ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿರುವ ವರದಿಗಳು ಮುನ್ನಲೆಗೆ ಬರುತ್ತಿವೆ. 12 ವರ್ಷದ ಬಾಲಕಿ ಮೇಲೆ ಸುಮಾರು 30 ಜನರು ಅತ್ಯಾಚಾರ ನಡೆಸಿದ್ದಾರೆ. ಪೋಷಕರ ಮುಂದೆಯೇ ಬಾಲಕಿ ಮೇಲೆ ರೇಪ್ ಮಾಡಲಾಗಿತ್ತು.
ನವದೆಹಲಿ: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ರಾಜೀನಾಮೆ ಬಳಿಕ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ದೇವಸ್ಥಾನಗಳನ್ನು ಧ್ವಂಸಗೊಳಿಸಿ ಹಿಂದೂಗಳ ಮನೆಯೊಳಗೆ ನುಗ್ಗಿ ದೌರ್ಜನ್ಯ ನಡೆಸಲಾಗುತ್ತಿದೆ. ಕೆಲವು ಭಾಗದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ವರದಿಯಾಗುತ್ತಿದೆ. 12 ವರ್ಷದ ಪೂರ್ಣಿಮಾ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಕಾಮುಕರು ಎಷ್ಟು ಕ್ರೂರಿಗಳಾಗಿದ್ರು ಅಂದ್ರೆ ಪೂರ್ಣಿಮಾ ಪ್ರಜ್ಞೆ ಕಳೆದುಕೊಂಡರೆ ಮುಖಕ್ಕೆ ನೀರು ಎರಚಿ ಅತ್ಯಾಚಾರ ಎಸಗುತ್ತಿದ್ದರು.
ಈ ಘಟನೆ 8ನೇ ಅಕ್ಟೋಬರ್ 2001ರಂದು ನಡೆದಿತ್ತು. ಇಂದಿಗೂ ಪೂರ್ಣಿಮಾ ಅಕ್ಟೋಬರ್ 8ರ ದಿನ ಬಂದ್ರೆ ಹೆದರಿಕೊಳ್ಳುತ್ತಾರೆ. ಪೂರ್ಣಿಮಾ ವಾಸವಾಗಿದ್ದ ಮನೆಯ ಪಕ್ಕದಲ್ಲಿದ್ದ 30 ಜನರು ಅತ್ಯಾಚಾರ ನಡೆಸಿದ್ದರು. ಪೂರ್ಣಿಮಾ ತಂದೆ ಅನಿಲ್ ಚಂದ್ರ ಹಾಗೂ ತಾಯಿ ಜೊತೆಯಲ್ಲಿ ವಾಸವಾಗಿದ್ದರು. ಖಲೀದಾ ಜಿಯಾ ಪಾರ್ಟಿಯ ಸುಮಾರು 25-30 ಜನರು ಪೂರ್ಣಿಮಾ ಮನೆಗೆ ನುಗಿದ್ದರು. ಮೊದಲು ಪೂರ್ಣಿಮಾ ತಾಯಿ ಜೊತೆ ಅನುಚಿತವಾಗಿ ವರ್ತಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಮನೆಯಲ್ಲಿದ್ದ ಪೂರ್ಣಿಮಾ ಮೇಲೆ ಪೋಷಕರ ಮುಂದೆಯೇ ಅತ್ಯಾಚಾರ ನಡೆಸಲಾಗಿತ್ತು. ಅತ್ಯಾಚಾರದಿಂದಾಗಿ ಪೂರ್ಣಿಮಾ ಪದೇ ಪದೇ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು. ಆದರೆ ದುಷ್ಕರ್ಮಿಗಳು ಮುಖದ ಮೇಲೆ ನೀರು ಸುರಿದು ಎಚ್ಚರಗೊಳಿಸಿ ರೇಪ್ ಮಾಡುತ್ತಿದ್ದರು.
undefined
ಪ್ರತ್ಯೇಕ ರಾಷ್ಟ್ರ ಕೇಳ್ತಿದ್ದಾರೆ ಹಿಂದೂಗಳು? ಬಾಂಗ್ಲಾ ನಿಮ್ಮಪ್ಪನ ಆಸ್ತಿ ಅಲ್ಲ ಅಂತಿದ್ದಾರೆ ಹೋರಾಟಗಾರರು!
12 ವರ್ಷದ ಪೂರ್ಣಿಮಾ ರಾಣಿ ಶೀಲ ಸ್ಥಿತಿ ತುಂಬಾ ಗಂಭೀರವಾಗಿತ್ತು. ಪೂರ್ಣಿಮಾ ನೋವಿನಿಂದ ಜೋರಾಗಿ ಅಳುತ್ತಿದ್ದಳು. ಮಗಳ ಮೇಲಿನ ಅತ್ಯಾಚಾರ ಕಂಡ ತಾಯಿ, ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ. ನಾವು ಮುಸ್ಲಿಮೇತರರು ಎಂಬ ಕಾರಣಕ್ಕಾಗಿ ನಮ್ಮ ಮೇಲೆ ದೌರ್ಜನ್ಯ ಎಸೆಗಲಾಗುತ್ತಿದೆ. ನಿಮ್ಮ ಪ್ರಕಾರ ನಾವು ಅಪವಿತ್ರರು. ಅಲ್ಲಾಹನಿಗೆ ಹೆದರಿ ಆಕೆ ಮೇಲೆ ಒಬ್ಬೊಬ್ಬರೇ ಅತ್ಯಾಚಾರ ಎಸಗಿ. ಎಲ್ಲರೂ ಒಟ್ಟಿಗೆ ಅತ್ಯಾಚಾರ ನಡೆಸಿದರೆ ನನ್ನ ಮಗಳು ಜೀವಂತವಾಗಿ ಉಳಿಯಲ್ಲ. ಇಲ್ಲವಾದ್ರೆ ನನ್ನ ಮಗಳು ಸತ್ತು ಹೋಗ್ತಾಳೆ. ಈಗಾಗಲೇ ಆಕೆ ರಕ್ತದ ಮಡುವಿನಲ್ಲಿದ್ದಾಳೆ ಎಂದು ದುಷ್ಕರ್ಮಿಗಳ ಮುಂದೆ ಪೂರ್ಣಿಮಾ ತಾಯಿ ಬೇಡಿಕೊಂಡಿದ್ದರು.
ಪೂರ್ಣಿಮಾ ಇಂದಿಗೂ ಜೀವಂತವಾಗಿದ್ದು, ನೊಂದ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆಸಿದವರೆಲ್ಲರನ್ನೂ ಇಂದಿಗೂ ಗುರುತಿಸುತ್ತೇನೆ. ಕಾರಣ ಅವರಲ್ಲರೂ ನನ್ನ ನೆರೆಹೊರೆಯವರು ಆಗಿದ್ದವರು ಎಂದು ಪೂರ್ಣಿಮಾ ಹೇಳುತ್ತಾರೆ.