ಡೆಪಾಸಿಟ್ ವಾಪಸ್ ನೀಡದ ಬ್ಯೂಟಿ ಪಾರ್ಲರ್‌... ಕೋಪಗೊಂಡ ವಧು ಕತ್ರಿ ತಗೊಂಡು ಏನ್‌ ಮಾಡಿದ್ಲು ನೋಡಿ....

Suvarna News   | Asianet News
Published : Jan 17, 2022, 06:41 PM IST
ಡೆಪಾಸಿಟ್ ವಾಪಸ್ ನೀಡದ ಬ್ಯೂಟಿ ಪಾರ್ಲರ್‌... ಕೋಪಗೊಂಡ ವಧು ಕತ್ರಿ ತಗೊಂಡು ಏನ್‌ ಮಾಡಿದ್ಲು ನೋಡಿ....

ಸಾರಾಂಶ

ಆರ್ಡರ್‌ ರದ್ದು ಮಾಡಿದ್ದಕ್ಕೆ  ಠೇವಣಿ ವಾಪಸ್‌ ನೀಡದ ಸಲೂನ್‌ ಕೋಪಗೊಂಡ ವಧು ಮಾಡಿದ್ದೇನು...? ನೋಡಿ ಚೀನಾದ ವೈರಲ್ ವಿಡಿಯೋ  

ಚೀನಾ(ಜ.17): ಆರ್ಡರ್‌ ರದ್ದು ಮಾಡಿದ್ದಕ್ಕೆ ಚೀನಾದ ವಧುಗಳನ್ನು ಶೃಂಗಾರಗೊಳಿಸುವ ಸಲೂನ್‌ ಒಂದು ವಧು ನೀಡಿದ ಠೇವಣಿ ಹಣವನ್ನು ವಾಪಸ್‌ ನೀಡಲು ನಿರಾಕರಿಸಿದೆ. ಇಷ್ಟಕ್ಕೆ ಕೋಪಗೊಂಡ ವಧು ಅಲ್ಲಿದ್ದ ಮದುವೆ ಸಮಯದಲ್ಲಿ ಹಾಕುವ ಬ್ರೈಡಲ್‌ ಡ್ರೆಸ್‌ಗಳಿಗೆ ಕತ್ತರಿ ಹಾಕಿದ್ದಾಳೆ. ಸಲೂನ್‌ಗೆ ಬಂದ ಮಹಿಳೆ ತನ್ನ ಆರ್ಡರ್‌ ರದ್ದಾಗಿದ್ದು, ಠೇವಣಿ ವಾಪಸ್ ನೀಡುವಂತೆ ಸಲೂನ್‌ ಅವರ ಬಳಿ ಕೇಳಿದ್ದಾಳೆ. ಆದರೆ ಅವರು ಇದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆಕೆ ಸಲೂನ್‌ನವರಿಗೆ ಬುದ್ಧಿ ಕಲಿಸಲು ಮುಂದಾಗಿದ್ದು, ಅಲ್ಲೇ ಇದ್ದ ಕತ್ತರಿಯನ್ನು ತೆಗೆದುಕೊಂಡು ಒಂದೊಂದೇ ಬ್ರೈಡಲ್‌ ಡ್ರೆಸ್‌ಗಳಿಗೆ ಕತ್ತರಿ ಹಾಕುತ್ತಾ ಬಂದಿದ್ದಾಳೆ.

ವಧು ಹೀಗೇ ಹಾಳು ಮಾಡಿದ ಬ್ರೈಡಲ್‌ ಡ್ರೆಸ್‌ಗಳೆಲ್ಲವೂ ಸಾವಿರ ರೂಪಾಯಿಗಿಂತ ಹೆಚ್ಚಿನ ಮೌಲ್ಯದ್ದು ಎಂದು ತಿಳಿದು ಬಂದಿದೆ. ಜನವರಿ  9 ರಂದ ಚೀನಾದ ನೈಋತ್ಯ ನಗರವಾದ ಚಾಂಗ್‌ಕಿಂಗ್‌ನಲ್ಲಿರುವ (Chongqing) ವಧುಗಳ ಸಲೂನ್‌ನಲ್ಲಿ ಈ ಘಟನೆ ನಡೆದಿದ್ದು, ವಧು ಬ್ರೈಡಲ್‌ ಡ್ರೆಸ್‌ಗಳಿಗೆ ಕತ್ತರಿ ಹಾಕುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಗರದ ಜಿಯಾಂಗ್‌ಜಿನ್ ಜಿಲ್ಲೆಯಲ್ಲಿರುವ ನಗರವೊಂದರಲ್ಲಿ ಕಳೆದ ವರ್ಷ 1,250  ಡಾಲರ್‌ (ರೂ. 92,000) ಮೌಲ್ಯದ ಮದುವೆಯ ಪ್ಯಾಕೇಜ್‌ನ ಭಾಗವಾಗಿ ಮಹಿಳೆಯು $550 (ರೂ. 41,000) ಅನ್ನು ಠೇವಣಿ ಇರಿಸಿದ್ದಳು. ಆದರೆ ಅದನ್ನು ಹಿಂದಿರುಗಿಸಲು ಸಲೂನ್ ನಿರಾಕರಿಸಿದ ನಂತರ ಮಹಿಳೆ ರೊಚ್ಚಿಗೆದ್ದು ಈ ಕೃತ್ಯವೆಸಗಿದ್ದಾಳೆ. 

ಮಾಸ್ಕ್‌  ಧರಿಸಿದ್ದ ವಧು  ಕತ್ತರಿ ಹಿಡಿದು ಬಿಳಿ ಉಡುಪುಗಳಿಂದ ತುಂಬಿದ ರ್ಯಾಕ್‌ನಲ್ಲಿ ದೊಡ್ಡ ದಾಂಧಲೆಯನ್ನೇ ನಡೆಸಿದ್ದಾಳೆ. ಈ ಮಹಿಳೆಯ ಕೃತ್ಯವನ್ನು ಚಿತ್ರೀಕರಿಸಿದ ವ್ಯಕ್ತಿ, ಇವುಗಳ ಬೆಲೆ ಪ್ರತಿ ಗೌನ್‌ಗೆ ಸಾವಿರದಿಂದ ಹತ್ತಾರು ಸಾವಿರ ಚೈನೀಸ್ ಯುವಾನ್ ಆಗಬಹುದು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿ ಬರುತ್ತಿದೆ. ಸ್ಪಷ್ಟವಾಗಿ ಯೋಚಿಸಿ. ಈ ಡ್ರೆಸ್‌ಗಳಿಗೆ ಸಾವಿರಾರು ಯುವಾನ್‌ಗಳು ವೆಚ್ಚವಾಗುತ್ತವೆ ಎಂದು ವಿಡಿಯೋ ಮಾಡುತ್ತಿರುವ ವ್ಯಕ್ತಿ ಹೇಳಿದಾಗ ಬಟ್ಟೆ ಕತ್ತರಿಸುವ ವಧು ಹೇಳುತ್ತಾಳೆ. ಸಾವಿರಾರು? ಹಲವು ಹತ್ತು ಸಾವಿರಗಳಾದರೂ ಸರಿ ಎಂದ ಆಕೆ ಪಟ್ಟುಬಿಡದೆ ಕತ್ತರಿಗಳಿಂದ ಗೌನುಗಳನ್ನು ಕತ್ತರಿಸುವುದನ್ನು ಮುಂದುವರೆಸಿದ್ದಾಳೆ. 

Cute Video: ಮೆರವಣಿಗೆ ಬರುತ್ತಿದ್ದ ವರನ ನೋಡಿ ಕಿಟಕಿಯಿಂದಲೇ ವಧುವಿನ ಡಾನ್ಸ್‌...

ನಂತರ ಆಕೆ ಅದ್ದೂರಿ ಕೆಂಪು ಮತ್ತು ಚಿನ್ನದ ಬಣ್ಣದ ಸಾಂಪ್ರದಾಯಿಕ ಚೀನೀ ಮದುವೆಯ ಗೌನ್ ಅನ್ನು ಕತ್ತರಿಸುವಾಗ ವ್ಯಕ್ತಿ ಮಹಿಳೆಗೆ ಎಚ್ಚರಿಕೆ ನೀಡುತ್ತಾನೆ. ಇದು 10,000 ಚೈನೀಸ್ ಯುವಾನ್ ( (ಭಾರತದ 1.1 ಲಕ್ಷ ರೂ.ಗೆ ಸಮ) ಮೊತ್ತದ್ದಾಗಿದೆ ಎಂದು ಹೇಳುತ್ತಾನೆ. ಚೀನೀ ಮಾಧ್ಯಮದ ಪ್ರಕಾರ, ಮಹಿಳೆಯು ಅಕ್ಟೋಬರ್ 5 ರಂದು ತನ್ನ ಮದುವೆಗಾಗಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಮದುವೆಯ ಪ್ಯಾಕೇಜ್ ಅನ್ನು ಖರೀದಿಸಿದ್ದಳು. ಆದಾಗ್ಯೂ, ನವೆಂಬರ್‌ನಲ್ಲಿ ಸಂಪೂರ್ಣವಾಗಿ ಆರ್ಡರ್‌ ರದ್ದುಗೊಳಿಸುವ ಮೊದಲು ಆಕೆ ಆಗಸ್ಟ್‌ನಲ್ಲಿ ಆರ್ಡರ್‌ ಫೋಸ್ಟ್‌ಫೋನ್‌ ಮಾಡಿದ್ದಳು.  ನಂತರ ಆಕೆ ತನ್ನ ಠೇವಣಿ ಸೇರಿದಂತೆ ಸಂಪೂರ್ಣ ಮರುಪಾವತಿಗೆ ಒತ್ತಾಯಿಸಿದ್ದಳು. ಆದರೆ ಸಲೂನ್‌ ಆಕೆಯ ಮನವಿಯನ್ನು ನಿರಾಕರಿಸಿತು.

ಸಿನಿಮಾ ಸ್ಟೈಲ್‌ನಲ್ಲಿ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟ ವಧು..

ಈಕೆ ನಾಶಪಡಿಸಿದ ಬಟ್ಟೆಗಳ ಮೌಲ್ಯ 8 ಲಕ್ಷಕ್ಕೂ ಅಧಿಕ ಎಂದು ತಿಳಿದು ಬಂದಿದ್ದು, 32 ಮದುವೆಯ ಉಡುಪುಗಳು ಮತ್ತು ವಧುಗಳು ಧರಿಸುವ ಗೌನ್‌ಗಳಿಗೆ ಆಕೆ ಕತ್ತರಿ ಹಾಕಿದ್ದಾಳೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್