ಜಪಾನ್‌ನ ಅಜ್ಜಿಯೊಬ್ಬರು ಎಲ್ಲರಿಗಿಂತ ಹೆಚ್ಚು ಕಾಲ ಬದುಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಜಪಾನ್‌ನ (Japan) ಫುಕುವೋಕಾದ (Fukuoka) ಕೇನ್ ತನಕಾ (Kane Tanaka) ಅವರು 9 ಮಾರ್ಚ್ 2019ರ ವೇಳೆಗೆ 116 ವರ್ಷ 66 ದಿನ ತುಂಬಿದ್ದು, ಅವರು ಜಗತ್ತಿನ ಅತ್ಯಂತ ಹಳೆಯ ವ್ಯಕ್ತಿ ಎಂದು ಅಧಿಕೃತವಾಗಿ ದೃಢಿಕರಿಸಲ್ಪಟ್ಟಿದೆ.
30 ಜನವರಿ 2019 ರಂದು (ಅವರಿಗೆ 116 ವರ್ಷ 28 ದಿನಗಳಾಗಿದ್ದಾಗ) ಜಪಾನ್‌ನ ಸೂಪರ್ ಸೆಂಟೆನೇರಿಯನ್ ಅವರು ಕೇನ್ ತನಕಾ ಅವರು ಜೀವಂತವಾಗಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ದೃಢೀಕರಿಸಿದ್ದಾರೆ. ಮತ್ತು ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಅತ್ಯಂತ ಹಳೆಯ ಮಹಿಳೆಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗಿದೆ. ಕೇನ್ 2 ಜನವರಿ 1903 ರಂದು ಅವಧಿಪೂರ್ವ ಜನಿಸಿದರು, ಅವರು ಜನಿಸಿದ ವರ್ಷವೇ ರೈಟ್ ಸಹೋದರರು ಮೊದಲ ಬಾರಿ ವಿಮಾನ ಹಾರಾಟ ಮಾಡಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ದಾಖಲಿಸಿದ್ದರು.
Oldest Person in China: ವಿಶ್ವದ ಅತ್ಯಂತ ವಯೋವೃದ್ಧ 135 ವರ್ಷದ ಮಹಿಳೆ ಸಾವು!
ಕುಮಾಕಿಚಿ (Kumakichi) ಮತ್ತು ಕುಮಾ ಓಟಾ (Kuma Ota) ಅವರ ಏಳನೇ ಮಗುವಾಗಿ ಜನಿಸಿದ ಕೇನ್ ತನ್ನ 19ನೇ ಹುಟ್ಟುಹಬ್ಬದ ನಾಲ್ಕು ದಿನಗಳ ನಂತರ 6 ಜನವರಿ 1922 ರಂದು ಹಿಡಿಯೊ ತನಕಾ (Hideo Tanaka) ಅವರ ಕೈ ಹಿಡಿದರು. ಮದುವೆಯಲ್ಲಿ ಮೊದಲ ಬಾರಿ ನೋಡಿದ ಕೇನ್ ಹಾಗೂ ಹಿಡಿಯೋ ತನಕಾ ನಾಲ್ಕು ಮಕ್ಕಳನ್ನು ಹೊಂದಿದ್ದು, ಮತ್ತೊಂದು ಮಗುವನ್ನು ದತ್ತು ಪಡೆದರು.ಹಿಡಿಯೊ ತನಕಾ ತಮ್ಮ ಕುಟುಂಬದವರೇ ನಡೆಸುತ್ತಿದ್ದ ವ್ಯಾಪಾರದಲ್ಲೇ ವೃತ್ತಿ ಮುಂದುವರೆಸಿದ್ದರು. ಇದು ಜಿಗುಟಾದ ಅಕ್ಕಿ, ಝೆಂಜೈ (ಜಪಾನೀಸ್ ಸಿಹಿತಿಂಡಿಗಳ ಒಂದು ವಿಧ) ಮತ್ತು ಉಡಾನ್ ನೂಡಲ್ಸ್ ಅನ್ನು ತಯಾರಿಸಿ ಮಾರಾಟ ಮಾಡುವ ಉದ್ಯಮವಾಗಿತ್ತು.
1937 ರಲ್ಲಿ ಎರಡನೇ ಸಿನೋ-ಜಪಾನೀಸ್ ಯುದ್ಧದ ಸಮಯದಲ್ಲಿ ಹಿಡಿಯೊ ಅವರು ಮಿಲಿಟರಿಗೆ ಸೇರಿದಾಗ, ಕೇನ್ ತನ್ನ ಮಕ್ಕಳು ಮತ್ತು ಅತ್ತೆಯನ್ನು ನೋಡಿಕೊಳ್ಳುತ್ತ ಕುಟುಂಬದ ವ್ಯವಹಾರದಲ್ಲಿ ಹೆಚ್ಚು ತೊಡಗಿಸಿಕೊಂಡರು, ಅಕ್ಕಿ ಪಾಲಿಶ್ ಮತ್ತು ಅಕ್ಕಿ ಕೇಕ್ ತಯಾರಿಸುತ್ತಿದ್ದರು. ಕೇನ್ ಅವರ ಮೊದಲ ಮಗ ನೊಬುವೊ ಕೂಡ 1943ರಲ್ಲಿ ಮಿಲಿಟರಿಗೆ ಸೇರಿದರು ಮತ್ತು ಎರಡನೆಯ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದ ವಶದಲ್ಲಿದ್ದ ಅವರು 1947ರಲ್ಲಿ ಜಪಾನ್‌ಗೆ ಹಿಂದಿರುಗಿದರು.
100 ಮೀಟರ್ ಓಟವನ್ನು 27.08 ಸೆಕೆಂಡುಗಳಲ್ಲಿ ಮುಗಿಸಿದ 102 ವರ್ಷದ ಅಜ್ಜ
ಒಂದು ಕಣ್ಣಿನ ಪೊರೆ ಮತ್ತು ಇನ್ನೊಂದು ಕೊಲೊರೆಕ್ಟಲ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವಾರು ಆಪರೇಷನ್‌ಗಳಾಗಿದ್ದರೂ ಕೇನ್ ಅವರು ಈಗ ಫುಕುವೋಕಾದಲ್ಲಿನ ವಿಶ್ರಾಂತಿ ಗೃಹದಲ್ಲಿ ಶಾಂತಿಯುತ ಜೀವನವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಬೆಳಗ್ಗೆ 6 ಗಂಟೆಗೆ ಏಳುವ ಅವರು ಮಧ್ಯಾಹ್ನ ಅವರು ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೆಚ್ಚಾಗಿ ಗಣಿತದಂತಹ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ. ಒಥೆಲ್ಲೋ ಆಟದಲ್ಲಿ ಅವರು ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಕ್ಲಾಸಿಕ್ ಬೋರ್ಡ್ ಆಟದಲ್ಲಿ ಪರಿಣಿತರಾಗಿದ್ದು, ಆಗಾಗ್ಗೆ ವಿಶ್ರಾಂತಿ ಗೃಹ ಸಿಬ್ಬಂದಿಯನ್ನು ಆಟದಲ್ಲಿ ಸೋಲಿಸುತ್ತಾರೆ.
ಹೆಚ್ಚು ವರ್ಷ ಜೀವಿಸುತ್ತಿರುವ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂದು ಪ್ರಶಸ್ತಿ ನೀಡಿದ ಸಮಾರಂಭದಲ್ಲಿ, ಕೇನ್‌ಗೆ ಚಾಕೊಲೇಟ್‌ಗಳ ಪೆಟ್ಟಿಗೆಯನ್ನು ನೀಡಲಾಯಿತು. ಚಾಕೋಲೆಟ್ ಬಾಕ್ಸ್ ಕೈಗೆ ಸಿಗುತ್ತಿದ್ದಂತೆ ಅವರು ಅದನ್ನು ತೆರೆದು ಚಾಕೋಲೇಟ್ ತಿನ್ನಲು ಆರಂಭಿಸಿದರು. ಹೀಗಾಗಿ ಅಲ್ಲಿದವರು ಈ ಹಿರಿಯಜ್ಜಿಗೆ ಇಂದು ಎಷ್ಟು ಚಾಕೊಲೇಟ್‌ಗಳನ್ನು ತಿನ್ನಲು ಬಯಸುತ್ತೀರಿ ಎಂದು ಕೇಳಿದರು. ಆಗ ಅವರು ನೂರು ಎಂದು ಉತ್ತರಿಸಿದರು.
22 ವರ್ಷಗಳಿಂದ ಜೀನ್ ಲೂಯಿಸ್ ಕಾಲ್ಮೆಂಟ್ (ಫ್ರಾನ್ಸ್) ಹೊಂದಿದ್ದ ಅತ್ಯಂತ ಹಳೆಯ ವ್ಯಕ್ತಿ ಎಂಬ ದಾಖಲೆಯನ್ನು ಆರು ವರ್ಷಗಳಿಂದ ಇವರು ಹೊಂದಿರುವುದಕ್ಕೆ ಕೇನ್ ನಾಚಿಕೆ ಪಡುತ್ತಾರಂತೆ. ಇದಕ್ಕೂ ಹಿಂದೆ 21 ಫೆಬ್ರವರಿ 1875 ರಂದು ಜನಿಸಿದ ಜೀನ್ ಅವರು ಎಂಬುವವರು 122 ವರ್ಷ 164 ದಿನ ಜೀವಿಸಿ 1997ರ ಆಗಸ್ಟ್ 4 ರಂದು ದಕ್ಷಿಣ ಫ್ರಾನ್ಸ್‌ನ ಆರ್ಲ್ಸ್‌ನಲ್ಲಿರುವ ನರ್ಸಿಂಗ್ ಹೋಮ್‌ನಲ್ಲಿ ನಿಧನರಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ