ಉಕ್ರೇನ್‌ ಪಡೆ ಸೇರಿದ ವಿಶ್ವದ ಅತ್ಯುತ್ತಮ ಸ್ನಿಪರ್ 'ವಾಲಿ' ಇವನ್ಯಾರು ಗೊತ್ತಾ

Suvarna News   | Asianet News
Published : Mar 12, 2022, 11:51 AM IST
ಉಕ್ರೇನ್‌ ಪಡೆ ಸೇರಿದ ವಿಶ್ವದ ಅತ್ಯುತ್ತಮ ಸ್ನಿಪರ್ 'ವಾಲಿ' ಇವನ್ಯಾರು ಗೊತ್ತಾ

ಸಾರಾಂಶ

ಉಕ್ರೇನ್‌ ಪಡೆ ಸೇರಿದ ಸ್ನಿಪರ್ 'ವಾಲಿ' ದಿನಕ್ಕೆ 40 ಕೊಲೆಗಳನ್ನು ಮಾಡುವ ಸ್ನಿಪರ್ ಈತ ಕೆನಡಾ ಮೂಲದ 40 ವರ್ಷದ ಸ್ನಿಪರ್ 

ರಷ್ಯಾ ಉಕ್ರೇನ್‌ ನಡುವಿನ ಯುದ್ಧ ಈಗಾಗಲೇ ವಿಕೋಪಕ್ಕೆ ತಿರುಗಿ ಭೀಕರ ಸ್ವರೂಪಕ್ಕೆ ತೊಡಗಿದೆ. ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ವಿಶ್ವದ ಅತ್ಯುತ್ತಮ ಸ್ನಿಪರ್ ಒಬ್ಬರು ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ ಸೇನೆ ಸೇರಿದ್ದು, ಉಕ್ರೇನ್‌ ಬಲ ಹೆಚ್ಚಿಸಿದೆ. ಉಕ್ರೇನಿಯನ್ ಪಡೆಗಳನ್ನು ಸೇರಲು ಈ ವಾರದ ಆರಂಭದಲ್ಲಿಯೇ ಈ ಸ್ನೀಪರ್‌ ವಾಲಿ ಕೆನಡಾವನ್ನು ತೊರೆದಿದ್ದಾರೆ. ಒಬ್ಬ ಉತ್ತಮ ಸ್ನೈಪರ್ ದಿನಕ್ಕೆ ಸರಾಸರಿ 5-6 ಕೊಲೆ ಮಾಡಿದರೆ ವಾಲಿ ಒಂದು ದಿನದಲ್ಲಿ ಶತ್ರುಪಡೆಯ 40 ಜನರನ್ನು ಕೊಲ್ಲಬಹುದು ಎಂದು ವರದಿಯಾಗಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಹೋರಾಟವು ಕಡಿಮೆಯಾಗುವ ಯಾವುದೇ ಲಕ್ಷಣಗಳು ಗೋಚರಿಸದ ಕಾರಣ, ವಿಶ್ವದ ಅತ್ಯುತ್ತಮ ಸ್ನೈಪರ್‌ಗಳಲ್ಲಿ ಒಬ್ಬರಾದ 'ವಾಲಿ' ಈ ವಾರದ ಆರಂಭದಲ್ಲಿ ರಷ್ಯಾದ ಪಡೆಗಳ ವಿರುದ್ಧ ಹೋರಾಡಲು ಯುದ್ಧಪೀಡಿತ ಉಕ್ರೇನ್‌ಗೆ ಆಗಮಿಸಿದ್ದಾರೆ. ರಾಯಲ್ ಕೆನಡಿಯನ್ 22ನೇ ರೆಜಿಮೆಂಟ್‌ನ ಅನುಭವಿ ಸ್ನೀಪರ್‌ ಆಗಿರುವ ವಾಲಿ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ವಿದೇಶಿಯರು ತಮ್ಮ ಪರ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡಿದಾಗ  ಎಚ್ಚರಿಕೆಯ ಕರೆಗಂಟೆಯನ್ನು ಕೇಳಿ ಧಾವಿಸಿ ಬರುವ ಅಗ್ನಿಶಾಮಕ ದಳದವರಂತೆ ಧಾವಿಸಿ ಬಂದಿದ್ದಾರೆ ಎಂದು ತಿಳಿದು  ಬಂದಿದೆ. 

Russia Ukraine Chemical War: ಉಕ್ರೇನ್‌ ಮೇಲೆ ವಿಷಾನಿಲ ದಾಳಿಗೆ ರಷ್ಯಾ ರಹಸ್ಯ ಯೋಜನೆ?
ವರದಿಗಳ ಪ್ರಕಾರ, ವಾಲಿ ಬುಧವಾರ ಉಕ್ರೇನ್‌ಗೆ ಆಗಮಿಸಿದ ನಂತರ ಎರಡು ದಿನಗಳಲ್ಲಿ ಆರು ರಷ್ಯಾದ ಸೈನಿಕರನ್ನು ಕೊಂದಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಈ ಪ್ರಸಿದ್ಧ ಸ್ನೀಪರ್, 'ನಾನು ಅವರಿಗೆ ಸಹಾಯ ಮಾಡಲು ಬಯಸುತ್ತೇನೆ. ಇದು ಸರಳವಾಗಿದೆ. ನಾನು ಸಹಾಯ ಮಾಡಬೇಕಾಗಿದೆ ಏಕೆಂದರೆ ಇಲ್ಲಿ ಜನರು ಯೂರೋಪಿಯನ್ ಆಗಲು ಬಯಸುತ್ತಾರೆ ಮತ್ತು ರಷ್ಯನ್ ಅಲ್ಲ ಎಂದು ಅವರು ಹೇಳಿದರು. 

ವಾಲಿಯನ್ನು ವಿಶ್ವದ ಅತ್ಯುತ್ತಮ ಸ್ನೀಪರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಏಕೆಂದರೆ ಅವರು ದಿನದಲ್ಲಿ 40 ಕೊಲೆಗಳನ್ನು ಮಾಡಬಲ್ಲರು. 40 ವರ್ಷ ವಯಸ್ಸಿನ ಫ್ರೆಂಚ್-ಕೆನಡಾದ ಕಂಪ್ಯೂಟರ್ ವಿಜ್ಞಾನಿಯಾಗಿರುವ ವಾಲಿ, 2009 ಮತ್ತು 2011 ರ ನಡುವೆ ಅಫ್ಘಾನಿಸ್ತಾನ ಯುದ್ಧದಲ್ಲಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ವಾಲಿ ಅವರು ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಅರೇಬಿಕ್ ಭಾಷೆಯಲ್ಲಿ ರಕ್ಷಕ ಎಂಬ ಅರ್ಥ ಬರುವ ವಾಲಿ ಎಂಬ ಹೆಸರನ್ನು ಪಡೆದರು. 

ಯಾರ ಕೈಗೂ ಸಿಗದ ಪುಟಿನ್‌ ಕಂಟ್ರೋಲ್ ಮಾಡೋದು ಹೇಗೆ.. ಚೆಸ್‌ ಮಾಸ್ಟರ್‌ ಟ್ವಿಟ್ ವೈರಲ್‌
ಅಫ್ಘಾನಿಸ್ತಾನದಿಂದ ಮನೆಗೆ ಹಿಂತಿರುಗಿದ ನಂತರ ವಾಲಿ ಒಂದು ಮಗನನ್ನು ಹೊಂದಿದ್ದು ತನ್ನ ತಂದೆ ಉಕ್ರೇನ್‌ನಲ್ಲಿ ಯುದ್ಧದಲ್ಲಿ ಹೋರಾಡುತ್ತಿರುವಾಗ ಮುಂದಿನ ವಾರ ಈ ಮಗುವಿಗೆ ಒಂದು ವರ್ಷ ತುಂಬುತ್ತದೆ. ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರ ದೇಶಾದ್ಯಂತ ಭೀಕರ ದಾಳಿಗಳನ್ನು ಮಾಡಿದೆ. ಯುದ್ಧವು ಬೃಹತ್ ನಿರಾಶ್ರಿತರ ಬಿಕ್ಕಟ್ಟನ್ನು ಉಂಟುಮಾಡಿದೆ ಮತ್ತು ಉಕ್ರೇನ್‌ನಲ್ಲಿ ನೂರಾರು ನಾಗರಿಕರ ಸಾವಿಗೆ ಕಾರಣವಾಗಿದೆ. ಏತನ್ಮಧ್ಯೆ, ಇದುವರೆಗೆ 12,000 ಕ್ಕೂ ಹೆಚ್ಚು ರಷ್ಯಾದ ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!