Asianet Suvarna News Asianet Suvarna News

ನಿಗೂಢ ಸಾವನ್ನಪ್ಪಿದ ನಟಿ ಶ್ರೀದೇವಿಗೆ ಹೀಗೊಂದು ನಮನ: ಪಾಲಿಕೆಯಿಂದ ರಸ್ತೆಗೆ ನಟಿಯ ಹೆಸರು

ನಿಗೂಢ ಸಾವನ್ನಪ್ಪಿದ ನಟಿ ಶ್ರೀದೇವಿಗೆ ಹೀಗೊಂದು ನಮನ. ಪಾಲಿಕೆಯಿಂದ ರಸ್ತೆಗೆ ನಟಿಯ ಹೆಸರು ಇಡಲು ನಿರ್ಧಾರ. ಇಲ್ಲಿದೆ ಡಿಟೇಲ್ಸ್​...
 

BMC pays ode to Sridevi by naming junction of Lokhandwala Complex as Shreedevi Kapoor Chowk suc
Author
First Published May 10, 2024, 4:59 PM IST

ಬಾಲಿವುಡ್ ನಟಿ ಶ್ರೀದೇವಿ ನಿಧನರಾಗಿ ಹಲವು ವರ್ಷಗಳು ಕಳೆದರೂ ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ.   ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ  ಕಂಡವರು.  80-90ರ ದಶಕದಲ್ಲಿ ಬಾಲಿವುಡ್​ ಚಿತ್ರದಲ್ಲಿ ನಂ.1 ಪಟ್ಟವನ್ನು ಯಾರಿಗೂ ಬಿಟ್ಟುಕೊಡದಿದ್ದ ಚೆಲುವೆ ಶ್ರೀದೇವಿ (Shreedevi). ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು. 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್‌ ಪ್ರಶಸ್ತಿ ಸೇರಿದಂತೆ ತಮ್ಮ ನಟನೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆದಿವೆ. 

ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.  1963ರಲ್ಲಿ ಹುಟ್ಟಿದ್ದ ಈ ತಾರೆ   ಬದುಕಿರುತ್ತಿದ್ದರೆ, 62 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. ಆದರೆ ವಯಸ್ಸಾದರೂ ಕೊನೆಯವರೆಗೂ ಆಕೆಯ ಮುಖದ ತೇಜಸ್ಸು ಎಂಥವರನ್ನೂ ಮರುಳು ಮಾಡುವಂತಿತ್ತು.

ನಟಿ ಶ್ರೀದೇವಿಯ ನಿಗೂಢ ಸಾವಿಗೆ ಈಗೇನಿದು ಟ್ವಿಸ್ಟ್​? ರಹಸ್ಯವಾಗಿದ್ದ ತಂಗಿ ಶ್ರೀಲತಾ ಹೆಸರು ಮುನ್ನೆಲೆಗೆ!

ಇದೀಗ ನಟಿ ಶ್ರೀದೇವಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಮುಂಬೈ ಮಹಾನಗರ ಪಾಲಿಕೆ ಬಿಎಂಸಿ ಲೋಖಂಡವಾಲಾ ಕಾಂಪ್ಲೆಕ್ಸ್‌ನ ಜಂಕ್ಷನ್‌ಗೆ ಶ್ರೀದೇವಿ ಕಪೂರ್ ಚೌಕ್ ಎಂದು ಹೆಸರಿಡಲು ಸಕಲ ಸಿದ್ಧತೆ ನಡೆಸಿದೆ. ಈ ಮೂಲಕ ನಟಿಗೆ ಗೌರವ ಸಮರ್ಪಣೆ ಮಾಡುತ್ತಿದೆ.   ಮಾಹಿತಿಯ ಪ್ರಕಾರ, ಶ್ರೀದೇವಿಯನ್ನು ಗೌರವಿಸಲು BMC ಈ ಜಂಕ್ಷನ್‌ಗೆ ಶ್ರೀದೇವಿ ಕಪೂರ್ ಚೌಕ್ ಎಂದು ಹೆಸರಿಡಲು ನಿರ್ಧರಿಸಿದೆ. ಇದಕ್ಕೆ ಕಾರಣ,  ಈ ರಸ್ತೆಯಲ್ಲಿರುವ ಗ್ರೀನ್ ಎಕರ್ಸ್ ಟವರ್​ನಲ್ಲಿ ಶ್ರೀದೇವಿ ವಾಸವಿದ್ದರು. ಆಕೆಯ ಕೊನೆಯ ಪ್ರಯಾಣವೂ ಇದೇ ರಸ್ತೆಯ ಮೂಲಕವೇ ಸಾಗಿತ್ತು.  

 ಅಷ್ಟಕ್ಕೂ ರಸ್ತೆಗಳಿಗೆ ನಟರ ಹೆಸರನ್ನು ಇಡುತ್ತಿರುವುದು ಇದೇ ಮೊದಲಲ್ಲ. ಸಿಕ್ಕಿಂನ ರಸ್ತೆಯೊಂದಕ್ಕೆ 'ಬಿಗ್ ಬಿ' ಎಂದು ಹೆಸರಿಸಲಾಗಿದೆ. ಇದಲ್ಲದೆ ಸಿಂಗಪುರದಲ್ಲಿರುವ ಆರ್ಕಿಡ್‌ಗೆ ‘ಡೆಂಡ್ರೊಬಿಯಂ ಅಮಿತಾಭ್ ಬಚ್ಚನ್’ ಎಂದು ಹೆಸರಿಡಲಾಗಿದೆ. ಕೆನಡಾದ ರಸ್ತೆಯೊಂದಕ್ಕೆ ‘ರಾಜ್ ಕಪೂರ್ ಕ್ರೆಸೆಂಟ್’ ಎಂದು ಹೆಸರಿಡಲಾಗಿದೆ. ಇನ್ನು ಶ್ರೀದೇವಿಯ ಸಾವಿ ಕುರಿತು ಹೇಳುವುದಾದರೆ, 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ,  ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್​ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್​ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್​ ಬಾತ್​ರೂಮ್​ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್​ಟಬ್​ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. 

ಬೆನ್ನ ಹಿಂದೆ ಬಾಲ್ ತೋರಿಸಿದ ಜಾಹ್ನವಿ ಕಪೂರ್, ಥೂ ನೆಟ್ಟಿಗರು ಹಿಂಗಾ ಕಮೆಂಟ್ ಮಾಡೋದು?

Follow Us:
Download App:
  • android
  • ios