Asianet Suvarna News Asianet Suvarna News

Dream Bike ಒಂದೊಂದು ರೂಪಾಯಿ ನಾಣ್ಯ ಕೂಡಿಟ್ಟು 2.6 ಲಕ್ಷ ರೂ ಕನಸಿನ ಬೈಕ್ ಖರೀದಿಸಿದ ಯುವಕ!

  • ಪ್ರತಿ ದಿನ 1 ರೂಪಾಯಿ ನಾಣ್ಯ ಕೂಡಿಡುತ್ತಿದ್ದ ಯುವಕ
  • 3 ವರ್ಷಗಳ ಬಳಿಕ ಬಜಾಜ್ ಡೋಮಿನಾರ್ ಬೈಕ್ ಖರೀದಿ
  • 10 ಗಂಟೆ ನಾಣ್ಯ ಎಣಿಸಿದ ಶೋ ರೂಂ ಸಿಬ್ಬಂದಿ
     
Tamil Nadu youth accumulated rs 1 rupee coins over 3 years and buys Bajaj dominar woth rs 2 6 lakh ckm
Author
Bengaluru, First Published Mar 28, 2022, 5:23 PM IST

ಚೆನ್ನೈ(ಮಾ.28): ನಾಣ್ಯ, ನೋಟು ಸೇರಿದಂತೆ ಹಣವನ್ನು ಕೂಡಿಟ್ಟು ತಮಗಿಷ್ಟದ ವಸ್ತುಗಳನ್ನು ಖರೀದಿಸುವುದು ಮಕ್ಕಳಲ್ಲಿ ಹೆಚ್ಚಾಗಿ ಕಾಣಬಹದು. ಆದರೆ ತಮಿಳುನಾಡಿನ ಯುವಕ ಒಂದು ರೂಪಾಯಿ ನಾಣ್ಯಗಳನ್ನು ಕೂಡಿಟ್ಟು ಹೊಚ್ಚ ಹೊಸ ಬಜಾಜ್ ಡೋಮಿನಾರ್ ಬೈಕ್ ಖರೀದಿಸಿದ್ದಾನೆ. ಈ ಬೈಕ್ ಬೆಲೆ 2.6 ಲಕ್ಷ ರೂಪಾಯಿ. ಇನ್ನು ಈತ ನೀಡಿದ ನಾಣ್ಯಗಳನ್ನು ಲೆಕ್ಕಹಾಕಲು ಶೋ ರೂಂ ಸಿಬ್ಬಂದಿ 10 ಗಂಟೆ ಸಮಯ ತೆಗೆದುಕೊಂಡಿದ್ದಾರೆ. 

ಅಮ್ಮಾಪೇಟ್ ಗಾಂಧಿಮೈದಾನದ ನಿವಾಸಿಯಾಗಿರು ವಿ ಬೂಬತಿ ಕಳೆದ ವಾರದ ಹೊಚ್ಚ ಹೊಸ, ತನ್ನ ಕನಸಿಕ ಬೈಕ್ ಬಜಾಜ್ ಡೋಮಿನಾರ್ 400 ಖರೀದಿಸಿ ಭಾರಿ ಸುದ್ದಿಯಾಗಿದ್ದಾನೆ.ಈ ಬೈಕ್ ಆನ್ ರೋಡ್ ಬೆಲೆ 2.6 ಲಕ್ಷ ರೂಪಾಯಿ. ಮೂರು ವರ್ಷಗಳ ಹಿಂದೆ ಈ ಬೈಕ್ ಬೆಲೆ ಕೇಳಿ ನಿರಾಸೆಯಾಗಿದ್ದ. ಆದರೆ ಛಲ ಬಿಡದ ಬೂಬತಿ ಅದೇ ಬೈಕನ್ನು ಸಂಪೂರ್ಣ ಹಣ ನೀಡಿ ಖರೀದಿಸಿದ್ದಾನೆ.

ಗೋಣಿಯಲ್ಲಿ ಚಿಲ್ಲರೆ ನಾಣ್ಯ ತಂದು ಸ್ಕೂಟರ್‌ ಖರೀದಿಸಿದ ಯುವಕ

ಬಿಸಿಎ ಪದವೀಧರನಾಗಿರುವ ಬೂಬತಿ ಖಾಸಗಿ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮೂರು ವರ್ಷಗಳ ಹಿಂದೆ ಬಜಾಜ್ ಡೋಮಿನಾರ್ 400 ಬೈಕ್ ಬೆಲೆ ಕೇಳಿ ನಿರಾಸೆಗೊಂಡಿದ್ದ. ಇಷ್ಟು ಹಣ ತನ್ನಲ್ಲಿ ಇಲ್ಲ ಎಂದು ಕೊರಗಿ ಕೂರಲಿಲ್ಲ. ಬದಲಾಗಿ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಹಣಗಳಿಕೆ ಮಾಡಲು ಆರಂಭಿಸಿದ್ದ.

ಪ್ರತಿ ದಿನ 1 ರೂಪಾಯಿ ನಾಣ್ಯವನ್ನು ಬೂಬತಿ ಕೂಡಿಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ನಿರಂತವರಾಗಿ ಒಂದು ದಿನವೂ ಬಿಡದೆ 1 ರೂಪಾಯಿ ನಾಣ್ಯವನ್ನು ಕೂಡಿಟ್ಟು ಹಣ ಹೊಂದಿಸಿದ್ದಾನೆ. ತನ್ನ ಗೆಳೆಯರ ಸಹಾಯದೊಂದಿಗೆ ಶೋ ರೂಂಗೆ ತೆರಳಿದ ಯುವಕ ಬ್ಯಾಗ್ ಮೂಲಕ ಒಂದೊಂದು ರೂಪಾಯಿ ನಾಣ್ಯವನ್ನು ಶೋ ರೂಂ ಸಿಬ್ಬಂದಿಗೆ ನೀಡಿ, ಬಜಾಜ್ ಡೋಮಿನಾರ್ 400 ಬೈಕ್ ನೀಡುವಂತೆ ಹೇಳಿದ್ದಾನೆ.

ಈ 1ರೂ. ನಾಣ್ಯ ನಿಮ್ಮ ಬಳಿಯಿದ್ರೆ 10 ಕೋಟಿ ರೂ.ಗಳಿಸಬಹುದು; ಹೇಗೆ ಅಂತೀರಾ? ಇಲ್ಲಿದೆ ವಿವರ

ನಾಣ್ಯದ ಬ್ಯಾಗ್ ನೋಡಿ ಶೋ ರೂಂ ಸಿಬ್ಬಂದಿಗಳು ದಂಗಾದಿದ್ದಾರೆ. ನಾಣ್ಯವನ್ನು ಬ್ಯಾಂಕ್‌ನಲ್ಲಿ ನೀಡಿ  ನೋಟು ಮಾಡಿಕೊಂಡು ಬಂದು ಬೈಕ್ ಖರೀದಿಸುವಂತೆ ಸೂಚಿಸಿದ್ದಾರೆ. ಈ ಮಾತನ್ನು ನಿರಾಕರಿಸಿದ ಬೂಬತಿ  ಇದೇ ನಾಣ್ಯ ಸ್ವೀಕರಿಸಿ ಬೈಕ್ ನೀಡುವಂತೆ ಮನವಿ ಮಾಡಿದ್ದಾನೆ. ಬಳಿಕ ಬ್ಯಾಗ್‌ನಲ್ಲಿ ತಂದ ನಾಣ್ಯಗಳನ್ನು ಶೋ ರೂಂನಲ್ಲಿ ಸುರಿದಿದ್ದಾನೆ. 

ಬ್ಯಾಂಕ್‌ನ ಐವರು ಸಿಬ್ಬಂದಿ ಹಾಗೂ ಬೂಬತಿಯ ನಾಲ್ವರು ಗೆಳೆಯರು ಸೇರಿ ನಾಣ್ಯ ಎಣಿಕೆ ಆರಂಭಿಸಿದ್ದಾರೆ. ಸತತ 10 ಗಂಟೆಗಳ ಕಾಲ ನಾಣ್ಯ ಎಣಿಕೆ ಮಾಡಿದ್ದಾರೆ. 2.6 ಲಕ್ಷ ರೂಪಾಯಿ ನಾಣ್ಯ ಎಣಿಕೆ ಮಾಡಿ ಬೂಬತಿಗೆ ಬಜಾಜ್ ಡೋಮಿನಾರ್ 400 ಬೈಕ್ ನೀಡಿದ್ದಾರೆ. ಸಂಪೂರ್ಣ ನಗದು ನೀಡಿ ಬೈಕ್ ಖರೀದಿಸಿದ ಬೂಬತಿ ಸಂತೋಷಕ್ಕೆ ಪಾರವೇ ಇರಲಿಲ್ಲ.ಮೂರು ವರ್ಷಗಳಿಂದ ಒಂದು ರೂಪಾಯಿ ನಾಣ್ಯಗಳನ್ನೇ ಕಲೆ ಹಾಕಿ ಇದೀಗ ಬೈಕ್ ಖರೀದಿಸಲಾಗಿದೆ. ಈ ಮೂಕ ತನ್ನ ಕನಸನ್ನು ಸಾಕಾರಗೊಳಿಸಿದ್ದಾನೆ.  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿ ಬೂಬತಿ ವೈರಲ್ ಆಗಿದ್ದಾನೆ.
 

Follow Us:
Download App:
  • android
  • ios