Vastu Tips: ಮನೆ ಡಸ್ಟ್‌ಬಿನ್ ಎಲ್ಲಿಡಬೇಕು? ಯಾವ ಬಣ್ಣದ್ದಾಗಿರಬೇಕು?
vaastu Apr 04 2026
Author: Suvarna News Image Credits:Getty
Kannada
ಡಸ್ಟ್‌ಬಿನ್‌ಗೆ ವಾಸ್ತು ಟಿಪ್ಸ್
ವಾಸ್ತು ಶಾಸ್ತ್ರದಲ್ಲಿ ಡಸ್ಟ್‌ಬಿನ್‌ಗೆ ಸಂಬಂಧಿಸಿದ ಟಿಪ್ಸ್ ಇವೆ. ಮನೆಯಲ್ಲಿ ಕಸದ ಬುಟ್ಟಿಯನ್ನು ಯಾವ ದಿಕ್ಕಿನಲ್ಲಿಡಬೇಕು, ಎಲ್ಲಿಡಬಾರದು, ಯಾವ ಬಣ್ಣದ್ದಾಗಿರಬೇಕು? ಡಸ್ಟ್‌ಬಿನ್ ವಾಸ್ತು ಟಿಪ್ಸ್ ಇಲ್ಲಿವೆ.
ವಾಸ್ತು ಪ್ರಕಾರ, ಡಸ್ಟ್‌ಬಿನ್ ಇಡಲು ಅತ್ಯಂತ ಸರಿಯಾದ ದಿಕ್ಕು ಎಂದರೆ ನೈಋತ್ಯ ಅಥವಾ ದಕ್ಷಿಣ. ಈ ದಿಕ್ಕಿನಲ್ಲಿ ಡಸ್ಟ್‌ಬಿನ್ ಇಡಲು ಸಮಸ್ಯೆ ಇದ್ದರೆ, ಅದನ್ನು ವಾಯುವ್ಯ ದಿಕ್ಕಿನಲ್ಲಿಯೂ ಇಡಬಹುದು.
Image credits: Getty
Kannada
ಡಸ್ಟ್‌ಬಿನ್ ಯಾವ ದಿಕ್ಕಿನಲ್ಲಿ ಇಡಬಾರದು?
ವಾಸ್ತು ಪ್ರಕಾರ, ಈಶಾನ್ಯ ದಿಕ್ಕಿನಲ್ಲಿ ಮರೆತೂ ಡಸ್ಟ್‌ಬಿನ್ ಇಡಬೇಡಿ. ಇದರಿಂದ ಜೀವನದಲ್ಲಿ ಟೆನ್ಶನ್ ಹೆಚ್ಚಾಗಬಹುದು ಮತ್ತು ಮನೆಯ ಸದಸ್ಯರ ಆರೋಗ್ಯವೂ ಹದಗೆಡಬಹುದು.
Image credits: Getty
Kannada
ಅಡುಗೆ ಮನೆಯಲ್ಲಿ ಡಸ್ಟ್‌ಬಿನ್ ಇಡಬಹುದೇ?
ಅನೇಕರು ತಮ್ಮ ಅಡುಗೆಮನೆಯಲ್ಲೇ ಡಸ್ಟ್‌ಬಿನ್ ಇಟ್ಟುಕೊಳ್ಳುತ್ತಾರೆ. ಇದು ತಪ್ಪು. ಅಡುಗೆಮನೆ ಅನ್ನಪೂರ್ಣ ದೇವಿಯ ಸ್ಥಾನ. ಈ ಜಾಗದಲ್ಲಿಟ್ಟ್ರೆ, ವಾಸ್ತು ದೋಷ ಉಂಟಾಗುತ್ತದೆ.
ಮನೆಯ ಮುಖ್ಯ ದ್ವಾರ ಅಥವಾ ಪೂಜಾ ಕೋಣೆಯ ಬಳಿಯೂ ಡಸ್ಟ್‌ಬಿನ್ ಇಡಬಾರದು.ಇದರ ಪರಿಣಾಮ ಮನೆಯಲ್ಲಿ ವಾಸಿಸುವ ಎಲ್ಲಾ ಸದಸ್ಯರ ಮೇಲೂ ಆಗಬಹುದು.
Image credits: Getty
Kannada
ಕಸದ ಬುಟ್ಟಿಯ ಬಣ್ಣ ಯಾವುದಿರಬೇಕು?
ಮನೆಯಲ್ಲಿ ನೀಲಿ, ಹಳದಿ ಅಥವಾ ತಿಳಿ ಬಣ್ಣದ ಡಸ್ಟ್‌ಬಿನ್‌ಗಳನ್ನು ಬಳಸುವುದು ಉತ್ತಮ. ಕಪ್ಪು ಅಥವಾ ನೇರಳೆ ಬಣ್ಣದ ಡಸ್ಟ್‌ಬಿನ್ ಬಳಸಬಾರದು. ಡಸ್ಟ್‌ಬಿನ್ ಅನ್ನು ಯಾವಾಗಲೂ ಮುಚ್ಚಿಡಬೇಕು.