US First Execution Of 2022 : ಗೆಳತಿಯ ಜಾಮೀನಿಗಾಗಿ ಹೋಟೆಲ್ ದರೋಡೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ!

By Suvarna NewsFirst Published Jan 28, 2022, 12:13 AM IST
Highlights

ಗೆಳತಿಯ ಜಾಮೀನಿನ ಸಲುವಾಗಿ ಹೋಟೆಲ್ ದರೋಡೆಗೆ ಮುಂದಾಗಿದ್ದ
ಈ ವೇಳೆ ಇಬ್ಬರು ವ್ಯಕ್ತಿಯ ಕೊಲೆ ಮಾಡಿದ್ದ ಡೊನಾಲ್ಡ್ ಗ್ರ್ಯಾಂಟ್
2001ರಲ್ಲಿ ನಡೆದ ಘಟನೆಯಲ್ಲಿ ಮರಣದಂಡನೆ ಶಿಕ್ಷೆ
 

ವಾಷಿಂಗ್ಟನ್ (ಜ. 27): ಅಮೆರಿಕವು (United States) 2022ರ ತನ್ನ ಮೊಟ್ಟಮೊದಲ ಮರಣದಂಡನೆ (Execution )ಶಿಕ್ಷೆಯನ್ನು ಜಾರಿ ಮಾಡಿದೆ. 2001ರಲ್ಲಿ ಹೋಟೆಲ್ ದರೋಡೆ (robbed a hotel) ಪ್ರಕರಣದಲ್ಲಿ ಜೋಡಿ ಕೊಲೆಗೆ ಕಾರಣವಾಗಿದ್ದ ಡೊನಾಲ್ಡ್ ಗ್ರ್ಯಾಂಟ್ ಗೆ (Donald Grant) ಒಕ್ಲಾಹಾಮಾದಲ್ಲಿ  (Oklahoma) ಮರಣದಂಡನೆ ಶಿಕ್ಷೆ ಜಾರಿ ಮಾಡಲಾಗಿದೆ. ಮಾರಣಾಂತಿಕವಾದ ಚುಚ್ಚುಮದ್ದಿನ ಮೂಲಕ 41 ವರ್ಷದ ಡೊನಾಲ್ಡ್ ಗ್ರ್ಯಾಂಟ್ ಗೆ ಮರಣದಂಡನೆ ಶಿಕ್ಷೆಯನ್ನು ಜಾರಿ ಮಾಡಲಾಯಿತು.

ಜೈಲುಪಾಲಾಗಿದ್ದ ತನ್ನ ಗೆಳತಿಯ ಜಾಮೀನಿಗೆ ಹಣ ಹೊಂದಿಸುವ ಸಲುವಾಗಿ 25 ವರ್ಷ ವಯಸ್ಸಿನ ಡೊನಾಲ್ಡ್ ಗ್ರ್ಯಾಂಟ್ 2001ರಲ್ಲಿ ಹೋಟೆಲ್ ದರೋಡೆ ಪ್ರಯತ್ನವನ್ನು ಮಾಡಿದ್ದರು. ದರೋಡೆ ವೇಳೆ ಸಿಕ್ಕಿಬಿದ್ದಿದ್ದ ಡೊನಾಲ್ಡ್ ಗ್ರ್ಯಾಂಟ್ ಇಬ್ಬರು ಹೋಟೆಲ್ ಉದ್ಯೋಗಿಗಳ ಮೇಲೆ ಗುಂಡು ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದರು. ನ್ಯಾಯಾಲಯದ ದಾಖಲೆಯ ಪ್ರಕಾರ, ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಇನ್ನೊಬ್ಬನನ್ನು ಗ್ರ್ಯಾಂಟ್ ಚಾಕುವಿನಿಂದ ಇರಿದು ಸಾಯಿಸಿದ್ದರು. ಸಾಕಷ್ಟು ವಿಚಾರಣೆಗಳ ಬಳಿಕ 2005ರಲ್ಲಿ ಈ ಪ್ರಕರಣದಲ್ಲಿ ಡೊನಾಲ್ಡ್ ಗ್ರ್ಯಾಂಟ್ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

ಅಂದಿನಿಂದ, ಅವರು ತಮ್ಮ ಶಿಕ್ಷೆಯನ್ನು ರದ್ದುಗೊಳಿಸುವಂತೆ ಹಲವಾರು ಮನವಿಗಳನ್ನು ಸಲ್ಲಿಸಿದ್ದಾರೆ, ನಿರ್ದಿಷ್ಟವಾಗಿ ಬೌದ್ಧಿಕ ನ್ಯೂನತೆಗಳನ್ನು ಉಲ್ಲೇಖ ಮಾಡಿದ್ದರು. ಆನ್‌ಲೈನ್ ಅರ್ಜಿಯಲ್ಲಿ, ಡೊನಾಲ್ಡ್ ಗ್ರ್ಯಾಂಟ್ ಪರ ಹೋರಾಟ ಮಾಡಿದವರು, ಗ್ರ್ಯಾಂಟ್ ಗೆ ಭ್ರೂಣದಿಲ್ಲೇ ಆಲ್ಕೋಹಾಲ್ ಸಿಂಡ್ರೋಮ್ ತಾಗಿಸಲಾಗಿತ್ತು ಮತ್ತು  ಬಾಲ್ಯದಲ್ಲಿ ತನ್ನ ಮದ್ಯವ್ಯಸನಿ ತಂದೆಯಿಂದ ಹಿಂಸಾತ್ಮಕ ನಿಂದನೆಯಿಂದ ಉಂಟಾದ ಮೆದುಳಿನ ಆಘಾತದಿಂದ ಬಳಲುತ್ತಿದ್ದಾರೆ ಎಂದು ಬರೆದಿದ್ದರು.

ಅಮೆರಿಕದ ದಕ್ಷಿಣದ ರಾಜ್ಯವಾದ ಒಕ್ಲಾಹಾಮದಲ್ಲಿ ಮರಣದಂಡನೆಯ ವಿಧಾನದ ಕುರಿತಾಗಿ ತನ್ನ ಕೊನೆಯ ಮನವಿಯನ್ನು ಡೊನಾಲ್ಡ್ ಗ್ರ್ಯಾಂಟ್ ಸಲ್ಲಿಸಿದ್ದರು. ಅದರೆ, ಅಮೆರಿಕದ ಸುಪ್ರೀಂ ಕೋರ್ಟ್ ಬುಧವಾರ ಈ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ಮ್ಯಾಕ್ ಆಲೆಸ್ಟರ್ ಜೈಲಿನಲ್ಲಿ (McAlester Jail) ಇಂಜಕ್ಷನ್ ನೀಡುವ ಮೂಲಕ ಮರಣದಂಡನೆ ಶಿಕ್ಷೆ ನೀಡಲಾಗಿದ್ದು, ಬೆಳಗ್ಗೆ 10.16ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.30) ಗ್ರ್ಯಾಂಟ್ ಮೃತಪಟ್ಟಿರುವ ಬಗ್ಗೆ ಅಧಿಕೃತವಾಗಿ ಒಕ್ಲಾಹಾಮಾ ಜೈಲುಗಳ ನಿರ್ದೇಶಕ ಸ್ಕಾಟ್ ಕ್ರೌ (Oklahoma prisons director Scott Crow) ತಿಳಿಸಿದ್ದಾರೆ.

ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಮಹಿಳೆ.. ವಿಡಿಯೋ ವೈರಲ್
ಬೆಳಗ್ಗೆ 10.3ರ ವೇಳೆಗೆ ಇಂಜಕ್ಷನ್ ನೀಡಲು ಆರಂಭಿಸಲಾಗಿತ್ತು. 10.06ರವರೆಗೂ ಅವರು ಮಾತನಾಡುತ್ತಿದ್ದರು. ಆ ಬಳಿಕ ದೊಡ್ಡದಾಗಿ ಉಸಿರು ತೆಗೆದುಕೊಂಡ ಬಳಿಕ, 10.08 ನಿಮಿಷದ ವೇಳೆಗೆ ವ್ಯಕ್ತಿ ಪ್ರಜ್ಞಾಹೀನಸ್ಥಿತಿಯಲ್ಲಿದ್ದಾನೆ ಎಂದು ತಿಳಿಸಲಾಗಿತ್ತು. 10.11ರ ವೇಳೆಗೆ ಅವರಲ್ಲಿ ಉಸಿರಾಟವಿರಲಿಲ್ಲ. 10.16ರ ವೇಳೆ ನಿಧನವನ್ನು ಘೋಷಣೆ ಮಾಡಲಾಯಿತು. ಡೊನಾಲ್ಡ್ ಗ್ರ್ಯಾಂಟ್ ಅವರಿಗೆ ನೀಡಿದ್ದ ಮರಣದಂಡನೆಯನ್ನು ಜೈಲಿನ ಟಿವಿ ಮೂಲಕ ವೀಕ್ಷಿಸಲು ಅವರ ಕುಟುಂಬದವರಿಗೂ ಅವಕಾಶ ನೀಡಲಾಗಿತ್ತು. 

ತಂದೆಯ ಈ ಪ್ರೀತಿಗೆ ಬೆಲೆ ಕಟ್ಟೋದು ಹ್ಯಾಗೆ...!
ಇದಕ್ಕೂ ಮುನ್ನ ಅಮೆರಿಕದಲ್ಲಿ ಮರಣದಂಡನೆಗಾಗಿ ಮಾರಣಾಂತಿಕ ಕಾಕ್ ಟೇಲ್ ಅನ್ನು ನೀಡಲಾಗುತ್ತಿತ್ತು. ಇದನ್ನು ಸೇವಿಸಿದವರು ಅಸಹನೀಯ ನೋವಿನಿಂದ ಬಳಿ ಸಾಯುತ್ತಿದ್ದರು. ಇದಕ್ಕೆ ವಿರೋಧ ವ್ಯಕತವಾದ ಬಳಿಕ ಅಮೆರಿಕದ ಸಂವಿಧಾನದಿಂದ ಇದನ್ನು ತೆಗೆದುಹಾಕಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ವಾರ್ಷಿಕವಾಗಿ ಮರಣದಂಡನೆಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅಮೆರಿಕದ 23 ರಾಜ್ಯಗಳಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ, ಆದರೆ ಮೂರು ರಾಜ್ಯಗಳಾದ ಕ್ಯಾಲಿಫೋರ್ನಿಯಾ, ಒರೆಗಾನ್ ಮತ್ತು ಪೆನ್ಸಿಲ್ವೇನಿಯಾ ಮರಣದಂಡನೆ ಶಿಕ್ಷೆಯ ಬಳಕೆಯ ಮೇಲೆ ನಿಷೇಧವನ್ನು ಹೇರಿದೆ. 2015ರಲ್ಲಿ ಒಕ್ಲಹಾಮಾದಲ್ಲಿ ಸಾಲು ಸಾಲು ಮರಣದಂಡನೆ ಶಿಕ್ಷೆ ಘೋಷಣೆ ಆದ ಬಳಿಕ, ಈ ಶಿಕ್ಷೆಯ ಮೇಲೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ಆದರೆ, 2021ರಲ್ಲಿ ಮರಣದಂಡನೆ ಶಿಕ್ಷೆಯ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ.

click me!