Kannada

ಮಳೆಗಾಲದಲ್ಲಿ ವಿಶೇಷ ಮಸಾಲೆಯುಕ್ತವಾದ ಟೀ ಮಾಡಿಕೊಳ್ಳಿ.

ಬೆಳಗ್ಗೆ ಪರಿಮಳಯುಕ್ತ, ರುಚಿಯಾದ ಟೀ ಕುಡಿದ್ರೆ ಇಡೀ ದಿನ ಫ್ರೆಶ್ ಆಗಿರುತ್ತದೆ.

Kannada

ಸ್ಟ್ರಾಂಗ್ ಟೀ

ಮಳೆಗಾಲದ ಸಿಹಿ ಜೊತೆ ಖಾರವಾದ ಟೀ ಕುಡಿಯೋದ್ರಲ್ಲಿ ವಿಶೇಷವಾದ ಮಜಾ ಇರುತ್ತೆ. ಮನೆಯಲ್ಲಿಯೇ ಸುಲಭವಾಗಿ ಸ್ಟ್ರಾಂಗ್ ಟೀ ಮಾಡಿಕೊಳ್ಳಹುದು.

Image credits: instagram
Kannada

ಮಸಾಲೆ ಟೀ ಮಾಡಲು ಬೇಕಾಗುವ ಸಾಮಾಗ್ರಿಗಳು

ನೀರು: 1 ಕಪ್, ಹಾಲು: 1/2 ಕಪ್, ಟೀ ಪುಡಿ: 2 ಟೀ ಸ್ಪೂನ್, ಸಕ್ಕರೆ: ಒಂದೂವರೆ ಟೀ ಸ್ಪೂನ್, 1/2 ಇಂಚು ಶುಂಠಿ, 1 ಲವಂಗ/ದಾಲ್ಚಿನ್ನಿ, ಒಂದು ಚಿಟಿಕೆ ಏಲಕ್ಕಿ

Image credits: instagram
Kannada

ಟೀ ಪುಡಿ ಸೇರಿಸುವಿಕೆ

ಮಸಾಲೆ ಪರಿಮಳ ಬರುತ್ತಿದ್ದಂತೆ ಟೀ ಪುಡಿ ಸೇರಿಸಿಕೊಳ್ಳಬೇಕು. ಚಹಾದ ಬಣ್ಣ ಬರೋವರೆಗೂ 2-3 ನಿಮಿಷ ಕುದಿಸಿಕೊಳ್ಳೋದು ಉತ್ತಮ. ಇದು ಚಹಾದ ರುಚಿಯನ್ನು ಹೆಚ್ಚಿಸುತ್ತದೆ.

Image credits: Social media
Kannada

ಮಾಡುವ ವಿಧಾನ

ಮೊದಲಿಗೆ ನೀರು ಕುದಿಸಿಕೊಳ್ಳಿ. ನಂತರ ಇದಕ್ಕೆ ತುರಿದ ಶುಂಠಿ, ಏಲಕ್ಕಿ, ಲವಂಗ, ದಾಲ್ಚಿನ್ನಿ ಸೇರಿಸಿಕೊಂಡು 3-4 ನಿಮಿಷ ಕುದಿಸಿಕೊಳ್ಳಿ. ಮಸಾಲೆ ಪರಿಮಳ ಬರೋವರೆಗೂ ಕುದಿಸಿಕೊಳ್ಳಿ.

Image credits: Social media
Kannada

ಬಣ್ಣ, ಟೇಸ್ಟ್ ಮತ್ತು ಪರಿಮಳ

ಚಹಾದ ಬಣ್ಣ ಬರುತ್ತಿದ್ದಂತೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿಕೊಂಡು 3-4 ನಿಮಿಷ ಕುದಿಸಿಕೊಳ್ಳಿ. ಈ ಎಲ್ಲಾ ವಿಧಾನ ಚಹಾಕ್ಕೆ ಗಾಢವಾದ ಬಣ್ಣ, ಸ್ಟ್ರಾಂಗ್ ಟೇಸ್ಟ್, ಪರಿಮಳ ನೀಡುತ್ತದೆ.

Image credits: Social media
Kannada

ಟೀ ಜೊತೆ ಕುರುಕುಲು ತಿಂಡಿ

ಕೊನೆಗೆ ಅಂತಿಮವಾಗಿ ಚಹಾವನ್ನು ಜರಡಿ ಹಿಡಿದುಕೊಂಡ್ರೆ ಟೀ ಕುಡಿಯಲು ಸಿದ್ಧ. ಮಳೆ ಬರ್ತಿದ್ರೆ ಈ ರೀತಿ ಟೀ ಮಾಡಿಕೊಂಡು ಕುಡಿದು ಮಳೆಗಾಲ ಎಂಜಾಯ್ ಮಾಡಿ.

Image credits: Social media

ಅಸಲಿ ಟೇಸ್ಟ್ ಕೆಡದಂತೆ ಉದುರು ಉದುರಾಗಿ ಉಪ್ಪಿಟ್ಟು ಮಾಡುವ ಸೀಕ್ರೆಟ್ ಟಿಪ್ಸ್

ಮನ ಸೆಳೆಯೋ ಪರಿಮಳ, ಬೆಣ್ಣೆಯಂತೆ ಕರಗುವ ಜಗತ್ತಿನ ಅತೀ ಸಿಹಿ ಮಾವಿನ ಹಣ್ಣು ಇದು!

ಪೂರಿ ಮೆತ್ತಗಾಗದೆ, ಬಲೂನ್‌ನಂತೆ ಉಬ್ಬಲು ಹಿಟ್ಟನ್ನ ಹೀಗೆ ಮಿಕ್ಸ್ ಮಾಡಿ

ಮೀನನ್ನು ಫ್ರಿಡ್ಜ್‌ನಲ್ಲಿ ಇಡ್ತೀರಾ? ಅದಕ್ಕೂ ಮುನ್ನ ಇದನ್ನ ತಿಳ್ಕೊಳ್ಳಿ