userpic
user icon
0 Min read

ಸೌರ ವಿದ್ಯುತ್‌ ಹಗರಣ: ಭಾರತದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿಗೆ ಅಮೆರಿಕ ತನಿಖೆ ಆತಂಕ

gautam-adani-solar-scam-us-investigation san
Gautam Adani, Chairman of the Adani Group (Photo/ANI)

Synopsis

ಸೌರ ವಿದ್ಯುತ್ ಹಗರಣಕ್ಕೆ ಸಂಬಂಧಿಸಿದಂತೆ ಗೌತಮ್ ಅದಾನಿಗೆ ಅಮೆರಿಕ ಷೇರುಪೇಟೆ ಆಯೋಗವು ಸಮನ್ಸ್ ನೀಡಲು ಮುಂದಾಗಿದೆ. ಅಹಮದಾಬಾದ್ ಕೋರ್ಟ್ ಮೂಲಕ ಸಮನ್ಸ್ ಜಾರಿ ಮಾಡಲು ಕೇಂದ್ರ ಸರ್ಕಾರವು ಕೋರಿದೆ.

ಅಹಮದಾಬಾದ್‌ (ಮಾ.15): ಸೌರ ವಿದ್ಯುತ್‌ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಷೇರುಪೇಟೆ ಆಯೋಗವು ಭಾರತದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ಅವರಿಗೆ ನೀಡಲು ಉದ್ದೇಶಿಸಿರುವ ಸಮನ್ಸ್‌ ಅನ್ನು ಜಾರಿ ಮಾಡುವಂತೆ ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಕೋರಿದೆ. ಹೇಗ್‌ ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ಅನ್ಯ ದೇಶದ ವ್ಯಕ್ತಿಗೆ ಅಮೆರಿಕದ ಸಂಸ್ಥೆಗಳು ನೇರವಾಗಿ ಸಮನ್ಸ್ ಜಾರಿ ಮಾಡುವಂತಿಲ್ಲ. ಹೀಗಾಗಿ ಅಹಮದಾಬಾದ್ ಕೋರ್ಟಿ ಮೂಲಕ ಸಮನ್ಸ್‌ ಜಾರಿ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಈಗ ಕೋರ್ಟು ಸಮನ್ಸ್‌ ಜಾರಿ ಮಾಡಿದರೆ ಅದಾನಿ ಅಥವಾ ಅವರ ವಕೀಲರು ಅಮೆರಿಕ ಕೋರ್ಟಿಗೆ ಹಾಜರಾಗಬೇಕಾಗುತ್ತದೆ.

ಕಂಪೆನಿ ಹೆಸರು ಬದಲಿಸಿದ ಗೌತಮ್ ಅದಾನಿ, ಷೇರು ಕುಸಿತ! 

ಏನಿದು ಹಗರಣ?: ಅದಾನಿ ಅವರು ಭಾರತದಲ್ಲಿನ ವಿವಿಧ ರಾಜ್ಯ ಸರ್ಕಾರಗಳಿಗೆ ತಮ್ಮ ಕಂಪನಿಯ ಸೌರ ವಿದ್ಯುತ್‌ ಮಾರಾಟ ಮಾಡಲು ಸಾವಿರಾರು ಕೋಟಿ ರು. ಲಂಚ ನೀಡಿದ್ದಾರೆ ಎಂಬ ಆರೋಪ ಹೊತ್ತಿದ್ದರು. ಅಲ್ಲದೆ, ಈ ಯೋಜನೆಗೆ ಅಮೆರಿಕದಲ್ಲಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು. ತಮ್ಮ ದೇಶದ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಭ್ರಷ್ಟಾಚಾರ ಎಸಗಿದ್ದಕ್ಕೆ ಆಕ್ಷೇಪಿಸಿರುವ ಅಮೆರಿಕ ಷೇರು ಆಯೋಗ, ಈ ಬಗ್ಗೆ ತನಿಖೆ ನಡೆಸುತ್ತಿದೆ.

 

ಒಂದೇ ದಿನದಲ್ಲಿ 2,366 ಕೋಟಿ ಹಣ ಕಳೆದುಕೊಂಡ ಗೌತಮ್ ಅದಾನಿ

Latest Videos