ಭಾರತದ ಬೆನ್ನಲ್ಲೇ ಅಮೆರಿಕ ದಿಟ್ಟ ನಿರ್ಧಾರ: ಚೀನಾದ 5 ಉತ್ವನ್ನಗಳಿಗೆ ನಿಷೇಧ!

Published : Sep 15, 2020, 06:20 PM IST
ಭಾರತದ ಬೆನ್ನಲ್ಲೇ ಅಮೆರಿಕ ದಿಟ್ಟ ನಿರ್ಧಾರ: ಚೀನಾದ 5 ಉತ್ವನ್ನಗಳಿಗೆ ನಿಷೇಧ!

ಸಾರಾಂಶ

ಗಡಿಯಲ್ಲಿ ಶಾಂತಿ ಕದಡಿದ ಚೀನಾ ಮೇಲೆ ಭಾರತ ತಕ್ಕ ತಿರುಗೇಟು ನೀಡುತ್ತಿದೆ. ಚೀನಾ ವಸ್ತುಗಳಿಗೆ ಭಾರತೀಯರು ಬಹಿಷ್ಕಾರ ಹಾಕಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್‌ ಬ್ಯಾನ್ ಮಾಡಿದೆ. ಇದೀಗ ಅಮೆರಿಕ ಸರದಿ. ಚೀನಾದ ಉತ್ಪನ್ನಗಳಿಗೆ ಅಮೆರಿಕ ನಿಷೇಧ ಹೇರಿದೆ.

ವಾಶಿಂಗ್ಟನ್(ಸೆ.15): ಚೀನಾದ ಕುತಂತ್ರ ಬುದ್ದಿಯಿಂದ ಒಂದೊಂದೆ ದೇಶಗಳು ಚೀನಾ ವಿರುದ್ಧ ಕಿಡಿ ಕಾರುತ್ತಿದೆ. ಇಷ್ಟೇ ಅಲ್ಲ ಚೀನಾ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕುತ್ತಿದೆ. ಈಗಾಗಲೇ ಭಾರತ, ಚೀನಾ ಮೂಲಕ ಆ್ಯಪ್ ಬ್ಯಾನ್ ಮಾಡಿದೆ. ಇದೀಗ ಅಮೆರಿಕ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಚೀನಾದಿಂದ ರಫ್ತಾಗುತ್ತಿರುವ 5 ವಸ್ತುಗಳನ್ನು ಅಮೆರಿಕ ಬ್ಯಾನ್ ಮಾಡಿದೆ.

ರಾಜತಾಂತ್ರಿಕ ಹೊಡೆತ: ಚೀನಾಗೆ ಗುಡ್ ಬೈ ಹೇಳಿ ಭಾರತದ ಜೊತೆ ಕೈ ಜೋಡಿಸಿದ ಜರ್ಮನಿ!

ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿನ 5 ಉತ್ಪನ್ನಗಳಿಗೆ ಅಮೆರಿಕ ನಿಷೇಧ ಹೇರಿದೆ. ಈ ಪ್ರಾಂತ್ಯದಲ್ಲಿ ಬಲಂವತವಾಗಿ, ಜೀತಪದ್ದತಿ ಮೂಲಕ ಕಾರ್ಮಿಕರನ್ನು ಚೀನಾ ಸರ್ಕಾರ ಬಳಸಿಕೊಳ್ಳುತ್ತಿದೆ. ಕಾಟನ್, ಕಂಪ್ಯೂಟರ್ ಕಂಪೊನೆಂಟ್ಸ್, ಬಟ್ಟೆ ಸೇರಿದಂತೆ 5 ಉತ್ಪನ್ನಗಳನ್ನು ನಿಷೇಧಿಸಿದೆ. ಚೀನಾ ಕಾರ್ಮಿಕರ ಶೋಷಣೆ ಮೂಲಕ ಉತ್ಪನ್ನಗಳು ಉತ್ಪಾದಿಸುತ್ತಿದೆ. ಇದಕ್ಕಾಗಿ ಕ್ಸಿಂಜಿಯಾಂಗ್ ವಲಯದ 5 ಉತ್ಪನ್ನಗಳನ್ನು ಅಮೆರಿಕ ಬ್ಯಾನ್ ಮಾಡಿದೆ.

ಚೀನಾ ಸರ್ಕಾರವು ಅಮೆರಿಕ ಆಮದು ಮಾಡುವ ಸರಕುಗಳನ್ನು ತಯಾರಿಸಲು ಕಾರ್ಮಿಕರನ್ನು ಆದುನಿಕ ಗುಲಾಮಗಿರಿ ಮೂಲಕ ತಯಾರಿಸಾಗುತ್ತಿದೆ.  ಚೀನಾ ಈ ಸರಕುಗಳನ್ನು ನಮ್ಮ ಪೂರೈಕೆ ಸರಪಳಿಗಳಿಗೆ ಆಮದು ಮಾಡಿಕೊಳ್ಳಲು ಪ್ರಯತ್ನಿಸಿದಾಗ, ಅದು ಅಮೆರಿಕಾದ ಕಾರ್ಮಿಕರು ಮತ್ತು ವ್ಯವಹಾರಗಳಿಗೆ ಸಮಸ್ಯೆಗಳಾಗುತ್ತದೆ. ಅಮೆರಿಕ ಕಾರ್ಮಿಕರು, ಉದ್ಯಮಿಗಳಿಗೆ ನಾವು ಮೊದಲ ಆದ್ಯತೆ ನೀಡಲಿದ್ದೇವೆ ಎಂದು ಅಧ್ಯಕ್ಷ ಡೋನಾಲ್ಟ್ ಟ್ರಂಪ್ ಹೇಳಿದ್ದಾರೆ.

ವಿದೇಶಿ ಕಂಪೆನಿಗಳು  ಕಾರ್ಮಿಕರನ್ನು ಬಲವಂತವಾಗಿ ಬಳಸಿಕೊಳ್ಳುವುದವನ್ನು ಅನುಮತಿಸುವುದಿಲ್ಲ ಆದರೆ ಚೀನಾ ನಡೆಯಿಂದ  ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳನ್ನು ಗೌರವಿಸುವ ಅಮೇರಿಕ ವ್ಯವಹಾರಗಳಿಗೆ ಹಾನಿಯಾಗುತ್ತಿದೆ ಸಿಬಿಪಿ ಆಯುಕ್ತ ಮಾರ್ಕ್ ಎ. ಮೋರ್ಗಾನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ