Asianet Suvarna News Asianet Suvarna News

ವಾರದಲ್ಲಿ 80- 100 ಗಂಟೆ ಕೆಲಸ ಮಾಡ್ತಾರೆ ಈ ಫ್ಲಿಪ್‌ಕಾರ್ಟ್ ಮಾಲೀಕ ಸಚಿನ್ ಬನ್ಸಾಲ್‌

ಸಮಯ ವ್ಯರ್ಥ ಮಾಡದೆ ದುಡಿದಾಗ ಯಶಸ್ಸು ಸಾಧ್ಯ. ಸತತ ಪ್ರಯತ್ನ ವ್ಯಕ್ತಿಯ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಇದಕ್ಕೆ ಈಗಾಗಲೇ ಅನೇಕ ಜೀವಂತ ಉದಾಹರಣೆಗಳಿವೆ. ವಾರದಲ್ಲಿ 50-60 ಗಂಟೆ ಬದಲು 80 -100 ಗಂಟೆ ಕೆಲಸ ಮಾಡುವ ವ್ಯಕ್ತಿಯೊಬ್ಬರ ವಿವರ ಇಲ್ಲಿದೆ. 
 

Flipcard Sachin Bansal Works Eighty To Hundred Hours A Week roo
Author
First Published Apr 5, 2024, 3:57 PM IST

ದಿನದಲ್ಲಿ ಒಂಭತ್ತರಿಂದ ಹತ್ತು ಗಂಟೆ ಕೆಲಸ ಮಾಡುವ ಜನರು ವಾರದಲ್ಲಿ ಐದು ದಿನ ಅಂದ್ರೂ ಐವತ್ತು ಗಂಟೆ ಕೆಲಸ ಮಾಡ್ತಾರೆ. ಈ ಕೆಲಸದ ಸಮಯವನ್ನು ವಿಸ್ತರಿಸಬೇಕು, ಜನರು ಹೆಚ್ಚೆಚ್ಚು ಗಂಟೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ಈಗಾಗಲೇ ಅನೇಕ ಚರ್ಚೆ, ವಾದ – ವಿವಾದ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಕೆಲಸದ ಸಮಯದ ಬಗ್ಗೆ ಮಾತನಾಡಿ ತೀವ್ರ ಚರ್ಚೆಗೆ ಗುರಿಯಾಗಿದ್ದರು. ಇಂದಿನ ಯುವಕರು ವಾರದಲ್ಲಿ 70 ಗಂಟೆಗಳನ್ನು ಕೆಲಸಕ್ಕಾಗಿ ಮೀಸಲಿಡಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದರು. ಅನೇಕರು ಇದನ್ನು ಸಮರ್ಥಿಸಿಕೊಂಡರೆ ಮತ್ತೆ ಕೆಲವರು ಆಧುನಿಕ ಗುಲಾಮಗಿರಿಗೆ ಹೋಲಿಸಿದ್ದರು. ಇದೀಗ ಮತ್ತೋರ್ವ ಸಂಸ್ಥಾಪಕರು ಕೆಲಸದ ಸಮಯದ ಬಗ್ಗೆ ಮಾತನಾಡಿದ್ದಾರೆ. 

ಒಂದು ಕಾಲದಲ್ಲಿ ಭಾರತ (India) ದಲ್ಲಿ ಅಮೆಜಾನ್‌ (Amazon) ಗೆ ಪ್ರತಿಸ್ಪರ್ಧಿಯಾಗಿದ್ದ ಫ್ಲಿಪ್‌ಕಾರ್ಟ್‌ (Flipkart) ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಅವರು ತಮ್ಮ ಕೆಲಸದ ಬಗ್ಗೆ ಅಚ್ಚರಿ ವಿಷ್ಯವನ್ನು ತಿಳಿಸಿದ್ದಾರೆ. ಅವರು ತಮ್ಮ ಸಿಬ್ಬಂದಿ ನನ್ನ ನಿಯಮ ಪಾಲನೆ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ತಾನು ವಾರದಲ್ಲಿ ಎಷ್ಟು ಸಮಯ ಕೆಲಸ ಮಾಡ್ತೇನೆ ಎಂಬುದನ್ನು ಹೇಳಿ ಅಚ್ಚರಿ ಮೂಡಿಸಿದ್ದಾರೆ. 

ಸಾಲಗಾರರಿಗೆ ಗುಡ್ ನ್ಯೂಸ್; ಈ ಬಾರಿಯೂ ರೆಪೋ ದರ ಬದಲಾಯಿಸದ ಆರ್ ಬಿಐ

ವಾರದಲ್ಲಿ ಎಷ್ಟು ಗಂಟೆ ಕೆಲಸ ಮಾಡ್ತಾರೆ ಸಚಿನ್ ಬನ್ಸಾಲ್ ? : ಸಚಿನ್ ಬನ್ಸಾಲ್ ವಾರದಲ್ಲಿ 80 ರಿಂದ 100 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಸಂದರ್ಶನವೊಂದರಲ್ಲಿ ಸಚಿನ್ ಬನ್ಸಾಲ್ ಈ ವಿಷ್ಯ ಹೇಳಿದ್ದಾರೆ. ನನ್ನ ಸಿಬ್ಬಂದಿಗೆ ಈ ಬಗ್ಗೆ ಯಾವುದೇ ಒತ್ತಡ ಹೇರುವುದಿಲ್ಲ ಎಂದಿರುವ ಸಚಿನ್ ಬನಾಲ್, ಇದೀಗ ಕಂಪನಿ ಮನೆಯಿಂದ ಕೆಲಸ ಮಾಡುವ ಅವಕಾಶವನ್ನು ಸಂಪೂರ್ಣ ತೆಗೆದುಹಾಕಿದೆ. ಇದು ಅನೇಕ ಸಿಬ್ಬಂದಿ ನನ್ನನ್ನು ದ್ವೇಷಿಸಲು ಕಾರಣ ಆಗಬಹುದು ಎಂದಿದ್ದಾರೆ. 

ವರ್ಕ್ ಫ್ರಂ ಹೋಮ್ ಕೇವಲ ತಾತ್ಕಾಲಿಕ ಆಯ್ಕೆಯಾಗಿತ್ತು. ಅದು ಎಂದಿಗೂ ಶಾಶ್ವತವಲ್ಲ. ನಾವು ಶೇಕಡಾ ನೂರರಷ್ಟು ವರ್ಕ್ ಫ್ರಂ ಆಫೀಸ್ ವ್ಯವಸ್ಥೆ ಜಾರಿಗೆ ತಂದಿದ್ದು, ವರ್ಕ್ ಫ್ರಂ ಹೋಮ್ ಆಯ್ಕೆ ಶೇಕಡಾ ಝಿರೋ ಇದೆ ಎಂದಿದ್ದಾರೆ. ಕೆಲಸದ ಬಗ್ಗೆ ಮಾತನಾಡಿದ ಸಚಿನ್ ಬನ್ಸಾಲ್, ಕೆಲಸದಲ್ಲಿ ನನ್ನನ್ನು ನಾನು ಸಂಪೂರ್ಣ ತೊಡಗಿಸಿಕೊಂಡಿದ್ದೇನೆ. ನನ್ನ ಬಹುತೇಕ ಸಮಯವನ್ನು ಕಚೇರಿಯಲ್ಲಿ ಕಳೆಯುತ್ತೇನೆ. ವಾರಾಂತ್ಯದಲ್ಲಿ ಕೂಡ ನಾನು ಕಚೇರಿಯಲ್ಲಿ ಇರುತ್ತೇನೆ ಎಂದು ಸಚಿನ್ ಬನ್ಸಾಲ್ ಹೇಳಿದ್ದಾರೆ. 

ಮೊದಲೇ ವರ್ಕ್ ಫ್ರಂ ಹೋಮ್ ಇಲ್ಲ, ಇನ್ನು ವೀಕೆಂಡ್ ನಲ್ಲಿಯೂ ಕೆಲವು ಬಾರಿ ಕಚೇರಿಗೆ ಹೋಗ್ಬೇಕು ಎನ್ನುವುದು ಉದ್ಯೋಗಿಗಳು ನನ್ನನ್ನು ದ್ವೇಷಿಸಲು ಮುಖ್ಯ ಕಾರಣವಾಗುತ್ತಿದೆ ಎಂದು ಸಚಿನ್ ಬನ್ಸಾಲ್ ಹೇಳಿದ್ದಾರೆ. 

ಅಬ್ಬಬ್ಬಾ..ಅಂಬಾನಿ ಸೊಸೆ ಧರಿಸಿದ್ದ ಚಿನ್ನ, ಬೆಳ್ಳಿ ಕಸೂತಿಯ ಮಿರಿ ಮಿರಿ ಮಿಂಚೋ ಸೀರೆ ಬೆಲೆ ಇಷ್ಟೊಂದಾ?

ಸಚಿನ್ ಬನ್ಸಾಲ್ ಯಾರು? : ಫೋರ್ಬ್ಸ್ 2024 ವಿಶ್ವದ ಶ್ರೀಮಂತರ (World's Rich People) ಪಟ್ಟಿಯಲ್ಲಿ ಸಚಿನ್ ಬನ್ಸಾಲ್ ಹೆಸರು ಸೇರಿದೆ.  ಫ್ಲಿಪ್‌ಕಾರ್ಟ್‌ನ ಮಾಜಿ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಭಾರತದ ಸ್ವಯಂ ನಿರ್ಮಿತ ಬಿಲಿಯನೇರ್. ಸಚಿನ್ ತನ್ನ ಸ್ವಂತ ಫ್ಲಾಟ್‌ ನಲ್ಲಿ ಬಿಲಿಯನ್ ಡಾಲರ್ ಮೌಲ್ಯದ ವ್ಯವಹಾರ ಶುರು ಮಾಡಿದ್ದರು. 2018 ರಲ್ಲಿ, ಸಚಿನ್ ಬನ್ಸಾಲ್ ಅವರು ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮ 5.5 ಶೇಕಡಾ ಮಾಲೀಕತ್ವದ ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಸಚಿನ್ ಬನ್ಸಾಲ್ ನವಿ ಗ್ರೂಪ್‌ಗೆ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇರಿಕೊಂಡರು. ವರದಿಗಳ ಪ್ರಕಾರ, ಬನ್ಸಾಲ್ ನವಿ ಗ್ರೂಪ್‌ನಲ್ಲಿ ಸುಮಾರು 4,000 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. 

Follow Us:
Download App:
  • android
  • ios