Asianet Suvarna News Asianet Suvarna News

ಕೇಂದ್ರ ಬಜೆಟ್ ದಿನವೆ ಎಲ್‌ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಜನಪ್ರಿಯ ಘೋಷಣೆಗಳಿಲ್ಲದಿದ್ದರೂ ಜನಸಾಮಾನ್ಯರಿಗೆ ಯಾವುದೇ ಹೊರೆಯಾಗಿಲ್ಲ. ಇದರ ನಡುವೆ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ 
 

LPG Commercial Cylinder price hiked on Union Budget 2024 day check price list ckm
Author
First Published Feb 1, 2024, 3:29 PM IST

ನವದೆಹಲಿ(ಫೆ.01) ಕೇಂದ್ರ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ತೆರಿಗೆ ಸೇರಿದಂತೆ ಕೆಲ ಮಹತ್ವದ ವಿಚಾರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜನಪ್ರಿಯ ಘೋಷಣೆಗಳಿಲ್ಲ, ಆದರೆ ವಿತ್ತೀಯ ನಿಯಂತ್ರಣ ಬಜೆಟ್ ಮಂಡನೆಯಾಗಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ ದೇಶದಲ್ಲಿ ಎಲ್‌ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 14 ರೂಪಾಯಿ ಹೆಚ್ಚಳ ಮಾಡಲಾಗಿದೆ. 1,755.5 ರೂಪಾಯಿ ಇದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಇದೀಗ1,769.50 ರೂಪಾಯಿಗೆ ಏರಿಕೆಯಾಗಿದೆ.

ಆಯಿಲ್ ಮಾರ್ಕೆಟಿಂಗ್ ಕಂಪನಿ(OMC) ಇದೀಗ ಕಮರ್ಷಿಲ್ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ ಘೋಷಣೆ ಮಾಡಿದೆ. ಪ್ರತಿ ತಿಂಗಳ ಆರಂಭದಲ್ಲಿ OMC ಸೇರಿದಂತೆ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್, ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೋರೇಶನ್ ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಅಡುಗೆ ಅನಿಲದ ಬೆಲೆಯಲ್ಲಿ ಯಾವದೇ ಬದಲಾವಣೆ ಮಾಡಲಾಗಿಲ್ಲ. ಆದರೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.

Union Budget 2024 ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, 6.25 ಲಕ್ಷ ಕೋಟಿ ರೂಪಾಯಿ ಹಂಚಿಕೆ!

ವಾಣಿಜ್ಯ ಅಡುಗೆ ಅನಿಲ, ವಾಹನಗಳಲ್ಲಿ ಬಳಸುವ ಎಲ್‌ಪಿಜಿ, ಕೈಗಾರಿಕೆಗ ಬಳಸುವ ವಾಣಿಜ್ಯ ಅನಿಲದ ಬೆಲೆ ಇದೀಗ ಏರಿಕೆಯಾಗಿದೆ. ದೆಹಲಿಯಲ್ಲಿ ಇದೀಗ ಕಮರ್ಷಿಯಲ್ ಸಿಲಿಂಡರ್ ಬೆಲೆ 1755.50 ರೂಪಾಯಿ ಆಗಿದ್ದರೆ, ಮುಂಬೈನಲ್ಲಿ ಇದೀಗ 1723.50 ರೂಪಾಯಿ ಆಗಿದೆ. ಕೋಲ್ಕತಾದಲ್ಲಿ 1887 ರೂಪಾಯಿ ಆಗಿದ್ದರೆ, ಚೆನ್ನೈನಲ್ಲಿ 1937 ರೂಪಾಯಿ ಆಗಿದೆ.  

ಈ ವರ್ಷದ ಆರಂಭದಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಕೊಂಚ ಇಳಿಕ ಮಾಡಲಾಗಿತ್ತು. ಜನವರಿ ತಿಂಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 83.5ರು.ನಷ್ಟುಕಡಿತಗೊಳಿಸಲಾಗಿತ್ತು. ನವೆಂಬರ್, ಡಿಸೆಂಬರ್ ಹಾಗೂ ಜನವರಿ ಸತತ ಮೂರು ತಿಂಗಳು ಇಳಿಕೆ ಹಾದಿಯಲ್ಲಿದ್ದ ವಾಣಿಜ್ಯ ಸಿಲಿಂಡರ್ ಇದೀಗ 14 ರೂಪಾಯಿ ಏರಿಕೆಯಾಗಿದೆ.

ಬಾಡಿಗೆ, ಸ್ಲಂನಲ್ಲಿರುವವರ ಮನೆ ಕನಸು ನನಸಾಗಿಸಲು ಹೊಸ ಯೋಜನೆ,ನಿರ್ಮಲಾ ಸೀತಾರಾಮ್ ಘೋಷಣೆ!

ಕೇಂದ್ರ ಹಣಕಾಸು ಸಚಿವೆ ಬಜೆಟ್ ಮಂಡನೆ ದಿನವೇ ಸಿಲಿಂಡರ್ ಬೆಲೆ ಏರಿಕೆ ಸಂಚಲನ ಸೃಷ್ಟಿಸಿದೆ. ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ರಾಸಾಯನಿಕ ಹಾಗೂ ರಸಗೊಬ್ಬರಕ್ಕೆ 1.68 ಲಕ್ಷ ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಇನ್ನು 6.25 ಲಕ್ಷ ಕೋಟಿ ರೂಪಾಯಿ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟಿದೆ. ಜೊತೆಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಅಭಿವೃದ್ಧಿಗೆ 2.78 ಲಕ್ಷ ಕೋಟಿ ರೂಪಾಯಿ ತೆಗೆದಿಟ್ಟಿದೆ. ರೈಲ್ವೇ ಇಲಾಖೆಗೆ 2.55 ಲಕ್ಷ ಕೋಟಿ ರೂಪಾಯಿ, ಗೃಹ ಸಚಿವಾಲಯಕ್ಕೆ 2.03 ಕೋಟಿ ರೂಪಾಯಿ, ಗ್ರಾಮೀಣ ಅಭಿವೃದ್ಧಿಗೆ 1.77 ಲಕ್ಷ ಕೋಟಿ ರೂಪಾಯಿ ತೆಗೆದಿಟ್ಟಿದೆ.

Follow Us:
Download App:
  • android
  • ios