userpic
user icon
0 Min read

ಅಮೆರಿಕದಿಂದ ಭಾರತಕ್ಕೆ ಓಡೋಡಿ ಬಂತು ಗುಡ್‌ನ್ಯೂಸ್; ಚೀನಾಗೆ ಶುರುವಾಯ್ತು ಹೊಟ್ಟೆಯುರಿ!

Iphones Manufacturing  hub Good news came to India from America mrq

Synopsis

Apple 2026ರ ವೇಳೆಗೆ ಭಾರತದಲ್ಲಿ iPhone ಉತ್ಪಾದನೆ ಆರಂಭಿಸುವ ಗುರಿ ಹೊಂದಿದೆ. ಚೀನಾದಲ್ಲಿ ಹೆಚ್ಚುತ್ತಿರುವ ತೆರಿಗೆ ಮತ್ತು ಇತರ ರಾಜಕೀಯ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ನವದೆಹಲಿ: Apple ತನ್ನ ಅತ್ಯಧಿಕ iPhoneಗಳನ್ನು ಅಮೆರಿಕದಲ್ಲಿ ಮಾರಾಟ ಮಾಡುತ್ತಿದೆ. ಇದೀಗ Apple ತನ್ನ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಲು ಮುಂದಾಗಿದೆ ಎಂದು ವರದಿಯಾಗಿದೆ. ವರದಿಯೊಂದರ ಪ್ರಕಾರ, 2026ರ ವೇಳೆಗೆ ಕಂಪನಿ ತನ್ನ ಉತ್ಪಾದನೆಯನ್ನು ಆರಂಭಿಸುವ ಗುರಿಯನ್ನು ಹೊಂದಿದೆ. ಈ ಸಂಬಂಧ ಕಂಪನಿ ಪ್ಲಾನಿಂಗ್ ಮಾಡಿಕೊಂಡು ಕ್ಷಿಪ್ರವಾಗಿ ಕೆಲಸ ಮಾಡುತ್ತಿದೆ. ಚೀನಾದಲ್ಲಿ ಹೆಚ್ಚುತ್ತಿರುವ ತೆರಿಗೆ ಸೇರಿದಂತೆ ಇನ್ನಿತರ ರಾಜಕೀಯ ಕಾರಣಗಳಿಂದ Apple ಭಾರತದತ್ತ ಮುಖ ಮಾಡುತ್ತಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಉತ್ಪಾದನೆ ಸಂಬಂಧ Apple ತನ್ನ ಕಾಂಟ್ರಾಕ್ಟ್ ಮ್ಯಾನುಫೆಕ್ಚರ್ಸ್‌ಗಳಾದ  Foxconn ಮತ್ತು Tata ಜೊತೆ ಗಂಭೀರವಾಗಿ ಮಾತುಕತೆ ನಡೆಸುತ್ತಿದೆ. ಆದ್ರೆ ಈವರೆಗೆ Apple ಅಥವಾ Foxconn ಮತ್ತು Tata ಈ ಸಂಬಂಧ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಲು ಕಂಪನಿಗಳು ನಿರಾಕರಿಸಿವೆ ಎಂದು ವರದಿಯಾಗಿದೆ. 

ಪ್ರತಿವರ್ಷ Apple ಅಮೆರಿಕದಲ್ಲಿ 6 ಕೋಟಿಗೂ ಅಧಿಕ iPhoneಗಳನ್ನು ಮಾರಾಟ ಮಾಡುತ್ತಿದೆ. ಈ iPhoneಗಳಲ್ಲಿ ಶೇ.80ರಷ್ಟು ಉತ್ಪನ್ನಗಳು ಚೀನಾದಲ್ಲಿಯೇ ತಯಾರಿಸಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಹ ಭಾರತವನ್ನು ಸ್ಮಾರ್ಟ್‌ಫೋನ್ ತಯಾರಿಕಾ ಹಬ್ ಮಾಡುವ ದೃಷ್ಟಿಕೋನವನ್ನು ಹೊಂದಿದ್ದಾರೆ. ಸ್ಮಾರ್ಟ್‌ಫೋನ್ ಮ್ಯಾನುಫ್ಯಾಕ್ಚೆರಿಂಗ್‌ ಹಬ್ ಮಾಡಲು ಭಾರತ ಸರ್ಕಾರ್ ಆಸಕ್ತಿ ಹೊಂದಿದ್ದು, ಈ ಸಂಬಂಧ ಕೆಲಸವನ್ನು ಸಹ ಮಾಡುತ್ತಿದೆ. ಮೊಬೈಲ್ ಬಿಡಿಭಾಗಗಳ ಮೇಲೆ ಭಾರತ ವಿಧಿಸುವ ತೆರಿಗೆ ಇತರೆ ದೇಶಗಳಿಗಿಂತ ಅಧಿಕವಾಗಿದೆ. ಈ ಕಾರಣದಿಂದ ಸ್ಮಾರ್ಟ್‌ಫೋನ್ ತಯಾರಿಕೆ ವೆಚ್ಚ ಅಧಿಕವಾಗುತ್ತದೆ. 

ಈ ಕಾರಣದಿಂದ ರ್ಟ್‌ಫೋನ್ ಮ್ಯಾನುಫ್ಯಾಕ್ಚೆರಿಂಗ್‌ ಹಬ್ ಆಗಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ವಿಶ್ಲೇಷಣೆ ಕೇಳಿ ಬಂದಿವೆ. ವರದಿಗಳ ಪ್ರಕಾರ, ಭಾರತದಲ್ಲಿ ಐಫೋನ್ ತಯಾರಿಕೆಯ ವೆಚ್ಚ ಚೀನಾಗಿಂತ ಶೇ.5 ರಿಂದ ಶೇ.8ರಷ್ಟು ಹೆಚ್ಚಳವಾಗಲಿದೆ. ಕೆಲವೊಮ್ಮೆ ಈ ಪ್ರಮಾಣ ಶೇ.10ರಷ್ಟು ಸಹ ಆಗಲಿದೆ ಎಂದು ವರದಿಯಾಗಿದೆ. 

600 ಟನ್ iPhone ರವಾನೆ
Apple ಮೊದಲೇ ಭಾರತದಲ್ಲಿ ಐಪೋನ್ ತಯಾರಿಕೆಗೆ ಒತ್ತು ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಟ್ಯಾಕ್ಸ್‌ನಿಂದ ಬಚಾವ್ ಆಗಲು, ಮಾರ್ಚ್‌ನಲ್ಲಿ ಭಾರತದ ಚೆನ್ನೈನಿಂದ 600 ಟನ್ iPhoneಗಳನ್ನು ಅಮೆರಿಕಕ್ಕೆ ಕಳುಹಿಸಲಾಗಿತ್ತು. ಈ iPhoneಗಳ ಒಟ್ಟು ಮೌಲ್ಯ ಅಂದಾಜು 2 ಬಿಲಿಯನ್ ಡಾಲರ್ ಆಗಿತ್ತು. ಈ ಶಿಪ್‌ಮೆಂಟ್  Foxconn ಮತ್ತು Tataಗೆ ಅತಿದೊಡ್ಡ ದಾಖಲೆಯಾಗಿತ್ತು. Foxconn ಏಕಾಂಗಿಯಾಗಿಯೇ 1.3 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ಅಮೆರಿಕಾಗೆ ಕಳುಹಿಸಿತ್ತು. 

ಇದನ್ನು ಓದಿ: ಸರ್ಕಾರದ ದಿಟ್ಟ ಕ್ರಮ: ಜು.1 ರಿಂದ ಈ ರಾಜ್ಯದ ಹಳೆಯ ವಾಹನಗಳಿಗೆ ಸಿಗೋದಿಲ್ಲ ಪೆಟ್ರೋಲ್‌, ಡೀಸೆಲ್‌!

ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಶೇ.26ರಷ್ಟು ಸುಂಕವನ್ನು ವಿಧಿಸಿತ್ತು. ಇದು ಸಮಯದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ಶೇಕಡಾ 100 ಕ್ಕಿಂತ ಹೆಚ್ಚು ಸುಂಕಕ್ಕಿಂತ ಕಡಿಮೆಯಾಗಿದೆ. ನಂತರ ಅಮೆರಿಕವು ಚೀನಾವನ್ನು ಹೊರತುಪಡಿಸಿ ಎಲ್ಲಾ ದೇಶಗಳ ಮೇಲಿನ ಸುಂಕವನ್ನು ಮೂರು ತಿಂಗಳ ಕಾಲ ತಡೆಹಿಡಿದಿದೆ. ಈ ನಡುವೆ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಂಬಂಧ ಸುಧಾರಿಸುವ ಲಕ್ಷಣಗಳು ಕಂಡು ಬರುತ್ತಿವೆ.

Financial Times ವರದಿ ಪ್ರಕಾರ, ಹೊಸ ಯೋಜನೆಯ ಕುರಿತು Apple ಮಾಹಿತಿ ನೀಡಿತ್ತು. Apple ತನ್ನ ಉತ್ಪದನಾ ಮಾರುಕಟ್ಟೆಯನ್ನು ಚೀನಾದಿಂದ ಹೊರಗೆ ವಿಸ್ತರಣೆಗೆ ಮುಂದಾದ್ರೆ ಅದರ ಮುಂದಿರುವ ಆಯ್ಕೆ ಭಾರತವಾಗಲಿದೆ. ಭಾರತಕ್ಕೆ Apple ಮೊದಲ ಆದ್ಯತೆ ನೀಡುತ್ತೆ ಎನ್ನಲಾಗಿದೆ. Appleನ ಕಾಂಟ್ರಾಕ್ಟ್ ಮ್ಯಾನುಫೆಕ್ಚರ್ಸ್‌ಗಳಾದ  Foxconn ಮತ್ತು Tata ಭಾರತದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಐಫೋನ್ ತಯಾರಿಕೆ ಇನ್ನಷ್ಟು ವೇಗವಾಗಿ ಬೆಳೆಯಲಿದೆ ಎಂಬುದು ಸ್ಪಷ್ಟವಾಗಿದೆ. ಫಾಕ್ಸ್‌ಕಾನ್ ಮತ್ತು ಟಾಟಾ ಭಾರತದಲ್ಲಿ ಮೂರು ಕಾರ್ಖಾನೆಗಳನ್ನು ನಿರ್ವಹಿಸುತ್ತವೆ ಮತ್ತು ಇನ್ನೂ ಎರಡು ನಿರ್ಮಾಣ ಹಂತದಲ್ಲಿವೆ

ಇದನ್ನೂ ಓದಿ: ಕರ್ನಾಟಕ ಟು ಕಾಶ್ಮೀರ ವಿಮಾನ ದರ ₹40 ಸಾವಿರದಿಂದ ₹8 ಸಾವಿರಕ್ಕೆ ಕುಸಿತ!

Latest Videos