254 ಭಾರತೀಯರಿಗೆ ಇರಾನ್‌ನಲ್ಲಿ ಸೋಂಕು?

Kannadaprabha News   | Asianet News
Published : Mar 18, 2020, 07:41 AM IST
254 ಭಾರತೀಯರಿಗೆ ಇರಾನ್‌ನಲ್ಲಿ ಸೋಂಕು?

ಸಾರಾಂಶ

ವಿಶ್ವದಲ್ಲೇ ಅತಿಹೆಚ್ಚು ಕೊರೋನಾ ಸೋಂಕುಪೀಡಿತರು ಬೆಳಕಿಗೆ ಬಂದಿರುವ ಇರಾನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ಪೈಕಿ 254 ಭಾರತೀಯರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ

ನವದೆಹಲಿ (ಮಾ.18]: ಚೀನಾ ಮತ್ತು ಇಟಲಿ ಹೊರತುಪಡಿಸಿದರೆ ವಿಶ್ವದಲ್ಲೇ ಅತಿಹೆಚ್ಚು ಕೊರೋನಾ ಸೋಂಕುಪೀಡಿತರು ಬೆಳಕಿಗೆ ಬಂದಿರುವ ಇರಾನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ಪೈಕಿ 254 ಭಾರತೀಯರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ನಾನಾ ಕಾರಣಗಳಿಂದಾಗಿ ಫೆಬ್ರವರಿ ತಿಂಗಳಿನಿಂದ ಇರಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ 800 ಭಾರತೀಯರ ಪೈಕಿ 254 ಜನರಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಇರಾನ್‌ನಲ್ಲಿನ ಭಾರತೀಯರ ಚಿಕಿತ್ಸೆಗೆಂದು ಭಾರತದಿಂದ ತೆರಳಿರುವ ಭಾರತೀಯರ ವೈದ್ಯರ ತಂಡ, ತಪಾಸಣೆ ಬಳಿಕ ಇಂಥದ್ದೊಂದು ವರದಿ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಈ 800 ಜನರ ತಂಡ ಲಡಾಖ್‌ನಿಂದ ಇರಾನ್‌ನ ಧಾರ್ಮಿಕ ಸ್ಥಳಗಳಿಗೆ ಯಾತ್ರೆ ತೆರಳಿತ್ತು ಎನ್ನಲಾಗಿದೆ.

ಹೆಚ್ಚಾಗುತ್ತಿರುವ ಕೋರೋನಾ ಕೇಸ್: ಮತ್ತೊಂದು ವಾರ ಕರ್ನಾಟಕ ಸ್ತಬ್ಧ..?..

ಈ ನಡುವೆ ಸುದ್ದಿಯನ್ನು ಖಚಿತಪಡಿಸಲಾಗದು ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಇರಾನ್‌ನಲ್ಲಿ ಎಲ್ಲಾ ಭಾರತೀಯರನ್ನು ಅಲ್ಲಿರುವ ನಮ್ಮ ರಾಯಭಾರ ಕಚೇರಿ ಉತ್ತಮವಾಗಿ ನೋಡಿಕೊಳ್ಳುತ್ತಿದೆ. ಅವರೆಲ್ಲರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದೆ ಎಂದಷ್ಟೇ ಹೇಳಿದೆ. ಆದರೆ ಅದು ಸುದ್ದಿಯನ್ನು ನಿರಾಕರಿಸಿಯೂ ಇಲ್ಲ.

ಇರಾನ್‌ನಲ್ಲಿ ಈವರೆಗೆ 16170 ಜನರಿಗೆ ಸೋಂಕು ತಗುಲಿದ್ದು, 988 ಜನ ಸಾವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ