ಕಿವಿಯೊಳಗೆ ಹೊಕ್ಕ ಜೇಡ, ಒಳಗೆ ಹೀಗೆ ಹೆಣೆದಿತ್ತು ಬಲೆ!, ವೈರಲ್ ಆಯ್ತು ವಿಡಿಯೋ

By Suvarna News  |  First Published Apr 29, 2020, 11:09 AM IST

ಮಹಿಳೆಯೊಬ್ಬಳ ಕಿವಿಯೊಳಗೆ ಜೆಡವೊಂದು ಹೊಕ್ಕಿದ್ದು, ಅಲ್ಲೇ ಬಲೆ ಹೆಣೆದಿದೆ. ಆರೋಗ್ಯ ಸಮಸ್ಯೆ ತಲೆದೋರಿದಾಗ ಚೈದ್ಯರ ಬಳಿ ತೆರಳಿದ ಮಹಿಳೆಗೆ ವಿಚಾರ ತಿಳಿದಿದೆ. ವೈದ್ಯರು ಮಹಿಎಯ ಕಿವಿಯೊಳಗೆ ಜೇಡ ಹೆಣೆದ ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ.


ಬೀಜಿಂಗ್(ಏ.29): ಮಹಿಳೆಯೊಬ್ಬಳ ಕಿವಿಯೊಳಗೆ ಹೊಕ್ಕ ಜೇಡವೊಂದು ಅಲ್ಲೇ ಬಲೆ ಹೆಣೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಡೈಲಿ ಸ್ಟಾರ್ ವರದಿಯನ್ವಯ ಚೀನಾದಲ್ಲಿ ವೈದ್ಯರೊಬ್ಬರು ಹಿರಿಯ ಮಹಿಳೆಯ ಎಡ ಕಿವಿಯಲ್ಲಿ ಬೆಚ್ಚಗೆ ಮನೆ ಮಾಡಿ ಕುಳಿತಿದ್ದ ಜೇಡವನ್ನು ಸರ್ಜರಿ ಮಾಡಿ ಹೊರ ತೆಗೆದಿದ್ದಾರೆ. ಲೈವ್ ವಿಡಿಯೋ ಮೂಲಕ ವೈದ್ಯರು ಸರ್ಜರಿ ನಡೆಸಿದ್ದಾರೆ. ಆ ಜೆಡ ಸುಮಾರು ಒಂದು ವಾರದಿಂದ ಮಹಿಳೆಯ ಕಿವಿಯಳಗಿತ್ತು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tap to resize

Latest Videos

undefined

ನೀವ್‌ ಕೂತ್ಕೊಳೋ ಜಾಗದಲ್ಲಿ ಈ ಸಸ್ಯಗಳಿದ್ರೆ ಏಕ್‌ದಂ ಆರೋಗ್ಯ!

ಏಪ್ರಿಲ್ 22 ರಂದು ವೃದ್ಧ ಮಹಿಳೆ ಚೀನಾದ ಸುಚುವಾನ್ ಪ್ರಾಂತ್ಯದಲ್ಲಿ ಪಾತರಂಪರಿಕವಾಗಿ ಚೀನಾ ಚಿಕಿತ್ಸೆ ನೀಡುವ ಮಿಯಾಂಯಾಂಗ್‌ ಆಸ್ಪತ್ರೆಗೆ ತೆರಳಿದ್ದರು. ವೈದ್ಯರನ್ನು ಸಂಪರ್ಕಿಸಿದ ಮಹಿಳೆ ಕಿವಿ ನೋವು, ತುರಿಕೆ ಹಾಗೂ ವಿಚಿತ್ರ ಶಬದ್ಧ ಕೇಳುತ್ತದೆ ಎಂದು ಹೇಳಿದ್ದರು.

ಮಹಿಳೆಯನ್ನು ತಪಾಸಣೆಗೈದ ಡಾಕ್ಟರ್ ಲಿಯೋ, ಕಿವಿಯಲ್ಲಿ ಬಲೆಯಂತಿರುವುದನ್ನು ಗಮನಿಸಿದರು. ಹೀಗಾಗಿ ಕೂಡಲೇ ಆಟೋಸ್ಕಾಪಿ ಮಾಡಲು ತಿಳಿಸಿದರು. ಪರೀಕ್ಷೆ ನಡೆಸಿದಾಗ ಕಿವಿಯಲ್ಲಿ ಜೀವಂತ ಜೆಡ ಇರುವುದು ಪತ್ತೆಯಾಗಿದೆ. ಕೂಡಲೇ ವೈದ್ಯರು ಕೆಮಿಕಲ್ ಹಾಕಿ ಜೇಡವನ್ನು ಸಾಧನದ ಮೂಲಕ ಹೊರ ತೆಗೆದಿದ್ದಾರೆ. 

ಶೋಧಿಸಿದ ಹೊಸ ಜೇಡಕ್ಕೆ ಸಚಿನ್ ಹೆಸರಿಟ್ಟ ಗುಜರಾತ್ ವಿಜ್ಞಾನಿ

ಮಹಿಳೆಯ ಕಿವಿಯಿಂದ ಜೇಡವನ್ನು ಹೊರತೆಗೆಯುವಾಗ ವಿಡಿಯೋ ಮಾಡಿದ್ದು, ಈ ದೃಶ್ಯಗಳು ಬೆಚ್ಚಿ ಬೀಳಿಸುವಂತಿದೆ..

click me!