
ವಾಶಿಂಗ್ಟನ್(ಜೂ.05): ಕೊರೋನಾ ವೈರಸ್ ಭೀಕರತೆಗೆ ತತ್ತರಿಸುತ್ತಿರುವ ವಿಶ್ವ ಇದೀಗ ವೈರಸ್ ಹುಟ್ಟಿನ ಕುರಿತು ತಿಳಿಯಲು ಬಯಸುತ್ತಿದೆ. ವೇಗವಾಗಿ ಓಡುತ್ತಿದ್ದ ವಿಶ್ವವನ್ನೇ ಒಂದು ವರ್ಷಕ್ಕೂ ಹೆಚ್ಚುಕಾಲ ಸ್ಥಗಿತಗೊಳಿಸಿ, ಅಮಾಯಕ ಜನರ ಸಾವಿಗೆ, ಆಹಾರದ ಕೊರತೆಗೆ, ಆದಾಯ ಕೊರತೆಗೆ ಸೇರಿದಂತೆ ಅಸಂಖ್ಯ ಸಮಸ್ಯೆಗಳಿಗೆ ಕಾರಣವಾದ ಕೊರೋನಾ ಹಿಂದೆ ಚೀನಾ ಕೈವಾಡ ಅನ್ನೋ ಮಾತುಗಳು ಬಲವಾಗತೊಡಗಿದೆ. ಇದೀಗ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹಗಾರ(NSA) ಬಹಿರಂಗ ಪಡಿಸಿದ ಕೆಲ ಮಾಹಿತಿಗಳು ಚೀನಾ ಮೇಲೆ ಬೆರಳು ತೋರಿಸುತ್ತಿದೆ.
ವುಹಾನ್ ಅನಾರೋಗ್ಯ ಸಿಬ್ಬಂದಿ ವೈದ್ಯಕೀಯ ದಾಖಲೆ ಕೇಳಿದ ಅಮೆರಿಕ; ಹೆಚ್ಚಾಯ್ತು ಚೀನಾ ಆತಂಕ!.
ಕೊರೋನಾ ವೈರಸ್ ಹುಟ್ಟಿನ ಕುರಿತು ನಡೆಯುತ್ತಿರುವ ಸಂಶೋಧನೆ, ಅಧ್ಯಯನ ಹಾಗೂ ತನಿಖೆಗೆ ಚೀನಾ ಇದುವರೆಗೆ ಸಂಪೂರ್ಣ ಸಹಕಾರ ನೀಡಿಲ್ಲ. ಅತ್ತ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಚೀನಾ ಮಾತು ಮೀರುತ್ತಿಲ್ಲ. ಅಧಿಕಾರಿಗಳು ಚೀನಾ ಕೈಗೊಂಬೆಗಳಾಗಿದ್ದಾರೆ ಎಂದು ಮಾಜಿ ಭದ್ರತಾ ಸಲಹಗಾರ ಜಾನ್ ಬಾಲ್ಟನ್ ಹೇಳಿದ್ದಾರೆ. ವುಹಾನ್ ಲ್ಯಾಬ್ ಮುಖ್ಯಸ್ಥೆ ಅನಾರೋಗ್ಯಕ್ಕೆ ತುತ್ತಾಗಿರುವ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದೆ. ಇವರ ವೈದ್ಯಕೀಯ ದಾಖಲೆ ಬಹಿರಂಗ ಪಡಿಸಿಲ್ಲ. ಇವೆಲ್ಲವೂ ಚೀನಾ ಕುತಂತ್ರವನ್ನು ಹೇಳುತ್ತಿದೆ ಎಂದು ಜಾನ್ ಹೇಳಿದ್ದಾೆ
ಟೈಮ್ಸ್ ನೌ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಜಾನ್ ಈ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಅಮೆರಿಕ ಹಲವು ಬಾರಿ ಚೀನಾ ಜೊತೆ ಮಿಲಿಟರಿ ಮಾತುಕತೆಗೆ ಮುಂದಾಗಿತ್ತು. ಆದರೆ ಪ್ರತಿ ಬಾರಿ ಚೀನಾ ಮಾತುಕತೆ ನಿರಾಕರಿಸುತ್ತಲೇ ಬಂದಿದೆ. ಚೀನಾ ಜೈವಿಕ ಶಸ್ತ್ರಾಸ್ತ್ರ ಪ್ರಯೋಗ ಮಾಡಿ ವಿಶ್ವವನ್ನೇ ತನ್ನ ಹಿಡಿತಕ್ಕೆ ತರುವ ಯತ್ನ ಮಾಡಿದೆ ಎಂದು ಜಾನ್ ಹೇಳಿದ್ದಾರೆ.
ಚೀನಾದಲ್ಲೇ ವೈರಸ್ ಸೃಷ್ಟಿ, ಸಿಕ್ತು ಹೊಸ ಸಾಕ್ಷ್ಯ: ತಜ್ಞರ ಸ್ಫೋಟಕ ವರದಿ!
ಕೊರೋನಾ ವೈರಸ್ ಮೂಲ ಪತ್ತೆ ದಾಖಲೆಗಳನ್ನು, ಪುರಾವೆಗಳನ್ನು ಮುಚ್ಚಿಹಾಕಲು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಚೀನಾಗೆ ನೆರವಾಗಿದ್ದಾರೆ. ಈ ದಾಖಲೆಗಳನ್ನು ಜೋ ಬೈಡನ್ ಸರ್ಕಾರ ಗಂಭೀರವಾಗಿ ಪರಿಗಣಿಸುವ ವಿಶ್ವಾಸವಿದೆ ಎಂದು ಜಾನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ