ಆರು ಸಿಂಹಗಳೊಂದಿಗೆ ಕೃಷ್ಣ ಸುಂದರಿಯ ಗತ್ತಿನ ನಡುಗೆ... ನೋಡಿ ವಿಡಿಯೋ

By Suvarna NewsFirst Published Jan 13, 2022, 10:12 PM IST
Highlights
  • ಕಾಡಲ್ಲಿ ಸಿಂಹಗಳೊಂದಿಗೆ ಓಡಾಡುವ ಮಹಿಳೆ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಹಿಳೆಯೊಬ್ಬಳು ಕಾಡೊಂದರಲ್ಲಿ ಆರು ಸಿಂಹಗಳೊಂದಿಗೆ ಓಡಾಡುತ್ತಿರುವ ದೃಶ್ಯವೊಂದು ವೈರಲ್‌ ಆಗಿದ್ದು, ಸಿಂಹಗಳ ಜೊತೆ ಓಡಾಡುತ್ತಿರುವ ಮಹಿಳೆಯ ಧೈರ್ಯ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಆಕೆ ಜನ ಸಾಕುನಾಯಿಗಳ ಜೊತೆ ಆರಾಮವಾಗಿ ವಾಕ್‌ ಹೋಗುವಂತೆ ಸಿಂಹಗಳ ಹಿಂದೆ ಹೋಗುತ್ತಿರುವುದು ಕಾಣಿಸುತ್ತಿದೆ. ವಿಡಿಯೋದ ಕೊನೆ ಫ್ರೇಮ್‌ನಲ್ಲಿ ಆಕೆ ಕೊನೆಯಲ್ಲಿದ್ದ ಒಂದು ಸಿಂಹದ ಬಾಲವನ್ನು ಹಿಡಿದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಜೊತೆಗೆ ಆಕೆ ಕ್ಯಾಮರಾದತ್ತ ಕೈ ಬೀಸುತ್ತಿದ್ದಾಳೆ. 

ಇನ್ನು ಕುತೂಹಲಕಾರಿ ವಿಚಾರವೆಂದರೆ ಇವರ ಜೊತೆಗಿದ್ದ ಮಹಿಳೆಯ ಮೇಲಾಗಲಿ ದೃಶ್ಯವನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲಾಗಲಿ ಈ ಸಿಂಹಗಳು ದಾಳಿ ನಡೆಸಿಲ್ಲ. ವಿಡಿಯೋದಲ್ಲಿರುವ ಮಹಿಳೆ ಬಹಳ ಖುಷಿಯಾಗಿ ಸಿಂಹಗಳ ಹಿಂದೆ ಬರುತ್ತಿರುವುದು ಕಾಣಿಸುತ್ತಿದೆ. @safarigallery ಎಂಬ ಹೆಸರಿನಲ್ಲಿ ಇನ್ಸ್ಟಾಗ್ರಾಮ್‌(Instagram) ಖಾತೆಯಿಂದ ಪೋಸ್ಟ್ ಮಾಡಿದ ಈ ವೀಡಿಯೊ ವೈರಲ್ ಆಗಿದೆ. ಇದನ್ನು 1.39 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಮತ್ತು 6,000 ಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಮಹಿಳೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವುದನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

 
 
 
 
 
 
 
 
 
 
 
 
 
 
 

Latest Videos

A post shared by SAFARI GALLERY 🦁 (@safarigallery)

 

ಒಬ್ಬ ಇನ್ಸ್ಟಾಗ್ರಾಮ್‌  ಬಳಕೆದಾರ, ವೀಡಿಯೋಗ್ರಾಫರ್‌ ಬಗ್ಗೆ ಹೆಮ್ಮೆಯೆನಿಸುತಿದೆ ಎಂದು ಹೇಳಿದರೆ ಇನ್ನೊಬ್ಬರು ನಾನು ಈ ಎಲ್ಲಾ ರೀತಿಯ ವೀಡಿಯೊಗಳ ತೆರೆಮರೆಯ ದೃಶ್ಯಗಳಿಗಾಗಿ ಕಾಯುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. 

ಸಿಂಹವನ್ನು ಎತ್ತಿಕೊಂಡು ಹೋದ ಮಹಿಳೆ... ವಿಡಿಯೋ ನೋಡಿದ ನೆಟ್ಟಿಗರಿಂದ ಹಾಸ್ಯದ ಸುರಿಮಳೆ 

ಈ ಹಿಂದೆ ದಕ್ಷಿಣ ಆಫ್ರಿಕಾದ ಕ್ರೂಗರ್ ರಾಷ್ಟ್ರೀಯ ಉದ್ಯಾನವನದ ಮಲಮಾಲಾ ಖಾಸಗಿ ಗೇಮ್ ರಿಸರ್ವ್‌ನಲ್ಲಿ ಒಂದು ಸಣ್ಣ ಏಡಿಯು ಸಿಂಹಗಳ ಗುಂಪನ್ನು ನಿರ್ಬಂಧಿಸುವ ಹಾಗೂ ಸಿಂಹಗಳ ವಿರುದ್ದ ಛಲ ಬಿಡದೆ ಹೋರಾಟ ಮಾಡಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಕ್ರೂಗರ್ ರಾಷ್ಟ್ರೀಯ ಉದ್ಯಾನವನ  (Kruger National Park) ದಕ್ಷಿಣ ಆಫ್ರಿಕಾ(South Africa) ದ ಅತಿದೊಡ್ಡ ಮತ್ತು ಹಳೆಯ ಉದ್ಯಾನವನ. ರೇಂಜರ್ಸ್ ರಗ್ಗಿರೊ ಬ್ಯಾರೆಟೊ (Rangers Ruggiero Barreto) ಮತ್ತು ರಾಬಿನ್ ಸೆವೆಲ್ (Robin Sewell) ಅವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಈ ವಿಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಈ ವಿಡಿಯೋವನ್ನು ಅಂದು  ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು. 

ಈ ವಿಡಿಯೋವು ಸಿಂಹಗಳು ಕುತೂಹಲಕಾರಿಯಾಗಿ ಏಡಿಯನ್ನು ನೋಡುವುದನ್ನು ಮತ್ತು ಗಮನಿಸುವುದನ್ನು ತೋರಿಸುತ್ತದೆ. ಏಡಿಯನ್ನು ಹತ್ತಿರದಿಂದ ನೋಡುವ ಸಲುವಾಗಿ ಸಿಂಹಗಳು ಅದರ ಹಿಂದೆ ನಡೆಯಲು ಶುರು ಮಾಡುತ್ತವೆ. ನಂತರ ಏಡಿಯ ನಡವಳಿಕೆಯು ಸಿಂಹಗಳಿಗೆ ಅಚ್ಚರಿ ಉಂಟುಮಾಡುತ್ತದೆ.  ಇದರಿಂದಾಗಿ ಮೂರು ಸಿಂಹಗಳ ಗುಂಪು ದೂರ ಸರಿಯಲು ಆರಂಭಿಸುತ್ತವೆ. ಇದನ್ನು ಒಂದು ಏಡಿಯ ಧೈರ್ಯಶಾಲಿ ಹೋರಾಟ ಎಂದು  ನೆಟ್ಟಿಗರು ಬಿಂಬಿಸಿದ್ದರು. ಏಡಿ ಒಂದು ಸಣ್ಣ ಬಿಲದಲ್ಲಿ ಕಣ್ಮರೆಯಾಗುವ ಮೊದಲು ಅದರ ಪಿಂಕರ್‌ಗಳನ್ನು ಕೂಡ ಸುರಕ್ಷಿತವಾಗಿ ಜೊತೆ ಜೊತೆಯಲ್ಲಿ ರಕ್ಷಿಸಿಕೊಳ್ಳುತ್ತದೆ. ಈ ಸುದ್ದಿ ಇಂಟರ್‌ನೆಟ್‌ನಲ್ಲಿ ಭಾರಿ ಮೆಚ್ಚುಗೆಯನ್ನು ಪಡೆದಿತ್ತು. ನಾವೆಲ್ಲರೂ ಸಾಮಾನ್ಯವಾಗಿ ಸಿಂಹಕ್ಕೆ ಹೆದರುತ್ತೇವೆ. ಆದರೆ ಈ ರೀತಿಯ ವೀಡಿಯೊಗಳು ಸಿಂಹದ ಇತರ ಸೌಮ್ಯ ನಡವಳಿಕೆಯನ್ನು ತೋರಿಸುತ್ತದೆ.  

click me!