ಕರ್ನಾಟಕದಲ್ಲಿ ಕೊರೋನಾ ಸೋಕಿತರ ಸಂಖ್ಯೆ 14ಕ್ಕೆ ಏರಿದೆ. ಇದು ಬುಧವಾರ ಮಧ್ಯಾಹ್ನದ ಲೆಕ್ಕ. ಕೊರೋನಾ ಭಯಕ್ಕೆ ಷೇರು ಮಾರುಕಟ್ಟೆ ಕುಸಿತ ಮುಂದುವರಿದೇ ಇದೆ. ಚಿನ್ನ-ಬೆಳ್ಳಿ ದರಗಳಲ್ಲಿಯೂ ಇಳಿಕೆ ಕಂಡು ಬಂದಿದೆ. ಹಾಟ್ ಪೋಟೋ ಶೇರ್ ಮಾಡಿಕೊಂಡ ರಾಕುಲ್ ಪ್ರೀತ್ ನೆಟ್ಟಿಗರ ಕಮೆಂಟ್ ಗೆ ಗುರಿಯಾಗಿದ್ದಾರೆ. ಮಾರ್ಚ್ 18 ರ ಟಾಪ್  10 ಸುದ್ದಿಗಳು 


ಸೆಕ್ಸ್ ಬೇಡ, ನಿಂಬೆ ಚುಚ್ಕೊಳ್ಳಿ: ಕೊರೋನಾ ದೂರವಿಡಲು 'ಕೈಲಾಸ'ದೊಡೆಯನ ಟಿಪ್ಸ್!

ಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ , ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡೋಡಲು ಕಾಣಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ

ಆಧಾರ್ ಕಾರ್ಡ್ ಮೂಲಕ ಮಾಸ್ಕ್ ವಿತರಣೆ..?

ಕೋಲಾರ(ಮಾ.18): ವಿಶ್ವ ವ್ಯಾಪಿ ಹರಡಿರುವ ಕರೋನಾ ವೈರಸ್‌ನ್ನು ತಡೆಗಟ್ಟುವ ಸಲುವಾಗಿ ಮಾಸ್ಕ್‌ನ್ನು ಉಪಯೋಗಿಸಿದರೆ ರೋಗವನ್ನು ತಡೆಗಟ್ಟಬಹುದು. ಆದರೆ ದೇಶಾದ್ಯಂತ ಪ್ರತಿಯೊಬ್ಬರಿಗೂ ಮೌತ್‌ಮಾಸ್ಕ್‌ ಅವಶ್ಯಕತೆ ಇರುವುದರಿಂದ ಕೆಲವು ಕಡೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.

ಸಿದ್ದರಾಮಯ್ಯಗೂ ಭಯ ಹುಟ್ಟಿಸಿದ ಕೊರೋನಾ ವೈರಸ್!

ಬೆಂಗಳೂರು, (ಮಾ.18): ಕೊರೋನಾ ಭೀತಿ ಹಿನ್ನೆಲೆ ರಾಜ್ಯಾದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಇಂದು (ಬುಧವಾರ)  ವಿಧಾನ ಸೌಧದಲ್ಲಿ ಎಲ್ಲಾ ಜನಪ್ರತಿನಿಧಿಗಳಿಗೂ ತಪಾಸಣೆ ಮಾಡಲಾಯಿತು. 

ಏಪ್ರಿಲ್‌ 9ರಂದು 'ರಾಬರ್ಟ್‌' ರಿಲೀಸ್‌ ಇಲ್ಲ; ಡಿ-ಬಾಸ್‌ ಫ್ಯಾನ್ಸ್‌ಗೆ ಸ್ಯಾಡ್‌ ನ್ಯೂಸ್!

ದುನಿಯಾ ವಿಜಯ್‌ ನಿರ್ದೇಶಿಸಿ, ಅಭಿನಯಸಿರುವ ‘ಸಲಗ’ ಹಾಗೂ ರವಿಚಂದ್ರನ್‌ ಪುತ್ರ ಮನುರಂಜನ್‌ ಅಭಿನಯದ ‘ಪ್ರಾರಂಭ’ ಚಿತ್ರಗಳ ರಿಲೀಸ್‌ ಕೂಡ ಮುಂದಕ್ಕೆ ಹೋಗಲಿದೆ. ಸದ್ಯಕ್ಕೆ ಯಾವುದೇ ಚಿತ್ರತಂಡಗಳು ಆ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ ಕೊರೋನಾ ಭೀತಿಯ ಪರಿಣಾಮ ಚಿತ್ರತಂಡಗಳು ಕಂಗಾಲಾಗಿರುವುದು ನಿಜ.

ಎದೆ ತೋರಿಸೋ ಫೋಟೋ ಬೇಕಾ? ಕನ್ನಡದ ನಟಿಗೆ ನೆಟ್ಟಿಗರು ಕ್ಲಾಸ್!

ಪಕ್ಕಾ ಪಂಜಾಬಿ ಹುಡ್ಗಿ. ಜೀವನದಲ್ಲಿ ಸಾಧನೆ ಮಾಡಬೇಕೆಂದು ಮಾಡಲಿಂಗ್‌ ಲೋಕಕ್ಕೆ ಕಾಲಿಟ್ಟ ಬೆಡಗಿ ಜೀವನ ಕಟ್ಟಿ ಕೊಂಡಿದ್ದು ಚಿತ್ರರಂಗದಲ್ಲಿ. ಸ್ಟ್ರಿಕ್ಟ್ ಆರ್ಮಿ ಫ್ಯಾಮಿಲಿಗೆ ಸೇರುವ ರಕುಲ್‌ ಪ್ರೀತ್ ಚಿಕ್ಕ ವಯಸ್ಸಿನಲ್ಲಿಯೇ ಆರ್ಥಿಕವಾಗಿ ಸ್ವತಂತ್ರವಾಗಿರಬೇಕೆಂದು ಬಯಸಿದವರು. ಕಾಲೇಜಿನಲ್ಲಿದಾಗಲೇ 'ಗಲ್ಲಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. 

ಮಂತ್ರಾಲಯದಲ್ಲಿ ಸರಳವಾಗಿ 57ನೇ ಹುಟ್ಟು ಹಬ್ಬ ಆಚರಿಸಿದ ಜಗ್ಗೇಶ್!

ಹೀಗಾಗಿ ಪ್ರತಿ ವರ್ಷ​ದಂತೆ ಈ ವರ್ಷವೂ ಮಂತ್ರಾ​ಲ​ಯಕ್ಕೆ ತೆರಳಿ ರಾಯ​ರಿಗೆ ವಿಶೇಷ ಪೂಜೆ ಮಾಡಿ​ಸುವ ಮೂಲಕ ತಮ್ಮ ಹುಟ್ಟುಹಬ್ಬ​ವನ್ನು ಆಚ​ರಿ​ಸಿ​ಕೊಂಡರು.

ಸಂಬಂಧ ಗಟ್ಟಿಯಾಗಲು ಪಾಲಿಸಬೇಕಾದ 7 ಮಾರ್ಗಗಳು; ರೊಮ್ಯಾನ್ಸ್‌ ಉಳಿಸುವುದಿಲ್ಲ..

ನಿಮ್ಮ ಸಂಬಂಧಕ್ಕೆ ನೀವೇ ಹುಳಿ ಹಿಂಡಿಕೊಳ್ಳುವ ಘಟನೆಗಳು ಆಗಾಗ ಎದುರಾಗುತ್ತಲೇ ಇರುತ್ತವೆ. ಹೀಗಾಗಿ ಇಂತಹ ದುರಂತಗಳನ್ನೇಲ್ಲ ಮೀರಿ ಪರಸ್ಪರ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಅಂದರೆ ಕೆಲವು ನಿಯಮಗಳನ್ನು ಪಾಲಿಸಲೇಬೇಕು.

ಬೆಂಗಳೂರು: ಮದ್ವೆಯಾಗು ಮಾರಾಯ ಅಂದ್ರೆ ಖಾಸಗಿ ಪೋಟೋ ವೈರಲ್ ಮಾಡ್ತೆನೆ ಅಂದ

 

ಬೆಂಗಳೂರು(ಮಾ. 18)   ಬೆಂಗಳೂರಿನಲ್ಲಿ ಲವ್, ಸೆಕ್ಸ್, ದೋಖಾ ಪ್ರಕರಣವೊಂದು ಕೊರೋನಾ ಬಿಸಿಯ ನಡುವೆ ಬೆಳಕಿಗೆ ಬಂದಿದೆ. ಮದುವೆಯಾಗು ಎಂದು ಒತ್ತಡ ಹೇರಿದ್ರೆ ಖಾಸಗಿ ಪೋಟೋಗಳನ್ನು ವೈರಲ್ ಮಾಡೋದಾಗಿ ಪ್ರೇಯಸಿಗೆ ಬ್ಲಾಕ್ ಮೇಲ್ ಮಾಡಿದ ಕುತಂತ್ರಿಯೊಬ್ಬನ ಕತೆ ಇದು.

ಪತಿ ಬಂಧಿಸಲು ಹೋದಾಗ ಪೊಲೀಸರ ಎದುರೇ ಅರೆ ನಗ್ನಳಾಗಿ ರಾದ್ಧಾಂತ

 ನೈಜೀರಿಯಾ ಮೂಲದ ಹೆನ್ರಿ ದಂಪತಿ, 2016ರಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದರು. ಬಳಿಕ ನಗರಕ್ಕೆ ಆಗಮಿಸಿದ ಅವರು ಮೊದಲು ಕೋಗಿಲು ಅಗ್ರಹಾರದಲ್ಲಿ ನೆಲೆಸಿದ್ದರು. ಇಲ್ಲಿ ವಿಗ್‌ ಬಿಜಿನೆಸ್‌ ಮಾಡುತ್ತಿದ್ದರು. ಇತ್ತೀಚೆಗೆ ಹೆನ್ರಿ ಕುಟುಂಬ, ವಿದ್ಯಾರಣ್ಯಪುರ ಹತ್ತಿರದ ವಡೇರಹಳ್ಳಿಗೆ ವಾಸ್ತವ್ಯ ಬದಲಾಯಿಸಿತ್ತು. ನಗರದ ಹೊರವಲಯಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ದಂಧೆ ಮಾಡುತ್ತಿದ್ದ ಹೆನ್ರಿ, ಕೊಕೇನ್‌, ಗಾಂಜಾ ಹಾಗೂ ಎಂಡಿಎಂಎ ಸೇರಿದಂತೆ ಮುಂತಾದ ಡ್ರಗ್‌ ಅನ್ನು ಬಿಕರಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.