Latest Videos

ಸಮುದ್ರ ದಡದಲ್ಲಿ ಮಕ್ಕಳ ತಪ್ಪಿನಿಂದಾಗಿ ತಾಯಿಗೆ ಬಿತ್ತು 73 ಲಕ್ಷ ದಂಡ

By Mahmad RafikFirst Published May 26, 2024, 12:01 PM IST
Highlights

ಸಮುದ್ರ ದಂಡೆಯಲ್ಲಿ ಸಮಯ ಕಳೆದ ನಂತರ ಹಿಂದಿರುಗುತ್ತಿರುವ ವೇಳೆ ಅಲ್ಲಿಗೆ ಬಂದ ಫಿಶ್ ಆಂಡ್ ವೈಲ್ಡ್‌ಲೈಫ್ ಅಧಿಕಾರಿ ಮಹಿಳೆಗೆ ಘಟನೆಯನ್ನು ವಿವರಿಸಿ 73 ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂದು ಬಿಲ್ ನೀಡಿದ್ದಾರೆ. 

ಸಮುದ್ರ ಕಿನಾರೆಯಲ್ಲಿ ಮಕ್ಕಳು ಮಾಡಿದ ತಪ್ಪಿನಿಂದಾಗಿ ತಾಯಿಗೆ 73 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಬಿಲ್ ನೀಡಲಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿದೆ. ಮಹಿಳೆಯೊಬ್ಬರು ತಮ್ಮ ಮಕ್ಕಳ ಜೊತೆ ಸಮುದ್ರ ಕಿನಾರೆಗೆ ಹೋಗಿದ್ದರು. ಈ ವೇಳೆ ಮಹಿಳೆಗೆ ಭಾರೀ ಮೊತ್ತದ ದಂಡ ಬಿದ್ದಿದೆ. 

ಸಮುದ್ರ ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ಶಂಖಗಳು ಅಂತ ತಿಳಿದು 72 ಕ್ಲಾಮ್‌ಗಳನ್ನು (ಒಂದು ರೀತಿಯ ಶಂಖದ ಹುಳು) ಸಂಗ್ರಹಿಸಿದ್ದಾರೆ. ಕ್ಲೈಮ್‌ಗಳು ಚಿಪ್ಪುಗಳಲ್ಲಿ ಬೆಳೆಯುವ ಜೀವಿಗಳು. ನೀರಿನಿಂದ ಹೊರತೆಗೆದ್ರೆ ಈ ಜೀವಿಗಳು ಸಾಯುತ್ತವೆ. ಸಮುದ್ರ ದಂಡೆಯಲ್ಲಿ ಸಮಯ ಕಳೆದ ನಂತರ ಹಿಂದಿರುಗುತ್ತಿರುವ ವೇಳೆ ಅಲ್ಲಿಗೆ ಬಂದ ಫಿಶ್ ಆಂಡ್ ವೈಲ್ಡ್‌ಲೈಫ್ ಅಧಿಕಾರಿ ಮಹಿಳೆಗೆ ಘಟನೆಯನ್ನು ವಿವರಿಸಿ 73 ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂದು ಬಿಲ್ ನೀಡಿದ್ದಾರೆ. 

ಮಕ್ಕಳಿಗೆ ಈ ವಿಷಯ ಗೊತ್ತಿರಲಿಲ್ಲ

ಈ ಕುರಿತು ಎಬಿಸಿ30 ಜೊತೆ ಮಾತನಾಡಿರುವ ಮಹಿಳೆ, ನನ್ನ ಮಕ್ಕಳು ಶಂಖ, ಚಿಪ್ಪುಗಳೆಂದು ತಿಳಿದು ಸಂಗ್ರಹಿಸಿದ್ದಾರೆ. ಆದ್ರೆ ಅವುಗಳು ಕ್ಲಾಮ್‌ ಎಂದು ಮಕ್ಕಳಿಗೆ ತಿಳಿದಿರಲಿಲ್ಲ. ಹೊರಡುವ ಮೊದಲು ನನ್ನ ಬಳಿ ಬಂದು ಅಧಿಕಾರಿ ಚಾನೆಲ್ ನೀಡಿದಾಗ ನನಗೆ ಶಾಕ್ ಆಯ್ತು ಎಂದು ಹೇಳಿದ್ದಾರೆ. 

ಚಿಪ್ಪಿನಿಂದ ಹೊರಬಂದ್ರೆ ಅಥವಾ ಬೇರ್ಪಟ್ಟರೆ ಸಾಯುತ್ತವೆ

ಸಾಮಾನ್ಯವಾಗಿ ಅಲೆಗಳ ಜೊತೆಯಲ್ಲಿ ದಡಕ್ಕೆ ಚಿಪ್ಪು ಮತ್ತು ಸಣ್ಣ ಶಂಖಗಳು ಬಂದು ಬೀಳುತ್ತವೆ. ಆದ್ರೆ ಕ್ಲಾಮ್‌ಗಳು ಹಾಗಲ್ಲ. ಅವುಗಳನ್ನು ತುಂಬಾನೇ ಹುಡುಕಬೇಕಾಗುತ್ತದೆ. ಆದರೆ ಮಕ್ಕಳಿಗೆ ಕ್ಲಾಮ್‌ಗಳೇ ಸಿಕ್ಕಿವೆ. ಕ್ಲಾಮ್‌ಗಳನ್ನು ಚಿಪ್ಪಿನಿಂದ ಹೊರಗಡೆ ತೆಗೆದ್ರೆ ಸಾಯುತ್ತವೆ. 

ವಿಶ್ವದ ಮೊದಲ ತಲೆಕಸಿ; ದೇಹಕ್ಕೆ ರುಂಡ ಸೇರಿಸುವ ವಿಡಿಯೋ ನೋಡಿ ಶಾಕ್ ಆದ ಜನರು

ದಂಡದ ಪ್ರಮಾಣ ಕಡಿತಗೊಳಿಸಿದ ನ್ಯಾಯಾಲಯ

ಮಹಿಳೆ ತಮ್ಮಿಂದಾದ ತಪ್ಪನ್ನು ನ್ಯಾಯಾಧೀಶರ ಮುಂದೆ ಒಪ್ಪಿಕೊಂಡು ನಡೆದ ಘಟನೆಯನ್ನು ವಿವರಿಸಿದ್ದಾರೆ. ಎಲ್ಲಾ ವಿವರಣೆಯನ್ನು ಕೇಳಿದ ಸ್ಯಾನ್ ಲೂಯಿಸ್ ಓಬಿಸ್ಪೋ ಕೌಂಟಿ ನ್ಯಾಯಾಧೀಶರು ಮಹಿಳೆಗೆ 500 ಡಾಲರ್ (41,000 ರೂ) ದಂಡ ವಿಧಿಸಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ನ್ಯೂಸ್ ವರದಿ ಮಾಡಿದೆ. ಈ ವೇಳೆ ಪೋಷಕರು ಮಕ್ಕಳನ್ನು ಸಮುದ್ರ ಕಿನಾರೆಗೆ ಕರೆದುಕೊಂಡು ಹೋಗುವಾಗ ಅಲ್ಲಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. 

ಅಲಾಸ್ಕದಲ್ಲಿ ಆರೆಂಜ್‌ ಬಣ್ಣಕ್ಕೆ ಬದಲಾದ ನದಿ ನೀರು, ಸಂಶೋಧಕರಿಂದ ಎಚ್ಚರಿಕೆ

ಕ್ಲಾಮ್‌ ಚಿಪ್ಪುಮೀನು ಜಾತಿಗೆ ಸೇರುವ ಜಲಚರ ಪ್ರಾಣಿಗಳು.ಈ ಚಿಪ್ಪುಮೀನು ನಾಲ್ಕೂವರೆ ಇಂಚುಗಳವರೆಗೆ ಬೆಳೆಯುತ್ತವೆ ನಂತರ ಮೊಟ್ಟೆಗಳನ್ನು ಇರಿಸುತ್ತವೆ. ಬೀಚ್‌ಗೆ ಹೋಗುವ ಮೊದಲು ಎಲ್ಲರೂ ಇಂತಹ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಕ್ಲಾಮ್‌ಗಳು ಚಿಪ್ಪು ಜೊತೆ ಅಂಟಿಕೊಂಡಿದ್ದರೆ ಅವುಗಳು ಜೀವಂತವಾಗಿವೆ ಎಂದು ತಿಳಿದುಕೊಳ್ಳಬೇಕು ಎಂದು ಮೀನು ಮತ್ತು ವನ್ಯಜೀವಿ ಇಲಾಖೆಯ ಲೆಫ್ಟಿನೆಂಟ್ ಮ್ಯಾಥ್ಯೂ ಗಿಲ್ ಹೇಳುತ್ತಾರೆ. 

click me!