Asianet Suvarna News Asianet Suvarna News

ಶಾರ್ಕ್ ಟ್ಯಾಂಕ್ ಇಂಡಿಯಾ ತೀರ್ಪುಗಾರರ ಮನಗೆದ್ದ ಭಾರತದ ಮೊದಲ ಪರಿಸರಸ್ನೇಹಿ, ದದ್ದುರಹಿತ ಡೈಪರ್ ಬ್ರ್ಯಾಂಡ್

ಮಗುವಿಗೆ ತುರಿಕೆ, ದದ್ದು ಉಂಟುಮಾಡೋದಿಲ್ಲ ಎಂಬುದನ್ನು ಪ್ರಮಾಣೀಕರಿಸ್ಪಟ್ಟಿರುವ, ಪರಿಸರಸ್ನೇಹಿಯಾದ ಭಾರತದ ಮೊದಲ ಡೈಪರ್ ಬ್ರ್ಯಾಂಡ್ ಶಾರ್ಕ್ ಟ್ಯಾಂಕ್ ಇಂಡಿಯಾ ಕಾರ್ಯಕ್ರಮದಲ್ಲಿ ತೀರ್ಪುಗಾರರ ಮೆಚ್ಚುಗೆ ಗಳಿಸಿದೆ. ಜೊತೆಗೆ ಭಾರೀ ಹೂಡಿಕೆಯನ್ನು ಕೂಡ ಪಡೆದಿದೆ. 

Allter Indias first sustainable and certified rash free diaper brand steals the show on Shark Tank India 3 anu
Author
First Published Mar 28, 2024, 4:53 PM IST

ಮುಂಬೈ (ಮಾ.28): ಚಿಕ್ಕ ಮಕ್ಕಳಿಗೆ ಡೈಪರ್ ಬಳಸುವ ಡೈಫರ್ ನಿಂದ ಅನೇಕ ಅಡ್ಡಪರಿಣಾಮಗಳು ಕೂಡ ಇವೆ. ಇದರಿಂದ ಚರ್ಮದ ಅಲರ್ಜಿಗಳು ಕೂಡ ಉಂಟಾಗುತ್ತವೆ. ಇನ್ನು ಸಾಮಾನ್ಯ ಡೈಪರ್  ನಲ್ಲಿ 60ಕ್ಕೂ ಹೆಚ್ಚು ರಾಸಾಯನಿಕಗಳು ಹಾಗೂ ವಿಷಕಾರಿ ಅಂಶಗಳಿರುತ್ತವೆ. ಇದು ಮಕ್ಕಳಲ್ಲಿ ನೋವಿನಿಂದ ಕೂಡಿದ ದದ್ದುಗಳನ್ನು ಉಂಟು ಮಾಡುತ್ತದೆ. ಇದು ಅನೇಕ ತಾಯಂದಿರ ಚಿಂತೆಯ ಕಾರಣ ಕೂಡ ಆಗಿದೆ. ಆದರೆ, ಇನ್ನು ಮುಂದೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಏಕೆಂದ್ರೆ ಭಾರತದ ಮೊದಲ ಸುಸ್ಥಿರ ಹಾಗೂ ಪ್ರಮಾಣೀಕೃತ ದದ್ದು ರಹಿತ ಡೈಪರ್ ಬ್ರ್ಯಾಂಡ್  'ಅಲ್ಲಟರ್' ಮಾರುಕಟ್ಟೆಗೆ ಬಂದಿದೆ. ಸುರಭಿ ಹಾಗೂ ಅರ್ನವ್ ಗುಪ್ತ ಅವರು ಇಂಥ ಉತ್ಪನ್ನವೊಂದನ್ನು ಉತ್ಪಾದಿಸುತ್ತಿದ್ದಾರೆ.ಮಕ್ಕಳು ಹಾಗೂ ಪರಿಸರ ಎರಡಕ್ಕೂ ಉತ್ತಮವಾಗಿರುವಂತೆ ಈ ಉತ್ಪನ್ನವನ್ನು ಸಿದ್ಧಪಡಿಸಲಾಗಿದೆ. ಮಕ್ಕಳಿಗೆ ಹೆಚ್ಚಿನ ಕಾಳಜಿ ಒದಗಿಸುವ ಉತ್ಪನ್ನದ ಜೊತೆಗೆ ಪರಿಸರಸ್ನೇಹಿಯೂ ಆಗಿರಬೇಕುಎಂಬ ಉದ್ದೇಶದಿಂದ ಈ ವಿನೂತನ ಬ್ರ್ಯಾಂಡ್ ಅನ್ನು ಸ್ಥಾಪಿಸಲಾಗಿದೆ. ಸುರಭಿ ಬಫ್ನ ಗುಪ್ತ ಉದ್ಯಮಿಯಾಗಿರುವ ಜೊತೆಗೆ ತಾಯಿಯೂ ಆಗಿದ್ದು, ಪರಿಸರ ಕಾಳಜಿ ಜೊತೆಗೆ ಮಕ್ಕಳಿಗೂ ಹಿತಕರವಾಗಿರಲಿ ಎಂಬ ಉದ್ದೇಶದಿಂದ ಬಿದಿರಿನಿಂದ ಡೈಪರ್  ಸಿದ್ಧಪಡಿಸಿದ್ದಾರೆ. ತಾವು ಸಿದ್ಧಪಡಿಸಿದ ಡೈಪರ್  ಅನ್ನು ಅವರು ಶಾರ್ಕ್ ಟ್ಯಾಂಕ್ ಇಂಡಿಯಾ -3ಯಲ್ಲಿ ಪ್ರದರ್ಶಿಸಿದ್ದಾರೆ ಕೂಡ. ಸುರಭಿ ಅವರ 'ಅಲ್ಲಟರ್' ಬ್ರ್ಯಾಂಡ್ ಗೆ ಈ ಕಾರ್ಯಕ್ರಮದಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. 

ಅಲ್ಲಟರ್ ಡೈಪರ್ ಬ್ರ್ಯಾಂಡ್ ನಿರ್ಮಾಣದ ಹಾಗೂ ಅದರ ಕುರಿತ ತಮ್ಮ ಅನುಭವಗಳನ್ನು ಸುರಭಿ ಗುಪ್ತ ಶಾರ್ಕ್ ಟ್ಯಾಂಕ್ ಇಂಡಿಯಾ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. 'ನಮ್ಮ ಬ್ರ್ಯಾಂಡ್ ಅಲ್ಲಟರ್ ಜೊತೆಗೆ ಶಾರ್ಕ್ ಟ್ಯಾಂಕ್ ಇಂಡಿಯಾದ ಭಾಗವಾಗಿರೋದು ಒಂಥರ ರೋಲರ್ ಕೋಸ್ಟರ್ ಪಯಣದ ರೀತಿಯಿದೆ. ನಾವೇನು ಮಾಡಿದ್ದೇವೆ ಎಂಬುದನ್ನು ಜಗತ್ತಿಗೆ ತೋರಿಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರೋದು ನಮಗೆ ಹೆಮ್ಮೆಯ ಕ್ಷಣ. ಬ್ರ್ಯಾಂಡ್ ಅನ್ನು ಶೂನ್ಯದಿಂದ ಒಂದರ ತನಕ ಬೆಳೆಸುವ ನಮ್ಮ ಪ್ರಯತ್ನ ತೀವ್ರವಾಗಿದೆ ಹಾಗೂ ಶಾರ್ಕ್ ಟ್ಯಾಂಕ್ ಇಂಡಿಯಾ ಈ ಪಯಣಕ್ಕೆ ತಿರುವು ನೀಡಿದ್ದು, ಶಾರ್ಕ್ ಗಳಿಂದ ಒಳನೋಟಗಳನ್ನು ಪಡೆಯಲು ನೆರವು ನೀಡಿದೆ. ಶಾರ್ಕ್ ಗಳು ಸ್ಟಾರ್ಟ್ ಅಪ್ ಸಮುದಾಯದ ಪ್ರಬಲರಾಗಿದ್ದು, ಹೇಗೆ ದೊಡ್ಡದಾಗಿ ಯೋಚಿಸಬೇಕು ಹಾಗೂ ಬ್ರ್ಯಾಂಡ್ ನ ಬೆಳವಣಿಗೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದಕ್ಕೆ ನೆರವು ನೀಡುತ್ತಾರೆ' ಎಂದು ಸುರಭಿ ಗುಪ್ತ ತಿಳಿಸಿದ್ದಾರೆ. 

ಶಾರ್ಕ್ ಟ್ಯಾಂಕ್ ಇಂಡಿಯಾ 3 ಜಡ್ಜ್ ಕ್ವಾಲಿಫಿಕೇಶನ್ ಏನು?

ಮಕ್ಕಳು ಹಾಗೂ ಪರಿಸರ ಅತ್ಯುತ್ತಮವಾದದ್ದನ್ನು ಪಡೆಯಬೇಕು ಎಂಬ ಮೂಲ ತತ್ವದಲ್ಲಿ ಅಲ್ಲಟರ್  ನಂಬಿಕೆ ಹೊಂದಿದೆ. ಅವರ ಖುಷಿಯ ಪುಟ್ಟ ಮೂಟೆಯ ಪಾಲನೆಯನ್ನು ಎಷ್ಟು ನೈಸರ್ಗಿಕವಾಗಿಡಲು ಸಾಧ್ಯವೋ ಅಷ್ಟು ಅವಕಾಶ ಒದಗಿಸಬೇಕು ಎಂಬುದು ಅಲ್ಲಟರ್ ಸಂಸ್ಥಾಪಕರ ನಂಬಿಕೆಯಾಗಿದೆ. ಮಕ್ಕಳ ಕಾಳಜಿಗೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಸುಂದರ ಭೂಮಿಯನ್ನು ನಿರ್ಮಿಸುವ ಬದ್ಧತೆಯೊಂದಿಗೆ ಅಲ್ಲಟರ್ ಪಾಲನೆಯ ಕಾರ್ಯವನ್ನು ಉತ್ತಮ ಬೇಬಿ ಕೇರ್ ಉತ್ಪನ್ನಗಳ ಮೂಲಕ ಸರಳಗೊಳಿಸಿದೆ ಎಂದು ಸುರಭಿ ವಿವರಿಸಿದರು.

ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಹೊಸ ದಾಖಲೆ;ಎಲ್ಲ ಶಾರ್ಕ್ ಗಳ ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾದ ಸ್ನೇಹಿತರು

ಗುಣಮಟ್ಟ ಹಾಗೂ ಸುಸ್ಥಿರ ಉತ್ಪನ್ನ ಒದಗಿಸುವ ನಿಟ್ಟಿನಲ್ಲಿ ಅಲ್ಟರ್ ಬದ್ಧತೆ ಜನಪ್ರಿಯ ನಟಿ, ಪರಿಸರಪ್ರೇಮಿ ದಿಯಾ ಮಿರ್ಜಾ ಅವರಂತ ವ್ಯಕ್ತಿಗಳಿಂದ ಹೂಡಿಕೆಯನ್ನು ಸೆಳೆಯಲು ಯಶಸ್ವಿಯಾಗಿದೆ. ದಿಯಾ ಮಿರ್ಜಾ ಅಲ್ಲಟರ್ ಬ್ರ್ಯಾಂಡ್ ರಾಯಭಾತಿ ಕೂಡ ಆಗಿದ್ದಾರೆ. ಇದು ಬ್ರ್ಯಾಂಡ್ ವಿಶ್ವಾಸಾರ್ಹತೆ ಹಾಗೂ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿದೆ ಕೂಡ ಎಮದು ಸುರಭಿ ಹೇಳಿದರು. ಅವರು 1 ಕೋಟಿ ರೂ. ಮೇಲೆ ಶೇ.2.5ರಷ್ಟು ಈಕ್ವಿಟಿಯನ್ನು ಶಾರ್ಕ್ ಟ್ಯಾಂಕ್ ಗಳಿಂದ ಕೋರಿದರು. ಇವರ ಬ್ರ್ಯಾಂಡ್ ಬಗ್ಗೆ ಮೆಚ್ಚುಗೆ ಸೂಚಿಸಿದ ಶಾರ್ಕ್ ಗಳಾದ ಅಮನ್ ಗುಪ್ತಾ, ರಿತೇಶ್ ಅಗರ್ವಾಲ್ ಹಾಗೂ ಅನುಪಮ್ ಮಿತ್ತಲ್ 1 ಕೋಟಿ ರೂ.ಗೆ ಶೇ.4ರಷ್ಟು ಈಕ್ವಿಟಿ ನೀಡುವ ತೀರ್ಮಾನಕ್ಕೆ ಬಂದರು. 


 

Follow Us:
Download App:
  • android
  • ios