Latest Videos

ಬುಸುಗುಡುತ್ತಾ ಕಚ್ಚಲು ಬಂದ ವಿಷಕಾರಿ ಹಾವನ್ನು ಮಕಾಡೆ ಮಲಗಿಸಿದ ಮುಸ್ಲಿಂ ಬಾಬಾ!

By Sathish Kumar KHFirst Published Jun 29, 2024, 6:12 PM IST
Highlights

ಕಾಡಿನ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಬುಸುಗುಡುತ್ತಾ ಕಚ್ಚಲು ಬಂದ ವಿಷಕಾರಿ ಹಾವೊಂದನ್ನು ಮುಸ್ಲಿಂ ಬಾಬಾ ಬೈದು ಬೆದರಿಕೆ ಹಾಕಿ ಮಾತುಗಳಿಂದಲೇ ಮಕಾಡೆ ಮಲಗಿಸಿರುವ ವಿಡಿಯೋ ವೈರಲ್ ಆಗುತ್ತಿದೆ..

ನಾವು ಸಾಮಾನ್ಯವಾಗಿ ಹಾವನ್ನು ನೋಡಿದರೆ ಮಾರುದ್ದ ದೂರು ಹೋಗಿ ಜೀವ ಉಳಿಸಿಕೊಳ್ಳಯತ್ತೇವೆ. ಇನ್ನು ಕೆಲವರು ಹಾವನ್ನು ಹೊಡೆಯಿರಿ, ಓಡಿಸಿ ಎನ್ನುತ್ತಾರೆ. ಬೆರಳೆಣಿಕೆ ಜನರು ಮಾತ್ರ ಹಾವನ್ನು ಹಿಡಿದು ಸಂರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ಆದರೆ, ಇಲ್ಲೊಬ್ಬ ಮುಸ್ಲಿಂ ಬಾಬಾ ಕಾಡಿನಲ್ಲಿ ಬುಸುಗುಡುತ್ತಲೇ ಹೋಗುತ್ತಿದ್ದ ವಿಷಕಾರಿ ಹಾವನ್ನು ನೋಡಿ, ಅದನ್ನು ಅಡ್ಡಗಟ್ಟಿ ಸಂಭಾಷಣೆ ನಡೆಸುತ್ತಾ ಬೆದರಿಕೆ ಹಾಕಿ ಮಕಾಡೆ ಮಲಗಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

'ಹಾವನ್ನು ಕಂಡರೆ ಭಯಪಡುವವರ ನಡುವೆ ಇಲ್ಲೊಬ್ಬ ಮುಸ್ಲಿಂ ಬಾಬಾ ಯಾವುದೇ ಸಾಧನವನ್ನೂ ಬಳಸದೇ ತನ್ನ ಮಾತಿನಿಂದಲೇ ಹಾವಿನೊಂದಿಗೆ ಸಂಭಾಷಣೆ ಮಾಡಿ ಅದನ್ನು ಮಲಗಿಸಿದ್ದಾನೆ. ಈ ಘಟನೆ ನಡೆದಿರುವುದು ಮೊರಕ್ಕೋದಲ್ಲಿ ಎಂದು ತಿಳಿದುವಂದಿದೆ. ಮೊರಾಕ್ಕೋದ ಇಸ್ಸಾವಾ ಎಂದು ಕರೆಯಲ್ಪಡುವ ಕೆಲ ಗುಂಪಿನ ಜನರು ಹಾವಿನ ಮೇಲೆ ಮಂತ್ರಹಾಕಿ ಸಂಭಾಷಣೆ ನಡೆಸಿ ಅವುಗಳನ್ನು ತಮ್ಮ ಕೈಗೊಂಬೆ ಮಾಡಿಕೊಳ್ಳುತ್ತಾರೆ. ಹಾವುಗಳಿಗೆ ಬೆದರಿಗೆ ಹಾಕಿ ಅವುಗಳು ಪುನಃ ಅವರ ಮುಂದೆ ಕಾಣಿಸಿಕೊಳ್ಳದಂತೆ ಬೇರೆಡೆ ಹೋಗಲು ಸೂಚನೆ ನೀಡುತ್ತಾರೆ ಎಂದು ತಿಳಿದುಬಂದಿದೆ.

ಒಬ್ಬನೊಂದಿಗೆ ಜೀವನದ ಸುಖ ಅನುಭವಿಸಲಾರೆ ಎನ್ನುತ್ತಲೇ 3 ದಿನದಲ್ಲಿ 60 ಮದುವೆಯಾದ ಮಹಿಳೆ!

ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಡಿನ ದಾರಿಯಲ್ಲಿ ಬುಸುಗುಡುತ್ತಾ ಸಿಟ್ಟಿನಿಂದ ಹೋಗುತ್ತಿದ್ದ ಹಾವು ಮುಸ್ಲಿಂ ಬಾಬಾನ ಎದುರಿಗೆ ಬಂದಿದೆ. ಆಗ ಹಾವನ್ನು ನೋಡಿ ತನ್ನೆಡೆಗೆ ಕರೆದಿದ್ದಾನೆ. ಮುಸ್ಲಿಂ ಬಾಬಾನ ಹತ್ತಿರ ಹೋಗುತ್ತಿದ್ದಂತೆ ಹಾವಿನ ತಲೆಯ ಮೇಲೆ ಕೈ ಇಟ್ಟ ಬಾಬಾ ಅಲ್ಲಾಹುವಿನ ಕೆಲವು ಮಂತ್ರಗಳನ್ನು ಹೇಳುತ್ತಾ ಹಾವಿನ ಮೇಲೆ ಕೈ ಒತ್ತಿ ಹಿಡಿದು ಜೋರಾಗಿ ಒಂದೆರೆಡು ಮಾತನ್ನು ಹೇಳುತ್ತಾನೆ. ನಂತರ, ಹಾವು ಸಂಪೂರ್ಣವಾಗಿ ಮುದುಡಿಕೊಂಡು ಮಲಗಿಬಿಡುತ್ತದೆ. ಮಲಗಿದ್ದ ಹಾವಿಗೆ ನೀನು ಇಲ್ಲಿಯೇ ಇರು ನಾನು ಚೀಲ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ತನ್ನ ಬಳಿಯಿದ್ದ ಚೀಲ ತಂದು ಪುನಃ ಮಲಗಿದ್ದ ಹಾವಿನ ಬಳಿ ಮಾತನಾಡುತ್ತಾನೆ.

ನಂತರ, ತನ್ನ ಕೈಯಲ್ಲಿದ್ದ ಹರಿತವಾಗ ಖತ್ತಿಯನ್ನು ಕೆಳಗಿಟ್ಟು ಚೀಲದಲ್ಲಿ ಹಾಕಿಕೊಳ್ಳಲು ಮುಂದಾಗುತ್ತಾನೆ. ಆದರೆ, ಚೀಲದಲ್ಲಿ ಹಾಕಿಕೊಳ್ಳದೇ 'ಮುಂದಿನ ಬಾರಿ ನಾನು ನಿನ್ನನ್ನು ಇಲ್ಲಿ ನೋಡಿದರೆ ನಾನು ನಿನ್ನ ತಲೆಯನ್ನು ಕತ್ತರಿಸಿ ನಿಮ್ಮ ಮಾಂಸವನ್ನು ತಿನ್ನುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ.  ಜನವಸತಿ ಪ್ರದೇಶದಲ್ಲಿ ನೀನು ಕಾಣಿಸಿಕೊಳ್ಳಬಾರದು ಎಂದು ಹೇಳಿ ಹಾವನ್ನು ಸಾಯಿಸದೇ ಹೊರಟು ಹೋಗುತ್ತಾನೆ.

ಜೈಲಿನಲ್ಲಿ ಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯ ಸೆಕ್ಸ್ ವಿಡಿಯೋ ವೈರಲ್

ಹಾವು ಕಂಡರೆ ನಮ್ಮ ದೇಶದಲ್ಲಿ ಏನು ಮಾಡ್ತಾರೆ ಗೊತ್ತಾ? 
ಹಾವುಗಳು ಕಚ್ಚಿದರೆ ಪ್ರಾಣಕ್ಕೆ ಕುತ್ತು ಎಂಬ ಭಯದಿಂದ ನಾವು ಹಾವು ಕಂಡರೆ ದೂರವೇ ಇದ್ದು ಜೀವ ಉಳಿಸಿಕೊಳ್ಳುತ್ತೇವೆ. ಇನ್ನು ಪರಿಸರ ತಜ್ಞರು ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವು ಜಾತಿಯ ಹಾವುಗಳ ಮಾತ್ರ ವಿಷಕಾರಿಯಾಗಿವೆ. ನೀವು ಹಾವನ್ನು ನೋಡಿದರೆ ಹೊಡೆದು ಸಾಯಿಸದೇ ಹಾವು ಹಿಡಿಯುವವರಿಗೆ ಕರೆ ಮಾಡಿ ಮಾಹಿತಿ ನೀಡಿ ರಕ್ಷಣೆ ಮಾಡಿ ಕಾಡಿಗೆ ಬಿಡಬೇಕು ಎಂದು ಹೇಳುತ್ತಾರೆ. ಇನ್ನು 90ರ ದಶಕದಲ್ಲಿ ಹಾವಾಡಿಗರ ಸಂಖ್ಯೆ ಹೆಚ್ಚಾಗಿತ್ತು. ಹಾವುಗಳನ್ನು ಹಿಡಿದು, ಅವುಗಳ ಹಲ್ಲು ಕಿತ್ತು ಬುಟ್ಟಿಯಲ್ಲಿಟ್ಟು ಹಾವನ್ನು ಆಡಿಸಿ ಅದನ್ನು ನೋಡಿದ ಜನರು ಕೊಡುವ ಪುಡಿಗಾಸನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದರು. ಇದಕ್ಕೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಇಲ್ಲದ ಕಾರಣ ಹಾವಾಡಿಗರು ತಮ್ಮ ವೃತ್ತಿ ನಿಲ್ಲಿಸಿದ್ದಾರೆ. ಇನ್ನು ಹಾವು ಸಂರಕ್ಷಣೆ ಮಾಡುವವರು ಹೆಚ್ಚಾಗುತ್ತಿದ್ದು, ನಗರ, ಪಟ್ಟಣ ಹಾಗೂ ಗ್ರಾಮಗಳ ಜನವಸತಿ ಪ್ರದೇಶದಲ್ಲಿ ಹಾವು ಕಂಡರೆ ಅದನ್ನು ಹಿಡಿದು ಕಾಡಿನೊಳಗೆ ಬಿಡುತ್ತಾರೆ.

click me!