ಅದೃಷ್ಠ ಬಂದರೆ ಹೀಗಿರಬೇಕು, ಈ ನಾಯಿ ಆಸ್ತಿ ಬರೋಬ್ಬರಿ 3,3356 ಕೋಟಿ ರೂ!

By Chethan Kumar  |  First Published Aug 17, 2024, 9:49 PM IST

ಈ ನಾಯಿ ನೋಡಿಕೊಳ್ಳಲು, ಆರೈಕೆ ಮಾಡಲು 27 ಸಿಬ್ಬಂದಿಗಳಿದ್ದಾರೆ. ಅತೀ ದೊಡ್ಡ ಅರಮನೆ, ಬೋಟ್, BMW ಕಾರು ಸೇರಿದಂತೆ ಹಲವು ಜಮೀನುಗಳು ಈ ನಾಯಿ ಹೆಸರಿನಲ್ಲಿದೆ. ನಾಯಿಯ ಒಟ್ಟು ಆಸ್ತಿ  3,3356 ಕೋಟಿ ರೂ. 


ಇಟಲಿ(ಆ.17) ವಿಶ್ವದ ಶ್ರೀಮಂತ ಉದ್ಯಮಿಗಳು, ಸೆಲೆಬ್ರೆಟಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಸೇರಿದಂತೆ ಹಲವು ಕ್ಷೇತ್ರದ ಶ್ರೀಮಂತರ ಹೆಸರನ್ನು ಬಹುತೇಕರು ಕೇಳಿರುತ್ತಾರೆ. ಇಷ್ಟೇ ಯಾಕೆ ಶ್ರೀಮಂತ ಭಿಕ್ಷುಕ ಅನ್ನೋ ಬಿರುದ ಪಡೆದವರಿದ್ದಾರೆ. ಆದರೆ ವಿಶ್ವದ ಶ್ರೀಮಂತ ನಾಯಿ ಕೇಳಿದ್ದೀರಾ? ಹೌದು, ಈ ನಾಯಿಯ ಒಟ್ಟು ಆಸ್ತಿ 3,356 ಕೋಟಿ ರೂಪಾಯಿ. ಈ ನಾಯಿ ಬಳಿ BMW ಕನ್ವರ್ಟೇಬಲ್ ಕಾರು, ಬೋಟು, ಅರಮನೆಯ, ಮ್ಯೂಸಿಕ್ ಕ್ಲಬ್, ಸ್ಪೋರ್ಟ್ಸ್ ತಂಡ ಸೇರಿದಂತೆ ನೂರಕ್ಕೂ ಹೆಚ್ಚಿನ ಆಸ್ತಿಗಳಿವೆ. ಇದು ವಿಶ್ವದ ಶ್ರೀಮಂತ ನಾಯಿ. ಇಟಲಿಯ ಈ ನಾಯಿ ನೋಡಿಕೊಳ್ಳಲು 27 ಸಿಬ್ಬಂದಿಳಿದ್ದಾರೆ.

ಎಲ್ಲಾ ಆಸ್ತಿ ಈ ನಾಯಿ ಹೆಸರಲ್ಲಿದೆ. ಈ ನಾಯಿ ಮಾಲಕಿ ಈಗ ಬದುಕಿಲ್ಲ. ಆದರೆ ಒಂದು ರೂಪಾಯಿಯೂ ನಾಯಿಗೆ ಬಿಟ್ಟು ಬೇರೆಡೆ ಖರ್ಚಾಗದಂತೆ, ಪೋಲಾಗದಂತೆ ಮಾಡಲಾಗಿದೆ. ಇಟಲಿಯ ಕೌಂಟೆಸ್ ಕೊರ್ಲೊಟಾ ಲೈಬೆನ್‌ಸ್ಟೀನ್ ಅನ್ನೋ ಮಹಿಳೆ ಅತ್ಯಂತ ಶ್ರೀಮಂತ ಮಹಿಳೆ. ರಾಜಮನೆತನದಿಂದ ಈ ಮಹಿಳೆ ಜೀವನದ ಕೊನೆಯ ಘಳಿಗೆಯಲ್ಲಿ ಏಕಾಂಗಿಯಾಗಿದ್ದರು. ಮಕ್ಕಳು ಇರಲಿಲ್ಲ. ಈಕೆಯ ಜೊತೆಗಿದ್ದದ್ದು, ಗಂಥರ್ III ಅನ್ನೋ ಜರ್ಮನ್ ಶೆಫರ್ಡ್ ನಾಯಿ.

Tap to resize

Latest Videos

undefined

ವಯನಾಡಿನಲ್ಲಿ 6 ದಿನಗಳ ಬಳಿಕ ಮಾಲೀಕನ ಪತ್ತೆ ಹಚ್ಚಿದ ನಾಯಿ, ಹೃದಯಸ್ಪರ್ಶಿ ವಿಡಿಯೋ!

1992ರ ವೇಳೆ ಈ ಮಹಿಳೆ ಆಸ್ತಿಯನ್ನು ನಾಯಿ ಹೆಸರಿಗೆ ಬರೆದು, ನಾಯಿಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಗೆಳತಿಯ ಪುತ್ರ ಮೌರಿಜಿಯೋ ಮಿಯಾನ್‌ಗೆ ವಹಿಸಿದ್ದರು. ತನ್ನ ಆಸ್ತಿ ಸಂಪೂರ್ಣವಾಗಿ ತನ್ನ ನಾಯಿಗೆ ಬಳಕೆಯಾಗಬೇಕು. ಈ ನಾಯಿ ಸಂತತಿ ಇಲ್ಲಿಗೆ ಅಂತ್ಯವಾಗಬಾರದು ಎಂದು ಷರತ್ತು ವಿಧಿಸಿದ್ದಳು. ಅದೇ ವರ್ಷದಲ್ಲಿ ಕೌಂಟೆಸ್ ನಿಧನರಾದರು. ಮೌರಿಜಿಯೋ ಮಿಯಾನ್ ಇದಕ್ಕಾಗಿ ಒಂದು ಟ್ರಸ್ಟ್ ಆರಂಭಿಸಿದರು. ನಾಯಿ ನೋಡಿಕೊಳ್ಳಲು, ಈ ಆಸ್ತಿಗಳನ್ನು ನಿರ್ವಹಣೆ ಮಾಡಲು ಟ್ರಸ್ಟ್ ನಿರ್ಮಿಸಿ ಕಾರ್ಯಾರಂಭಿಸಿದರು. 

ನಿಧನದ ವೇಳೆ ಕೌಂಟೆಸ್ ಆಸ್ತಿ ಬರೋಬ್ಬರಿ 80 ಮಿಲಿಯನ್ ಅಮೆರಿಕನ್ ಡಾಲರ್. ಮಿಯಾನ್ ಅಧಿಕಾರ ವಹಿಸಿಕೊಂಡ ಬಳಿಕ ನಾಯಿ ಆರೈಕೆಗೆ ಸಿಬ್ಬಂದಿಗಳ ನೇಮಕ ಮಾಡಿದ್ದ. ಬಳಿಕ ಕೆಲ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗಿದೆ. ಇದರ ನಡುವೆ ಪಾಪ್ ಸಿಂಗರ್ ಮಡೋನಾ ಅರಮನೆಯನ್ನು 7.5 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಖರೀದಿಸಿ ಕೆಲ ವರ್ಷಗಳ ಬಳಿಕ 29 ಮಿಲಿಯನ್‌ಗೆ ಮಾರಾಟ ಮಾಡಲಾಗಿದೆ. ಹೀಗೆ ಇತರ ಹೂಡಿಕೆಗಳ ಮೂಲಕ 80 ಮಿಲಿಯನ್ ಇದ್ದ ಆಸ್ತಿ ಇದೀಗ 400 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ.

ಮಾಲೀಕನಿಲ್ಲದ ವೇಳೆ ಅನ್ನ ಹಾಕಿದ ಮನೆಗೆ ಬೆಂಕಿ ಇಟ್ಟ ಸಾಕು ನಾಯಿ, ಸಿಸಿಟಿವಿಯಲ್ಲಿ ಕೃತ್ಯ ಸೆರೆ!

ಗಂಥರ್ III ಸಂತತಿ ಮುಂದುವರಿದು ಇದೀಗ ಗಂಥರ್ VIರಲ್ಲಿದೆ. 6ನೇ ಗಂಥರ್ ನಾಯಿ ಇದೀಗ 3,356 ಕೋಟಿ ರೂಪಾಯಿ ಒಡೆಯ. 27 ಸಿಬ್ಬಂದಿಗಳು ಈ ನಾಯಿ ಆರೈಕೆ ಮಾಡುತ್ತಾರೆ. ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ಈ ಪೈಕಿ ವೈದ್ಯರ ತಂಡವೂ ಇದೆ. ಈ ನಾಯಿ ಸಂಚಾರಕ್ಕೆ ಒಂದು BMW ಕನ್ವರ್ಟೇಬಲ್ ಕಾರಿದೆ. ಜೊತೆಗೆ ಒಂದು ಬೋಟ್ ಕೂಡ ಇದೆ. ಅತೀ ದೊಡ್ಡ ಅರಮನೆ ಇದೆ. ಪ್ರತಿ ದಿನ ನಾನ್ ವೆಜ್ ಸವಿಯುತ್ತಾ, ನಾಯಿ ಐಷಾರಾಮಿ ಬದಕು ಸಾಗಿಸುತ್ತಿದೆ.

click me!