ಯಾರ ಕೈಗೂ ಸಿಗದ ಪುಟಿನ್‌ ಕಂಟ್ರೋಲ್ ಮಾಡೋದು ಹೇಗೆ.. ಚೆಸ್‌ ಮಾಸ್ಟರ್‌ ಟ್ವಿಟ್ ವೈರಲ್‌

Suvarna News   | Asianet News
Published : Mar 12, 2022, 09:50 AM ISTUpdated : Mar 12, 2022, 10:07 AM IST
ಯಾರ ಕೈಗೂ ಸಿಗದ ಪುಟಿನ್‌ ಕಂಟ್ರೋಲ್ ಮಾಡೋದು ಹೇಗೆ.. ಚೆಸ್‌ ಮಾಸ್ಟರ್‌ ಟ್ವಿಟ್ ವೈರಲ್‌

ಸಾರಾಂಶ

ಯುದ್ಧದಾಹಿ ರಷ್ಯಾ ಅಧ್ಯಕ್ಷರ ನಿಯಂತ್ರಣ ಹೇಗೆ? ಚೆಸ್‌ ಮಾಸ್ಟರ್ ಗ್ಯಾರಿ ಕಾಸ್ಪರೋವ್ ಟ್ವಿಟ್ ಪುಟಿನ್‌ ನಿಯಂತ್ರಿಸುವುದು ಹೇಗೆ ಎಂದ ಗ್ಯಾರಿ  

ಯಾರು ಎಷ್ಟೇ ಹೇಳಿದರು, ಯಾವ ದೇಶಗಳು ಏನೇ ಬಹಿಷ್ಕಾರ ಹಾಕಿದರು ತಲೆಕೆಡಿಸಿಕೊಳ್ಳದೇ ಉಕ್ರೇನ್‌ ಮೇಲೆ ಯುದ್ಧ ಮುಂದುವರೆಸಿರುವ  ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ (Vladimir Putin) ಅವರನ್ನು ಹಿಮ್ಮೆಟ್ಟಿಸುವುದು ಹೇಗೆ ಎಂದು ಪುಟಿನ್‌ ಅವರ ಮನಸ್ಸನ್ನು ತಿಳಿದಿರುವ ಚೆಸ್ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ (Garry Kasparov) ಅವರು ವಿವರಿಸಿದ್ದಾರೆ. 

"ಪುಟಿನ್ ಮತ್ತು ಉಕ್ರೇನ್‌ ನಡುವಿನ ಸಮರದ ವಿಚಾರವಾಗಿ  ನಾನು ಈಗಾಗಲೇ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಮತ್ತು ಹೆಚ್ಚೆಂದರೆ ನಾನು ನನ್ನ ಪುಸ್ತಕ ವಿಂಟರ್ ಈಸ್ ಕಮಿಂಗ್‌ನಲ್ಲಿ ನಾನು ಅದನ್ನು ಸೇರಿಸಿದ್ದೇನೆ ಎಂದು ಕಾಸ್ಪರೋವ್ ಟ್ವೀಟ್ ಮಾಡಿದ್ದಾರೆ. ಈ ಪುಸ್ತಕ ಇತಿಹಾಸವಾಗಲಿದೆ ಎಂದು ನಾನು ಭಾವಿಸಿದ್ದೆ. ಆದರೆ ಪುಟಿನ್ ಮತ್ತು ಮುಕ್ತ ಪ್ರಪಂಚದ ನಿರಾಸಕ್ತಿಯಿಂದಾಗಿ, ಇದು ಇನ್ನೂ ಪ್ರಸ್ತುತವಾಗಿದೆ. ಇದಕ್ಕೆ ನಾನು ಪುಟಿನ್‌ಗೆ ಥ್ಯಾಂಕ್ಸ್‌ ಹೇಳುವೆ ಎಂದಿದ್ದಾರೆ. 

ಉಕ್ರೇನ್ ಮಿಲಿಟರಿಯನ್ನು ಬೆಂಬಲಿಸಿ, ಎಲ್ಲಾ ಶಸ್ತ್ರಾಸ್ತ್ರಗಳು, ಇಂಟೆಲ್, ಸೈಬರ್ ಸೇರಿದಂತೆ ತಕ್ಷಣವೇ, ಅದಕ್ಕೆ ತಳ್ಳಮಟ್ಟದಿಂದ ಸಹಾಯ ಮಾಡಿ. ಪುಟಿನ್ ಯುದ್ಧ ಯಂತ್ರವನ್ನು ದಿವಾಳಿಯಾಗಿಸಿ, ರಷ್ಯಾದ ಹಣಕಾಸು ಮತ್ತು ಪುಟಿನ್‌ ಮತ್ತು ಅವರ ಗ್ಯಾಂಗ್‌ ಅನ್ನು ಸೀಜ್‌ ಮಾಡಿ. ಇಂಟರ್‌ಪೋಲ್‌, PACE ಸೇರಿದಂತೆ ರಷ್ಯಾವನ್ನು ಎಲ್ಲಾ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಹೊರಗೆ ಹಾಕಿ ಎಂದು ಅವರು ಬರೆದಿದ್ದಾರೆ. 

Russia Ukraine War: ರಷ್ಯಾ ದಾಳಿಗೆ ಖಾರ್ಕೀವ್‌ ನಗರವೇ ಧ್ವಂಸ: ಉಕ್ರೇನ್‌ ಮಕ್ಕಳು ಮಾನವ ತಡೆಗೋಡೆಯಾಗಿ ಬಳಕೆ?

ಅಂತಾರಾಷ್ಟ್ರೀಯ ಸಮುದಾಯವು ರಷ್ಯಾದಲ್ಲಿರುವ ತನ್ನ ಎಲ್ಲಾ ರಾಯಭಾರಿಗಳನ್ನು ಹಿಂಪಡೆಯಬೇಕು. ಮಾತನಾಡುವುದರಲ್ಲಿ ಅರ್ಥವಿಲ್ಲ. ರಷ್ಯಾವನ್ನು ನಿಲ್ಲಿಸಿ ಅಥವಾ ಸಂಪೂರ್ಣವಾಗಿ ಪ್ರತ್ಯೇಕಿಸಿ ಎಂಬುದು ಹೊಸ ಸಂಘಟಿತ ಸಂದೇಶವಾಗಿದೆ. ಹಾಗೆಯೇ ಪುಟಿನ್ ಅವರ ಜಾಗತಿಕ ಪ್ರಚಾರ ಯಂತ್ರದ ಎಲ್ಲಾ ಅಂಶಗಳನ್ನು ನಿಷೇಧಿಸಿ. ಅವುಗಳನ್ನು ಬಂದ್‌ ಮಾಡಿ, ಮುಚ್ಚಿ, ಮನೆಗೆ ಕಳುಹಿಸಿ. ಸರ್ವಾಧಿಕಾರಿ ಸುಳ್ಳು ಮತ್ತು ದ್ವೇಷವನ್ನು ಹರಡಲು ಸಹಾಯ ಮಾಡುವುದನ್ನು ನಿಲ್ಲಿಸಿ. ಎಂದು ಅವರು ಬರೆದಿದ್ದಾರೆ. 

ಕಾಸ್ಪರೋವ್ ಅವರು  ಸ್ವತಂತ್ರ ಜಗತ್ತಿನಲ್ಲಿ ಪುಟಿನ್ ಅವರ ಬಣ್ಣ ಬಯಲು ಮಾಡುವ ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ. (ಗೆರ್ಹಾರ್ಡ್) ಶ್ರೋಡರ್ ಮತ್ತು  ಇತರರು ಪುಟಿನ್‌ಗಾಗಿ ಕೆಲಸ ಮಾಡುವುದನ್ನು ಮುಂದುವರೆಸಿದರೆ ಅವರ ಮೇಲೆ ಆರೋಪ ಹೊರಿಸಿ.. ಪುಟಿನ್‌ ಬಗ್ಗೆ ಪ್ರಚಾರ ಮಾಡುವ ಕಾರ್ಲ್‌ಸನ್‌ ಮುಂತಾದ ನೆಟ್‌ವರ್ಕ್‌ಗಳ ಮಾಲೀಕರು ಮತ್ತು ಜಾಹೀರಾತುದಾರರನ್ನು ಯಾಕೆ ಇವುಗಳಿಗೆ ಅನುಮತಿನೀಡುತ್ತಿದ್ದೀರಿ ಎಂದು ಕೇಳಿ ಕೊನೆಯದಾಗಿ, ಜಾಗತಿಕ ಸಮುದಾಯವು ರಷ್ಯಾದ ತೈಲ ಮತ್ತು ಅನಿಲವನ್ನು ಬಹಿಷ್ಕರಿಸಬೇಕು ಒಪೆಕ್ ಮೇಲೆ ಒತ್ತಡ ಹೇರಿ, ಉತ್ಪಾದನೆಯನ್ನು ಹೆಚ್ಚಿಸಿ, ಕೀಸ್ಟೋನ್ ಅನ್ನು ಪುನಃ ತೆರೆಯಿರಿ. ನೀವು ಅದರಲ್ಲಿರುವ ಜನರನ್ನು ಉಳಿಸದಿದ್ದರೆ ನೀವು ಗ್ರಹವನ್ನು ಉಳಿಸಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದಾರೆ.

Russia Ukraine War: ಉಕ್ರೇನ್‌ ರಾಜಧಾನಿ ವಶಕ್ಕೆ ರಷ್ಯಾ ಸಜ್ಜು; ಕೀವ್‌ ನಗರದ ಸುತ್ತ ಭಾರಿ ಸೇನೆ ಜಮಾವಣೆ!
 

ಈ ಕಾರ್ಯಕ್ಕೆ ವೆಚ್ಚದ ಜೊತೆ ತ್ಯಾಗವೂ ಇರುವುದನ್ನು ಒಪ್ಪಿಕೊಳ್ಳಿ ಎಂದು ಎಚ್ಚರಿಸಿದರು. ನಾವು  ಕಾದಿದ್ದು ಹೆಚ್ಚಾಯಿತು. ಈಗಾಗಲೇ ಅದಕ್ಕೆ ತೇರಿದ ಬೆಲೆ ಹೆಚ್ಚಾಗಿದೆ. ಅದು ಇನ್ನು ಹೆಚ್ಚಾಗುವುದು ಇದು ಹೋರಾಡುವ ಸಮಯ ಎಂದು ಗ್ಯಾರಿ ಕಾಸ್ಪರೋವ್ ಬರೆದುಕೊಂಡಿದ್ದಾರೆ. ಗ್ಯಾರಿ ಕಾಸ್ಪರೋವ್ ಟ್ವಿಟರ್‌ನಲ್ಲಿ ಸುಮಾರು 700,000 ಅನುಯಾಯಿಗಳಿದ್ದಾರೆ. ಇಲ್ಲಿ ಅವರು ಐದು ಸಂದೇಶಗಳನ್ನು ಟ್ವೀಟ್ ಮಾಡಿದ್ದು, ಅವೆಲ್ಲವೂ ಟ್ವೀಟ್‌ಗಳು ತಕ್ಷಣವೇ ವೈರಲ್ ಆಗಿವೆ.  ಪುಟಿನ್ ಉಕ್ರೇನ್‌ನಿಂದ ಕ್ರೈಮಿಯಾವನ್ನು ಅಕ್ರಮವಾಗಿ ವಶಪಡಿಸಿಕೊಂಡ ಒಂದು ವರ್ಷದ ನಂತರ ಚೆಸ್ ಗ್ರ್ಯಾಂಡ್‌ಮಾಸ್ಟರ್ 2015 ರಲ್ಲಿ 'ವಿಂಟರ್ ಈಸ್ ಕಮಿಂಗ್: ವೈ ವ್ಲಾಡಿಮಿರ್ ಪುಟಿನ್ & ಎನಿಮೀಸ್ ಆಫ್ ದಿ ಫ್ರೀ ವರ್ಲ್ಡ್ ಮಸ್ಟ್ ಬಿ ಸ್ಟಾಪ್ ಎಂಬ ಪುಸ್ತಕ ಬರೆದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!