ಸೆಕ್ಸ್‌ಟಾಯ್ಸ್ ನಿಷೇಧಿಸಿದ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿಚ್ಛೇದಿತ ಮಹಿಳೆ

By Suvarna NewsFirst Published Jun 26, 2023, 12:50 PM IST
Highlights

ಸೆಕ್ಸ್ ಆಟಿಕೆ ಅಥವಾ ಸೆಕ್ಸ್‌ ಟಾಯ್ಸ್ ನಿಷೇಧಿಸಿದ ಜಿಂಬಾಬ್ವೆ ಸರ್ಕಾರದ ವಿರುದ್ಧ ವಿಚ್ಛೇದಿತ ಮಹಿಳೆಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದು ಅಲ್ಲಿನ ಸಂಪ್ರದಾಯಿಕ ಕಟ್ಟುಪಾಡುಗಳನ್ನು ಹೊಂದಿರುವ ಇತರರಿಗೆ ಮುಜುಗರ ಉಂಟು ಮಾಡಿದೆ.

ಜಿಂಬಾಬ್ವೆ: ಸೆಕ್ಸ್ ಆಟಿಕೆ ಅಥವಾ ಸೆಕ್ಸ್‌ ಟಾಯ್ಸ್ ನಿಷೇಧಿಸಿದ ಜಿಂಬಾಬ್ವೆ ಸರ್ಕಾರದ ವಿರುದ್ಧ ವಿಚ್ಛೇದಿತ ಮಹಿಳೆಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದು ಅಲ್ಲಿನ ಸಂಪ್ರದಾಯಿಕ ಕಟ್ಟುಪಾಡುಗಳನ್ನು ಹೊಂದಿರುವ ಇತರರಿಗೆ ಮುಜುಗರ ಉಂಟು ಮಾಡಿದೆ. ಜಿಂಬಾಬ್ವೆ ಸರ್ಕಾರ ಈ ಹಿಂದೆಯೇ ಸೆಕ್ಸ್ ಟಾಯ್ಸ್‌ಗೆ ನಿಷೇಧ ಹೇರಿತ್ತು. ಆದರೆ ಕಳೆದೊಂದು ವರ್ಷದಿಂದ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಲ್ಲದೇ ಸೆಕ್ಸ್ ಟಾಯ್ಸ್ ಮಾರಾಟ ಮಾಡುತ್ತಿದ್ದ ಮಹಿಳೆಯರಿಗೂ ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಸೆಕ್ಸ್ ಟಾಯ್ಸ್ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಜಿಂಬಾಬ್ವೆ ಸರ್ಕಾರದ ವಿರುದ್ಧದ ಆಕೆಯ ಮನವಿಯನ್ನು ವಿಚಾರಣೆ ನಡೆಸಲು ಅಲ್ಲಿನ ಕೋರ್ಟ್ ಸಮ್ಮತಿಸಿದೆ.

35 ವರ್ಷದ ಸಿಟಾಬೈಲ್ ದೇವ ಎಂಬಾಕೆಯ ಹೀಗೆ ಸೆಕ್ಸ್‌ಟಾಯ್ಸ್‌ಗೆ (sextoys)ನಿಷೇಧ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಮಹಿಳೆ. ತನಗೆ ವಿವಾಹದಲ್ಲಿದ್ದಾಗ ಲೈಂಗಿಕತೆಯ (Sexuality) ಸಮಸ್ಯೆ ಇರಲಿಲ್ಲ. ಆದರೆ ವಿಚ್ಛೇದನ ಪಡೆದ ನಂತರ ಇದರ ಅಗತ್ಯ ಬಂತು. ಲೈಂಗಿಕ ತೃಪ್ತಿಗಾಗಿ ನಾನು ಸೆಕ್ಸ್‌ಟಾಯ್ಸ್‌ ಮೊರೆ ಹೋಗಿದ್ದೆ. ಆದರೆ ಸರ್ಕಾರ ಈ ಸೆಕ್ಸ್ ಟಾಯ್ಸ್‌ಗಳನ್ನು ನಿಷೇಧಿಸುವ ಮೂಲಕ ದಮನಕಾರಿ ನೀತಿಗೆ ಮುಂದಾಗುತ್ತಿದೆ ಎಂದು ಸಿಟಾಬೈಲ್ ಆರೋಪಿಸಿದ್ದಾರೆ.  ಅಲ್ಲದೇ ಹಳೆಯ ವಸಾಹತುಶಾಹಿ ಕಾಲದ ಸೆನ್ಸಾರ್‌ಶಿಪ್ (Censorship) ಮತ್ತು ಮನೋರಂಜನೆ ನಿಯಂತ್ರಣ ಕಾಯ್ದೆ ಮತ್ತು ಕಸ್ಟಮ್ಸ್ ಮತ್ತು ಅಬಕಾರಿ ಕಾಯ್ದೆಯ ಸೆಕ್ಷನ್‌ಗಳನ್ನು ರದ್ದುಪಡಿಸಲು ಜೂನ್ 21 ರಂದು ಹೈಕೋರ್ಟ್ ಮೊರೆ ಹೋಗಿದ್ದರು.

ಮಾಡೆಲ್‌ ಲೈಂಗಿಕ ಆಟಿಕೆಗಳು ಮ್ಯೂಸಿಯಂನಲ್ಲಿ ಪ್ರದರ್ಶನ!

ಸಂಪ್ರದಾಯಸ್ಥ ಸಮಾಜವನ್ನು ಹೊಂದಿರುವ ಜಿಂಬಾಬ್ವೆಯಲ್ಲಿ ಲೈಂಗಿಕತೆ ಅಥವಾ ಲೈಂಗಿಕ ಸ್ವಾತಂತ್ರ್ಯದ (sexual Freedom)ಬಗ್ಗೆ ಮುಕ್ತ ಮಾತನಾಡಲು ಜನ ಮುಜುಗರ ಪಡುತ್ತಾರೆ.  ವಿಚ್ಛೇದಿತರು ಅಥವಾ ಒಂಟಿ ಮಹಿಳೆಯರು ಇಲ್ಲಿ ಲೈಂಗಿಕ ಬಯಕೆ ತೀರಿಸಿಕೊಳ್ಳುವ ಅವಕಾಶವಿಲ್ಲ, ಇದರ ಜೊತೆಗೆ ಇಲ್ಲಿನ ಕಾನೂನು ಸೆಕ್ಸ್ ಆಟಿಕೆಗಳಿಗೂ ನಿಷೇಧ (Ban) ಹೇರಿದೆ. ಹೀಗಾಗಿ ಈ ಕಾನೂನನ್ನು ರದ್ದುಪಡಿಸಬೇಕು ಎಂದು ಸಿಟಾಬೈಲ್ ಆಗ್ರಹಿಸಿದ್ದಾರೆ.  ಈ ಕಾನೂನು ದಮನಕಾರಿಯಾಗಿದ್ದು, ಮಹಿಳೆಯರ ಹಕ್ಕನ್ನು ಕಸಿಯುತ್ತಿದೆ. ಹೀಗಾಗಿ ಈ ಕಾನೂನಿನ ಕೆಲ ಭಾಗಗಳನ್ನು ರದ್ದುಪಡಿಸಬೇಕು ಎಂದು ನ್ಯಾಯಾಲಯದಲ್ಲಿ ಆಗ್ರಹಿಸಿದ್ದಾಗಿ ಸಿಟಾಬೈಲ್ ಹೇಳಿದ್ದಾರೆ. 

ಭಾರತ ಸೇರಿ ಕೆಲ ದೇಶದಲ್ಲಿ ಲೈಂಗಿಕ ಆಟಿಕೆಗಳ ನಿಷೇಧ!

ಆದರೆ ಹಸ್ತಮೈಥುನ ಹಾಗೂ ಮಹಿಳಾ ಲೈಂಗಿಕತೆಯ ಬಗ್ಗೆ ಆಕೆಯ ಬಹಿರಂಗ ಹೋರಾಟ ಅಲ್ಲಿನ ಕೆಲ ಜನರಿಗೆ ಇರಿಸು ಮುರಿಸು ತಂದಿದೆಯಂತೆ.  ಆದರೂ ಕೆಲವು ಮಹಿಳಾ ಕಾರ್ಯಕರ್ತರು ಆಕೆಯ ಹೋರಾಟವನ್ನು ಬೆಂಬಲಿಸಿದ್ದಾರೆ. ಈ ಸೆಕ್ಸ್‌ ಟಾಯ್ಸ್ ನಿಷೇಧ ಕಾನೂನು ಜಾರಿಗೆ ಬಂದ ಬಳಿಕ ಇಬ್ಬರೂ ಮಹಿಳೆಯರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಇಬ್ಬರಲ್ಲಿ ಒಬ್ಬಾಕೆ ಸೆಕ್ಸ್‌ ಟಾಯ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದಾಳೆ. ಆಕೆಗೆ ಅಲ್ಲಿ ಕೋರ್ಟ್ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

click me!