ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಸಾವಿರಾರು ಪೋರ್ಷೆಗಳು, ಬೆಂಟ್ಲಿ ಕಾರುಗಳನ್ನು ಸಾಗಿಸುತ್ತಿದ್ದ ಹಡಗು ಬೆಂಕಿಗಾಹುತಿಯಾಗಿದ್ದು, ಕೋಟ್ಯಾಂತರ ಮೌಲ್ಯದ ಕಾರುಗಳು ಬೆಂಕಿಗಾಹುತಿಯಾಗಿವೆ. ಉತ್ತರ ಅಟ್ಲಾಂಟಿಕ್ ಮಹಾಸಾಗರದ ಪೋರ್ಚುಗೀಸ್ ದ್ವೀಪದ ಕರಾವಳಿಯಲ್ಲಿ ವಾಹನ ಗಳ ಸಾಗಿಸುತ್ತಿದ್ದ ಹಡಗು ಬೆಂಕಿಗಾಹುತಿಯಾಗಿದೆ ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
1,100 ಪೋರ್ಚೆಸ್ ಸೇರಿದಂತೆ ಸಾವಿರಾರು ವಾಹನಗಳನ್ನು ಈ ಹಡಗು ಸಾಗಿಸುತ್ತಿತ್ತು. ಈ ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ೀ ಬೆಂಕಿಗಾಹುತಿಯಾದ ಹಡಗು ಈಗ ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪೋರ್ಚುಗಲ್‌ನ ಅಜೋರ್ಸ್‌ನ ಕರಾವಳಿಯಲ್ಲಿ ತೇಲುತ್ತಿದೆ. ಫೆಲಿಸಿಟಿ ಏಸ್ (Felicity Ace) ಎಂಬ ಹಡಗು ಫೆಬ್ರವರಿ 10 ರಂದು ಜರ್ಮನಿಯ ( Germany) ಎಂಡೆನ್‌ನಿಂದ (Emden) ಹೊರಟು ಬುಧವಾರ ಅಮೆರಿಕಾದ ರೋಡ್ ಐಲ್ಯಾಂಡ್‌ನ (Rhode Island) ಡೇವಿಸ್‌ವಿಲ್ಲೆಗೆ ( Davisville) ಗೆ ಆಗಮಿಸಬೇಕಿತ್ತು.
BREAKING: A giant cargo ship "Felicity Ace" is on fire in the middle of the Atlantic Ocean.
It's carrying a cargo of Porsche and VW automobiles.
The crew safely abandoned ship in lifeboats. Under maritime law the ship is now "finders keepers." pic.twitter.com/gHLqHncrOi
ಆದರೆ ಪೋರ್ಚುಗೀಸ್ ದ್ವೀಪ (Portuguese island) ಪ್ರದೇಶವಾದ ಅಜೋರ್ಸ್‌ನ (Azores) ಟೆರ್ಸಿರಾ ದ್ವೀಪದಿಂದ (Terceira Island) ಸುಮಾರು 200 ಮೈಲುಗಳಷ್ಟು ದೂರದಲ್ಲಿದ್ದಾಗ ಹಡಗಿನ ಸರಕು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಕಾಣಿಸಿಕೊಂಡ ಕೂಡಲೇ ಪೋರ್ಚುಗೀಸ್ ಪಡೆಗಳು ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಸ್ಥಳಾಂತರಿಸಿದರು. ಹೆಲಿಕಾಪ್ಟರ್ ಅನ್ನು ಒಳಗೊಂಡಿರುವ ರಕ್ಷಣಾ ಕಾರ್ಯಾಚರಣೆಯ ಮೂಲಕ ಸಿಬ್ಬಂದಿಯನ್ನು ರಕ್ಷಿಸಲಾಯಿತು. ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಹತ್ತಿರದ ಪೋರ್ಚುಗೀಸ್ ದ್ವೀಪವಾದ ಫೈಯಲ್‌ಗೆ (Faial) ಕರೆದೊಯ್ಯಲಾಯಿತು.
Volkswagen Virtus World Premiere: ಮಾ.8ರಂದು ಹೊಸ ಸೆಡಾನ್ ಕಾರಿನ ಜಾಗತಿಕ ಪ್ರೀಮಿಯರ್!
650 ಅಡಿ ಉದ್ದದ, 60,000 ಟನ್ ತೂಕದ ಸರಕು ಸಾಗಣೆ ಹಡಗಿನಲ್ಲಾದ ಬೆಂಕಿಯಿಂದ ಎಷ್ಟು ನಷ್ಟವಾಗಿದೆ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ಶಿಪ್ಪಿಂಗ್ ಕಂಪನಿ ಸಂಪರ್ಕಕ್ಕೆ ಸಿಕ್ಕಿಲ್ಲ.ಆಟೋಮೋಟಿವ್ ವೆಬ್‌ಸೈಟ್, 'ದಿ ಡ್ರೈವ್' ವರದಿ ಪ್ರಕಾರ, ಫೋಕ್ಸ್‌ವ್ಯಾಗನ್ (Volkswage) ಸಂಸ್ಥೆಯೂ 189 ಬೆಂಟ್ಲಿ ಸೇರಿದಂತೆ ಸುಮಾರು 4,000 ವಾಹನಗಳು ಹಡಗಿನಲ್ಲಿದ್ದವು ಎಂದು ಅಂದಾಜಿಸಿದೆ. ಅದೇ ಹಡಗಿನಲ್ಲಿ ತನ್ನ 1,100 ಕಾರುಗಳು ಇತ್ತು ಎಂದು ಪೋರ್ಷೆ ಸಂಸ್ಥೆ ದೃಢಪಡಿಸಿದೆ.
ಪೋರ್ಷೆ ಕಾರು ಸಂಸ್ಥೆಯ ಉತ್ತರ ಅಮೆರಿಕಾದ ವಕ್ತಾರರು ಗುರುವಾರ ಸಂಜೆ ಘಟನೆಯ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ., ಕಂಪನಿಯ 1,100 ಕಾರುಗಳು ಬೆಂಕಿ ಅನಾಹುತಕ್ಕೊಳಗಾದ ಹಡಗಿನಲ್ಲಿವೆ ಆದರೆ ಆ ವಾಹನಗಳ ಭವಿಷ್ಯ ತಿಳಿದಿಲ್ಲ ಎಂದು ಹೇಳಿದರು. ಅವರು ತಮ್ಮ ಕಾರುಗಳ ಬಗ್ಗೆ ಚಿಂತಿತರಾಗಿರುವ ಗ್ರಾಹಕರಿಗೆ ತಮ್ಮ ವಿತರಕರನ್ನು ಸಂಪರ್ಕಿಸಲು ಹೇಳಿದ್ದಾರೆ.ಇತ್ತ ಈ ಫೆಲಿಸಿಟಿ ಏಸ್ ವ್ಯಾಪಾರಿ ಹಡಗಿನಲ್ಲಿದ್ದ 22 ಸಿಬ್ಬಂದಿಗಳು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿದ್ದಾರೆ ಎಂಬುದನ್ನು ಕೇಳಿ ನಮಗೆ ಸಮಾಧಾನವಾಯಿತು ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. ಫೆಲಿಸಿಟಿ ಏಸ್ (IMO: 9293911, MMSI 371427000) ವಾಹನ ಸಾಗಣೆ ಹಡಗಾಗಿದ್ದು, 2005 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
Car Crash Test India: 2023 ರಿಂದ ಭಾರತದಲ್ಲಿಯೇ ಕಾರುಗಳ ಸುರಕ್ಷತಾ ಪರೀಕ್ಷೆ ನಡೆಸಲಿದೆ GNCAP