ಸ್ನಾನ ಮಾಡೋದು ಹೇಗೆ... ನನ್ನ ನೋಡಿ ಕಲಿ ಅಂತಿದೆ ಈ ಶ್ವಾನ

By Suvarna NewsFirst Published Jan 28, 2022, 3:38 PM IST
Highlights
  • ನಾಯಿ ಸ್ನಾನ ಮಾಡುವ ಸುಂದರ ದೃಶ್ಯ
  • ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್
  • ಗೋಲ್ಡನ್ ರಿಟ್ರೈವರ್ ತಳಿಯ ಶ್ವಾನ
     

ನೀವು ನಾಯಿಯನ್ನು ಸಾಕುತ್ತಿದ್ದೀರಾ... ಅದು ಸ್ನಾನ ಮಾಡಿಸಲು ಬಿಡುತ್ತಿಲ್ಲವೇ ಹಾಗಿದ್ದರೆ ಈ ವಿಡಿಯೋ ನೋಡಿ ನಿಮಗೆ ನಿಮ್ಮ ನಾಯಿಯನ್ನು ಸ್ನಾನ ಮಾಡಿಸುವ ಬಗ್ಗೆ ಒಂದು ಐಡಿಯಾ ಸಿಗಬಹುದು. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಆಗಿದ್ದು, ಗೋಲ್ಡನ್‌ ರಿಟ್ರೈವರ್ ತಳಿಯ ಶ್ವಾನ ನಿಮಗೆ ಹೇಗೆ ಸ್ನಾನ ಮಾಡುವುದು ಎಂದು ಹೇಳಿ ಕೊಡುತ್ತಿದೆ. 

ನಾಯಿ ಅಥವಾ ಬೆಕ್ಕು ಮುಂತಾದ ಸಾಕುಪ್ರಾಣಿಗಳು ಸ್ನಾನ ಮಾಡುವ ವಿಡಿಯೋ ನೋಡಲು ಮಜಾವಾಗಿರುತ್ತದೆ. ಏಕೆಂದರೆ ಒಂದೊಂದು ಶ್ವಾನ ಸ್ನಾನ ಎಂದರೆ ನೀಡುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವು ಶ್ವಾನಗಳು ಇಷ್ಟಪಟ್ಟು ಸ್ನಾನ ಮಾಡಿದರೆ ಮತ್ತೂ ಕೆಲವು ನನಗೆ ಸ್ನಾನ ಬೇಡ ಎಂದು ಬೊಬ್ಬೆ ಹೊಡೆಯಲು ಶುರು ಮಾಡುತ್ತವೆ. ಇನ್ನು ಈ ವಿಡಿಯೋ ಗೊಲ್ಡನ್‌ ರಿಟ್ರೈವರ್‌ ( Golden Retriever) ತಳಿಯ ಶ್ವಾನವಾದ ಫಿನ್ಲೇ ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್‌ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. 

 
 
 
 
 
 
 
 
 
 
 
 
 
 
 

A post shared by Finley (@golden_huck_fin)

 

ಈ ವಿಡಿಯೊದಲ್ಲಿ, ಈ ಸಾಕು ನಾಯಿ ಸ್ನಾನ ಮಾಡುವ ಪ್ರಕ್ರಿಯೆಯನ್ನು ಮುದ್ದಾಗಿ ವಿವರಿಸಲಾಗಿದೆ. ವಿಡಿಯೋದಲ್ಲಿ ನೋಡುಗರು ಶ್ವಾನ  ಸ್ನಾನ ಮಾಡಲು ಟಬ್‌ಗೆ ಇಳಿಯುವುದನ್ನು ನೋಡಬಹುದು. ಜೊತೆಗೆ ಮಾಲೀಕ ಶ್ವಾನ ಮಾಡಿಸುವಾಗಿ ಈ ಶ್ವಾನ ತುಂಬಾ ತಾಳ್ಮೆಯಿಂದ ಸಹಕರಿಸುತ್ತಾನೆ. ಮೊದಲಿಗೆ ಶ್ವಾನವನ್ನು ಸಂಪೂರ್ಣ ಒದ್ದೆ ಮಾಡುವ ಮಾಲೀಕ ನಂತರ ಶ್ಯಾಂಪೂ ಹಾಕಿ ಶ್ವಾನಕ್ಕೆ ಬ್ರಶ್‌ ಮಾಡುತ್ತಾನೆ. ಇದಾದ ನಂತರ ಚೆನ್ನಾಗಿ ನೀರಿನಿಂದ ತೊಳೆದು ಸ್ನಾನ ಮಾಡಿಸುತ್ತಾನೆ. ಅಲ್ಲದೇ ಸ್ನಾನದ ನಂತರ ಆತನಿಗೆ ಟವೆಲ್‌ನಿಂದ ಅದರ ಮೈಯ ಒದ್ದೆಯನ್ನೆಲ್ಲಾ ವರೆಸಿ ಬ್ಲೋ ಡ್ರೈ ನೀಡುತ್ತಾನೆ. ಇಷ್ಟೆಲ್ಲಾ ಪ್ರಕ್ರಿಯೆ ಆಗುವವರೆಗೂ ಶ್ವಾನ ಬಹಳ ತಾಳ್ಮೆಯಿಂದ ಕೂಲಾಗಿ ನಿಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು.

ಪ್ರಾಣದ ಹಂಗು ತೊರೆದು ಕರಡಿ ಬಾಯಿಯಿಂದ ಶ್ವಾನವನ್ನು ರಕ್ಷಿಸಿದ ವ್ಯಕ್ತಿ

ಮೂರು ದಿನಗಳ ಹಿಂದೆ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ(Instagram)  ಹಾಕಲಾಗಿದ್ದು, ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೊತೆಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಶ್ವಾನದಂತಹ ಬುದ್ಧಿವಂತ ಪ್ರಾಣಿ ಮತ್ತೊಂದಿಲ್ಲ. ಇದು  ಮನುಷ್ಯನ ಬೆಸ್ಟ್ ಫ್ರೆಂಡ್‌ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂಗ್ಲೆಂಡ್‌ನ ನ್ಯೂ ಹಂಪ್‌ಶೈರ್‌ನಲ್ಲಿ ಕೆಲ ದಿನಗಳ ಹಿಂದೆ ಶ್ವಾನವೊಂದು ತನ್ನ ಮಾಲೀಕ ಅಪಾಯದಲ್ಲಿರುವುದನ್ನು ತಿಳಿದು ಆ ಸ್ಥಳಕ್ಕೆ ಧಾವಿಸಿ ಆತನ ಜೀವ ಉಳಿಸಿತ್ತು.. ಟಿನ್ಸ್‌ಲಿ (Tinsley) ಹೆಸರಿನ ಜರ್ಮನ್‌ ಶೆಫರ್ಡ್ ನಾಯಿ ಹೀಗೆ ಮಾಲೀಕನ ರಕ್ಷಣೆಗೆ ಧಾವಿಸಿ ಬಂದ ಶ್ವಾನ. ಈತನ ಮಾಲೀಕ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಪಲ್ಟಿ ಹೊಡೆದಿತ್ತು. ಪರಿಣಾಮ ಮಾಲೀಕ ಅಪಾಯಕ್ಕೊಳಗಾಗಿದ್ದ. ಕಾರು ಹಾಗೂ ಟ್ರಕ್‌ನಲ್ಲಿದ್ದವರಿಗೂ ಈ ಅಪಘಾತದಲ್ಲಿ ಗಾಯಗಳಾಗಿತ್ತು. ಆದರೆ ಶ್ವಾನ ಟಿನ್ಸ್‌ಲಿ ನೆರವಿನಿಂದ ಅವರು ಶೀಘ್ರದಲ್ಲೇ ವೈದ್ಯಕೀಯ ಸಹಾಯ ಪಡೆಯುವಂತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಜೀವ ಪಣಕ್ಕಿಟ್ಟು ಶ್ವಾನವನ್ನು ರಕ್ಷಿಸಿದ ತೆಲಂಗಾಣದ ಹೋಮ್‌ಗಾರ್ಡ್

ನಾಯಿಯ ವರ್ತನೆಯಿಂದ ಅದು ನಮಗೇನೋ ಹೇಳಲು, ತೋರಿಸಲು ಬಯಸುತ್ತಿತ್ತು ಎಂದು ನಮಗನಿಸುತ್ತಿತ್ತು ಎಂದು ನ್ಯೂ ಹಂಪ್‌ಶೈರ್‌ನ ರಾಜ್ಯ ಪೊಲೀಸ್ ಆದ ಲೆಫ್ಟಿನೆಂಟ್ ಡೇನಿಯಲ್ ಬಾಲ್ಡಸ್ಸರ್ (Daniel Baldassarre) ಹೇಳಿದರು. ಅದು ನನ್ನನ್ನು ಹಿಂಬಾಲಿಸಿ ನನ್ನನ್ನು ಹಿಂಬಾಲಿಸಿ ಅನ್ನುವಂತಿತ್ತು. ಹಾಗಾಗಿ ನಾವು ಅದರ ಹಿಂದೆಯೇ ಹೋದೆವು. ಅದು ನಮ್ಮನ್ನು ಕರೆದುಕೊಂಡು ಹೋದ ಸ್ಥಳವನ್ನು ತಲುಪಿದಾಗ ನಮಗೆ ಅಚ್ಚರಿಯಾಗಿತ್ತು. ಅಲ್ಲಿ ರಸ್ತೆ ಬದಿ ಹಾಕಿದ ಗಾರ್ಡ್‌ರೈಲ್‌ ಹಾನಿಗೊಳಗಾಗಿತ್ತು. ಹಾಗೂ ಅಲ್ಲಿ ಕೆಳಗೆ ನಾಯಿ ನೋಡಲು ಶುರು ಮಾಡಿತ್ತು. ನಂತರ ನಾವು ಅಲ್ಲಿ ನೋಡಿದಾಗ ಅಪಘಾತವಾಗಿರುವುದು ಕಂಡು ಬಂತು ಎಂದು ಡೇನಿಯಲ್ ಬಾಲ್ಡಸ್ಸರ್ ಹೇಳಿದರು. ನಂತರ ಅಲ್ಲಿಗೆ ಸಮೀಪದ ಪೊಲೀಸರು ಹಾಗೂ ಹಂಪ್‌ಶೈರ್‌ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರು ಎಂದು ತಿಳಿದು ಬಂದಿದೆ.

click me!