Asianet Suvarna News Asianet Suvarna News

ದೀಪಾವಳಿ ಉಡುಗೆ 'Jashn-e-Riwaaz' ಎಂದಿದ್ದ ವಿವಾದಾತ್ಮಕ ಟ್ವೀಟ್‌ ಡಿಲೀಟ್‌ !

-ದೀಪಾವಳಿ ಉಡುಗೆಗಳನ್ನು Jashn-e-Riwaaz ಎಂದಿದ್ದ Fab India

-ತೀವ್ರ ವಿರೋಧದ ನಂತರ ಟ್ವೀಟ್‌ ಡಿಲೀಟ್‌ 

-ಹಿಂದೂ ಹಬ್ಬಗಳನ್ನು ಅಬ್ರಹಾಮಿಸೇಶನ್ ಮಾಡುವ ಪ್ರಯತ್ನ ಎಂದ ಸಂಸದ ತೇಜಸ್ವಿ ಸೂರ್ಯ

Fab india deletes Jashn e Riwaaz tweet after BoycottFabindia trends
Author
Bengaluru, First Published Oct 19, 2021, 3:46 PM IST

ಬೆಂಗಳೂರು (ಅ. 19): ಜವುಳಿ ಉದ್ಯಮದಲ್ಲಿ ದೇಶದ ಹೆಸರಾಂತ  ಬ್ರಾಂಡ್‌ (Brand)  ಆಗಿರುವ ಫ್ಯಾಭ್‌ ಇಂಡಿಯಾ (Fab India) ಕಂಪನಿ ಅಕ್ಟೋಬರ್‌ 9 ರಂದು ದೀಪಾವಳಿ (Deepawali) ಉಡುಗೆಗಳನ್ನು ಜಶ್ನ್-ಇ-ರಿವಾಜ್‌ (Jashn-e-Riwaaz) ಎಂಬ ಹೆಸರಿನೊಂದಿಗೆ ಬಿಡುಗಡೆ ಮಾಡಿತ್ತು.ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೀಡಾಗಿ, ವಿವಾದ ಸೃಷ್ಟಿಸಿತ್ತು.  #BoycottFabindia ಹ್ಯಾಶ್‌ ಟ್ಯಾಗ್ ಎಂದು ಪೋಸ್ಟ್‌ ಮಾಡುವ ಮೂಲಕ ದೀಪಾವಳಿ ಉಡುಗೆಯ ಈ ಹೆಸರನ್ನು ಜನರು ತೀವ್ರವಾಗಿ ವಿರೋಧಿಸಿದ್ದರು.‌ ಇದು ಸೋಷಿಯಲ್‌ ಮೀಡಿಯಾಗಳಲ್ಲಿ (Social Media) ಟ್ರೆಂಡ್‌ ಕೂಡ ಆಗಿತ್ತು.

ಫ್ಯಾಬ್‌ ಇಂಡಿಯಾ ಟ್ವೀಟ್‌ನಲ್ಲಿ ಏನಿತ್ತು?

ದೀಪಾವಳಿಯ 2021ರ ಕಲೆಕ್ಷನ್‌ (Dipawali 2021 Collection) ಉಡುಗೆಗಳನ್ನು ಧರಿಸಿದ ಮಾಡೆಲ್‌ಗಳ (Model) ಫೋಟೋದೊಂದಿಗೆ ಫ್ಯಾಬ್‌ ಇಂಡೀಯಾ ಟ್ವೀಟ್‌ ಒಂದನ್ನು ಮಾಡಿತ್ತು. ಈ ಟ್ವೀಟ್‌ನಲ್ಲಿ ʼಪ್ರೀತಿ ಮತ್ತು ಬೆಳಕಿನ ಹಬ್ಬವನ್ನು ಸ್ವಾಗತಿಸುವ ಈ ಸಂದರ್ಭದಲ್ಲಿ, ಫ್ಯಾಬ್‌ ಇಂಡೀಯಾ ಜಶ್ನ್-ಇ-ರಿವಾಜ್‌ ಕಲೆಕ್ಷನ್‌ ಮೂಲಕ ಭಾರತೀಯ ಸಂಸ್ಕೃತಿಗೆ ಗೌರವವನ್ನು ಸಲ್ಲಿಸುತ್ತದೆʼ ಎಂದು ಬರೆದುಕೊಂಡಿತ್ತು. ಆದರೆ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾದದ್ದರಿಂದ ತನ್ನ ಟ್ವೀಟ್‌ (Tweet) ಡಿಲೀಟ್‌ ಮಾಡಿದೆ. ಹಿಂದೂ ಹಬ್ಬವಾದ ದೀಪಾಳಿಯ ನಿಮಿತ್ತ, ಉಡುಪುಗಳನ್ನು ಜಶ್ನ್-ಇ-ರಿವಾಜ್‌  ಎಂಬ ಹೆಸರಿನಿಂದ ಬಿಡುಗಡೆ ಮಾಡಿದ್ದೇ ವಿವಾದಕ್ಕೆ ಕಾರಣವಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 1 ಕೋಟಿ ರೂ ದಂಡ ವಿಧಿಸಿದ RBI, ಗ್ರಾಹಕರಿಗೆ ಬೀಳುತ್ತಾ ಹೊರೆ?

ಫ್ಯಾಬ್‌ ಇಂಡಿಯಾ ವಿರುದ್ಧ ಆಕ್ರೋಶ

ಹಿಂದೂ ಹಬ್ಬದಲ್ಲಿ ಜಾತ್ಯಾತೀತತೆಯನ್ನು (Secularism) ತುಂಬುವ ಪ್ರಯತ್ನ ಬೇಡ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇದು ಸಂಸ್ಕೃತಿಗೆ ವಿರುದ್ಧವಾದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ  ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi surya) ಕೂಡ ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿದ್ದರು. ದೀಪಾವಳಿ ಅಂದರೆ ಜಶ್ನ್-ಇ-ರಿವಾಜ್‌  ಅಲ್ಲ. ಹಿಂದೂ ಹಬ್ಬಗಳನ್ನು ಉದ್ದೇಶಪೂರ್ವಕವಾಗಿ ಅಬ್ರಹಾಮಿಸೇಶನ್ (Abrahamisation) ಮಾಡುವ ಪ್ರಯತ್ನ ಇದಾಗಿದೆ ಎಂದು ತೇಜಸ್ವಿ ಹೇಳಿದ್ದರು. 

 

;

 

 

ತೇಜಸ್ವಿ ಸೂರ್ಯ ಟ್ವೀಟ್ ಅನ್ನು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಮೋಹನದಾಸ್ ಪೈ ಅವರು ರಿ-ಟ್ವೀಟ್‌ (Re-tweet) ಮಾಡಿದ್ದರು. ಫ್ಯಾಬ್‌ ಇಂಡಿಯಾ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದೆ, ಗ್ರಾಹಕರು ಇದನ್ನು ಖಂಡಿಸಬೇಕು ಎಂದು ಪೈ ಹೇಳಿದ್ದರು. ಈ ವಿವಾದ ಸೃಷ್ಟಿಯಾದ ನಂತರ ಬಾಯ್ಕಾಟ್‌ (Boycott) ಫ್ಯಾಬ್‌ ಇಂಡಿಯಾ ಟ್ರೆಂಡ್‌ ಎಲ್ಲೆಡೆ ಆರಂಭವಾಗಿತ್ತು. ಈ ಬಗ್ಗೆ ಟ್ವೀಟರ್‌ನಲ್ಲಿ ಸಾಕಷ್ಟು ಜನರು ತಮ್ಮ ಅಭಿಪ್ರಾಯ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಫ್ಯಾಬ್‌ ಇಂಡಿಯಾ ತನ್ನ ಟ್ವೀಟ್‌ ಡಿಲೀಟ್ ಮಾಡಿದೆ.

ಸೀರೆ ಉಡೋವಾಗ ಹುಡುಗೀರು ಈ ಮಿಸ್ಟೇಕ್ಸ್ ಅವಾಯ್ದ್ ಮಾಡ್ಲೇ ಬೇಕು

ಫ್ಯಾಬ್‌ ಇಂಡಿಯಾದ ಉಡುಪುಗಳ ಖರೀದಿಸಬೇಡಿ ಎಂದು ಕೆಲವರು ಆಗ್ರಹಿಸಿದರೆ ಇನ್ನೂ ಕೆಲವರು ಪ್ರೀತಿ ಮತ್ತು ಬೆಳಕಿನ ಹಬ್ಬ ಜಶ್ನ-ಇ-ರಿವಾಜ್‌ ಅಲ್ಲ..! ದೀಪಾವಳಿಯೂ ಯಾವಾಗಲೂ ಹಿಂದೂಗಳ ಹಬ್ಬವೇ ಆಗಿರುತ್ತದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಫ್ಯಾಬ್‌ ಇಂಡೀಯಾ ಪರವಾಗಿ ಟ್ವೀಟ್‌ ಮಾಡಿದ್ದು, ಜಶ್ನ-ಇ-ರಿವಾಜ್‌ ಕೇವಲ ಉಡುಪಿನ ಕಲೆಕ್ಷನ್‌ ಹೆಸರು, ಅದರಿಂದ ದೀಪಾವಳಿಯ ಸಂಭ್ರಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಫ್ಯಾಬ್‌ ಇಂಡಿಯಾ ಮಾಡಿದ್ದ ಟ್ವೀಟ್‌ ಭಾರೀ ಸದ್ದು ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಫ್ಯಾಬ್‌ ಇಂಡೀಯಾ ತನ್ನ ಟ್ವೀಟ್‌ ಡಿಲೀಟ್‌ ಮಾಡುವುದರ ಮೂಲಕ ವಿವಾದಕ್ಕೆ ತೆರ ಎಳೆದಿದೆ. ಟ್ವೀಟರ್‌ನಲ್ಲಿ ದಾಖಲಾದ ಕೆಲವು ಪ್ರತಿಕ್ರಿಯೆಗಳು ಈ ರೀತಿ ಇವೆ.

 

 

 

 

Follow Us:
Download App:
  • android
  • ios