userpic
user icon
0 Min read

ಕೈಗೆಟುಕುವ ಬೆಲೆಯ ಹೊಚ್ಚ ಹೊಸ ಮಾರುತಿ ಬ್ರೆಜ್ಜಾ CNG ಕಾರು ಬಿಡುಗಡೆ, 26 ಕಿ.ಮೀ ಮೈಲೇಜ್!

Maruti Suzuki launch  fuel efficiency Brezza S CNG variant with RS 9 14 lakh price range ckm

Synopsis

ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಪೈಕಿ ಮಾರುತಿ ಬ್ರೆಜ್ಜಾ ಭಾರಿ ಬೇಡಿಕೆಯ ಕಾರು. ಇದೀಗ ಸಿಎನ್‌ಜಿ ರೂಪದಲ್ಲಿ ಬ್ರೆಜ್ಜಾ ಕಾರು ಬಿಡುಗಡೆಯಾಗಿದೆ. ಕೈಗೆಟುವ ಬೆಲೆ ಜೊತೆಗೆ 26 ಕಿಲೋಮೀಟರ್ ಮೈಲೇಜ್ ನೀಡಲಿದೆ. ನೂತನ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಮಾ.17): ಮಾರುತಿ ಸುಜುಕಿ ಭಾರತದಲ್ಲಿ ಗರಿಷ್ಠ ಮಾರುಕಟ್ಟೆ ಪಾಲು ಹೊಂದಿದೆ. ಮಾರುತಿ ಸುಜುಕಿ ಕಾರುಗಳಿಗೆ ಬಾರಿ ಬೇಡಿಕೆ ಇದೆ. ಕೈಗೆಟುಕವ ದರ, ಕಡಿಮೆ ನಿರ್ವಹಣೆ ವೆಚ್ಚ, ಗರಿಷ್ಠ ಮೈಲೇಜು ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಮಾರುತಿ ಸುಜುಕಿ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮಾರುತಿ ಸುಜುಕಿ ಕಾರುಗಳ ಪೈಕಿ ಬ್ರೆಜ್ಜಾ ಅತೀ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇದೀಗ ಮಾರುತಿ ಬ್ರೆಜ್ಜಾ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಸಿಎನ್‌ಜಿ ವೇರಿಯೆಂಟ್ ಬ್ರೆಜ್ಜಾ S ಕಾರು ಮಾರುಕಟ್ಟೆ ಪ್ರವೇಶಿಸಿದೆ. ಒಂದು ಕೆಜಿ ಸಿಎನ್‌ಜಿಗೆ ಬರೋಬ್ಬರಿ 25.51 ಕಿ.ಮೀ ಮೈಲೇಜ್ ನೀಡಲಿದೆ. ಇಷ್ಟೇ ಅಲ್ಲ ಮತ್ತಷ್ಟು ಆಕರ್ಷಕ ಫೀಚರ್ಸ್‌ನೊಂದಿಗೆ ಬ್ರೆಜ್ಜಾ ಸಿಎನ್‌ಜಿ ಕಾರು ಲಾಂಚ್ ಆಗಿದೆ.

ಹೊಚ್ಚ ಹೊಸ ಮಾರುತಿ ಸುಜುಕಿ ಬ್ರೆಜ್ಜಾ ಸಿಎನ್‌ಜಿ ಕಾರಿನ ಬೆಲೆ 9.14 ಲಕ್ಷ ರೂಪಾಯಿ(ಎಕ್ಸ್‌ ಶೋ ರೂಂ) ಆರಂಭಗೊಳ್ಳುತ್ತಿದೆ. ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ. ನೂತನ ಕಾರು 1.5 ಲೀಟರ್ ಡ್ಯುಯೆಲ್ ಜೆಟ್ ಎಂಜಿನ್ ಹೊಂದಿದೆ.

ಆಲ್‌-ನ್ಯೂ ಮಾರುತಿ ಸುಜುಕಿ ಬ್ರೀಝಾ ಬಿಡುಗಡೆ: ಬೆಲೆ 7.99 ಲಕ್ಷ ರೂ.ಗಳಿಂದ ಆರಂಭ

ಮಾರುತಿ ಬ್ರೆಜ್ಜಾ ಸಿಎನ್‌ಜಿ ಕಾರಿನ ಬೆಲೆ
LXi S CNG: 9,14,00 ರೂಪಾಯಿ(ಎಕ್ಸ್ ಶೋ ರೂಂ) 
VXi S CNG: 10,49,500 ರೂಪಾಯಿ (ಎಕ್ಸ್ ಶೋ ರೂಂ) 
ZXi S CNG: 11,89,500 ರೂಪಾಯಿ(ಎಕ್ಸ್ ಶೋ ರೂಂ)   
ZXi S CNG Dual Tone: 12,05,50 ರೂಪಾಯಿ(ಎಕ್ಸ್ ಶೋ ರೂಂ)  

ಬ್ರೆಜ್ಜಾ CNG ಕಾರು ನಕ್ಸ್ಟ್ ಜನರೇಶನ್ ಕೆ ಸೀರಿಸ್ 1.5 ಲೀಟರ್ ಡ್ಯುಯೆಲ್ ಜೆಟ್ ಹಾಗೂ ಡ್ಯುಯೆಲ್ ವಿವಿಟಿ ಎಂಜಿನ್ ಹೊಂದಿದೆ.   86.6bhp ಪವರ್ ಹಾಗೂ 121.5Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. 

54 ತಿಂಗಳಲ್ಲಿ ಮಹತ್ವದ ಮೈಲಿಗಲ್ಲು ದಾಟಿದ ಮಾರುತಿ ಬ್ರಜಾ!

ಹೊಚ್ಚ ಹೊಸ ಮಾರುತಿ ಬ್ರೆಜ್ಜಾ ಸಿಎನ್‌ಜಿ ಕಾರು ಗೇಮ್ ಚೇಂಜರ್ ಕಾರಾಗಲಿದೆ. ಹೊಸ ವಿನ್ಯಾಸ, ಹೊಸ ಎಂಜಿನ್, ಉತ್ತಮ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರು ವಿನ್ಯಾಸಗೊಳಿಸಲಾಗಿದೆ. ಕಾರಿನಲ್ಲಿ ಅತ್ಯುತ್ತಮ ಪ್ರಯಾಣ ಅನುಭವ ಜೊತೆಗೆ ಡ್ರೈವಿಂಗ್ ಅನುಭವ ಸಿಗಲಿದೆ ಎಂದು ಮಾರುತಿ ಸುಜುಕಿ ಹಿರಿಯ ಅಧಿಕಾರಿ ಶಶಾಂಕ ಶ್ರೀವಾತ್ಸವ ಹೇಳಿದ್ದಾರೆ.

ಕಳೆದ ತಿಂಗಳು ದಾಖಲೆಯ 3.35 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ
ಕಳೆದ ತಿಂಗಳು ದೇಶಾದ್ಯಂತ 3.35 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಈ ಮೂಲಕ ವಾಹನ ಉತ್ಪಾದನಾ ಕಂಪನಿಗಳು ಮಾರಾಟದಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.11ರಷ್ಟುಹೆಚ್ಚಳವಾಗಿದೆ. ಜೊತೆಗೆ ಫೆಬ್ರವರಿ ತಿಂಗಳಲ್ಲಿ ಯಾವುದೇ ವರ್ಷವೊಂದರಲ್ಲಿ ದಾಖಲಾದ ಗರಿಷ್ಠ ಮಾರಾಟದ ಪ್ರಮಾಣವಾಗಿದೆ. ಈ ಪೈಕಿ ಮಾರುತಿ ಸುಜುಕಿ ಶೇ.11ರಷ್ಟು(1.55 ಲಕ್ಷ), ಹ್ಯುಂಡೈ ಶೇ.7ರಷ್ಟು(47001), ಮಹೀಂದ್ರ ಶೇ.10 (30358), ಕಿಯಾ ಶೇ.36 (24600), ಬಜಾಜ್‌ ಆಟೋ ಶೇ.36ರಷ್ಟು(1.53 ಲಕ್ಷ) ಪ್ರಗತಿ ಸಾಧಿಸಿವೆ.
 

Latest Videos