ನಾಯಿಗಳು ಸಾಮಾನ್ಯವಾಗಿ ಸ್ನಾನ ಮಾಡುವುದು ಎಂದರೆ ಮಾರು ದೂರ ಓಡುತ್ತವೆ. ಶ್ವಾನದ ಮಾಲೀಕರು ತಮ್ಮ ಮುದ್ದಾದ ನಾಯಿಗೆ ಸ್ನಾನ ಮಾಡಿಸಲು ಹರ ಸಾಹಸವನ್ನೇ ಮಾಡುತ್ತಾರೆ. ಆದರೆ ಇಲ್ಲೊಂದು ಶ್ವಾನದ ಮರಿ ಮಾತ್ರ ವಿಭಿನ್ನ. ಇದಕ್ಕೆ ಶ್ವಾನ ಮಾಡುವುದೆಂದರೆ ತುಂಬಾ ಇಷ್ಟ. ಬಹುಶ ಈ ಶ್ವಾನ ತನ್ನ ಮಾಲಕರು ಶವರ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿರಬೇಕು ಎಂದೆನಿಸುತ್ತದೆ. ಏಕೆಂದರೆ ಇದು ಕೈ ತೊಳೆಯುವಂತಹ ಸಿಂಕ್‌ಗೆ ಇಳಿದು ಟ್ಯಾಪ್‌ಗ ತಲೆಯೊಡ್ಡಿ ಸ್ನಾನ ಮಾಡುತ್ತದೆ. ಮೇಲಿಂದ ಬೀಳುವ ನೀರನ್ನು ಆನಂದಿಸುವ ಈ ನಾಯಿ ಮರಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ಜನ ವೀಕ್ಷಿಸಿದ್ದಾರೆ. ಮುದ್ದಾದ ಶ್ವಾನಗಳ ಮೋಜಿನಾಟದ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂತಹದ್ದೇ ವಿಡಿಯೋ ಇದಾಗಿದ್ದು, ಸಿಂಕ್‌ನೊಳಗೆ ಕೂರುವ ಶ್ವಾನ ಅಲ್ಲೇ ಸ್ನಾನವೂ ಮಾಡಬೇಕೆಂದು ಬಯಸುತ್ತದೆ. ನೀರನ್ನು ಬಹಳ ಇಷ್ಟಪಡುವ ಈ ಶ್ವಾನ ನೀರು ಬೀಳುವ ನಲ್ಲಿಗೆ ಸರಿಯಾಗಿ ತಲೆಯನ್ನು ಹಿಡಿದು ಮೇಲಿನಿಂದ ಬೀಳುವ ನೀರನ್ನು ಆಸ್ವಾದಿಸುತ್ತದೆ. ಶ್ವಾನ ಸ್ನಾನ ಮಾಡಲು ನಿರ್ಧರಿಸಿದೆ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
ಈ ವಿಡಿಯೋವನ್ನು ನಿನ್ನೆ Reddit ನಲ್ಲಿ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಿದ ನಂತರ ಈ ವೀಡಿಯೊ ವೈರಲ್ ಆಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.ಅಲ್ಲದೇ ಶ್ವಾನಪ್ರಿಯರು ಇದಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ನೀವು ಈ ಶ್ವಾನಕ್ಕೆ ಯಾವ ರೀತಿ ಬುದ್ಧಿ ಕಲಿಸಿದ್ದೀರಾ ಎಂಬುದನ್ನು ನಾನು ತಿಳಿಯಬೇಕು. ನಾನು ನನ್ನ ಶ್ವಾನಕ್ಕೆ ಕಳೆದ ಒಂದು ಗಂಟೆಯಿಂದ ಸ್ನಾನ ಮಾಡಲು ಯತ್ನಿಸಿ ಕೊನೆಗೂ ಆ ಪ್ರಯತ್ನವನ್ನು ಕೈಬಿಟ್ಟೆ. ನಿಜವಾಗಿಯೂ ತಾನೇ ಇಷ್ಟಪಟ್ಟು ಸ್ನಾನ ಮಾಡುವ ಶ್ವಾನವನ್ನು ನಾನು ಎಲ್ಲೂ ನೋಡಿಲ್ಲ ಎಂದು ಒಬ್ಬರು ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.
ತನ್ನ ಮರಿಗಳೊಂದಿಗೆ ಬೆಕ್ಕಿಗೂ ಹಾಲುಣಿಸುವ ತಾಯಿ ಶ್ವಾನ
ನಾಯಿ ಅಥವಾ ಬೆಕ್ಕು ಮುಂತಾದ ಸಾಕುಪ್ರಾಣಿಗಳು ಸ್ನಾನ ಮಾಡುವ ವಿಡಿಯೋ ನೋಡಲು ಮಜಾವಾಗಿರುತ್ತದೆ. ಏಕೆಂದರೆ ಒಂದೊಂದು ಶ್ವಾನ ಸ್ನಾನ ಎಂದರೆ ನೀಡುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವು ಶ್ವಾನಗಳು ಇಷ್ಟಪಟ್ಟು ಸ್ನಾನ ಮಾಡಿದರೆ ಮತ್ತೂ ಕೆಲವು ನನಗೆ ಸ್ನಾನ ಬೇಡ ಎಂದು ಬೊಬ್ಬೆ ಹೊಡೆಯಲು ಶುರು ಮಾಡುತ್ತವೆ. ಇನ್ನು ಈ ವಿಡಿಯೋ ಗೊಲ್ಡನ್ ರಿಟ್ರೈವರ್ ( Golden Retriever) ತಳಿಯ ಶ್ವಾನವಾದ ಫಿನ್ಲೇ ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ.
ಬೀದಿನಾಯಿಗೆ ಅನ್ನ ಹಾಕಿದ ವೃದ್ಧ... ಭಾವುಕ ವಿಡಿಯೋ ವೈರಲ್
ಈ ವಿಡಿಯೊದಲ್ಲಿ, ಈ ಸಾಕು ನಾಯಿ ಸ್ನಾನ ಮಾಡುವ ಪ್ರಕ್ರಿಯೆಯನ್ನು ಮುದ್ದಾಗಿ ವಿವರಿಸಲಾಗಿದೆ. ವಿಡಿಯೋದಲ್ಲಿ ನೋಡುಗರು ಶ್ವಾನ ಸ್ನಾನ ಮಾಡಲು ಟಬ್‌ಗೆ ಇಳಿಯುವುದನ್ನು ನೋಡಬಹುದು. ಜೊತೆಗೆ ಮಾಲೀಕ ಶ್ವಾನ ಮಾಡಿಸುವಾಗಿ ಈ ಶ್ವಾನ ತುಂಬಾ ತಾಳ್ಮೆಯಿಂದ ಸಹಕರಿಸುತ್ತಾನೆ. ಮೊದಲಿಗೆ ಶ್ವಾನವನ್ನು ಸಂಪೂರ್ಣ ಒದ್ದೆ ಮಾಡುವ ಮಾಲೀಕ ನಂತರ ಶ್ಯಾಂಪೂ ಹಾಕಿ ಶ್ವಾನಕ್ಕೆ ಬ್ರಶ್ ಮಾಡುತ್ತಾನೆ. ಇದಾದ ನಂತರ ಚೆನ್ನಾಗಿ ನೀರಿನಿಂದ ತೊಳೆದು ಸ್ನಾನ ಮಾಡಿಸುತ್ತಾನೆ. ಅಲ್ಲದೇ ಸ್ನಾನದ ನಂತರ ಆತನಿಗೆ ಟವೆಲ್‌ನಿಂದ ಅದರ ಮೈಯ ಒದ್ದೆಯನ್ನೆಲ್ಲಾ ವರೆಸಿ ಬ್ಲೋ ಡ್ರೈ ನೀಡುತ್ತಾನೆ. ಇಷ್ಟೆಲ್ಲಾ ಪ್ರಕ್ರಿಯೆ ಆಗುವವರೆಗೂ ಶ್ವಾನ ಬಹಳ ತಾಳ್ಮೆಯಿಂದ ಕೂಲಾಗಿ ನಿಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು.