ಯಾರು ಈ ಲಿಂಡಾ ಡಿಸೋಜಾ? ವಯಸ್ಕರ ವಿಡಿಯೋ ವೇದಿಕೆಯಲ್ಲಿ ರಹಸ್ಯ ಖಾತೆ ಈಕೆಯ ಹೆಸರಿನಲ್ಲಿದೆ.
ಲಂಡನ್: ಜೈಲಿನಲ್ಲಿ ಕೈದಿ (Prisoner) ಜೊತೆ ಲೈಂಗಿಕ ಕ್ರಿಯೆ (Physical Relationship) ನಡೆಸಿದ ಮಹಿಳಾ ಪೊಲೀಸ್ ಅಧಿಕಾರಿ (Woman Police Officer) ಹಿನ್ನೆಲೆ ಬಹಿರಂಗವಾಗಿದೆ. ಮಹಿಳಾ ಪೊಲೀಸ್ ಅಧಿಕಾರಿಯನ್ನು 31 ವರ್ಷದ ಲಿಂಡಾ ಡಿ ಸೋಜಾ ಎಂದು ಗುರುತಿಸಲಾಗಿದೆ. ಜೈಲಾಧಿಕಾರಿಯಾಗಿದ್ದ ಲಿಂಡಾ ಪುರುಷರ ಸೆಲ್‌ನೊಳಗೆ (Men Prisoner Cell) ಹೋಗಿ ಅಲ್ಲಿಯ ಕೈದಿ ಲೈಂಗಿಕ ಸಂಪರ್ಕ ಹೊಂದಿದ್ದಳು. ಈ ವಿಡಿಯೋವನ್ನು ಮತ್ತೋರ್ವ ಕೈದಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದನು. ಆದ್ರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಯಾಗಿದೆ. ತನ್ನ ಲೈಂಗಿಕ ಸಂಪರ್ಕದ ವಿಡಿಯೋ ವೈರಲ್ (Video viral) ಆಗುತ್ತಿದ್ದಂತೆ ಲಿಂಡಾ ಡಿಸೋಜಾ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಇತ್ತ ಜೈಲಿನ ವಕ್ತಾರರು ಸಹ ನಾವು ಮಹಿಳಾಧಿಕಾರಿಯನ್ನು ಅಮಾನತುಗೊಳಿಸಿ (Officer Suspend) ಆದೇಶ ಹೊರಡಿಸಿದ್ದೇವೆ ಎಂದು ಹೇಳಿದ್ದಾರೆ.
ಯಾರು ಈ ಲಿಂಡಾ ಡಿಸೋಜಾ?
undefined
ಲಿಂಡಾ ಡಿಸೋಜಾ ಇಂಗ್ಲೆಂಡ್‌ನ ವಾಂಡ್ಸ್ ವರ್ಥ್ ಹೆಚ್‌ಎಂಪಿ ಜೈಲಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಳು. ಈ ವಿಡಿಯೋ ವೈರಲ್ ಬಳಿಕ ಪ್ರತಿಕ್ರಿಯೆ ನೀಡಿರುವ ಲಿಂಡಾ ಸೋದರಿ ಅಂಡ್ರೈನಾ, ನನ್ನ ಸೋದರಿ ಮತ್ತು ಆಕೆಯ ಗಂಡ ನಾತನ್ 2023ರಲ್ಲಿ ಖ್ಯಾತ ಓಪನ್ ಹೌಸ್: ದಿ ಗ್ರೇಟ್ ಸೆಕ್ಸ್ ಎಕ್ಸಿಪಿರಿಯಮಂಟ್ ರಿಯಾಲಿಟಿ ಶೋದ ಸ್ಪರ್ಧಿಯಾಗಿದ್ದರು. ಇದರ ಜೊತೆಗೆ ಅಡಲ್ಟ್ ವಿಡಿಯೋ ಪ್ಲಾಟ್‌ಫಾರಂನಲ್ಲಿ ಲಿಂಡಾ ಸೀಕ್ರೆಟ್ ಅಕೌಂಟ್ ಸಹ ಹೊಂದಿದದ್ದಾಳೆ. ಅಲ್ಲಿ ಆಕೆಯ ನಗ್ನ ವಿಡಿಯೋಗಳಿವೆ ಎಂದು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗಿರೋ ವಿಡಿಯೋದಲ್ಲಿ ಲಿಂಡಾ ಡಿಸೋಜಾ ಮುಖ ಅಸ್ಪಷ್ಟವಾಗಿತ್ತು.
ಚಡ್ಡಿಯೊಳಗೆ ಇತ್ತು ನಾಗರಹಾವು; ನಿದ್ದೆಯಲ್ಲಿದ್ದವ ಎಚ್ಚರವಾದಾಗ ಆತ ಮಾಡಿದ್ದು 'ಅದನ್ನ' ಅಷ್ಟೇ'..!
ವಿಡಿಯೋ ನಮ್ಮದೇ ಜೈಲಿನದ್ದು!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಾಂಡ್ಸ್ ವರ್ಥ್ ಹೆಚ್‌ಎಂಪಿ ಜೈಲಿನ ಅಧಿಕಾರಿಗಳು, ಆ ದೃಶ್ಯಗಳು ನಮ್ಮ ಕಾರಾಗೃಹದಲ್ಲಿಯೇ ಚಿತ್ರೀಕರಣ ಮಾಡಲಾಗಿದ್ದು ಎಂದು ಒಪ್ಪಿಕೊಂಡಿದ್ದರು. 36 ಸೆಕೆಂಡಿನ ವಿಡಿಯೋದಲ್ಲಿ ಕೈದಿ ಕೊನೆಗೆ ಇದು ವಾಂಡ್ಸ್ ವರ್ಥ್ ಜೈಲು ಎಂದು ಹೇಳಿಕೊಂಡಿದ್ದನು. ಇನ್ನು ಜೈಲಿನ ಇನ್‌ಸ್ಪೆಕ್ಟರ್ ಚಾರ್ಲಿ ಟೇಲರ್ ನ್ಯಾಯ ಕಾರ್ಯದರ್ಶಿ ಅಲೆಕ್ಸ್ ಚಾಕ್‌ಗೆ ಪತ್ರ ಬರೆದು, ಕಾರಾಗೃಹದ ಭದ್ರತೆಯನ್ನು ಹೆಚ್ಚಿಸುವ ಕುರಿತು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಿಡಿಯೋ ಸಂಬಂಧ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕಾನೂನು ಇಲಾಖೆಯ ಸಲಹೆಯನ್ನು ಜೈಲಿನ ಅಧಿಕಾರಿಗಳು ಕೇಳಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಕೈದಿಯೋರ್ವ ಸಿಗರೇಟ್ ಸೇದುತ್ತಾ ಮೊಬೈಲ್ ಹಿಡಿದುಕೊಂಡು, ಹಾಯ್, ನಾವು ಇವತ್ತು ಇತಿಹಾಸ ಸೃಷ್ಟಿಸುತ್ತಿದ್ದೇವೆ. ಅದೇನೂ ಅಂತೀರಾ? ಇಲ್ಲಿ ನೋಡಿ ಎಂದು ಮಹಿಳಾ ಸಿಬ್ಬಂದಿ ಜೊತೆ ತನ್ನ ಸಹ ಕೈದಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯವನ್ನು ತೋರಿಸುತ್ತಾನೆ. ಇದೇ ವಿಡಿಯೋದಲ್ಲಿ ಬೆಡ್ ಮೇಲೆ ಕೈದಿಗಳ ಸಮವಸ್ತ್ರ ಬಿದ್ದಿರೋದನ್ನು ನೀವು ಗಮನಿಸಬಹದು. ಅಷ್ಟರಲ್ಲೇ ಸೆಲ್‌ನೊಳಗೆ ಮತ್ತೋರ್ವ ಕೈದಿ ಬರೋದು ಕಾಣಿಸುತ್ತದೆ. ಆಗ ಸ್ವಲ್ಪ ವೇಟ್ ಮಾಡು ಇದು ವಾಂಡ್ಸ್ ವರ್ಥ್ ಹೆಚ್‌ಎಂಪಿ ಜೈಲು ಎಂದು ಹೇಳುತ್ತಾನೆ. ವಿಡಿಯೋ ವೈರಲ್ ಬಳಿಕ ಲಿಂಡಾ ಡಿ ಸೋಜಾಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಜೈಲಿನಲ್ಲಿ ಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯ ಸೆಕ್ಸ್ ವಿಡಿಯೋ ವೈರಲ್