
ಲಂಡನ್(ಜೂ.05): ಭಾರತದಲ್ಲಿ ಕೋಟ್ಯಂತರ ಜನರಿಗೆ ಆವರಿಸಿಕೊಂಡು, ಲಕ್ಷಾಂತರ ಜನರನ್ನು ಬಲಿಪಡೆದ ರೂಪಾಂತರಿ ಡೆಲ್ಟಾಕೊರೋನಾ ವೈರಸ್, ಇದೀಗ ಬ್ರಿಟನ್‌ನಲ್ಲೂ ತನ್ನ ಹಾವಳಿ ಎಬ್ಬಿಸಿದೆ.
"
ಬ್ರಿಟನ್‌ನಲ್ಲಿ ಕಳೆದ ದಿನಗಳಿಂದ, ಡೆಲ್ಟಾವೈರಸ್‌ನಿಂದ ಸೋಂಕಿಗೆ ತುತ್ತಾದವರ ಪ್ರಮಾಣ ಹೆಚ್ಚುತ್ತಿದೆ. ಜೊತೆಗೆ ಇದುವರೆಗೆ ಆಲ್ಪಾ (ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿ ವೈರಸ್) ವೈರಸ್ ಅನ್ನು ವೇರಿಯಂಟ್ ಆಫ್ ಕನ್ಸರ್ನ್ (ಅಪಾಯದ ಪ್ರಮಾಣದ ಆಧರಿಸಿ ವೈರಸ್ ಅನ್ನು ವಿಂಗಡಿಸುವ ವಿಧಾನ) ಎಂದು ಪರಿಗಣಿಸಿದ್ದರೆ, ಇದೀಗ ಆ ಸ್ಥಾನವನ್ನು ಡೆಲ್ಟಾಆಕ್ರಮಿಸಿಕೊಂಡಿದೆ.
ಅಲ್ಲದೆ, ‘ಡೆಲ್ಟಾವೈರಸ್‌ನಿಂದ ಸೋಂಕಿಗೆ ತುತ್ತಾದವರು ಆಸ್ಪತ್ರೆಗೆ ದಾಖಲಾಗಬೇಕಾಗಿರುವ ಬರುವ ಸಾಧ್ಯತೆಯೂ ಅಧಿಕ ಎಂದು ಕಂಡುಬರುತ್ತಿದೆ. ಈ ವಿಷಯದಲ್ಲಿ ಇನ್ನಷ್ಟುಅಧ್ಯಯನದ ಅವಶ್ಯಕತೆ ಇದೆಯಾದರೂ, ನಾವು ಸೋಂಕಿನಿಂದ ರಕ್ಷಿಸಿಕೊಳ್ಳಲು ಹೆಚ್ಚಿನ ಮುಂಜಾಗ್ರತೆ ವಹಿಸಬೇಕಾಗಿದೆ’ ಎಂದು ಬ್ರಿಟನ್‌ನ ಆರೋಗ್ಯ ಇಲಾಖೆ ಎಚ್ಚರಿಸಿದೆ.
‘ಡೆಲ್ಟಾಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಒಂದು ವಾರದಲ್ಲಿ 5,472ರಿಂದ 12,431ಕ್ಕೆ ಏರಿಕೆಯಾಗಿದೆ’ ಎಂದು ಬ್ರಿಟನ್ ಆರೋಗ್ಯ ಇಲಾಖೆ ಹೇಳಿದೆ. ಇನ್ನು ಡೆಲ್ಟಾದಿಂದ ಗಂಭೀರ ಸೋಂಕಿತರಾದ 201 ಜನರು ಹಿಂದಿನ ವಾರ ಆಸ್ಪತ್ರೆಗೆ ದಾಖಲಾಗಿದ್ದರೆ ಈ ವಾರ ಅಂಥವರ ಪ್ರಮಾಣ 278ಕ್ಕೆ ಏರಿದೆ.
‘ಈ ಪೈಕಿ ಬಹುತೇಕ ಜನರು ಇನ್ನೂ ಲಸಿಕೆ ಪಡೆಯದವರು ಎಂಬುದು ಗಮನಾರ್ಹ ವಿಷಯ. ಎರಡು ಡೋಸ್ ಲಸಿಕೆ ಪಡೆದವರು, ಡೆಲ್ಟಾದಿಂದ ಬಚಾವ್ ಆಗುವ ಸಾಧ್ಯತೆ ಅಧಿಕ ಎಂದು ಈ ಹಿಂದಿನ ಅಧ್ಯಯನ ವರದಿಗಳು ಹೇಳಿವೆ. ಹೀಗಾಗಿ ಜನರು ಆದಷ್ಟುಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯಲು ಮುಂದೆ ಬರಬೇಕು’ ಎಂದು ಆರೋಗ್ಯ ಇಲಾಖೆ ಕರೆ ಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ