Asianet Suvarna News Asianet Suvarna News

ಮಹಿಳಾ ಟಿ20  ಚಾಲೆಂಜ್; ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಮಿಥಾಲಿ ಪಡೆ!

ಮಹಿಳಾ ಟಿ20  ಚಾಲೆಂಜ್/ ಗೆದ್ದು ಬೀಗಿದ ವೆಲಾಸಿಟಿ/ ಮಿಥಾಲಿ ರಾಜ್ ಪಡೆಗೆ 5  ವಿಕೆಟ್ ಗೆಲುವು/ ಮೊದಲ ಪಂದ್ಯದಲ್ಲಿ ಸೋಲು ಕಂಡ ಚಾಂಪಿಯನ್ಸ್

women s T20 Challenge Velocity Beat Supernovas by 5 wickets mah
Author
Bengaluru, First Published Nov 4, 2020, 11:17 PM IST

ಶಾರ್ಜಾ(ನ.02): ಮಹಿಳಾ ಟಿ20 ಚಾಲೆಂಜ್ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ ಫೀಲ್ಡಿಂಗ್ ಆಯ್ದುಕೊಂಡಿದ್ದ ನಿರ್ಧಾರವನ್ನು ಸಾಬೀತು ಮಾಡಿದೆ. ಸೂಪೊರ್ ನೋವಾ ವಿರುದ್ಧ ಐದು ವಿಕೆಟ್ ಗಳ ಅಂತರದ ಜಯ ಸಾಧೀಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸೂಪರ್ ನೋವಾ ಇಪ್ಪತ್ತು ಓವರ್ ಗಳಲ್ಲಿ  ಎಂಟು ವಿಕೆಟ್ ಕಳೆದುಕೊಂಡು 126  ರನ್ ಗಳಿಸಿತ್ತು. ಈ ಗುರಿನ್ನು ವೆಲಾಸಿಟಿ ದಾಟಿ ಜಯಭೇರಿ ಬಾರಿಸಿದೆ.

ಐಪಿಎಲ್ ಪ್ಲೇ ಆಪ್ ಲೆಕ್ಕಾಚಾರಗಳೇನು?

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ಈಗಾಗಲೇ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡಕ್ಕೆ ಮಿಥಾಲಿ ರಾಜ್ ಪಡೆ ಶಾಕ್ ನೀಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸೂಪರ್ ನೋವಾಕ್ಕೆ ಶ್ರೀಲಂಕಾದ ಅಟಪಟ್ಟು ನೆರವಾದರು . 39  ಎಸೆತದಲ್ಲಿ 44 ರನ್ ಗಳಿಸಿದರು. ನಾಯಕಿ ಹರ್ಮನ್ 31 ರನ್ ಕೊಡುಗೆ ನೀಡಿದರು. ಕೊನೆಯ ಹಂತದಲ್ಲಿ ಒಂದೆ ಸಮನೆ ವಿಕೆಟ್ ಕಳೆದುಕೊಂಡ ಕಾರಣ ಅಲ್ಪ ಮೊತ್ತಕ್ಕೆ ಕುಸಿಯಬೇಕಾಯಿತು.

ನಂತರ ಗುರಿ ಬೆನ್ನು ಹತ್ತಿದ್ದ ವೆಲಾಸಿಟಿಗೆ ಆರಂಭಿಕ ಆಘಾತ  ಆಗಿತ್ತು. ಒಂದು ಹಂತದಲ್ಲಿ ಪಂದ್ಯ ಸಂಪೂರ್ಣ ಸೂಪರ್ ನೋವಾ ಹಿಡಿತದಲ್ಲಿತ್ತು. ಆದರೆ ಕೀಪರ್ ಸುಷ್ಮಾ ವರ್ಮಾ ಮತ್ತು  ಆಲ್ ರೌಂಡರ್ ಸನ್ನೆ ಲೂಸ್ ಅವರ ಜತೆಯಾಟ ವೆಲಾಸಿಟಿಗೆ ಗೆಲುವು ತಂದುಕೊಟ್ಟಿತು. ವೆಲಾಸಿಟಿ ಪರ ಸುಷ್ಮಾ 34 ರನ್ ಗಳಿಸಿದರೆ ಕನ್ನಡತಿ ವೇದಾ ಕೃಷ್ಣಮೂರ್ತಿ  29  ರನ್ ಕೊಡಗೆ ನೀಡಿದರು. ಆದರೆ ಕೇವಲ  21  ಎಸೆತದಲ್ಲಿ  37 ರನ್ ಗಲಿಸಿದ ಲೂಸ್ ಪಂದ್ಯದ ದಿಕ್ಕನ್ನು  ವೆಲಾಸಿಟಿ ಕಡೆ ಮಾಡಿದರು.

Follow Us:
Download App:
  • android
  • ios