ಹಸಿವೆಯಲ್ಲೂ ರೆಸಿಪಿ ಬರೆದಿದ್ದ ಮಹಿಳೆ, 3 ವರ್ಷದ ನಂತ್ರ ಸಿಕ್ತು ಅಸ್ಥಿಪಂಜರ

By Roopa Hegde  |  First Published Oct 7, 2024, 3:59 PM IST

ಇಂಗ್ಲೆಂಡ್ ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹಸಿವು ತಾಳಲಾರದೆ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾಳೆ. ಅದು ಈಗಲ್ಲ. ಆಕೆ ಸತ್ತ ಮೂರು ವರ್ಷದ ನಂತ್ರ ಮೃತದೇಹ ಸಿಕ್ಕಿದೆ. ಆಕೆ ಡೈರಿಯಲ್ಲಿ ಬರೆದಿಟ್ಟ ವಿಷ್ಯ ಕಣ್ಣಲ್ಲಿ ನೀರು ತರಿಸುತ್ತೆ.


ಅಕ್ಕಿ (rice) ಖರೀದಸೋಕೆ ಬಯಸ್ತೇನೆ, ಆಹಾರ ನನ್ನ ಕನಸು, ನನಗೆ ಹಸಿವೆಯಾಗಿದೆ ಎನ್ನುತ್ತಲೇ ಒಂದಿಷ್ಟು ರೆಸಿಪಿಗಳನ್ನು ಡೈರಿ (dairy)ಯಲ್ಲಿ  ಬರೆದ ಆಕೆ, ಕೊನೆಗೂ ಹಸಿವಿನಿಂದಲೇ ಸಾವನ್ನಪ್ಪಿದ್ದಾಳೆ. ಕೊನೆ ಸಮಯದಲ್ಲಿ ಏನು ತಿಂದ್ಲೋ, ಏನು ಬಿಟ್ಳೋ, ಸತ್ತ ಮೂರು ವರ್ಷದ ನಂತ್ರ ಆಕೆ ಇನ್ನಿಲ್ಲ ಎಂಬುದು ಮನೆಯವರಿಗೆ ಗೊತ್ತಾಗಿದೆ. ಆಕೆಯ ವಿಕಲಾಂಗತೆ, ಮಾನಸಿಕ ಅನಾರೋಗ್ಯ (mental illness) ದ ಜೊತೆ ಹಸಿವು, ಆಕೆಗೆ ಮನೆಯಲ್ಲೇ ನರಕ ತೋರಿಸಿದ್ದು ಸುಳ್ಳಲ್ಲ. 

ಘಟನೆ ನಡೆದಿರೋದು, ಅಭಿವೃದ್ಧಿ ಹೊಂದಿದ ದೇಶ ಎಂದು ಬೀಗುವ ಇಂಗ್ಲೆಂಡ್ (England) ನಲ್ಲಿ. ಹಸಿವಿನಿಂದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾಳೆ. ಇಲ್ಲಿನ ಇನ್ನೊಂದು ಅಚ್ಚರಿ ಅಂದ್ರೆ ಮಹಿಳೆ ಸಾವನ್ನಪ್ಪಿ ಮೂರು ವರ್ಷವಾದ್ರೂ ಆಕೆ ಸತ್ತ ವಿಷ್ಯವೇ ಯಾರಿಗೂ ತಿಳಿದಿರಲಿಲ್ಲ. ಕುಟುಂಬಸ್ಥರನ್ನು ಹೊಂದಿದ್ರೂ ಅವರಿಂದ ದೂರವಿದ್ದ ಮಹಿಳೆ, ಅಸ್ಥಿಪಂಜರವಾಗಿದ್ಲು.  ಪೊಲೀಸರು ಫ್ಲಾಟ್ ಬಾಗಿಲು ಒಡೆದಾಗ ಮಮ್ಮಿಯನ್ನು ಹೋಲುವ ಅಸ್ಥಿಪಂಜರ ಸಿಕ್ಕಿದೆ. 

Latest Videos

ಆರ್‌ಜಿ ಕರ್ ಘಟನೆ ಸಾಮೂಹಿಕ ಬಲತ್ಕಾರವಲ್ಲ, ಆರೋಪಿ ಸಂಜಯ್ ಕೃತ್ಯ ಚಾರ್ಜ್‌ಶೀಟ್‌ನಲ್ಲಿ ಬಯಲು!

ಮೃತ ಮಹಿಳೆಯ ಹೆಸರು ಲಾರಾ ವಿನ್ಹ್ಯಾಮ್. ಅವಳು ಕಿವುಡಳಾಗಿದ್ದಳು. ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಳು. ಮೇ 2021 ರಲ್ಲಿ ವೋಕಿಂಗ್‌ನಲ್ಲಿರುವ ಫ್ಲಾಟ್‌ ಗೆ ಲಾರಾ ನೋಡಲು ಆಕೆ ಸಹೋದರ ಬಂದಿದ್ದ. ಒಳಗಿದ್ದ ಲಾರಾಳಿಂದ ಯಾವುದೇ ಪ್ರತಿಕ್ರಿಯೆ ಸಿಗದೆ ಹೋದಾಗ ಬಾಗಿಲು ಒಡೆಯುವ ಸ್ಥಿತಿ ಬಂತು. ಲಾರಾ ಫ್ಲಾಟ್ ನಲ್ಲಿರುವ ಕ್ಯಾಲೆಂಡರ್ ನಲ್ಲಿ 2017ರ, ನವೆಂಬರ್ ಒಂದನ್ನು ಗುರುತು ಹಾಕಲಾಗಿದೆ. ಅಂದ್ರೆ ಲಾರಾ ಅಲ್ಲಿಯವರೆಗೆ ಬದುಕಿದ್ದರು ಎಂದು ಅಂದಾಜಿಸಲಾಗಿದೆ. ಆದ್ರೆ ಸಾವನ್ನಪ್ಪಿದ ಸಮಯವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಸದ್ಯ ಲಾರಾ ವಿನ್ಹ್ಯಾಮ್ ಪ್ರಕರಣದ ವಿಚಾರಣೆ ಸರ್ರೆ ಕರೋನರ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.  

ಆಕೆ ಡೈರಿ ಸಿಕ್ಕಿದ್ದು, ಅದ್ರಲ್ಲಿ ಆಹಾರ ಮತ್ತು ಹಣದ ಕೊರತೆಯಿದೆ ಎಂಬುದನ್ನು ಲಾರಾ ವಿನ್ಹ್ಯಾಮ್ ಬರೆದಿದ್ದಾರೆ. ಸೆಪ್ಟೆಂಬರ್ 28, 2017 ರ ದಿನಾಂಕದಂದು ಲಾರಾ ಡೈರಿಯಲ್ಲಿ, ನನ್ನ ಮೊಬೈಲ್ ಸೆಪ್ಟೆಂಬರ್ 7 ರಂದು ಸ್ವಿಚ್ ಆಫ್ ಆಗಿದೆ. ಸ್ವಿಚ್ ಆಫ್ ಆಗುವ ಮೊದಲು ನಾನು ಟೆಸ್ಕೋ ಬಳಸಿದ್ದೇನೆ. ಒಂದಿಷ್ಟು ಆಹಾರವನ್ನು ಆರ್ಡರ್ ಮಾಡಿದ್ದೆ. ಜೊತೆಗೆ ನಾನು ವಾರಗಟ್ಟಲೆ ಮಲಗಿದ್ದೆ. ಏನು ನಡೆಯುತ್ತಿದೆ ಗೊತ್ತಾಗ್ತಿಲ್ಲ. ನನ್ನ ಬಳಿ ಆಹಾರವಿಲ್ಲ ಎಂದು ಬರೆದಿದ್ದರು. ಅಕ್ಟೋಬರ್ 2017 ರಲ್ಲಿ, ಕೊನೆಯದಾಗಿ ಒಂದು ತಿಂಗಳ ಹಿಂದೆ ನಾನು ಆಹಾರಕ್ಕಾಗಿ ಶಾಪಿಂಗ್ ಮಾಡಲು ಹೋಗಿದ್ದೆ. ನಾನು ಇಷ್ಟು ದಿನ ಬದುಕಿದ್ದೇನೆ ಎಂದು ನನಗೆ ನಂಬಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. 

ಡೈರಿಯಲ್ಲಿ ಇನ್ನು ಕೆಲ ವಿಷ್ಯಗಳಿವೆ. ಲಾರಾ ಆಲೂಗಡ್ಡೆ ಹಾಗೂ ಚೀಸ್ ತಿಂದು ಬದುಕುತ್ತಿದ್ದರು ಎಂಬುದು ಗೊತ್ತಾಗಿದೆ. ಅವರ ಬಳಿ ಕೇವಲ 5 ಪೌಂಡ ಹಣವಿತ್ತು ಎಂಬುದನ್ನು ಕೂಡ ಲಾರಾ ಡೈರಿಯಲ್ಲಿ ಬರೆದಿದ್ದಾರೆ. ಸೆಪ್ಟೆಂಬರ್ 15, 2017ರಂದು ಮಹಿಳೆ ಡೈರಿಯಲ್ಲಿ ಅಕ್ಕಿ ಖರೀದಿಸುವ ವಿಷ್ಯ ಬರೆದಿದ್ದರು. ನಾನು ಅಕ್ಕಿ ಖರೀದಿಸಲು ಬಯಸುತ್ತೇನೆ. ಅದನ್ನು ತಿನ್ನಲು ಕಾತುರನಾಗಿದ್ದೇನೆ. ಆಹಾರ ನನ್ನ ಕನಸು. ಹಸಿವಿನಿಂದ ಸಾಯ್ತಿದ್ದೇನೆ ಎಂದು ಬರೆದಿದ್ದರು. 

ಪ್ರಪಂಚದ ಅತ್ಯಂತ ಶಕ್ತಿಶಾಲಿ ಟಾಪ್-10 ರಾಷ್ಟ್ರಗಳು: ಭಾರತಕ್ಕೆ ಎಷ್ಟನೇ ಸ್ಥಾನ?

ಲಾರಾ ತನ್ನ ಫ್ಲಾಟ್‌ನಿಂದ ಹೊರ ಬರಲು ಭಯಪಡ್ತಿದ್ದರು. ಅವರು ಶಾಪಿಂಗ್ ಅಥವಾ ಇತರ ಕೆಲಸವನ್ನು ಮಾಡಲು ಕ್ಯಾಲೆಂಡರ್ ನಲ್ಲಿ ದಿನಾಂಕವನ್ನು ನಿಗದಿಪಡಿಸುತ್ತಿದ್ದರು. ನಿರ್ದಿಷ್ಟಪಡಿಸಿದ ದಿನಾಂಕದಂದೇ ಅವರು ತನ್ನ ಕೆಲಸಗಳನ್ನು  ಮಾಡ್ತಿದ್ದರು ಎಂದು  ಸಹೋದರಿ ನಿಕೋಲಾ ಹೇಳಿದ್ದಾರೆ. ನಿಕೋಲಾ ಅವರು 2009 ರಲ್ಲಿ ತನ್ನ ಸಹೋದರಿಯನ್ನು ಕೊನೆಯ ಬಾರಿಗೆ ನೋಡಿದರು. 2014 ರಲ್ಲಿ ಸಾಮಾಜಿಕ ಮಾಧ್ಯಮದ ಸಂಪರ್ಕ ನಿಂತುಹೋಗಿತ್ತು. 2021ರಲ್ಲಿ ಲಾರಾ, ಸಹೋದರಿ ಹಾಗೂ ಸಹೋದರ ಫ್ಲಾಟ್ ಗೆ ಭೇಟಿ ನೀಡಿದ್ದರು. ಬ್ರಿಟನ್ ಆಹಾರ ಇಲಾಖೆ, ಲಾರಾಗೆ ಸರಿಯಾಗಿ ಆಹಾರ ನೀಡದೆ, ಫ್ಲಾಟ್ ನಲ್ಲಿ ಕೂಡಿಹಾಕಿ ಸಾಯಿಸಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. 

click me!