Asianet Suvarna News Asianet Suvarna News

ಟೀಂ ಇಂಡಿಯಾಗೆ ದ್ರಾವಿಡ್ ಮಾರ್ಗದರ್ಶನ, ರಂಗೇರಿದೆ ಉಪಸಮರ ಕದನ; ಅ.16ರ ಟಾಪ್ 10 ಸುದ್ದಿ!

100 ಕೋಟಿ ಲಸಿಕೆಗೆ ದಾಖಲೆಗೆ ದೇಶ ಕಾಯುತ್ತಿದೆ. ಇತ್ತ ಕೇಂದ್ರ ಸರ್ಕಾರ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದೆ. ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಕಣ ರಂಗೇರುತ್ತಿದೆ. ಕನ್ನಡಿಗ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಲು ಸಮ್ಮತಿ ಸೂಚಿಸಿದ್ದಾರೆ. ರಚಿತಾ ರಾಮ್ ಹೊಸ ಚಿತ್ರ ಶುರು, ಕಾಂಗ್ರೆಸ್ ನೂತನ ಸಾರಥಿ ಸೇರಿದಂತೆ ಅಕ್ಟೋಬರ್ 16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
Rahul Dravid team India coach to Karnataka By election top 10 News of october 16 ckm
Author
Bengaluru, First Published Oct 16, 2021, 4:29 PM IST
  • Facebook
  • Twitter
  • Whatsapp

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ, ಐವರು ಭಕ್ತರು ಸಾವು!

Rahul Dravid team India coach to Karnataka By election top 10 News of october 16 ckm

ದೇಶಾದ್ಯಂತ ದಸರಾ, ನವರಾತ್ರಿ(Navratri) ಸಂಭ್ರಮ ಕಳೆಗಟ್ಟಿತ್ತು. ಆದರೀಗ ಈ ಹಬ್ಬದ ವಾತಾವರಣದ ಮಧ್ಯೆ ರಾಜಸ್ಥಾನದ(Rajasthan) ಧೋಲ್‌ಪುರದಲ್ಲಿ ಪಾರ್ವತಿ ನದಿಯಲ್ಲಿ(Partvati River) ದುರ್ಗಾ ಮೂರ್ತಿ ವಿಸರ್ಜನೆಯ ವೇಳೆ ಆಗ್ರಾ(Agra) ಮೂಲದ ಐವರು ಮುಳುಗಿ ಸಾವನ್ನಪ್ಪಿದ್ದಾರೆ. 

ಕಾಂಗ್ರೆಸ್‌ ನೂತನ ಸಾರಥಿ ಯಾರು? CWC ಸಭೆಯಲ್ಲಿ ಮಹತ್ವದ ನಿರ್ಧಾರ!

Rahul Dravid team India coach to Karnataka By election top 10 News of october 16 ckm

ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ಉನ್ನತ ಮಟ್ಟದ ಸಾಂಸ್ಥಿಕ ಚುನಾವಣೆಗಳಿಗೆ ತಳಮಟ್ಟದ ಕಾರ್ಯಕ್ರಮವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌(Congress) ಕಾರ್ಯಕಾರಿ ಸಮಿತಿಯ ಸಭೆ(Congress Working Committee) ಆಯೋಜಿಸಲಾಗಿದೆ.

100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ: ವಿಮಾನ, ಹಡಗು, ರೈಲಲ್ಲಿ ಘೋಷಣೆ!

Rahul Dravid team India coach to Karnataka By election top 10 News of october 16 ckm

ದೇಶದಲ್ಲಿ 100 ಕೋಟಿ ಕೋವಿಡ್‌ ಲಸಿಕೆ(Covid 19 Vaccine) ವಿತರಿಸಿದ ಸಂದರ್ಭವನ್ನು ಭರ್ಜರಿ ಸಂಭ್ರಮದೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅ.18 ಅಥವಾ ಅ.19ರಂದು ಸೃಷ್ಟಿಯಾಗಲಿರುವ 100 ಕೋಟಿ ಲಸಿಕೆ(Vaccine) ವಿತರಣೆಯ ದಾಖಲೆಯ ಸುದ್ದಿಯನ್ನು ವಿಮಾನ, ಹಡಗು, ಮೆಟ್ರೋ ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ

ಇಂದಿನಿಂದ ಉಪಸಮರ ಕಣಕ್ಕೆ ರಂಗು: ಭರ್ಜರಿ ವಾಕ್ಸಮರ ಸಂಭವ!

Rahul Dravid team India coach to Karnataka By election top 10 News of october 16 ckm

ದಸರಾ ಹಬ್ಬದ(Mysore Dasara) ಬೆನ್ನಲ್ಲೇ ಶನಿವಾರದಿಂದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ(Assembly By Elections) ಪ್ರಚಾರ ರಂಗು ಪಡೆದುಕೊಳ್ಳಲಿದೆ.

Good News: ಟೀಂ ಇಂಡಿಯಾ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್‌ ಆಯ್ಕೆ..!

Rahul Dravid team India coach to Karnataka By election top 10 News of october 16 ckm

ಬೆಂಗಳೂರು: 'ದ ವಾಲ್‌' ಖ್ಯಾತಿಯ ದಿಗ್ಗಜ ಕ್ರಿಕೆಟಿಗ, ಕನ್ನಡಿಗ ರಾಹುಲ್‌ ದ್ರಾವಿಡ್‌ (Rahul Dravid) ಟೀಂ ಇಂಡಿಯಾ ಕೋಚ್ (Team India Coach) ಆಗಲು ಸಮ್ಮತಿ ಸೂಚಿಸಿದ್ದಾರೆ. 

ಆ ಮೂವರಿಂದ ಕೋಟಿಗೊಬ್ಬ-3ಗೆ ಅಡ್ಡಿ: ಕಿಚ್ಚ ಎಕ್ಸ್‌ಕ್ಲೂಸಿವ್ ಮಾತು

Rahul Dravid team India coach to Karnataka By election top 10 News of october 16 ckm

ಸಿನಿಮಾಗೆ ಅಡ್ಡಿ ಮಾಡಿದ್ಯಾರು ? ಮೊದಲ ದಿನವೇ ಸಿನಿಮಾಗೆ ಅಡ್ಡಿ ಮಾಡಿದ್ಯಾಕೆ ? ಅ.14ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿತ್ತು. ಆದರೆ ಆ ಮೂವರು ಕಿಚ್ಚನ ಸಿನಿಮಾಗೆ ಕಿಚ್ಚು ಹಚ್ಚಿದ್ರಾ ? ಕಿಚ್ಚ ಸುದೀಪ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ

20ನೇ ವಾರ್ಷಿಕೋತ್ಸವಕ್ಕೆ ನೋಕಿಯಾ 6310 ಫೋನು ಮರು ಬಿಡುಗಡೆ!

Rahul Dravid team India coach to Karnataka By election top 10 News of october 16 ckm

2001ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದ್ದ, ಐಕಾನಿಗ್ ಮೊಬೈಲ್ ಫೋನ್ ನೋಕಿಯಾ 6319 (Nokia 6310) ಮತ್ತೆ ಮರು ಬಿಡುಗಡೆಯಾಗಿದೆ. 20ನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಕಂಪನಿಯು ಈ ಫೋನನ್ನು ರಿಲಾಂಚ್ ಮಾಡಿದೆ. ಭಾರತವು ಸೇರಿದಂತೆ ಜಗತ್ತಿನಾದ್ಯಂತ ಈ ಫೋನ್‌ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.

ಆಮಿಷ ಒಡ್ಡಿ ಪ್ರತಿಭಟನೆಗೆ ಕರೆಯಿಸಿ ಕೊಲೆ, ರೈತ ಹೋರಾಟದ ಅಸಲಿ ಕತೆ ಹೇಳಿದ ಲಕ್ಬೀರ್ ಸಿಂಗ್ ಕುಟುಂಬ!

Rahul Dravid team India coach to Karnataka By election top 10 News of october 16 ckm

ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಸ್ಥಳದ ಪಕ್ಕದಲ್ಲೇ ದಲಿತ ಕಾರ್ಮಿಕ ಲಕ್ಬೀರ್ ಸಿಂಗ್(Lakhbir Singh) ಹತ್ಯೆ ಇದೀಗ ಭಾರಿ ಸದ್ದು ಮಾಡತ್ತಿದೆ. ಕೈ ಕಾಲು ಕತ್ತರಿಸು ಬರ್ಬರವಾಗಿ ಲಕ್ಬೀರ್ ಸಿಂಗ್‌ನ್ನು ಹತ್ಯೆ ಮಾಡಲಾಗಿದೆ. ರೈತ ಪ್ರತಿಭಟನಾ ಸ್ಥಳಕ್ಕೆ ಆಮಿಷ ಒಡ್ಡಿ ಲಕ್ಬೀರ್ ಸಿಂಗ್‌ನ್ನು ಕರೆಸಲಾಗಿತ್ತು. ಇದೀಗ ಬರ್ಬರವಾಗಿ ಕೊಲೆ(Singhu Border Murder) ಮಾಡಲಾಗಿದೆ ಎಂದು ಲಕ್ಬೀರ್ ಕುಟುಂಬಸ್ಥರು ಆರೋಪಿಸಿದ್ದಾರೆ.
 
Follow Us:
Download App:
  • android
  • ios