ಆಫ್ರಿಕಾ ದೇಶಗಳಿಗೆ ಹಬ್ಬಿರುವ ಮಂಕಿಪಾಕ್ಸ್‌ ಪಾಕ್‌ಗೂ ಲಗ್ಗೆ: ಭಾರತಕ್ಕೂ ಆತಂಕ..!

By Kannadaprabha News  |  First Published Aug 17, 2024, 5:15 AM IST

ಮಂಕಿಪಾಕ್ಸ್‌ನ 14000ಕ್ಕೂ ಹೆಚ್ಚು ಪ್ರಕರಣಗಳು ಈ ವರ್ಷವೊಂದರಲ್ಲೇ ಆಫ್ರಿಕಾ ದೇಶಗಳಲ್ಲಿ ಪತ್ತೆಯಾಗಿ 450ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿವೆ. ಆದರೆ ಎರಡು ದಿನಗಳ ಹಿಂದಷ್ಟೇ ಯುರೋಪ್‌ ದೇಶವಾದ ಸ್ವೀಡನ್‌ನಲ್ಲಿ ಈ ಸೋಂಕು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಸೋಂಕು ಪತ್ತೆಯಾಗಿದೆ. ಇದು ಏಷ್ಯಾ ಖಂಡದಲ್ಲಿ ಈ ವರ್ಷದ ಬೆಳಕಿಗೆ ಬಂದ ಮೊದಲ ಪ್ರಕರಣವಾದ ಕಾರಣ, ಸಹಜವಾಗಿಯೇ ಭಾರತ ಮತ್ತು ಇತರೆ ನೆರೆಹೊರೆ ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
 


ಇಸ್ಲಾಮಾಬಾದ್‌(ಆ.17):  ಮಂಕಿಪಾಕ್ಸ್‌ ಸಾಂಕ್ರಾಮಿಕವನ್ನು ಜಾಗತಿಕ ವೈದ್ಯಕೀಯ ತುರ್ತುಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಬೆನ್ನಲ್ಲೇ, ಈ ಸೋಂಕು ಇದೀಗ ಭಾರತದ ಬಗಲಿನ ಪಾಕಿಸ್ತಾನಕ್ಕೆ ಕಾಲಿಟ್ಟಿದೆ. ಪಾಕಿಸ್ತಾನದ ಖೈಬರ್‌ ಪಖ್ತೂನ್‌ಖ್ವಾ ಪ್ರಾಂತ್ಯದಲ್ಲಿ ಸಾಂಕ್ರಾಮಿಕದ ಮೂರು ರೂಪಾಂತರಿ ಪ್ರಕರಣಗಳು ದೃಢಪಟ್ಟಿವೆ ಎಂದು ಪಾಕ್‌ ಸರ್ಕಾರ ಶುಕ್ರವಾರ ಘೋಷಿಸಿದೆ.

ಮಂಕಿಪಾಕ್ಸ್‌ನ 14000ಕ್ಕೂ ಹೆಚ್ಚು ಪ್ರಕರಣಗಳು ಈ ವರ್ಷವೊಂದರಲ್ಲೇ ಆಫ್ರಿಕಾ ದೇಶಗಳಲ್ಲಿ ಪತ್ತೆಯಾಗಿ 450ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿವೆ. ಆದರೆ ಎರಡು ದಿನಗಳ ಹಿಂದಷ್ಟೇ ಯುರೋಪ್‌ ದೇಶವಾದ ಸ್ವೀಡನ್‌ನಲ್ಲಿ ಈ ಸೋಂಕು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಸೋಂಕು ಪತ್ತೆಯಾಗಿದೆ. ಇದು ಏಷ್ಯಾ ಖಂಡದಲ್ಲಿ ಈ ವರ್ಷದ ಬೆಳಕಿಗೆ ಬಂದ ಮೊದಲ ಪ್ರಕರಣವಾದ ಕಾರಣ, ಸಹಜವಾಗಿಯೇ ಭಾರತ ಮತ್ತು ಇತರೆ ನೆರೆಹೊರೆ ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

Latest Videos

undefined

Breaking: ಮಂಕಿಪಾಕ್ಸ್‌ ಸೆಕ್ಸ್‌ನಿಂದಲೂ ಹರಡುತ್ತೆ ಎಂದ ವಿಶ್ವ ಆರೋಗ್ಯ ಸಂಸ್ಥೆ, ಭಾರತಕ್ಕೆ ಇದ್ಯಾ ಆತಂಕ?

3 ಪ್ರಕರಣ:

ಅಫ್ಘಾನಿಸ್ತಾನಕ್ಕೆ ಹೊಂದಿರುವ ಪಾಕಿಸ್ತಾನದ ಖೈಬರ್‌ ಪಖ್ತೂನ್‌ಖ್ವಾ ಪ್ರಾಂತ್ಯದಲ್ಲಿ ಮಂಕಿಪಾಕ್ಸ್‌ನ ಮೂರು ಪ್ರಕರಣಗಳು ದೃಢಪಟ್ಟಿವೆ. ಮಧ್ಯಪ್ರಾಚ್ಯ ದೇಶದಿಂದ ಪಾಕಿಸ್ತಾನಕ್ಕೆ ಹಿಂದಿರುಗಿದವರಲ್ಲಿ ಈ ರೂಪಾಂತರಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಲಾಗಿದೆ. ಜೊತೆಗೆ ಹೆಚ್ಚೆಚ್ಚು ಜನರ ರಕ್ತದ ಮಾದರಿ ಸಂಗ್ರಹಕ್ಕೆ ಸರ್ಕಾರ ಆದೇಶಿಸಿದೆ. ಜೊತೆಗೆ ಗಡಿಯಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಕಡ್ಡಾಯ ಪರೀಕ್ಷೆ ನಡೆಸಬೇಕೆಂದು ಆದೇಶಿಸಿದೆ.

ಆರೋಗ್ಯ ತುರ್ತುಪರಿಸ್ಥಿತಿ:

1970ರಲ್ಲಿ ಮೊದಲ ಬಾರಿಗೆ ಕಾಂಗೋದಲ್ಲಿ ಕಾಣಿಸಿಕೊಂಡು 2022ರಲ್ಲಿ ವಿಶ್ವದ 116 ದೇಶಗಳಿಗೆ ವ್ಯಾಪಿಸಿದ್ದ ಮಂಕಿಪಾಕ್ಸ್‌ ಮಾರಕ ಸಾಂಕ್ರಾಮಿಕಗಳ ಪೈಕಿ ಒಂದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೊಸ ಪ್ರಕರಣಗಳಲ್ಲಿ ಶೇ.160ರಷ್ಟು ಹೆಚ್ಚಳವಾಗಿದೆ. ಆಫ್ರಿಕಾ ದೇಶಗಳಲ್ಲಿ ಈ ವರ್ಷ 14000ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟು, ಕಾಂಗೋ ದೇಶವೊಂದರಲ್ಲೇ 450ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರವಷ್ಟೇ, ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್‌ ಅನ್ನು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿತ್ತು

ಹರಡುವುದು ಹೇಗೆ?:

ಮಂಕಿಪಾಕ್ಸ್ ಸಾಮಾನ್ಯವಾಗಿ ಕೋತಿಗಳು, ಇಲಿಗಳು ಮತ್ತು ಅಳಿಲುಗಳಂತಹ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದು ಜ್ವರದಂತಹ ರೋಗ ಲಕ್ಷಣಗಳು ಮತ್ತು ಕೀವು ತರಹದ ಗಾಯಗಳಿಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸೋಂಕು ಕಾಣಿಸಿಕೊಂಡ ವ್ಯಕ್ತಿ ಸಾಯುವ ಸಾಧ್ಯತೆಗಳಿರುತ್ತದೆ. ಇನ್ನು ಇದು ಹೆಚ್ಚಾಗಿ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ರೋಗ 7 ರಿಂದ 14 ದಿನದವರೆಗೆ ಇರುತ್ತದೆ.

ಮಂಕಿಪಾಕ್ಸ್‌ಗೆ ಎಂಪಾಕ್ಸ್‌ ಎಂದು ಮರುನಾಮಕರಣ ಮಾಡಿದ WHO

ರೋಗ ಲಕ್ಷಣ:

ಶೀತ , ಜ್ವರ,ತಲೆನೋವು, ಸ್ನಾಯು ದೌರ್ಬಲ್ಯ, ಊತ, ಚರ್ಮದ ಮೇಲಿನ ಗುಳ್ಳೆ ಮತ್ತು ಬಳಲಿಕೆ ಲಕ್ಷಣಗಳು ಕಂಡು ಬರುತ್ತವೆ.

ಆತಂಕ ಬೇಡ:

ಈ ನಡುವೆ ‘ದೇಶದಲ್ಲಿ ಮಂಕಿಪಾಕ್ಸ್ ಪ್ರಭಾವ ಬೀರಲ್ಲ, ಅದರ ಪರಿಣಾಮ ಅತ್ಯಂತ ಕನಿಷ್ಠವಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಭಾರತದಲ್ಲಿ 2022ರ ಮಾರ್ಚ್‌ನಲ್ಲಿ ಕೇರಳದಲ್ಲಿ ಬಾರಿಗೆ ಮಂಕಿಪಾಕ್ಸ್ ಪತ್ತೆಯಾಗಿತ್ತು.

click me!