ಭಾರತೀಯಳಲ್ಲದಿದ್ದರೂ ಹಿಂದೂ! ಅಮೆರಿಕದ ಗುಪ್ತಚರ ವಿಭಾಗಕ್ಕೆ ನೇಮಕಗೊಂಡ ತುಳಸಿ ಹಿನ್ನೆಲೆಯೇ ಕುತೂಹಲ

By Suchethana D  |  First Published Nov 14, 2024, 10:42 PM IST

ಅಮೆರಿಕದ ಗುಪ್ತಚರ ವಿಭಾಗಕ್ಕೆ ನೇಮಕಗೊಂಡ ತುಳಸಿ ಗಬ್ಬಾರ್ಡ್ ಹಿನ್ನೆಲೆಯೇ ರೋಚಕ.  ಭಾರತಕ್ಕೆ ಸಂಬಂಧವೇ ಇಲ್ಲದ ಹಿಂದೂ ಈಕೆ. ಇವರ ಕುತೂಹಲದ ಮಾಹಿತಿ ಇಲ್ಲಿದೆ... 
 


ತುಳಸಿ ಗಬ್ಬಾರ್ಡ್ ... ಸದ್ಯ ಭಾರತ ಮತ್ತು ಅಮೆರಿಕದ ಸೋಷಿಯಲ್​ ಮೀಡಿಯಾಗಳಲ್ಲಿ ಇವರದ್ದೇ ಹವಾ. ಅಮೆರಿಕದ ರಾಷ್ಟ್ರೀಯ ಗುಪ್ತಚರ (National Intelligence) ವಿಭಾಗದ ನಿರ್ದೇಶಕಿಯಾಗಿ ಇವರು ಆಯ್ಕೆಯಾಗಿದ್ದಾರೆ. ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುಳಸಿ ಅವರನ್ನು ನೇಮಿಸಿದ್ದಾರೆ. ತುಳಸಿ ಎನ್ನುವ ಹೆಸರು ಅಮೆರಿಕದಲ್ಲಿ ಹುಟ್ಟಿದವರಿಗೆ ಇರಲು ಸಾಧ್ಯವೇ ಇಲ್ಲ ಬಿಡಿ. ಇದು  ಅಪ್ಪಟ ಹಿಂದೂ ಹೆಸರು. ಆದರೆ, ಕುತೂಹಲದ ವಿಷಯ ಏನಪ್ಪಾ ಎಂದರೆ ಈ ತುಳಸಿ  ಭಾರತೀಯಳಲ್ಲ. ಹಾಗೆಂದು ಭಾರತದ ಸಂಬಂಧವೂ ಇಲ್ಲ! ಆದರೂ ಹೆಸರು ತುಳಸಿ... ಏಕೆಂದರೆ ಈಕೆ ಹಿಂದೂ!  ಅಮೆರಿಕದ ಮೊದಲ ಹಿಂದೂ ಸಂಸದೆಯಾಗಿದ್ದು ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದರು. 2022 ರಲ್ಲಿ ರಿಪಬ್ಲಿಕನ್‌ ಪಕ್ಷ ಸೇರಿದ ಇವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.

ಹಾಗಿದ್ದರೆ ತುಳಸಿಗೂ ಹಿಂದೂ ಧರ್ಮಕ್ಕೂ ಏನು ಸಂಬಂಧ ಎನ್ನುವುದನ್ನು ನೋಡುವುದಾದರೆ, ಇದರ ಮೂಲ ಕಾರಣ ಅವರ ತಾಯಿ. ಹಾಗೆಂದು ತಾಯಿ ಹಿಂದೂವಲ್ಲ. ಆದರೆ ಹಿಂದೂ ಸಂಸ್ಕೃತಿಯನ್ನು ಅಪಾರವಾಗಿ ಮೆಚ್ಚಿಕೊಂಡವರು. ಹಿಂದೂ ಆಚರಣೆಗಳಿಗೆ ಮನಸೋತ ತಾಯಿ, ಅಮೆರಿಕದಲ್ಲಿಯೇ ಹಿಂದೂವಾಗಿ ಮತಾಂತರಗೊಂಡುಬಿಟ್ಟರು. ಅಷ್ಟೇ ಅಲ್ಲದೇ, ತಮ್ಮೆಲ್ಲಾ ಮಕ್ಕಳಿಗೂ ಹಿಂದೂ ಹೆಸರನ್ನೇ ಇಟ್ಟರು. ಮನೆಯಲ್ಲಿ ಹಿಂದೂ ಧರ್ಮವನ್ನೇ ಪಾಲಿಸತೊಡಗಿದರು. ಇದು ಮಕ್ಕಳ ಮೇಲೂ ಗಾಢ ಪರಿಣಾಮ ಬೀರಿತು. ಭಾರತದ ಬೇರು ಅಲ್ಲದಿದ್ದರೂ ಹಿಂದೂ ಧರ್ಮವನ್ನು ಪಾಲಿಸುತ್ತಿದೆ ಈ ಕುಟುಂಬ. ಈ ಹಿನ್ನೆಲೆಯಲ್ಲಿ,  ತುಳಸಿ ಗಬ್ಬಾರ್ಡ್ ಅವರು ಹಿಂದೂ ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಮೊದಲ ಹಿಂದೂ ಯುಎಸ್ ಕಾಂಗ್ರೆಸ್ ಮಹಿಳೆಯಾಗಿದ್ದರು. ಅವಳು ಅಮೇರಿಕನ್ ಸಮೋವಾ ಮೂಲದವರಾಗಿದ್ದರೂ, ತುಳಸಿ ಭಗವದ್ಗೀತೆಯ ಮೇಲೆ ತನ್ನ ಕೈಯಿಂದ ಅಧಿಕಾರಕ್ಕೆ ಪ್ರಮಾಣವಚನ ಸ್ವೀಕರಿಸಿದರು. 

Tap to resize

Latest Videos

undefined

ದಿನವೊಂದಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ: ಬಾಹ್ಯಾಕಾಶದ ಕೌತುಕ ತೆರೆದಿಟ್ಟ ಸುನಿತಾ ವಿಲಿಯಮ್ಸ್​
 

ಅಂದಹಾಗೆ ತುಳಸಿ ಅವರು,  ನಾಲ್ಕು ಬಾರಿ ಸಂಸದರಾಗಿದ್ದಾರೆ. 2020ರಲ್ಲಿ ಅಧ್ಯಕ್ಷೀಯ ಆಕಾಂಕ್ಷಿಯೂ ಆಗಿದ್ದರು. ಅವರು ಇತ್ತೀಚೆಗೆ ಡೆಮಾಕ್ರಟಿಕ್ ಪಕ್ಷವನ್ನು ತೊರೆದು ರಿಪಬ್ಲಿಕನ್ ಪಕ್ಷಕ್ಕೆ ಸೇರಿದರು. ಇವರ ಹಿನ್ನೆಲೆಯೂ ಕುತೂಹಲವಾಗಿದೆ. ಇವರು ಭಾರತೀಯರಲ್ಲದಿದ್ದರೂ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸುತ್ತಲೇ ಬಂದಿದ್ದಾರೆ. 2021 ರಲ್ಲಿ,  ಬಾಂಗ್ಲಾದೇಶದಲ್ಲಿನ  ಹಿಂದೂ ಅಲ್ಪಸಂಖ್ಯಾತರ ರಕ್ಷಣೆಗಾಗಿ ಯುಎಸ್ ಕಾಂಗ್ರೆಸ್‌ನಲ್ಲಿ ನಿರ್ಣಯವನ್ನು ಮಂಡಿಸಿದ್ದವರು ಇದೇ ತುಳಸಿ. 50 ವರ್ಷಗಳ ಹಿಂದೆ ಪಾಕಿಸ್ತಾನಿ ಸೇನೆಯು ಬಾಂಗ್ಲಾದೇಶದಲ್ಲಿರುವ ಸಾವಿರಾರು ಬಂಗಾಳಿ ಹಿಂದೂಗಳ ಮೇಲೆ ಎಸಗಿದ್ದ ದೌರ್ಜನ್ಯದ ಕುರಿತು  ಅವರು ತಮ್ಮ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದರು. ಪಾಕಿಸ್ತಾನದ ಭೂಮಿಯನ್ನು ಭಯೋತ್ಪಾದಕರು ಬಳಸುತ್ತಿರುವ ವಿಚಾರಗಳನ್ನೂ ಅವರು ಪ್ರಸ್ತಾಪಿಸಿದ್ದರು.

 ಇನ್ನು ಇವರು ನೇಮಕಗೊಂಡಿರುವ ಗುಪ್ತಚರ ಇಲಾಖೆ ಕುರಿತು ಹೇಳುವುದಾದರೆ, ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 2001ರ ಸೆಪ್ಟೆಂಬರ್ 11 ರಂದು ದಾಳಿ ನಡೆದಿತ್ತು. ಆ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ವೈಫಲ್ಯಗಳನ್ನು ತಡೆಯಲು ಸಹಾಯ ಮಾಡಲು ರಾಷ್ಟ್ರೀಯ ಗುಪ್ತಚರ ವಿಭಾಗವನ್ನು 2004 ರಲ್ಲಿ ರಚಿಸಲಾಯಿತು. ವಿದೇಶಿ ಚುನಾವಣಾ ಹಸ್ತಕ್ಷೇಪ, ಸೈಬರ್ ಸಮಸ್ಯೆಗಳು, ಭಯೋತ್ಪಾದನೆ ಮತ್ತು ಬೇಹುಗಾರಿಕೆಯಂತಹ ಬೆದರಿಕೆಗಳ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡುತ್ತದೆ. ಇದಕ್ಕೆ ಈಗ ಮೊದಲ ಹಿಂದೂ ಮಹಿಳೆ ನಿರ್ದೇಶಕಿಯಾಗಿದ್ದಾರೆ. 
 

ತಂದೆ ಕ್ರೈಸ್ತ, ತಾಯಿ ಸಿಖ್​, ಅಣ್ಣ ಮುಸ್ಲಿಂ, ಪತ್ನಿ ಹಿಂದೂ... ನಟ ವಿಕ್ರಾಂತ್​ ಮೆಸ್ಸಿ ಫ್ಯಾಮಿಲಿ ಕಥೆ ಕೇಳಿ...

click me!