಲು ತನ್ನ ವಕೀಲರನ್ನು ಕಳುಹಿಸಿದಳು. ಅದೇನೇ ಇದ್ದರೂ, ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ಯೋಜಿಸಿದ್ದಾರೆ.

ಕಲಂ 428 ರ ಅಡಿಯಲ್ಲಿ ಪ್ರಾಣಿಗಳನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಮೂಲಕ ದುಷ್ಕೃತ್ಯಕ್ಕಾಗಿ ಪ್ರಕರಣವನ್ನು ದಾಖಲಿಸಲಾಗಿದೆ, ಅಪರಾಧಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ನಾವು ಆರೋಪಪಟ್ಟಿ ಸಲ್ಲಿಸುತ್ತೇವೆ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಬೆಕ್ಕು ಬಹಳ ಜನರಿಗೆ ಮುದ್ದಿನ ಪ್ರಾಣಿ, ಇದಕ್ಕೆ ಪ್ರತಿಮನೆಯಲ್ಲೂ ಪ್ರೀತಿಯ ಸ್ಥಾನವಿದೆ. ಮನೆಯ ಅಕ್ಕರೆ ಸದಸ್ಯರಾಗಿ ಬೆಕ್ಕುಗಳು ಮನೆ ತುಂಬಾ ಓಡಾಡಿ ಮನೆಯವರಿಗೂ ಖುಷಿ ನೀಡುತ್ತವೆ. ಕೆಲವರು ಬೆಕ್ಕನ್ನು ಮಂಗಳಕರವೆಂದು ಪರಿಗಣಿಸುತ್ತಾರೆ ಮತ್ತು ಕೆಲವರು ಅದನ್ನು ಅಶುಭವೆಂದು ಪರಿಗಣಿಸುತ್ತಾರೆ. ಆದರೆ ಮೂಕ ಪ್ರಾಣಿಯ ಮೇಲಿನ ಈ ರೀತಿಯ ಕತ್ಯ ಅಮಾನವೀಯವಾಗಿದೆ.

Follow Us:
Download App:
  • android
  • ios