ಮೇ 1 ರಿಂದ ಹಿರಿಯ ನಾಗರಿಕರಿಗೆ ನೆಮ್ಮದಿ, ಬದಲಾಗಲಿದೆ ಈ ಎಲ್ಲ ನಿಯಮ

Synopsis
ಏಪ್ರಿಲ್ ಮುಗಿದು ಮೇ ತಿಂಗಳು ಬರ್ತಿದೆ. ಒಂದಿಷ್ಟು ಹೊಸ ಯೋಜನೆಗಳು ಹೊಸ ತಿಂಗಳಿನಿಂದ ಶುರು ಆಗ್ತಿವೆ. ಈ ಬಾರಿ ಹಿರಿಯ ನಾಗರಿಕರಿಗಾಗಿಯೇ ಕೆಲ ಸೌಲಭ್ಯಗಳನ್ನು ಜಾರಿಗೆ ತರಲಾಗ್ತಿದೆ.
ಹಿರಿಯ ನಾಗರಿಕರು (Senior citizens) ಜೀವನ ಮತ್ತಷ್ಟು ಸುರಕ್ಷಿತ, ಆರಾಮದಾಯಕ, ಆರ್ಥಿಕ ನೆಮ್ಮದಿಯಿಂದ ಕೂಡಿರಲಿ ಎನ್ನುವ ಕಾರಣಕ್ಕೆ ಭಾರತ ಸರ್ಕಾರ, ಪ್ರತಿ ವರ್ಷ ಹಿರಿಯ ನಾಗರಿಕರಿಗಾಗಿ ಅನೇಕ ಯೋಜನೆ (Scheme) ಹಾಗೂ ಸೌಲಭ್ಯಗಳನ್ನು ಜಾರಿಗೆ ತರುತ್ತದೆ. ಈ ವರ್ಷ ಕೂಡ ಕೇಂದ್ರ ಸರ್ಕಾರ (Central Government), ಹಿರಿಯ ನಾಗರಿಕರಿಗಾಗಿ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಮೇ ಒಂದರಿಂದ ನಾಲ್ಕು ಬದಲಾವಣೆ ಮೂಲಕ ಹಿರಿಯ ನಾಗರಿಕರ ಮುಖದಲ್ಲಿ ನಗು ಮೂಡಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳು, ಹಿರಿಯ ನಾಗರಿಕರ ಆರ್ಥಿಕ ಸ್ಥಿತಿಯನ್ನು ಬಲಗೊಳಿಸುವ ಜೊತೆಗೆ ಆರೋಗ್ಯ, ಪ್ರಯಾಣ, ತೆರಿಗೆ ಹಾಗೂ ಪಿಂಚಣಿ ಸೇರಿದಂತೆ ಸಾಮಾನ್ಯ ಸೇವೆ ಕೂಡ ಸುಲಭವಾಗಿ ಲಭ್ಯವಾಗಲಿದೆ.
ಮೇ 1 ರಿಂದ ಜಾರಿಗೆ ಬರಲಿದೆ ಈ ನಿಯಮ :
ಹಿರಿಯ ನಾಗರಿಕರ ಉಳಿತಾಯ ಯೋಜನೆ : ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಉಳಿತಾಯ ಯೋಜನೆಯಾಗಿದೆ. 60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಈ ಯೋಜನೆ ಜಾರಿಗೆ ಬಂದಿದೆ. 2025ರಿಂದ ಈ ಯೋಜನೆಯಡಿ ಸಿಗುವ ಬಡ್ಡಿ ದರದಲ್ಲಿ ಬದಲಾವಣೆ ಮಾಡಲಾಗಿದೆ. ಮೇ. ಒಂದರಿಂದ ಶೇಕಡಾ 8.2ರಷ್ಟು ಬಡ್ಡಿ ಲಭ್ಯವಾಗಲಿದೆ. ಈ ಯೋಜನೆ ಲಾಭ ಪಡೆಯಲು ಸಾವಿರ ರೂಪಾಯಿ ಕನಿಷ್ಠ ಹೂಡಿಕೆ ಮಾಡ್ಬೇಕು. ಗರಿಷ್ಠ ಮೂವತ್ತು ಲಕ್ಷದವರೆಗೆ ಹೂಡಿಕೆ ಮಾಡ್ಬಹುದು. ಈ ಯೋಜನೆ ಅವಧಿ ಐದು ವರ್ಷವಿದ್ದು, ತೆರಿಗೆ ವಿನಾಯತಿ ಕೂಡ ಲಭ್ಯವಿದೆ.
ಪ್ರತಿ ದಿನ ಕೇವಲ 7 ರುಪಾಯಿ ಉಳಿಸಿ, ತಿಂಗಳಿಗೆ ₹5000 ಸಾವಿರ ಪಿಂಚಣಿ ಪಡೆಯಿರಿ!
ನಿವೃತ್ತಿ ಯೋಜನೆಯಲ್ಲಿ ಬದಲಾವಣೆ : ಸರ್ಕಾರ ಮೇ ಒಂದರಿಂದ ನಿವೃತ್ತಿ ಯೋಜನೆಯಲ್ಲಿ ಅನೇಕ ಬದಲಾವಣೆ ತರಲಿದೆ. ಇದ್ರಲ್ಲಿ ಲಕ್ಷಾಂತರ ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಮತ್ತು ವಿಕಲಾಂಗರಿಗೆ ಲಾಭವಾಗಲಿದೆ. ಇನ್ಮುಂದೆ ಈ ಯೋಜನೆಯಡಿ ಪ್ರತಿ ವರ್ಷ ಫಿಜಿಕಲ್ ಲೈಫ್ ಸರ್ಟಿಫಿಕೆಟ್ ನೀಡುವ ಅಗತ್ಯವಿರೋದಿಲ್ಲ. ಮೊಬೈಲ್ ಅಥವಾ ಅಪ್ಲಿಕೇಷನ್ ಮೂಲಕ ನೀವು ಈ ಸರ್ಟಿಫಿಕೆಟ್ ಜಮಾ ಮಾಡಬಹುದು. ಎಲ್ಲ ಫಲಾನುಭವಿಗಳಿಗೆ ಆಧಾರ್ ಪರಿಶೀಲನೆ ಕಡ್ಡಾಯವಾಗಲಿದೆ. ಇನ್ಮುಂದೆ ಅವರ ಕೆಲಸಕ್ಕೆ ತಕ್ಕಂತೆ ಪಿಂಚಣಿ ಮೂರು ಸಾವಿರದಿಂದ ಹತ್ತು ಸಾವಿರದವರೆಗೆ ಲಭ್ಯವಾಗಲಿದೆ. ಪಿಂಚಣಿ ನೇರವಾಗಿ ಬ್ಯಾಂಕ್ ಖಾತೆಗೆ ಹೋಗಲಿದೆ.
ತೆರಿಗೆ ವಿನಾಯಿತಿ : ಕೇಂದ್ರ ಸರ್ಕಾರ ಈ ವರ್ಷದ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ನೀಡಿದೆ. ಹನ್ನೆರಡು ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿದವರು ತೆರಿಗೆ ಪಾವತಿಸಬೇಕಾಗಿಲ್ಲ. ಫಿಕ್ಸೆಡ್ ಡೆಪೋಸಿಟ್ ಮತ್ತು ಉಳಿತಾಯ ಖಾತೆ ಮೇಲಿನ ಟಿಡಿಎಸ್ ಮಿತಿ ಒಂದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 75 ವರ್ಷ ಮೇಲ್ಪಟ್ಟ ನಾಗರಿಕರ ತೆರಿಗೆ ಪಾವತಿ ಸುಲಭವಾಗಿದೆ.
ಹಿರಿಯ ನಾಗರಿಕರಿಗೆ ಡಿಜಿಟಲ್ ಸೇವೆ : ಡಿಜಿಟಲ್ ಇಂಡಿಯಾ ಮಶಿನ್ ಅಡಿಯಲ್ಲಿ ಕೇಂದ್ರ ಸರ್ಕಾರ, ಹಿರಿಯ ನಾಗರಿಕರಿಗಾಗಿ ಅನೇಕ ಡಿಜಿಟಲ್ ಸೇವೆ ಶುರು ಮಾಡಿದೆ. ಡಿಜಿಟಲ್ ಲೈಫ್ ಸರ್ಟಿಫಿಕೆಟ್, ಆಧಾರ್ ವೆರಿಫಿಕೇಷನ್ ಸೌಲಭ್ಯವನ್ನು ನೀಡುವ ಜೊತೆಗೆ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ಇದಲ್ಲದೆ, ಎಲ್ಲ ಯೋಜನೆಗೆ ಆನ್ಲೈನ್ ಮೂಲಕವೇ ಹಿರಿಯ ನಾಗರಿಕರು ಅರ್ಜಿ ಸಲ್ಲಿಸಬಹುದು.
ಶೀಘ್ರದಲ್ಲಿಯೇ 70,000 ರೂ.ಗೆ 10 ಗ್ರಾಂ ಬಂಗಾರ; ₹27,000 ಇಳಿಕೆ ಮಾಹಿತಿ ಕೊಟ್ಟ ಚಿನ್ನದ ಗಣಿಯ ಸಿಇಒ
ಉಚಿತ ತಪಾಸಣೆ : ಆಯುಷ್ ಮಾನ್ ಯೋಜನೆ ಅಡಿ ಐದು ಲಕ್ಷದವರೆಗೆ ಕ್ಯಾಶ್ ಲೆಸ್ ಸೇವೆ ಲಭ್ಯವಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ವೃದ್ಧರಿಗಾಗಿ ವಿಶೇಷ ಹೆಲ್ತ್ ಕಾರ್ಡ್ ಲಭ್ಯವಾಗಲಿದೆ.
ಪ್ರಯಾಣಿಕರಿಗೆ ಸಿಗಲಿದೆ ಈ ಸೌಲಭ್ಯ : ಅರವತ್ತು ವರ್ಷ ಮೇಲ್ಪಟ್ಟ ಪುರುಷರು ಹಾಗೂ ಐವತ್ತೆಂಟು ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರಯಾಣ ಶುಲ್ಕದಲ್ಲಿ ರಿಯಾಯಿತಿ ಲಭ್ಯವಿದೆ. ಅಲ್ಲದೆ ಅನೇಕ ರಾಜ್ಯಗಳಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.