ಮನೆಯಲ್ಲಿ ಯಾವ ಆಕಾರದ ಗಡಿಯಾರ ಇಡಬೇಕು, ದುಂಡಗಿನದ್ದೇ ಅಥವಾ ಚೌಕದ್ದೇ?
ಇಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ವಾಲ್ ಕ್ಲಾಕ್ ಅಂದರೆ ಗೋಡೆ ಗಡಿಯಾರ ಇದ್ದೇ ಇರುತ್ತದೆ. ಈ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಅದರ ಆಕಾರ ಹೇಗಿರಬೇಕು ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹಾಲ್‌ನಲ್ಲಿ ಚೌಕಾಕಾರದ ಗಡಿಯಾರವನ್ನು ಇಡಬೇಕು, ಆದರೆ ಮಲಗುವ ಕೋಣೆಯಲ್ಲಿ ದುಂಡಗಿನ ಗಡಿಯಾರವನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಶಾಂತಿ & ಪ್ರೀತಿ ನೆಲೆಸುತ್ತದೆ.
ಪೂರ್ವ ದಿಕ್ಕಿನಲ್ಲಿ ಇರಿಸಲಾದ ಗಡಿಯಾರವು ಮನೆಯ ವಾತಾವರಣವನ್ನು ಮಂಗಳಕರವಾಗಿ ಮತ್ತು ಪ್ರೀತಿಯಿಂದ ಇಡುತ್ತದೆ. ಅದೇ ರೀತಿ ಪಶ್ಚಿಮ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಮನೆಯವರ ಆರೋಗ್ಯ ಚೆನ್ನಾಗಿರುತ್ತದೆ.
ವಾಸ್ತು ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಗೋಡೆ ಗಡಿಯಾರವನ್ನು ಎಂದಿಗೂ ಇಡಬಾರದು. ಹೀಗೆ ಮಾಡುವುದರಿಂದ ಪ್ರಗತಿಯ ಅವಕಾಶಗಳು ಕಡಿಮೆಯಾಗುತ್ತವೆ ಮತ್ತು ಮನೆಯ ಯಜಮಾನನ ಆರೋಗ್ಯವೂ ಹದಗೆಡುತ್ತದೆ.
ಮನೆಯಲ್ಲಿ ಹಸಿರು ಮತ್ತು ಕಿತ್ತಳೆ ಬಣ್ಣದ ಗಡಿಯಾರವನ್ನು ಹಾಗೂ ಅಂಗಡಿಯಲ್ಲಿ ಕಪ್ಪು ಅಥವಾ ಗಾಢ ನೀಲಿ ಬಣ್ಣದ ಗಡಿಯಾರವನ್ನು ಇಡಬಾರದು. ಇದರಿಂದ ಮನೆ & ಅಂಗಡಿಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬಾಗಿಲಿನ ಮೇಲೆಯೂ ಗಡಿಯಾರವನ್ನು ಇಡಬಾರದು, ಇದರಿಂದ ಮನೆಯಲ್ಲಿ ಒತ್ತಡ ಹೆಚ್ಚಾಗಬಹುದು. ಮನೆಯಲ್ಲಿ ನಿಂತುಹೋದ ಗಡಿಯಾರವನ್ನು ಎಂದಿಗೂ ಇಡಬಾರದು, ಹೀಗೆ ಮಾಡುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ.