Zoom ಮೀಟಿಂಗ್‌ನಲ್ಲಿ ನಾಯಕನ ಪತ್ನಿಯ ನಗ್ನ ದರ್ಶನ; ಪಾರ್ಲಿಮೆಂಟ್ ಕೊರೋನಾ ಸಭೆ ರದ್ದು

Published : Apr 04, 2021, 03:20 PM ISTUpdated : Apr 04, 2021, 03:44 PM IST
Zoom ಮೀಟಿಂಗ್‌ನಲ್ಲಿ ನಾಯಕನ ಪತ್ನಿಯ ನಗ್ನ ದರ್ಶನ; ಪಾರ್ಲಿಮೆಂಟ್ ಕೊರೋನಾ ಸಭೆ ರದ್ದು

ಸಾರಾಂಶ

ದಿಢೀರ್ ಕೊರೋನಾ ಪ್ರಕರಣಗಳು ಹೆಚ್ಚಾದ ಕಾರಣ ನಡೆಯುತ್ತಿದ್ದ ಮಹತ್ವದ ಸಭೆ. 23 ನಾಯಕರು, ವೈದ್ಯರು, ತಜ್ಞರ ತಂಡ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸುತ್ತಿರುವಾಗ ಸಚಿವರೊಬ್ಬರ ಪತ್ನಿ ನಗ್ನವಾಗಿ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.  

ಸೌತ್ ಆಫ್ರಿಕಾ(ಎ.04):  ಕೊರೋನಾ ವಕ್ಕರಿಸಿದ ಬಳಿಕ ಕಚೇರಿ, ಸರ್ಕಾರಿ ಸಭೆ, ಶಾಲಾ-ಕಾಲೇಜಿನ ಪಾಠ ಸೇರಿದಂತೆ ಹಲವು ಮೀಟಿಂಗ್‌ಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಝೂಮ್ ಮೂಲಕ ಪ್ರತಿ ದಿನ ಮೀಟಿಂಗ್ ನಡೆಯುತ್ತಲೇ ಇದೆ. ಇದರ ಜೊತೆಗೆ ಹಲವು ಬಾರಿ ಎಡವಟ್ಟುಗಳು ಆಗಿವೆ. ಇದೀಗ ಈ ಪಟ್ಟಿಗೆ ಸೌತ್ ಆಫ್ರಿಕಾದ ಕೊರೋನಾ ತುರ್ತು ಸಭೆ ಸೇರಿಕೊಂಡಿದೆ.

ಝೂಮ್‌ ಮೀಟಿಂಗ್‌ ವೇಳೆ ಕಾರ್ಯದರ್ಶಿಯೊಂದಿಗೆ ಸರ್ಕಾರಿ ಅಧಿಕಾರಿ ರಾಸಲೀಲೆ!.

ಕೊರೋನಾ ಪ್ರಕರಣಗಳು ಸೌತ್ ಆಫ್ರಿಕಾದಲ್ಲೂ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಸರ್ಕಾರ ತುರ್ತು ಸಭೆ ಕರೆದಿತ್ತು. ಸೌತ್ ಆಫ್ರಿಕಾದ 23 ನಾಯಕರ ಪೈಕಿ ರಾಷ್ಟ್ರೀಯ ಸಾಂಪ್ರದಾಯಿಕ ನಾಯಕರ ಸದನದ ಸದಸ್ಯರಾದ ಕ್ಸೋಲೈಲ್ ಎನ್‌ಡೆವು ಪಾಲ್ಗೊಂಡಿದ್ದರು. ಸೌತ್ ಆಪ್ರಿಕಾದಲ್ಲಿನ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಒಬ್ಬೊಬ್ಬರೆ ಉಸ್ತುವಾರಿ ನಾಯಕರು ಮಾಹಿತಿ ಬಹಿರಂಗಪಡಿಸುತ್ತಿರುವ ವೇಳೆ ನಾಯಕ ಕ್ಸೋಲೈಲ್  ಪತ್ನಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ.

ಕೌನ್ಸಿಲ್ ಮೀಟಿಂಗ್ ಮಧ್ಯೆ ದಂಪತಿಯ ಸೆಕ್ಸ್: ಕ್ಯಾಮೆರಾ ಆಫ್ ಮಾಡೋದೇ ಮರೆತ್ರು

ಕ್ಸೋಲೈಲ್ ಅವರಿಗೆ ತಮ್ಮ ಹಿಂಭಾಗದಲ್ಲಿ ಪತ್ನಿ ಬಂದಿರುವುದು ಗಮನಕ್ಕೆ ಬಂದಿಲ್ಲ. ಪತ್ನಿಯ ನಗ್ನ ದೃಶ್ಯಗಳು ಕೊರೋನಾ ತರ್ತು ಸಭೆಯಲ್ಲಿ ಜಗಜ್ಜಾಹೀರಾಗಿದೆ. ಇದು ಇತರ ನಾಯಕರಿಗೆ ಮುಜುಗರ ತಂದಿದೆ. ತಕ್ಷಣವೇ ಮಧ್ಯ ಪ್ರವೇಶಿಸಿದ ಕೊರೋನಾ ನಿಯಂತ್ರಣ ಸಮಿತಿ ಅಧ್ಯಕ್ಷ ಫೈತ್ ಮುತಂಬಿ, ನಾಯಕ ಕ್ಸೋಲೈಲ್ ಅವರ ಹಿಂಭಾಗದಲ್ಲಿ ವಿವಸ್ತ್ರವಾಗಿ ಇರುವ ಮಹಿಳೆಯ ದೃಶ್ಯ ಎಲ್ಲರಿಗೂ ಕಾಣಿಸತ್ತಿದೆ. ಹೀಗಾಗಿ  ಮೀಟಿಂಗ್ ನಡೆಯುತ್ತಿರುವ ಕುರಿತು ಅವರಿಗೆ ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ.

ತಪ್ಪಿನ ಅರಿವಾದಾ ನಾಯಕ ಕ್ಸೋಲೈಲ್ ಕ್ಷಮೆ ಯಾಚಿಸಿದ್ದಾರೆ. ತಮಗೆ ಝೂಮ್ ಮೀಟಿಂಗ್ ಎಲ್ಲಾ ಹೊಸದು. ತಂತ್ರಜ್ಞಾನದ ಅರಿವಿಲ್ಲ. ನಾನು ಕ್ಯಾಮಾರ ನೋಡುತ್ತಿದ್ದೆ. ಹಿಂಭಾಗದಲ್ಲಿ, ಇತರ ಸ್ಕ್ರೀನ್ ನೋಡುವ, ಕ್ಯಾಮ್ ಆಫ್ ಮಾಡುವ ಕುರಿತು ತಿಳಿದಿಲ್ಲ. ಕ್ಷಮೆ ಇರಲಿ ಎಂದಿದ್ದಾರೆ. ಬಳಿಕ ಸಭೆ ರದ್ದುಗೊಂಡಿದೆ.

ವಿಡಿಯೋ ಕಾನ್ಫರೆನ್ಸ್ ವೇಳೆ ಬಟ್ಟೆ ಬಿಚ್ಚಿದ ನಾಯಕಿ, ಸಚಿವರೆಲ್ಲಾ ಶಾಕ್!.

ನಿಗದಿತ ಸಮಯಕ್ಕೆ ಸಭೆ ಮುಗಿಯಬೇಕಿತ್ತು. ಆದರೆ ಕೆಲ ತಾಂತ್ರಿಕ ಸಮಸ್ಯೆ, ಕೆಲ ನಾಯಕರಿಗೆ ಝೂಮ್ ಮೀಟಿಂಗ್ ಪಾಲ್ಗೊಳ್ಳುವ ತಂತ್ರಜ್ಞಾನದ ಮಾಹಿತಿ ಕೊರತೆಯಿಂದ ಸಭೆ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ರಾತ್ರಿ ಮೀಟಿಂಗ್ ಮುಂದುವರಿದ ಕಾರಣ ಕ್ಸೋಲೈಲ್ ಪತ್ನಿ ಸ್ನಾನ ಮಾಡಲು ರೂಮ್‌ಗೆ ತೆರಳಿದಾಗ ಮೀಟಿಂಗ್‌ನಲ್ಲಿ ಇತರ ನಾಯಕರಿಗೆ ಕ್ಸೋಲೈಲ್ ಪತ್ನಿಯ ನಗ್ನ ದರ್ಶನವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?