
ನ್ಯೂಯಾರ್ಕ್(ಫೆ.19): ವಿಶ್ವದಾದ್ಯಂತ 3ನೇ ಅಲೆಗೆ ಕಾರಣವಾಗಿದ್ದ ರೂಪಾಂತರಿ ಕೊರೋನಾ ವೈರಸ್(Coronavirus) ಒಮಿಕ್ರೋನ್‌ನ ಹಾವಳಿ(Omicron) ನಿಧಾನವಾಗಿ ಇಳಿಕೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಒಮಿಕ್ರೋನ್‌ನ ಹಲವು ಉಪ ತಳಿಗಳ ಪೈಕಿ ಒಂದಾದ ಬಿಎ.2 ನಿಧಾನವಾಗಿ ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅದು ಇದೇ ವೇಳೆ ಎಚ್ಚರಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ(WHO) ಕೋವಿಡ್ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್‌ಖೋವ್, ಇತ್ತೀಚಿನವರೆಗೂ ಜಿನೋಮ್ ಸೀಕ್ವೆನ್ಸಿಂಗ್‌ನಲ್ಲಿ ಬಿಎ.1 (BA.2 Variant) ಪಾಲು ಹೆಚ್ಚು ಕಂಡುಬರುತ್ತಿತ್ತು. ಆದರೆ ಈ ಸ್ಥಾನವನ್ನು ಇದೀಗ ಬಿಎ.2 ಆಕ್ರಮಿಸಿಕೊಳ್ಳುತ್ತಿದೆ. ಎಲ್ಲೆಡೆ ಕೋವಿಡ್ ನಿರ್ಬಂಧಗಳು ಸಡಿಲಿಕೆ ಆಗುತ್ತಿರುವ ಹೊತ್ತಿನಲ್ಲಿ ಉಪತಳಿ ಹೆಚ್ಚು ವ್ಯಾಪಕವಾಗುತ್ತಿರುವುದು ಗಮನಾರ್ಹ. ಬಿಎ.1 ಹೆಚ್ಚು ಸಾಂಕ್ರಾಮಿಕವಾದರೂ, ಅಷ್ಟೇನು ಅಪಾಯಕಾರಿಯಲ್ಲ. ಆದರೂ ಈ ಬಗ್ಗೆ ನಾವು ನಿಗಾ ವಹಿಸಿದ್ದೇವೆ ಎಂದು ಹೇಳಿದ್ದಾರೆ.
Long Covid: ಲಾಂಗ್ ಕೋವಿಡ್ ದುಷ್ಪರಿಣಾಮಗಳಿಂದ ಪಾರಾಗೋದು ಹೇಗೆ?
ಈ ನಡುವೆ ಜಪಾನಿನಲ್ಲಿ ಪ್ರಯೋಗಾಲಯದಲ್ಲಿ ನಡೆಸಿದ ಅಧ್ಯಯನದ ವರದಿ ಅನ್ವಯ ಬಿಎ.1 ಉಪತಳಿಯು ಎಷ್ಟುಸೋಂಕುಕಾರಕವೋ ಅಷ್ಟೆಅಪಾಯಕಾರಿ ಕೂಡಾ ಹೌದು ಎಂದು ಕಂಡುಬಂದಿದೆ. ಇನ್ನೂ ತಜ್ಞರ ಪರಿಶೀಲನೆಗೆ ಒಳಪಡದ ಈ ವರದಿಯನ್ನು ಬಯೋಆರ್‌ಕ್ಸಿವ್ ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗಿದೆ.
ಕೋವಿಡ್ ಲಸಿಕೆಯಿಂದ(Covid Vaccine) ಸಿಗುವ ರಕ್ಷಣಾ ಕೋಟೆಯನ್ನು ಬೇಧಿಸುವ ಶಕ್ತಿ ಬಿಎ.2 ಉಪತಳಿಗೆ ಇದೆ. ಬಿಎ.1 ಮತ್ತು ಬಿಎ.2 ಕೂಡಾ ಒಮಿಕ್ರೋನ್‌ನ ಉಪತಳಿಯಾದರೂ, ಬಿಎ.1ಗಿಂತ ಬಿಎ.2 ಭಿನ್ನವಾಗಿದೆ. ಬಿಎ.2 ವೈರಸ್‌ಗೆ ತುತ್ತಾದವರಲ್ಲಿ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆ ಅಧಿಕ ಎಂಬುದು ಪ್ರಯೋಗಾಲಯದಲ್ಲಿ ಹ್ಯಾಮ್‌ಸ್ಟರ್‌ಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಕಂಡುಬಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
Covid 19 Crisis: ಕೊರೋನಾ ನಿರ್ಬಂಧ ತೆರವು ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ!
15-18 ವರ್ಷದ 2 ಕೋಟಿ ಮಕ್ಕಳಿಗೆ ಎರಡೂ ಡೋಸ್ ಲಸಿಕೆ
‘ದೇಶಾದ್ಯಂತ 15-18 ವರ್ಷ ವಯಸ್ಸಿನ 2 ಕೋಟಿಗೂ ಹೆಚ್ಚು ಮಕ್ಕಳು ಕೋವಿಡ್ ಲಸಿಕೆಯ ಎರಡೂ ಡೋಸುಗಳನ್ನು ಪಡೆದಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಶುಕ್ರವಾರ ಹೇಳಿದ್ದಾರೆ.
‘ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಪ್ರಕಾರ ಭಾರತದಲ್ಲಿ 15-18 ವರ್ಷದ 7.4 ಕೋಟಿ ಮಕ್ಕಳಿದ್ದಾರೆ. ಅವರಲ್ಲಿ ಶೇ. 70 ಮಕ್ಕಳು ಕೋವಿಡ್ ಲಸಿಕೆಯ ಒಂದು ಡೋಸನ್ನು ಪಡೆದಿದ್ದಾರೆ. ದೇಶದಲ್ಲಿ ಈವರೆಗೆ 174.64 ಕೋಟಿ ಅರ್ಹ ಜನರು ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ’ ಎಂದು ಮಾಂಡವೀಯ ತಿಳಿಸಿದ್ದಾರೆ.
ಹಾವೇರಿಯ 22 ಜನರಿಗೆ ಕೊರೋನಾ
ಜಿಲ್ಲೆಯಲ್ಲಿ ಶುಕ್ರವಾರ 22 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 9 ಜನರು ಗುಣಮುಖರಾಗಿದ್ದಾರೆ.
ಬ್ಯಾಡಗಿ-1, ಹಾನಗಲ್ಲ-4, ಹಾವೇರಿ-6, ಹಿರೇಕೆರೂರು-3, ರಾಣಿಬೆನ್ನೂರು-1, ಸವಣೂರು-1, ಶಿಗ್ಗಾಂವಿ-6 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ 27,043 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದುವರೆಗೆ 26,252 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 675 ಜನರು ಕೋವಿಡ್‌ನಿಂದ ಮೃತಪಟ್ಟಿದ್ದು, 116 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 4 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 112 ಜನರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ ಎಂದು ಡಿಎಚ್‌ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
ನಿನ್ನೆ ರಾಜ್ಯದಲ್ಲಿ 1333 ಕೇಸು, 46 ದಿನಗಳ ಕನಿಷ್ಠ,
ಬೆಂಗಳೂರು: ರಾಜ್ಯದಲ್ಲಿ ದೈನಂದಿನ ಕೊರೋನಾ ಪ್ರಕರಣಗಳ ಇಳಿಕೆಯ ಜೊತೆಜೊತೆಗೆ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲೂ ಕುಸಿತ ಕಂಡು ಬಂದಿದೆ. ಶುಕ್ರವಾರ 1,333 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 19 ಮಂದಿ ಮೃತರಾಗಿದ್ದಾರೆ. 4,890 ಮಂದಿ ಚೇತರಿಸಿಕೊಂಡಿದ್ದಾರೆ. ಜನವರಿ 3 ರಂದು 1,290 ಪ್ರಕರಣ ದಾಖಲಾದ ಬಳಿಕದ ಅತ್ಯಂತ ಕನಿಷ್ಠ ಪ್ರಕರಣ ವರದಿಯಾಗಿದೆ. 83,555 ಕೋವಿಡ್ ಪರೀಕ್ಷೆ ನಡೆದಿದ್ದು ಶೇ.1.59ರ ಪಾಸಿಟಿವಿಟಿ ದರ ದಾಖಲಾಗಿದೆ. 26 ದಿನ (ಜನವರಿ 23)ರ ಬಳಿಕ ಮೊದಲ ಬಾರಿಗೆ ದೈನಂದಿನ ಕೋವಿಡ್ ಸಾವಿನ ಸಂಖ್ಯೆ 20ರೊಳಗೆ ಬಂದಿದೆ. ಮರಣ ದರ ಶೇ. 1.42 ದಾಖಲಾಗಿದೆ. ಬೆಂಗಳೂರು ನಗರದಲ್ಲಿ 9 ಸಾವು ಸಂಭವಿಸಿದ್ದು ಉಳಿದಂತೆ ಧಾರವಾಡದಲ್ಲಿ ಎರಡು, ವಿಜಯಪುರ, ಉಡುಪಿ, ಮಂಡ್ಯ, ಕಲಬುರಗಿ, ಕೊಡಗು, ಬೆಳಗಾವಿ, ಬಳ್ಳಾರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ