ವೈಭವ್ ಸೂರ್ಯವಂಶಿ 35 ಎಸೆತದ ಶತಕ, ಇನ್ನೂ 25 ಎಸೆತ ಬಾಕಿ ಇರುವಂತೆ 212 ಚಚ್ಚಿದ ರಾಜಸ್ಥಾನ!

Synopsis
14 ವರ್ಷದ ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್‌ನಲ್ಲಿ ಸತತ 5 ಸೋಲುಗಳ ನಂತರ ಜಯ ಸಾಧಿಸಿದೆ. ಗುಜರಾತ್ ತಂಡವು ಗಳಿಸಿದ್ದ 212 ರನ್‌ಗಳ ಗುರಿಯನ್ನು ರಾಜಸ್ಥಾನ್ ಕೇವಲ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಲುಪಿತು.
ಜೈಪುರ (ಏ.28): 14 ವರ್ಷದ ವೈಭವ್ ಸೂರ್ಯವಂಶಿ ಅವರ ಶತಕದ ಸಹಾಯದಿಂದ, ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್‌ನಲ್ಲಿ ಸತತ 5 ಸೋಲುಗಳ ನಂತರ ಜಯ ಸಾಧಿಸಿದೆ. ರಾಜಸ್ಥಾನ ರಾಯಲ್ಸ್ ತಂಡ 212 ರನ್‌ಗಳ ಟಾರ್ಗೆಟ್‌ಅನ್ನು ಕೇವಲ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಬೆನ್ನಟ್ಟಿತ್ತು.
ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಭರ್ಜರಿ ಬ್ಯಾಟಿಂಗ್ ಮಾಡಿದ ಗುಜರಾತ್ 4 ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿತು. ರಾಜಸ್ಥಾನ ಇನ್ನೂ 25 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು.
ಗುಜರಾತ್ ಪರ ಶುಭಮನ್ ಗಿಲ್ 84 ರನ್ ಗಳಿಸಿದರು ಮತ್ತು ಜೋಸ್ ಬಟ್ಲರ್ 50 ರನ್ ಬಾರಿಸಿದರು. ರಾಜಸ್ಥಾನ್ ಪರ ವೈಭವ್ ಕೇವಲ 38 ಎಸೆತಗಳಲ್ಲಿ 101 ರನ್ ಬಾರಿಸಿ ಅಬ್ಬರಿಸಿದರೆ, ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ 70 ರನ್ ಬಾರಿಸಿ ಅಜೇಯವಾಗುಳಿದರು. ರಿಯಾನ್ ಪರಾಗ್ 32 ರನ್ ಗಳಿಸಿ ಔಟಾಗದೆ ಉಳಿದರು. ಮಹೀಶ್ ತೀಕ್ಷಣ 2 ವಿಕೆಟ್ ಪಡೆದರು. ವೈಭವ್ ಐಪಿಎಲ್ ಮತ್ತು ಟಿ20ಯಲ್ಲಿ ಅರ್ಧಶತಕ ಮತ್ತು ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರರಾದರು. ಅವರು 35 ಎಸೆತಗಳಲ್ಲಿ ಶತಕ ಗಳಿಸಿದರು, ಇದು ಐಪಿಎಲ್‌ನಲ್ಲಿ ಯಾವುದೇ ಭಾರತೀಯ ಆಟಗಾರನಿಂದ ಕನಿಷ್ಠ ಎಸೆತಗಳಲ್ಲಿ ದಾಖಲಾದ ಶತಕವಾಗಿದೆ.
ವೈಭವ ತಾಂಡವ, ಟಿ20 ಇತಿಹಾಸ ಬರೆದ 14 ವರ್ಷದ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ ಶತಕ!
200ಕ್ಕಿಂತ ಅಧಿಕ ಮೊತ್ತವನ್ನು ಅತೀ ಕಡಿಮೆ ಓವರ್‌ಗಳಲ್ಲಿ ಚೇಸ್ ಮಾಡಿದ ದಾಖಲೆಯನ್ನೂ ರಾಜಸ್ಥಾನ ಮಾಡಿತು. ಇದಕ್ಕೂ ಮುನ್ನ 2024ರಲ್ಲಿ ಗುಜರಾತ್ ವಿರುದ್ಧ ಅಹಮದಾಬಾದ್‌ನಲ್ಲಿ ಆರ್‌ಸಿಬಿ 16 ಓವರ್‌ಗಳಲ್ಲಿ 200ಕ್ಕೂ ಅಧಿಕ ಮೊತ್ತವನ್ನು ಚೇಸ್ ಮಾಡಿತ್ತು. ಇದು ರಾಜಸ್ಥಾನ ತಂಡದ ನಾಲ್ಕನೇ 200 ಪ್ಲಸ್ ರನ್ ಚೇಸ್ ಎನಿಸಿದೆ. 2020ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಶಾರ್ಜಾದಲ್ಲಿ ನಡೆದಿದ್ದ ಪಂದ್ಯದಲ್ಲಿ 224 ರನ್ ಚೇಸ್ ಮಾಡಿತ್ತು. ಅದೇ ವರ್ಷ ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ ಇಷ್ಟೇ ಮೊತ್ತವನ್ನು ಚೇಸ್ ಮಾಡಿತ್ತು. 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 215 ರನ್ ಚೇಸ್ ಮಾಡಿತ್ತು.
8ನೇ ಕ್ಲಾಸ್ ಹುಡುಗನಿಂದ ಐಪಿಎಲ್‌ನಲ್ಲಿ ಫಿಫ್ಟಿ, ಇತಿಹಾಸ ಬರೆದ ವೈಭವ್ ಸೂರ್ಯವಂಶಿ!