Asianet Suvarna News Asianet Suvarna News

ಸ್ಮಾರ್ಟ್ ಕೀ ಸಿಸ್ಟಮ್‌ ಫೀಚರ್ಸ್‌ನ ಹೋಂಡಾ ಆಕ್ಟಿವಾ 2023 ಬಿಡುಗಡೆ!

ಹೋಂಡಾ ಸ್ಮಾರ್ಟ್ ಕೀʼ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ. ನೂತನ ಸ್ಕೂಟರ್ ಬೆಲೆ 74,536 (ಎಕ್ಸ್ ಶೋ ರೂಂ). ಸ್ಟ್ಯಾಂಡರ್ಡ್‌ʼ, ʻಡೀಲಕ್ಸ್ʼ ಮತ್ತು ʻಸ್ಮಾರ್ಟ್ ಮೂರು ವೇರಿಯೆಂಟ್‌‌ನಲ್ಲಿ ಬಿಡುಗಡೆಯಾಗಿದೆ. ಹೆಚ್ಚಿನ ವಿವರ ಇಲ್ಲಿದೆ.

Honda Motorcycle Scooter India launches New Advanced Activa 2023 with Smart Key System ckm
Author
First Published Jan 25, 2023, 9:54 PM IST

ನವದೆಹಲಿ(ಜ.25) ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿರುವ ಹಾಗೂ ಸ್ಕೂಟರ್ ವಿಭಾಗದ ಪ್ರಶ್ನಾತೀತ ನಾಯಕ ಎನಿಸಿರುವ ʻಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾʼ(ಎಚ್.ಎಂ.ಎಸ್.ಐ), ಸ್ಮಾರ್ಟ್ ಮತ್ತು ಸುಧಾರಿತ ಆಕ್ಟಿವಾ 2023 ಅನಾವರಣಗೊಳಿಸಿದೆ. ಇದು ಹೋಂಡಾ ಮೋಟಾರ್‌ ಸೈಕಲ್‌ ಮತ್ತು ಸ್ಕೂಟರ್‌ ಇಂಡಿಯಾದ ಚೊಚ್ಚಲ ʻಒಬಿಡಿ 2ʼ (ಆನ್‌-ಬೋರ್ಡ್‌ ಡೈಯಾಗ್ನಸ್ಟಿಕ್-2) ಮಾನದಂಡ ಪೂರೈಸುವ ದ್ವಿಚಕ್ರ ವಾಹನವಾಗಿದೆ. ಮೂರು ವೇರಿಯೆಂಟ್‌ನಲ್ಲಿ ಸ್ಕೂಟರ್ ಲಭ್ಯವಿದೆ

ಸ್ಟ್ಯಾಂಡರ್ಡ್ ವೇರಿಯೆಂಟ್ ಸ್ಕೂಟರ್ ಬೆಲೆ 74,536 ರೂಪಾಯಿ(ಎಕ್ಸ್ ಶೋರೂಂ). ಇನ್ನು ಡಿಲಕ್ಸ್ ವೇರಿಯೆಂಟ್ ಸ್ಕೂಟರ್ ಬೆಲೆ 77,036 ರೂಪಾಯಿ (ಎಕ್ಸ್ ಶೋ ರೂಂ) ಹಾಗೂ ಸ್ಮಾರ್ಟ್ ವೇರಿಯೆಂಟ್ ಬೆಲೆ 80,537 ರೂಪಾಯಿ(ಎಕ್ಸ್ ಶೋ ರೂಂ).

ದ್ವಿಚಕ್ರ ವಾಹನಗಳಲ್ಲೂ ಬರಲಿದೆ Air Bag: ಪೇಟೆಂಟ್ ಪಡೆದ ಹೊಂಡಾ

ಸ್ಮಾರ್ಟ್ ಅನುಕೂಲತೆ
ಜಾಗತಿಕವಾಗಿ ಮೆಚ್ಚುಗೆ ಪಡೆದ ʻಹೋಂಡಾ ಸ್ಮಾರ್ಟ್ ಕೀʼ* ಅನ್ನು ಹೊಸ ಸುಧಾರಿತ ಮತ್ತು ಸ್ಮಾರ್ಟ್ ʻಆಕ್ಟಿವಾ 2023ʼನಲ್ಲಿ ಪರಿಚಯಿಸಲಾಗಿದೆ. ಹೋಂಡಾ ʻಸ್ಮಾರ್ಟ್ ಕೀ ಸಿಸ್ಟಮ್ʼ ಈ ಕೆಳಗಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ:

1.    ಸ್ಮಾರ್ಟ್ ಫೈಂಡ್: ʻಸ್ಮಾರ್ಟ್ ಕೀʼನಲ್ಲಿರುವ ʻಪ್ರತ್ಯುತ್ತರ ವ್ಯವಸ್ಥೆʼಯು (ಆನ್ಸರ್‌ ಬ್ಯಾಕ್‌) ವಾಹನವನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ʻಹೋಂಡಾ ಸ್ಮಾರ್ಟ್ ಕೀʼನಲ್ಲಿರುವ ʻಆನ್ಸರ್‌ ಬ್ಯಾಕ್‌ʼ ಗುಂಡಿಯನ್ನು ಒತ್ತಿದಾಗ, ಸ್ಕೂಟರ್ ಅನ್ನು ಪತ್ತೆಹಚ್ಚಲು ಅನುವಾಗುವಂತೆ ಎಲ್ಲಾ 4 ವಿಂಕರ್‌ಗಳು ಎರಡು ಬಾರಿ ಮಿನುಗುತ್ತವೆ.

2.    ಸ್ಮಾರ್ಟ್ ಅನ್ಲಾಕ್: ʻಸ್ಮಾರ್ಟ್ ಕೀʼ ವ್ಯವಸ್ಥೆಯು ಹೊಸ ತಂತ್ರಜ್ಞಾನದ ವೈಶಿಷ್ಟ್ಯವಾಗಿದ್ದು, ಭೌತಿಕ ಕೀಲಿಯನ್ನು ಬಳಸದೆ ವಾಹನವನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಸಾಧ್ಯವಾಗಿಸುತ್ತದೆ. ಸಕ್ರಿಯಗೊಳಿಸಿದ ನಂತರ 20 ಸೆಕೆಂಡುಗಳ ಕಾಲ ಯಾವುದೇ ಚಟುವಟಿಕೆ ಕಂಡುಬರದಿದ್ದರೆ, ಸ್ವಯಂಚಾಲಿತವಾಗಿ ಸ್ಕೂಟರ್ ನಿಷ್ಕ್ರಿಯಗೊಳ್ಳುತ್ತದೆ.

3.    ಸ್ಮಾರ್ಟ್ ಸ್ಟಾರ್ಟ್: ʻಸ್ಮಾರ್ಟ್ ಕೀʼ ವಾಹನದ 2 ಮೀಟರ್ ವ್ಯಾಪ್ತಿಯೊಳಗೇ ಇದ್ದರೆ, ಸವಾರನು ʻಎಲ್ಒಸಿ ಮೋಡ್‌ʼ(Loc Mod)ನಲ್ಲಿರುವ ನಾಬ್ ಅನ್ನು ಇಗ್ನಿಷನ್ ಸ್ಥಾನಕ್ಕೆ ತಿರುಗಿಸಿ, ʻಸ್ಟಾರ್ಟ್ʼ ಗುಂಡಿಯನ್ನು ಅನ್ನು ಒತ್ತುವ ಮೂಲಕ ಕೀಲಿಯನ್ನು ಜೇಬಿನಿಂದ ಹೊರತೆಗೆಯದೆಯೇ ವಾಹನವನ್ನು ಸರಾಗವಾಗಿ ಪ್ರಾರಂಭಿಸಬಹುದು.

4.    ಸ್ಮಾರ್ಟ್ ಸೇಫ್: ʻಆಕ್ಟಿವಾ 2023ʼ ವಾಹನವು ಮ್ಯಾಪ್ ಮಾಡಲಾದ ʻಸ್ಮಾರ್ಟ್ ಇಸಿಯುʼ ಅನ್ನು ಹೊಂದಿದೆ.  ಇದು ʻಇಸಿಯುʼ ಮತ್ತು ʻಸ್ಮಾರ್ಟ್ ಕೀʼ ಸಂಕೇತದ ನಡುವೆ ಸಾಮ್ಯತೆಯನ್ನು ವಿದ್ಯುನ್ಮಾನವಾಗಿ ಹೋಲಿಕೆ (ಐಡಿ) ಮಾಡುವ ಮೂಲಕ ಭದ್ರತಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಆ ಮೂಲಕ ವಾಹನ ಕಳ್ಳತನವನ್ನು ತಡೆಯುತ್ತದೆ. ʻಸ್ಮಾರ್ಟ್ ಕೀʼ, ʻಇಮ್ಮೊಬಲೈಜರ್ʼ ವ್ಯವಸ್ಥೆಯನ್ನು ಹೊಂದಿದೆ. ಇದು ನೋಂದಾಯಿತವಲ್ಲದ ಕೀಲಿಯ ಮೂಲಕ ಎಂಜಿನ್ ಚಾಲೂಗೊಳ್ಳದಂತೆ ತಡೆಯುತ್ತದೆ. ʻಸ್ಮಾರ್ಟ್ ಕೀʼ ಮೂಲಕ ಸುರಕ್ಷಿತ ಸಂಪರ್ಕವಿಲ್ಲದ ಹೊರತು, ವಾಹನವನ್ನು ಸಕ್ರಿಯಗೊಳಿಸಲು ʻಇಮ್ಮೊಬಲೈಜರ್ʼ ಅನುಮತಿಸುವುದಿಲ್ಲ. 

 

Number Plate 70 ಸಾವಿರ ರೂ ಆ್ಯಕ್ಟಿವಾ ಸ್ಕೂಟರ್ ಫ್ಯಾನ್ಸಿ ನಂಬರ್‌ಗಾಗಿ ಮಾಲೀಕನಿಂದ 15.14 ಲಕ್ಷ ರೂ ಖರ್ಚು!

ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್: ಈ ವೈಶಿಷ್ಟ್ಯವು ದ್ವಿಮುಖ ಕಾರ್ಯನಿರ್ವಹಣೆಯ ಸ್ವಿಚ್ ಮೂಲಕ ಕಾರ್ಯನಿರ್ವಹಿಸುತ್ತದೆ. ಸ್ವಿಚ್‌ ಅನ್ನು ಕೆಳಗೆ ಒತ್ತಿದಾಗ ಎಂಜಿನ್‌ ಚಾಲುಗೊಳ್ಳುತ್ತದೆ. ಇದೇ ಸ್ವಿಚ್‌ ಅನ್ನು ಮೇಲಕ್ಕೆ ಒತ್ತುವ ಮೂಲಕ ಎಂಜಿನ್‌ ನಿಷ್ಕ್ರಿಯಗೊಳಿಸಬಹುದು.

ಹೆಚ್ಚಿನ ಅನುಕೂಲತೆ ಒದಗಿಸಲು ಸೀಟ್ ಅಡಿಯಲ್ಲಿ ಇರುವ 18 ಲೀಟರ್‌ ಸ್ಟೋರೇಜ್‌ ಜಾಗವನ್ನು ಪ್ರವೇಶಿಸಲು ವಿಶಿಷ್ಟವಾದ ʻಡಬಲ್ ಲಿಡ್ ಫ್ಯೂಯಲ್ ಓಪನಿಂಗ್ ಸಿಸ್ಟಮ್ʼ ಅನ್ನು ಇದು ಒಳಗೊಂಡಿದೆ. ಲಾಕ್ ಮೋಡ್ (5 ಇನ್ 1 ಲಾಕ್) ಮೂಲಕ ಸವಾರರಿಗೆ ಗರಿಷ್ಠ ಅನುಕೂಲತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ.

ಇದರ ದೊಡ್ಡ ಫ್ಲೋರ್‌ ಸ್ಪೇಸ್‌, ಲಗೇಜ್ ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚು ದೂರದ ಸವಾರಿಯನ್ನು ಆರಾಮವಾಗಿಸುತ್ತದೆ. ಜೊತಗೆ, ಇದರ ಲಾಂಗ್ ವ್ಹೀಲ್ ಬೇಸ್, ಉತ್ತಮ ಸ್ಥಿರತೆ ಮತ್ತು ಸಮತೋಲನದೊಂದಿಗೆ ಅಹಿತಕರ ಮತ್ತು ಕೆಟ್ಟ ರಸ್ತೆಗಳಲ್ಲಿ ಉತ್ತಮ ಸವಾರಿ ಗುಣಮಟ್ಟವನ್ನು ಖಚಿತಪಡಿಸುತ್ತದೆ. ʻಡಿ.ಸಿ. ಎಲ್‌ಇಡಿ ಹೆಡ್‌ಲ್ಯಾಂಪ್‌ನ** ನಿರಂತರ ಬೆಳಕಿನಿಂದ ಒರಟಾದ ರಸ್ತೆಗಳಲ್ಲಿ ಮತ್ತು ರಾತ್ರಿಯಲ್ಲಿ ಕಡಿಮೆ ವೇಗದಲ್ಲಿ ಸವಾರಿ ಮಾಡುವುದು ಹೆಚ್ಚು ಅನುಕೂಲಕರವಾಗಿದೆ.  ಇದರ ʻಪಾಸಿಂಗ್ ಸ್ವಿಚ್ʼ, ಹೈಬೀಮ್ / ಲೋಬೀಮ್ ಅನ್ನು ನಿಯಂತ್ರಿಸುವ ಮತ್ತು ಒಂದೇ ಸ್ವಿಚ್‌ನಿಂದ ಸಿಗ್ನಲ್ ಅನ್ನು ರವಾನಿಸುವ ಅನುಕೂಲವನ್ನು ಒದಗಿಸುತ್ತದೆ.

ಸ್ಮಾರ್ಟ್ ವಿನ್ಯಾಸ
ಸ್ಟೈಲಿಶ್ ಮತ್ತು ಸ್ಮಾರ್ಟ್ ನೋಟದ ಸಂಯೋಜನೆಯೊಂದಿಗೆ ಇದರ ಹೊಸ ಅಲಾಯ್ ವ್ಹೀಲ್ಸ್* ʻಆಕ್ಟಿವಾ 2023ʼ ಸ್ಕೂಟರ್‌ನ ಸ್ಟೈಲ್‌ಗೆ ಮೆರುಗು ನೀಡುತ್ತವೆ. ತಡೆಯಲಾಗದ ಮತ್ತು ಕಾಲಾತೀತ ವಿನ್ಯಾಸದ ಜೊತೆಗೆ ಪ್ರೀಮಿಯಂ ಬಣ್ಣ ಹಾಗೂ ʻ3ಡಿʼ ಲಾಂಛನವು ಸ್ಕೂಟರ್‌ಗೆ ಸುಧಾರಿತ ಹಾಗೂ ಉನ್ನತ ಮಟ್ಟದ ನೋಟದ ಸಂಯೋಜನೆಯನ್ನು ಒದಗಿಸುತ್ತದೆ. ಮುಂಭಾಗದ ವಿನ್ಯಾಸವು ಕ್ರೋಮ್ ಅಂಶಗಳೊಂದಿಗೆ ಕೂಡಿದ್ದು, ಆಕರ್ಷಕ ಹೆಡ್‌ಲ್ಯಾಂಪ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಮೆರುಗು ನೀಡುತ್ತದೆ. ಆಕರ್ಷಕ ಸಿಲ್ವರ್ ಗ್ರಾಬ್‌ರೈಲ್‌ ಮತ್ತು ಸೈಡ್ ವಿಂಕರ್‌ಗಳೊಂದಿಗೆ ಸೊಗಸಾಗಿ ವಿನ್ಯಾಸಗೊಳಿಸಲಾದ ಹಿಂಭಾಗದ ಟೈಲ್‌ಲ್ಯಾಂಪ್ ಸ್ಕೂಟರ್‌ನ ಒಟ್ಟಾರೆ ವಿನ್ಯಾಸವನ್ನು ಹೆಚ್ಚಿಸುತ್ತದೆ.

ಸ್ಮಾರ್ಟ್‌ ವಿಶ್ವಾಸಾರ್ಹತೆ
ಸುತ್ತಲೂ ಸಂಪೂರ್ಣ ಲೋಹದ ಬಾಡಿಯು ಸ್ಕೂಟರ್‌ನ ವಿಶ್ವಾಸಾರ್ಹತೆ ಹೆಚ್ಚಿಸುವುದರ ಜೊತೆಗೆ ಬಾಳಿಕೆಯ ಭರವಸೆಯನ್ನು ಪೂರೈಸುತ್ತದೆ. ಸ್ಕೂಟರ್‌ನ ಪ್ರತಿಯೊಂದು ಸವಾರಿಯನ್ನು ಆರಾಮದಾಯಕ ಮತ್ತು ಅನುಕೂಲಕರವಾಗಿಸಲು ʻಕಾಂಬಿ-ಬ್ರೇಕ್ ಸಿಸ್ಟಮ್ʼ (ಸಿಬಿಎಸ್) ಮತ್ತು ʻ3-ಹಂತಗಳ ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಸಸ್ಪೆನ್ಷನ್ ಅನ್ನು ʻಆಕ್ಟಿವಾ 2023ʼ ಹೊಂದಿದೆ. 12 ಇಂಚಿನ ಮುಂಭಾಗದ ಚಕ್ರವು ಸವಾರನ ಆತ್ಮವಿಶ್ವಾಸವನ್ನು ಪ್ರೇರೇಪಿಸುತ್ತದೆ ಮತ್ತು ಉತ್ತಮ ಸವಾರಿ ಗುಣಮಟ್ಟಕ್ಕೆ ನೆರವಾಗುತ್ತದೆ.  ಟೆಲಿಸ್ಕೋಪಿಕ್ ಸಸ್ಪೆನ್ಷನ್ ಈ ವಾಹನ ವರ್ಗದಲ್ಲೇ ಅತ್ಯಧಿಕ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಆತ್ಮವಿಶ್ವಾಸದ ಮತ್ತು ಸುಗಮ ಸವಾರಿಯನ್ನು ಒದಗಿಸುತ್ತದೆ.

Honda Exports 30 ಲಕ್ಷ ದ್ವಿಚಕ್ರ ವಾಹನ ರಫ್ತು ಮಾಡಿದ ಹೋಂಡಾ 2 ವ್ಹೀಲರ್ಸ್ ಇಂಡಿಯಾ!

ಸ್ಮಾರ್ಟ್ ತಂತ್ರಜ್ಞಾನ
ಭಾರತದ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನವಾದ ʻಹೋಂಡಾ ಆಕ್ಟಿವಾ 2023ʼ ಅನ್ನು 5 ಹಕ್ಕುಸ್ವಾಮ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ʻಆಕ್ಟಿವಾ 2023ʼ ಸ್ಕೂಟರ್ನ ಹೃದಯಭಾಗದಲ್ಲಿ ʻಒಬಿಡಿ2’ ಮಾನದಂಡ ಪೂರೈಸುವ ಹೋಂಡಾ ಕಂಪನಿಯ 110 ಸಿಸಿ ಪಿಜಿಎಂ-ಎಫ್‌ಐ ಎಂಜಿನ್‌ ಮಿಡಿತವಿದ್ದು, ʻವರ್ಧಿತ ಸ್ಮಾರ್ಟ್‌ ಪವರ್‌ʼ(eSP) ಇದರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಅತ್ಯಾಧುನಿಕ, ನಿಖರ ಮತ್ತು ಸೂಕ್ಷ್ಮ ʻವರ್ಧಿತ ಸ್ಮಾರ್ಟ್ ಪವರ್ʼ (eSP) ತಂತ್ರಜ್ಞಾನವು ಭಾರತವನ್ನು ಜಾಗತಿಕ ಮಾನದಂಡಗಳಿಗೆ ಸಮನಾಗಿ ತರುತ್ತದೆ.  ಎಂಜಿನ್‌ಗೆ ಪರ್ಫಾಮೆನ್ಸ್ ಆಕ್ಸಿಲರೇಟರ್ ಆಗಿರುವ ಹೋಂಡಾದ ʻವರ್ಧಿತ ಸ್ಮಾರ್ಟ್ ಪವರ್ʼ (eSP) ತಂತ್ರಜ್ಞಾನವು ಘರ್ಷಣೆಯನ್ನು ಕಡಿಮೆ ಮಾಡಿ, ದಕ್ಷ ಇಂಧನ ದಹನವನ್ನು ಗರಿಷ್ಠಗೊಳಿಸುವ ಮೂಲಕ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಜೊತೆಗೆ, ಸದ್ದಿಲ್ಲದ ಚಾಲನೆ ಮತ್ತು ನಯವಾದ ಪರಿಸರ ಸ್ನೇಹಿ ಎಂಜಿನ್ಗೆ ಅನುವು ಮಾಡಿಕೊಡುತ್ತದೆ.

1.  ಅನನ್ಯ ಹೋಂಡಾ ʻಎಸಿಜಿ ಸ್ಟಾರ್ಟರ್ʼ: ಇದು ಸ್ಕೂಟರ್‌ನಲ್ಲಿ ವಿದ್ಯುತ್‌ ಉತ್ಪಾದಿಸಿ, ಸವಾರಿ ಮಾಡುವಾಗ ಬ್ಯಾಟರಿಯನ್ನು ಚಾರ್ಜ್ ಮಾಡಲು ಬಳಸುವ ಅದೇ ʻಎಸಿʼ ಜನರೇಟರ್ ಮೂಲಕ ಎಂಜಿನ್ ಅನ್ನು ಕುಲುಕದಂತೆ ಪ್ರಾರಂಭಿಸುತ್ತದೆ. ಇದು ಸಾಂಪ್ರದಾಯಿಕ ಸ್ಟಾರ್ಟರ್ ಮೋಟರ್‌ನ ಅಗತ್ಯವನ್ನು ತೊಡೆದುಹಾಕುತ್ತದೆ. ಆದ್ದರಿಂದ, ಗೇರ್ ಮೆಷಿಂಗ್ ಸದ್ದು ಇರುವುದಿಲ್ಲ.

ಎರಡು ಯಾಂತ್ರಿಕ ವೈಶಿಷ್ಟ್ಯಗಳು ಕಡಿಮೆ ಶ್ರಮದಿಂದ ಎಂಜಿನ್ ಚಾಲನೆಗೆ ಕಾರಣವಾಗುತ್ತವೆ - ಮೊದಲನೆಯದು ಸ್ವಲ್ಪ ತೆರೆದ ʻಎಕ್ಸಾಸ್ಟ್ ವಾಲ್ವ್ʼಗಳೊಂದಿಗೆ (ಕಂಪ್ರೆಷನ್ ಸ್ಟ್ರೋಕ್ ನ ಆರಂಭದಲ್ಲಿ) ಡಿಕಂಪ್ರೆಷನ್ನ ಗರಿಷ್ಠ ಸದ್ಬಳಕೆ. ಮತ್ತೊಂದೆಂದರೆ, ಎಂಜಿನ್ ಅನ್ನು ಸ್ವಲ್ಪ ವಿರುದ್ಧ ದಿಕ್ಕಿನಲ್ಲಿ ತಿರುಗಿಸುವ ʻಸ್ವಿಂಗ್ ಬ್ಯಾಕ್ʼ ವೈಶಿಷ್ಟ್ಯ.  ಇದು ಪಿಸ್ಟನ್‌ಗೆ 'ರನ್ನಿಂಗ್ ಸ್ಟಾರ್ಟ್' ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಎಂಜಿನ್ ಅನ್ನು ಸಣ್ಣ ಪ್ರಮಾಣದ ಶಕ್ತಿಯೊಂದಿಗೆ ಪ್ರಾರಂಭಿಸಲು ಸುಲಭವಾಗುತ್ತದೆ.

ಸ್ವಯಂಚಾಲಿತ ಚೋಕ್ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವ ʻಸ್ಟಾರ್ಟ್ ಸೋಲೆನಾಯ್ಡ್ʼ, ಸಮೃದ್ಧ ಗಾಳಿ ಇಂಧನ ಮಿಶ್ರಣವನ್ನು ಖಚಿತಪಡಿಸುತ್ತದೆ ಮತ್ತು ಎಂಥದ್ದೇ ಸಂದರ್ಭದಲ್ಲಿ ಒಂದೇ ಬಾರಿಗೆ ಎಂಜಿನ್‌ ಪ್ರಾರಂಭಿಸುವ ಅನುಕೂಲವನ್ನು ಒದಗಿಸುತ್ತದೆ.

2.  ಪ್ರೋಗ್ರಾಮ್ಡ್ ಫ್ಯೂಯಲ್ ಇಂಜೆಕ್ಷನ್ (ಪಿಜಿಎಂ-ಎಫ್ಐ) : ಇದು ನಿರ್ದಿಷ್ಟ ಎಂಜಿನ್ ಡೇಟಾ ಮತ್ತು 5 ಇಂಟೆಲಿಜೆಂಟ್‌ ಸೆನ್ಸಾರ್‌ಗಳ ನಿರಂತರ ಪ್ರತಿಕ್ರಿಯೆಯ  ಆಧಾರದ ಮೇಲೆ ಸಿಲಿಂಡರ್‌ಗೆ ಸರಿಯಾದ ಪ್ರಮಾಣದ ಇಂಧನವನ್ನು ಪೂರೈಸುತ್ತದೆ. ಇದು ನಿರಂತರವಾಗಿ ನಯವಾದ ರೀತಿಯಲ್ಲಿ ವಿದ್ಯುತ್ ಉತ್ಪಾದನೆಗೆ ಕಾರಣವಾಗುತ್ತದೆ.

3.  ಟಂಬಲ್ ಫ್ಲೋ: ʻಇಂಟಿಗ್ರೇಟೆಡ್ ಡೈ-ಕಾಸ್ಟಿಂಗ್ʼ ಪ್ರಕ್ರಿಯೆಯ ಮೂಲಕ ಹೋಂಡಾ ವಿಶ್ವದ ಮೊದಲ ʻಟಂಬಲ್ ಫ್ಲೋʼ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ವರ್ಧಿತ ಸ್ಮಾರ್ಟ್ ಟಂಬಲ್ ಟೆಕ್ನಾಲಜಿ (eSTT), ʻಇನ್‌ಲೆಟ್ ಪೋರ್ಟ್ʼ ಆಕಾರವನ್ನು ಉತ್ತಮಗೊಳಿಸುವ ಮೂಲಕ ಮತ್ತು ʻರಿವರ್ಸ್ ಫ್ಲೋʼ ವಿದ್ಯಮಾನವನ್ನು ಬಳಸುವ ಮೂಲಕ ʻಟಂಬಲ್‌ ಫ್ಲೋʼ ಅನ್ನು ಉತ್ಪಾದಿಸುತ್ತದೆ. ಆ ಮೂಲಕ ದಹನಕ್ರಿಯೆ ಸುಧಾರಣೆಗೆ ಹೆಚ್ಚುವರಿ ಘಟಕಗಳನ್ನು ಸೇರಿಸುವ ಅಗತ್ಯವನ್ನು ತಪ್ಪಿಸುತ್ತದೆ.

4.  ಘರ್ಷಣೆ ಕಡಿತ: ʻಆಫ್ಸೆಟ್ ಸಿಲಿಂಡರ್ʼ, ʻಕಾಂಪ್ಯಾಕ್ಟ್ ವೇಟ್ ಕ್ರ್ಯಾಂಕ್ ಶಾಫ್ಟ್ʼ ಮತ್ತು ʻಆಪ್ಟಿಮೈಸ್ಡ್ ಪಿಸ್ಟನ್ʼಗಳು ಒಟ್ಟಾರೆ ಎಂಜಿನ್ ಘರ್ಷಣೆಯನ್ನು ಕಡಿಮೆ ಮಾಡುತ್ತವೆ. ಸಮತೋಲಿತ ತೂಕವು ಸುಧಾರಿತ ಇಂಧನ ದಕ್ಷತೆಗೆ ಕಾರಣವಾಗುತ್ತದೆ. ಹೊಸ ʻಆಕ್ಟಿವಾ 2023ʼ ಸ್ಕೂಟರ್ ಫ್ಯೂಯಲ್ ಎಫಿಷಿಯೆಂಟ್ ಟೈರ್‌ಗಳನ್ನು ಹೊಂದಿದ್ದು, ಇವುಗಳನ್ನು ಹೊಸ ಟೈರ್‌ ಕಾಂಪೌಂಡ್‌ ತಂತ್ರಜ್ಞಾನದೊಂದಿಗೆ ಹೋಂಡಾ ಕಂಪನಿಯು ವಿಶೇಷವಾಗಿ ಅಭಿವೃದ್ಧಿಪಡಿಸಿದೆ. ಇದು ಉರುಳುವ ಘರ್ಷಣೆ ಪ್ರತಿರೋಧವನ್ನು 15-20% ರಷ್ಟು ಕಡಿಮೆ ಮಾಡುತ್ತದೆ ಮತ್ತು ರಸ್ತೆಯ ಹಿಡಿತವನ್ನು ಕಾಪಾಡಿಕೊಳ್ಳುತ್ತದೆ, ಜೊತೆಗೆ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

Follow Us:
Download App:
  • android
  • ios