Asianet Suvarna News Asianet Suvarna News

Hero Group Case: ದೆಹಲಿ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ

 ‘ಹೀರೋ’ ಬ್ರ್ಯಾಂಡ್‌ ಬಳಕೆ ಕುರಿತು ಮಧ್ಯಸ್ಥಿಕೆ ನ್ಯಾಯಮಂಡಳಿರಚಿಸಿದ್ದ ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

Hero brand conflict SC refuses to interfere in HC order
Author
Bengaluru, First Published Mar 16, 2022, 11:19 AM IST

Auto Desk: ಎಲೆಕ್ಟ್ರಿಕ್ ವಾಹನಗಳಿಗೆ ‘ಹೀರೋ’ ಬ್ರ್ಯಾಂಡ್ ಹೆಸರು ಬಳಸುವ ಕುರಿತು ಮುಂಜಾಲ್ (Munjal) ಫ್ಯಾಮಿಲಿ ಗ್ರೂಪ್ನ ಎರಡು ತಂಡಗಳ ನಡುವಿನ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ನ್ಯಾಯಮಂಡಳಿ (Arbitral Tribunal) ರಚಿಸಿದ್ದ ದೆಹಲಿ ಹೈಕೋರ್ಟ್ನ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.ಹೀರೋ ಎಲೆಕ್ಟ್ರಿಕ್ನ (Hero electric) ಚುಕ್ಕಾಣಿ ಹಿಡಿದಿರುವ ನವೀನ್ ಮುಂಜಾಲ್ (Naveen Munjal) (ವಿಜಯ್ ಮುಂಜಾಲ್ ಅವರ ಮಗ) ಅವರು, ತನ್ನ ಚಿಕ್ಕಪ್ಪ ಪವನ್ ಮುಂಜಾಲ್ (ಹೀರೋ ಮೊಟೊಕಾರ್ಪ್ನ (Hero Motocorp)ಅಧ್ಯಕ್ಷ) ಜೊತೆಗೆ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.

2022ರಲ್ಲಿ ಹೀರೋ ಮೋಟೋಕಾರ್ಪ್ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಮುಂದಾಗಿದ್ದು, ಅದಕ್ಕೆ ‘ಹೀರೋ’ (Hero) ಬ್ರ್ಯಾಂಡ್ ಹೆಸರು ಬಳಸಬಾರದು ಎಂದು ನವೀನ್ ತಕರಾರು ತೆಗೆದಿದ್ದಾರೆ. ಆ ಬ್ರ್ಯಾಂಡ್ನ ಮೇಲೆ ತಮಗೆ ಮಾತ್ರ ವಿಶೇಷ ಹಕ್ಕು ಇದೆ. ಇದು ಈಗಾಗಲೇ ಕೌಟುಂಬಿಕ ಒಪ್ಪಂದಗಳಲ್ಲಿ ಸ್ಪಷ್ಟವಾಗಿದೆ ಎಂದು ಅವರು ವಾದಿಸಿದ್ದಾರೆ.

ಈ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಪ್ರಕರಣದ ಮಧ್ಯಸ್ಥಿಕೆ ವಹಿಸಿ, ಮಾತುಕತೆ ಮೂಲಕ ಅದನ್ನು ಬಗೆಹರಿಸಲು ಮಧ್ಯಸ್ಥಿತಿ ನ್ಯಾಯಮಂಡಳಿಯನ್ನು ರಚಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೀರೋ ಮೋಟೋಕಾರ್ಪ್ ಸುಪ್ರೀಂಕೋರ್ಟ್ಗೆ ಎಸ್ಎಲ್ಪಿ (SLP-special leave petition) ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಜೆ.ಕೆ ಮಹೇಶ್ವರಿ ನೇತೃತ್ವದ ವಿಭಾಗೀಯ ಪೀಠ, ದೆಹಲಿಯ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು  ಯಾವುದೇ ಆಧಾರವಿಲ್ಲ" ಎಂದು ತೀರ್ಪು ನೀಡಿದೆ.

ಇದನ್ನೂ ಓದಿ: Electric Vehilce ಭಾರತದಲ್ಲಿ 4 ಹೊಸ ಇವಿ ಉತ್ಪಾದನಾ ಘಟಕ ಸ್ಥಾಪಿಸಲಿದೆ ಹೀರೋ ಎಲೆಕ್ಟ್ರಿಕ್!

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ ಮಧ್ಯಸ್ಥಿಕೆ ಒಪ್ಪಂದಗಳಿಗೆ ಸಮ್ಮತಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ಗೆ (Supreme court) ಮೊರೆ ಹೋಗಿತ್ತು. ಹೀರೋ ಮೋಟೋಕಾರ್ಪ್ನ ಆಕ್ಷೇಪಣೆಗಳನ್ನು ಪರಿಗಣಿಸುವಂತೆ ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಮಧ್ಯಸ್ಥಿಕೆ ನ್ಯಾಯಮಂಡಳಿಯ ನ್ಯಾಯಮೂರ್ತಿಗಳು, ಹೈಕೋರ್ಟ್ನ ಅಭಿಪ್ರಾಯಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ಕಳೆದ ತಿಂಗಳು, ‘ಹೀರೋ’ ಬ್ರ್ಯಾಂಡ್ ಹೆಸರು ಬಳಕೆಗೆ ತಡೆ ನೀಡುವಂತೆ ಕೋರಿದ್ದ ಅರ್ಜಿಯನ್ನು ನವೀನ್ ಮುಂಜಾಲ್ ನೇತೃತ್ವದ ಹೀರೋ ಎಲೆಕ್ಟ್ರಿಕ್ ದೆಹಲಿ ಹೈಕೋರ್ಟ್ನಿಂದ ಹಿಂತೆಗೆದುಕೊಂಡಿತ್ತು.  ಹೀರೋ ಮೋಟೋಕಾರ್ಪ್ ಮತ್ತು ಹೀರೋ ಎಲೆಕ್ಟ್ರಿಕ್ ನಡುವಿನ ವಿವಾದವನ್ನು ಪರಿಹರಿಸಲು ಹೈಕೋರ್ಟ್ ನೇಮಿಸಿರುವ  ಮಧ್ಯಸ್ಥಿಕೆ ನ್ಯಾಯಮಂಡಳಿ ಮೂವರು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡಿದೆ – ಇಂದು ಮಲ್ಹೋತ್ರಾ, ದೀಪಕ್ ಮಿಶ್ರಾ ಮತ್ತು ಇಂದರ್ಮೀತ್ ಕೌರ್.

ಇದನ್ನೂ ಓದಿ: Hero VIDA scooter ಹೀರೋದಿಂದ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ!

ಸುಪ್ರೀಂ ಕೋರ್ಟ್ನಲ್ಲಿ, ವಕೀಲರಾದ ಜೈದೀಪ್ ಗುಪ್ತಾ ಮತ್ತು ಶಲ್ಲಿ ಭಾಸಿನ್ ಅವರು ಹೀರೋಮೊಟೊಕಾರ್ಪ್ ಅನ್ನು ಪ್ರತಿನಿಧಿಸುತ್ತಿದ್ದಾರೆ, ಆದರೆ ವಿಜಯ್ ಕುಮಾರ್ ಮುಂಜಾಲ್ ಅವರನ್ನು ಹಿರಿಯ ವಕೀಲ ಗೋಪಾಲ್ ಸುಬ್ರಮಣ್ಯಂ ಮತ್ತು ಕಾನೂನು ಸಂಸ್ಥೆ ಖೈತಾನ್ ಮತ್ತು ಕಂಪನಿ ಪ್ರತಿನಿಧಿಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಹೀರೋ ಮೋಟೋ ಕಾರ್ಪ್ (Hero MotoCorp) ‘ವೀಡಾ, ಪವರ್ಡ್ ಬೈ ಹೀರೋ’ (Vida, Powered by Hero) ಸ್ಕೂಟರ್ ಅನ್ನು ಅನಾವರಣಗೊಳಿಸಿತು. ಇದು  ಬ್ರ್ಯಾಂಡ್ ಹೆಸರಿಗಾಗಿ ಆರಂಭಗೊಂಡ ಕಾನೂನು ಹೋರಾಟದ ನಂತರ ಹೊರಬಂದಿರುವ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಜೊತೆಗೆ,  ಹೀರೋ ಮೋಟೋಕಾರ್ಪ್ನ ದಿವಂಗತ ಸಂಸ್ಥಾಪಕ ಬ್ರಿಜ್ಮೋಹನ್ ಲಾಲ್ ಮುಂಜಾಲ್ ಅವರ ಆರಂಭಿಕ ವಾರ್ಷಿಕೋತ್ಸವದ ಸಂದರ್ಭದಲ್ಲಿ  ಅಂದರೆ, ಜುಲೈ 1, 2022 ರಂದು ಎಲೆಕ್ಟ್ರಿಕಲ್ ಕಾರು (Electric Car)  ಅನಾವರಣಗೊಳ್ಳುವ 

Follow Us:
Download App:
  • android
  • ios