ಅಪರಿಚಿತ ಯುವತಿಯ ಪ್ಲೈಯಿಂಗ್ ಕಿಸ್‌ಗೆ ಪುರುಷರ ರಿಯಾಕ್ಷನ್ ಹೇಗಿತ್ತು: ವೀಡಿಯೋ ಭಾರಿ ವೈರಲ್

Published : Oct 10, 2025, 03:01 PM IST
Woman Blows Flying Kiss to Strangers in Subway

ಸಾರಾಂಶ

Flying Kiss to Strangers: ಕೈಯಲ್ಲಿ ಮುತ್ತಿಟ್ಟು ಗಾಳಿಯಲ್ಲಿ ಹಾರಿ ಬಿಟ್ಟಂತೆ ದೂರದಲ್ಲಿರುವವರಿಗೆ ಕೊಡುವ ಕಿಸ್ ಈ ಪ್ಲೈಯಿಂಗ್ ಕಿಸ್. ಆದರೆ ಅಪರಿಚಿತರಿಗೆ ಈ ಪ್ಲೈಯಿಂಗ್ ಕಿಸ್ ನೀಡಿದ್ರೆ ಅವರ ರಿಯಾಕ್ಷನ್ ಹೇಗಿರುತ್ತದೆ. ಇಂತಹದೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ವಿಶೇಷವಾಗಿ ಭಾರತದಲ್ಲಿ ಸಾರ್ವಜನಿಕವಾಗಿ ಒಬ್ಬರಿಗೆ ಪ್ರೀತಿ ತೋರಿಸುವುದು ಅಲಿಖಿತ ನಿಷಿದ್ಧ. ಆದರೆ ವಿದೇಶಗಳಲ್ಲಿ ಹಾಗಲ್ಲ, ನನ್ನ ಪ್ರೀತಿಯ ಹುಡುಗಿ ಸಿನಿಮಾದ ಹಾಡಿನಂತೆ ಪಾರ್ಕಿಂಗ್ ಲಾಟ್‌ನಲ್ಲಿ ಅಲ್ಲಿನ ಜನ ಪ್ರೀತಿ ಮಾಡ್ತಾರೆ. ಸಾರ್ವಜನಿಕ ಜಾಗದಲ್ಲಿ ಅಲ್ಲಿ ಹಗ್ಗಿಂಗ್ ಕಿಸ್ಸಿಂಗ್ ಎಲ್ಲಾ ಸಾಮಾನ್ಯ. ಆದರೆ ಪ್ಲೈಯಿಂಗ್ ಕಿಸ್ ಬಗ್ಗೆ ನಿಮಗೆ ಗೊತ್ತೇ ಇದೆ. ಕೈಯಲ್ಲಿ ಮುತ್ತಿಟ್ಟು ಗಾಳಿಯಲ್ಲಿ ಹಾರಿ ಬಿಟ್ಟಂತೆ ದೂರದಲ್ಲಿರುವವರಿಗೆ ಕೊಡುವ ಕಿಸ್ ಈ ಪ್ಲೈಯಿಂಗ್ ಕಿಸ್. ಬಹುತೇಕ ತಾರೆಯರು ತಮ್ಮ ಅಭಿಮಾನಿಗಳಿಗೆ ದೂರದಿಂದಲೇ ಕೈ ಬೀಸಿ ಫ್ಲೈಯಿಂಗ್ ಕಿಸ್ ನೀಡ್ತಾರೆ. ಆದರೆ ಅಪರಿಚಿತರಿಗೆ ಈ ಪ್ಲೈಯಿಂಗ್ ಕಿಸ್ ನೀಡಿದ್ರೆ ಅವರ ರಿಯಾಕ್ಷನ್ ಹೇಗಿರುತ್ತದೆ. ಇಂತಹದೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಯುವತಿಯ ಫ್ಲೈಯಿಂಗ್ ಕಿಸ್‌ಗೆ ಹುಡುಗರ ಮುದ್ದಾದ ರಿಯಾಕ್ಷನ್

ಸಬ್‌ವೇಯಲ್ಲಿ ಸಾಗುತ್ತಿದ್ದ ರೈಲಿನೊಳಗಿದ್ದ ಪ್ರಯಾಣಿಕರಿಗೆ ಹೊರಗಿನಿಂದ ಗಾಜಿಗೆ ತಟ್ಟಿಸದ್ದು ಮಾಡಿದ ನಂತರ ಹುಡುಗಿಯೊಬ್ಬಳು ಅವರನ್ನು ನೋಡಿ ಫ್ಲೈಯಿಂಗ್ ಕಿಸ್ ಹಾರಿ ಬಿಟ್ಟಿದ್ದಾಳೆ. ಈಕೆಯ ಈ ಫ್ಲೈಯಿಂಗ್ ಕಿಸ್‌ನ್ನು ಅಲ್ಲಿನ ಪುರುಷರೆಲ್ಲರೂ ಬಹಳ ಕ್ಯಾಶುವಲ್ ಆಗಿಯೇ ತೆಗೆದುಕೊಂಡಿದ್ದು, ಮತ್ತೆ ಆಕೆಗೆ ಫ್ಲೈಯಿಂಗ್ ಕಿಸ್ ಮಾಡುವ ಮೂಲಕ ರಿಯಾಕ್ಟ್ ಮಾಡಿದ್ದಾರೆ. ಒಬ್ಬೊಬ್ಬ ಪುರುಷನ ರಿಯಾಕ್ಷನ್ ಕೂಡ ಈ ವೀಡಿಯೋದಲ್ಲಿ ಅದ್ಭುತವಾಗಿದೆ.

ಕೃಷ್ಣವರ್ಣದ ಮಹಿಳೆಯೊಬ್ಬರು ಸಬ್‌ವೇಯಲ್ಲಿ ರೈಲಿನ ಹೊರಭಾಗದಿಂದ ಟಕ್ ಟಕ್ ಎಂದು ಸದ್ದು ಮಾಡುತ್ತಾಳೆ. ಕುಳಿತಿದ್ದವರು ತಿರುಗಿ ನೋಡುತ್ತಿದ್ದಂತೆ ಆಕೆ ಫ್ಲಯಿಂಗ್ ಕಿಸ್ ಮಾಡುತ್ತಾಳೆ. ಪ್ರತಿಯೊಬ್ಬರು ಆಕೆಗೆ ಮತ್ತೆ ಫ್ಲೈಯಿಂಗ್ ಕಿಸ್ ಮಾಡುವ ಮೂಲಕ ಸೊಗಸಾದ ನಗು ಬೀರಿದ್ದಾರೆ. ಪ್ರತಿಯೊಬ್ಬರ ಪುರುಷರ ರಿಯಾಕ್ಷನ್ ಕೂಡ ಇಲ್ಲಿ ಬಹಳ ಅದ್ಭುತ ಅಮೋಘ, ಕೆಲವರು ಫ್ಲೈಯಿಂಗ್ ಕಿಸ್ ಮಾಡಿದರೆ ಮತ್ತೆ ಕೆಲವರು ಹೃದಯದ ಸಿಂಬಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಭಾರತದಲ್ಲಾದರೆ ಹೇಗಿರಬಹುದು?

ಅಂದಹಾಗೆ ಈ ವೈರಲ್ ವೀಡಿಯೋ ವಿದೇಶದ್ದೂ ಭಾರತದಲ್ಲಿ ಈ ರೀತಿ ಮಾಡುವುದಕ್ಕೆ ಸಾಧ್ಯವೂ ಇಲ್ಲ ಬಿಡಿ. ಹುಡುಗಿಯೊಬ್ಬಳು ನಡುರಸ್ತೆಯಲ್ಲಿ ನಿಂತು ಫ್ಲೈಯಿಂಗ್ ಕಿಸ್ ಮಾಡೋದಿರಲಿ ಅಪರಿಚಿತರಿಗೆ ಒಂದು ನಗು ಬೀರಿದರೆ ಆಕೆಯ ಸುತ್ತಲೂ ಜನ ಸೇರಿಯೇ ಬಿಡ್ತಾರೆ. ಬಹುತೇಕರು ಆಕೆ ಕಾಲ್‌ಗರ್ಲ್ ಇರಬಹುದಾ ಎಂದು ನೋಡುವವರೇ ಹೆಚ್ಚು ಇನ್ನು ಪ್ಲೈಯಿಂಗ್ ಕಿಸ್ ಫ್ರಾಂಕ್ ಮಾಡೋಕೆ ಹೋದ್ರೆ ಆಕೆಯ ಜೊತೆ ಜೊತೆಗೆ ರಕ್ಷಣೆಗೆ ಅಂತ ಬಾಡಿಗಾರ್ಡ್‌ಗಳನ್ನು ಒಟ್ಟಿಗೆ ಬಿಡಬೇಕಾಗಬಹುದು ಅಲ್ವಾ?

ಭಾರತೀಯ ನೆಟ್ಟಿಗರ ರಿಯಾಕ್ಷನ್ ಹೇಗಿದೆ ನೋಡಿ?

ಪರಿಸ್ಥಿತಿ ಹೀಗಿರುವಾಗ ಈ ವಿದೇಶದ ವೀಡಿಯೋಗೆ ಭಾರತೀಯರು ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. samuel__0001__ ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಭಾರತದ ರೈಲಿನಲ್ಲಿ ಯಾರೋ ಒಬ್ಬರೂ ಹೀಗೆ ಮಾಡುವುದನ್ನು ಊಹೆ ಮಾಡಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ನೀವೆ ಒಮ್ಮೆ ಟ್ರೈ ಮಾಡಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದು, ಅದಕ್ಕೆ ಅವರು ನನ್ನ ಕಂಬಿ ಹಿಂದೆ ಕೂರಿಸಬೇಕು ಅಂತ ಬಯಸಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಬಹುಶಃ ಭಾರತದಲ್ಲಾದರೆ ಹುಡುಗ ಆಕೆಯನ್ನು ಮುಂದಿನ ಜನ್ಮದವರೆಗೂ ಫಾಲೋ ಮಾಡಲು ಶುರು ಮಾಡ್ತಿದ್ದ ಎಂದು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಕೂಡ ಇದೇ ರೀತಿ ಸೋಶಿಯಲ್ ಎಕ್ಸ್‌ಪರಿಮೆಂಟ್ ಮಾಡಬೇಕು ಎಂದು ನಾನು ಬಯಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇನ್ನೂ ಕೆಲವರು ವೀಡಿಯೋದಲ್ಲಿ ಫ್ಲೈಯಿಂಗ್ ಕಿಸ್‌ಗೆ ಪ್ರತಿಕ್ರಿಯಿಸಿದ ಯುವಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಹೀಗೆ ಮಾಡಿದ್ರೆ ಅವರು ಮನೆವರೆಗೆ ಹುಡುಕಿಕೊಂಡು ಬಂದು ಬಿಡ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ...

ಇದನ್ನೂ ಓದಿ: ಮಳೆಯಿಂದ ರಕ್ಷಿಸಿಕೊಳ್ಳಲು ಮರ್ಲಿನ್ ಮನ್ರೋ ಸ್ಕರ್ಟ್‌ ಕೆಳಗೆ ಆಶ್ರಯ ಪಡೆದ ಜನ: ಫೋಟೋ ಭಾರಿ ವೈರಲ್

ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ: ಎಸ್‌ಐಟಿಯಿಂದ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯ ಬಂಧನ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!