ತಲೆ ಮರೆಸಿಕೊಂಡಿದ್ದಾಗಲೇ 2 ಮಕ್ಕಳ ತಂದೆಯಾದ ವಿಕಿಲೀಕ್ಸ್‌ ಸಂಸ್ಥಾಪಕ!

By Suvarna News  |  First Published Apr 29, 2020, 4:08 PM IST

ತಲೆ ಮರೆಸಿಕೊಂಡಿದ್ದಾಗಲೇ 2 ಮಕ್ಕಳ ತಂದೆಯಾದ ವಿಕಿಲೀಕ್ಸ್‌ ಸಂಸ್ಥಾಪಕ!| ತನ್ನ ವಕೀಲೆ ಜೊತೆ ಸಂಬಂಧ ಬೆಳೆಸಿ ಎರಡು ಮಕ್ಕಳ ತಂದೆಯಾಗಿರುವ ಅಸಾಂಜ್| 


ಲಂಡನ್‌(ಏ.29): ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ (48) ಲಂಡನ್ನಿನ ಈಕ್ವೆಡಾರ್‌ ದೂತಾವಾಸದಲ್ಲಿ ತಲೆಮರೆಸಿಕೊಂಡಿದ್ದಾಗಲೇ ತನ್ನ ವಕೀಲೆ ಜೊತೆ ಸಂಬಂಧ ಬೆಳೆಸಿ ಎರಡು ಮಕ್ಕಳ ತಂದೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಅಸಾಂಜ್‌ಗೆ ಕಾನೂನು ನೆರವು ನೀಡಲು ಹೋಗುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ವಕೀಲೆ ಸ್ಟೆಲ್ಲಾ ಮೋರಿಸ್‌ ಎಂಬಾಕೆಯನ್ನು ಆತ ಪ್ರೀತಿಸುತ್ತಿದ್ದಾನೆ. ಅವಳಿಗೆ ಈಗ 2 ಹಾಗೂ 1 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಇದನ್ನು ವಕೀಲೆಯೇ ಕೋರ್ಟ್‌ಗೆ ತಿಳಿಸಿದ್ದಾಳೆ.

Tap to resize

Latest Videos

ಬ್ರಿಟಿಷ್ ಪೊಲೀಸರಿಗೆ ಸಿಕ್ಕಿ ಬಿದ್ದ ಜೂಲಿಯನ್ ಅಸ್ಸಾಂಜೆ!

ಅಸಾಂಜ್‌ ವಿರುದ್ಧ ಅಮೆರಿಕದಲ್ಲಿ ದೇಶದ್ರೋಹದ ಪ್ರಕರಣವಿದ್ದು, ಆತನನ್ನು ಗಡೀಪಾರು ಮಾಡಿಸಿಕೊಳ್ಳಲು ಅಮೆರಿಕ ಯತ್ನಿಸುತ್ತಿದೆ. ಸದ್ಯ ಆತನನ್ನು ದೂತಾವಾಸದಿಂದ ಹೊರಹಾಕಿ ಲಂಡನ್ನಿನ ಜೈಲಿನಲ್ಲಿರಿಸಲಾಗಿದೆ. ಅಲ್ಲಿ ಕೈದಿಗಳಿಗೆ ಕೊರೋನಾ ವೈರಸ್‌ ತಗಲುವ ಭೀತಿಯಿಂದ ಕೈದಿಗಳನ್ನು ಬಿಡುಗಡೆ ಮಾಡಿಸಿಕೊಳ್ಳಲು ಸಂಬಂಧಿಕರು ಯತ್ನಿಸುತ್ತಿದ್ದಾರೆ.

ಅಂತೆಯೇ ಅಸಾಂಜ್‌ನ ಪ್ರೇಯಸಿ ಕೂಡ ಕೋರ್ಟ್‌ಗೆ ಜಾಮೀನು ಅರ್ಜಿ ಹಾಕಿದ್ದು, ಅದರಲ್ಲಿ ತನ್ನಿಬ್ಬರು ಮಕ್ಕಳಿಗೆ ಆತನೇ ತಂದೆ ಎಂಬ ಸಂಗತಿ ನಮೂದಿಸಿದ್ದಾಳೆ.

click me!