ಇಡೀ ವಿಶ್ವವೇ ಭಾರತದತ್ತ ಚಿತ್ತ ನೆಟ್ಟಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಇದೀಗ ವಿಶ್ವಕ್ಕೆ ಭಾರತದ ನೆರವು ಅಗತ್ಯವಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ. ಬಿಲ್ ಗೇಟ್ಸ್ ಭಾರತವನ್ನು ಕೊರೋನಾ ನಿಯಂತ್ರಣದಲ್ಲಿ ಗುರು ಮಾಡಿದ್ದೇಕೆ? ಇಲ್ಲಿದೆ ವಿವರ.
ವಾಶಿಂಗ್ಟನ್(ಸೆ.15): ಬಹುತೇಕ ಎಲ್ಲಾ ರಾಷ್ಟ್ರಗಳು ಕೊರೋನಾ ವೈರಸ್ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದೆ. ಲಾಕ್‌ಡೌನ್, ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತ ಹಲವು ಕ್ರಮ ಹಾಗಾ ವಿಧಾನಗಳನ್ನು ಅನುಸರಿಸಿದೂ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಇದೀಗ ಎಲ್ಲಾ ದೇಶಗಳ ಏಕೈಕ ಆಶಾಭಾವನೆ ಕೊರೋನಾ ಲಸಿಕೆ. ಈ ವಿಚಾರದಲ್ಲಿ ವಿಶ್ವವೇ ಭಾರತದ ನೆರವನ್ನು ಬಯಸುತ್ತಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
ಕೊರೋನಾ ಸೃಷ್ಟಿಗೆ ಚೀನಾ ಸರ್ಕಾರವೇ ಕಾರಣ, ದಾಖಲೆ ಸಮೇತ ಮಾಹಿತಿ ಬಹಿರಂಗ!.
undefined
ಕೊರೋನಾ ವೈರಸ್ ಲಸಿಕೆ ಸಂಶೋಧನೆ ಹಾಗೂ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ನಮಗೆ ಭಾರತದ ಸಹಕಾರ ಅಗತ್ಯ. ಭಾರತ ಇತರ ರಾಷ್ಟ್ರಗಳಿಗೆ ಲಸಿಕೆ ಪೂರೈಸಲು ಸಾಧ್ಯ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಕೊರೋನಾ ಲಸಿಕೆ ಕುರಿತ ಭಾರತದ ಫಲಿತಾಂಶಕ್ಕಾಗಿ ವಿಶ್ವವೇ ಕಾಯುತ್ತಿದೆ ಎಂದು ಗೇಟ್ಸ್ ಹೇಳಿದ್ದಾರೆ.
ಅಸ್ಟ್ರಾಜೆನೆಕಾ, ಆಕ್ಸ್‌ಫರ್ಡ್, ನೊವಾವಾಕ್ಸ್ ಅಥವಾ ಜಾನ್ಸನ್ ಸೇರಿದಂತೆ ಕೊರೋನಾ ಲಸಿಕೆ ಸಂಶೋಧನೆ ಹಾಗೂ ತಯಾರಿಕೆ ಭಾರತದಲ್ಲಿ ಆಗುತ್ತಿದೆ. ಭಾರತ ಮಾತ್ರವೇ ಅತೀ ಹೆಚ್ಚು ಲಸಿಕೆ ಉತ್ಪಾದಿಸಲು ಸಾಧ್ಯ. ಈಗಾಗಲೇ ಭಾರತದ ಔಷಧಿಗಳ ಪೂರೈಕೆಯಲ್ಲಿ ಇದನ್ನು ಸಾಬೀತುಪಡಿಸಿದೆ. ನಾವೆಲ್ಲ ಶೀಘ್ರದಲ್ಲಿ ಲಸಿಕೆ ಪಡೆಯಲು ಹಂಬಲಿಸುತ್ತಿದ್ದೇವೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲೇ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿವೆ. ಪ್ರಯೋಗ ಹಂತದಲ್ಲಿರುವ ಕಾರಣ ನಾವು ಕಾಯಲೇಬೇಕು. ಆದರೆ ಈಗಾಗಲೇ ಹಲವು ಕೊರೋನಾ ವೈರಸ್ ಲಸಿಕ ತಯಾರಿಕೆಗಳು ಅಂತಿಮ ಹಂತದಲ್ಲಿದೆ. ಮುಂದಿನ ವರ್ಷದ ತ್ರೈಮಾಸಿಕದ ವೇಳೆ ಬಹುತೇಕ ಕೊರೋನಾ ಲಸಿಕೆಗಳು ಲಭ್ಯವಾಗಲಿದೆ. ಭಾರತದಲ್ಲಿ ಲಸಿಕೆ ಲಭ್ಯವಾದ ಬೆನ್ನಲ್ಲೇ, ಇತರ ದೇಶಗಳಿಗೂ ಸಿಗುವಂತಾದರೆ ಉತ್ತಮ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.