ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ರ ಖಡ್ಗವೊಂದು ಹರಾಜಾಗಿದೆ. 1799ರ ಶ್ರೀರಂಗಪಟ್ಟಣ ಕದನದಲ್ಲಿ ಟಿಪ್ಪು ಈ ಖಡ್ಗ ಬಳಸಿದ್ದರೆಂದು ಹೇಳಲಾಗಿದೆ. ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್‌ಗೆ ಈ ಖಡ್ಗವನ್ನು ಉಡುಗೊರೆಯಾಗಿ ನೀಡಲಾಗಿತ್ತು.
ಲಂಡನ್: 18ನೇ ಶತಮಾನದಲ್ಲಿ ಮೈಸೂರು ಆಳಿದ್ದ ಟಿಪ್ಪು ಸುಲ್ತಾನ್‌ಗೆ ಸೇರಿದ ಖಡ್ಗವೊಂದು ಲಂಡನ್‌ನಲ್ಲಿ 3.4 ಕೋಟಿ ರು.ಗೆ ಹರಾಜಾಗಿದೆ ಎಂದು ಮಂಗಳವಾರ ಬೋನ್‌ಹ್ಯಾಮ್ ಹರಾಜು ಸಂಸ್ಥೆ ಪ್ರಕಟಿಸಿದೆ. ಟಿಪ್ಪು ಕದನದಲ್ಲಿ ಸೋತ ನಂತರ ಆತನ ಖಡ್ಗವನ್ನು ಆಗಿನ ಬ್ರಿಟಿಷ್ ಸೇನೆಯ ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಎಂಬಾತನಿಗೆ ಅಧಿಕಾರಿಗಳು ಉಡುಗೊರೆಯಾಗಿ ನೀಡಿದ್ದರು. ಡಿಕ್ ಅವರ ವಂಶಸ್ಥರು ಈ ಖಡ್ಗವನ್ನು ಹರಾಜಿಗಿಟ್ಟಿದ್ದರು. 1799ರಲ್ಲಿ ನಡೆದ ಶ್ರೀರಂಗಪಟ್ಟಣ ಕದನದಲ್ಲಿ ಟಿಪ್ಪು ಸುಲ್ತಾನ್ ಈ ಖಡ್ಗವನ್ನು ಬಳಸಿದ್ದನು ಎಂಬ ಉಲ್ಲೇಖವಿದೆ. ಈ ಖಡ್ಗವು ಉಕ್ಕಿನಿಂದ ತಯಾರಿಸಲಾಗಿದ್ದು, ಅರೆಬಿಕ್ ಭಾಷೆಯಲ್ಲಿ ‘ಹಾ’ ಎನ್ನುವ ಅಕ್ಷರನ್ನು ಚಿನ್ನದಿಂದ ಬರೆಸಲಾಗಿದೆ. ಈ ಅಕ್ಷರ ಹೈದರಾಲಿಯನ್ನು ಉಲ್ಲೇಖಿಸುತ್ತದೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.
2023ರಲ್ಲಿಯೂ ಮಾರಾಟವಾಗಿತ್ತು ಟಿಪ್ಪು ಖಡ್ಗ
ಈ ಹಿಂದೆ ಉದ್ಯಮಿ ವಿಜಯ ಮಲ್ಯ ವಶದಲ್ಲಿದ್ದ 18ನೇ ಶತಮಾನದಲ್ಲಿ ಮೈಸೂರು ಸಂಸ್ಥಾನ ಆಳಿತ ರಾಜ ಟಿಪ್ಪು ಸುಲ್ತಾನ್‌ಗೆ ಸೇರಿದ ಖಾಸಗಿ ಖಡ್ಗ 2023ರಲ್ಲಿ 140 ಕೋಟಿ ರು.ಗೆ ಹರಾಜಾಗಿತ್ತು. ‘ಲಂಡನ್‌ನಲ್ಲಿ ಇದನ್ನು ಹರಾಜು ಮಾಡಲಾಗಿದ್ದು, ಬರೋಬ್ಬರಿ 140 ಕೋಟಿ ರು.ಗೆ ಮಾರಾಟವಾಗಿತ್ತು. ಇದು ಟಿಪ್ಪುವಿನ ಖಾಸಗಿ ಆಯುಧವಾಗಿತ್ತು’ ಎಂದು ಹರಾಜುದಾರರು ಹೇಳಿದ್ದಾರೆ.
ಇದನ್ನೂ ಓದಿ: ಕಣ್ಣೀರಿನ ಜೊತೆಯಲ್ಲೇ ಮತದಾರರಿಂದ ಮತದಾನ; ಭಾವನಾತ್ಮಕ ಸನ್ನಿವೇಶಗಳಿಗೆ ವೇದಿಕೆಯಾದ ಮತಕ್ಷೇತ್ರ
ಟಿಪ್ಪು ಮರಣದ ನಂತರ ಈ ಖಡ್ಗವನ್ನು ಟಿಪ್ಪುವಿನ ಅರಮನೆಯ ಖಾಸಗಿ ಕೋಣೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಇದನ್ನು ಬ್ರಿಟಿಷ್ ಮೇಜರ್ ಜನರಲ್ ಡೇವಿಡ್ ಬೈಯಾರ್ಡ್ ಅವರಿಗೆ ಉಡುಗೊರೆಯಗಿ ನೀಡಲಾಗಿತ್ತು. ಈ ಖಡ್ಗ ನೋಡಲು ವಿಶಿಷ್ಟವಾಗಿದ್ದು, ಕುಸುರಿ ಚಿತ್ರಣವನ್ನು ಹೊಂದಿದೆ. ಹಾಗಾಗಿ ಈ ಖಡ್ಗಕ್ಕೆ ಭಾರಿ ಬೇಡಿಕೆ ಉಂಟಾಗಿದೆ ಎಂದು ಹರಾಜು ಹಾಕಿದ ಕಂಪನಿ ಬೋನ್ಹಮಾಸ್ ಹೇಳಿಕೆ ಬಿಡುಗಡೆಯಾಗಿತ್ತು.
ವಿಜಯ್ ಮಲ್ಯ ಖರೀದಿಸಿದ್ದ ಖಡ್ಗ
‘ವಿಶೇಷವೆಂದರೆ ಈ ಖಡ್ಗವನ್ನು 2004ರಲ್ಲಿ ವಿಜಯ ಮಲ್ಯ 1.5 ಕೋಟಿ ರು.ಗೆ ಕೊಂಡುಕೊಂಡಿದ್ದರು. ಆದರೆ ಅವರು ದೇಶಭ್ರಷ್ಟರಾಗಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಕಾರಣ ಕೋರ್ಟಿಗೆ ಹಾಜರಾದಾಗ, ‘ಈ ಖಡ್ಗ ಎಲ್ಲಿದೆಯೋ ಗೊತ್ತಿಲ್ಲ’ ಎಂದಿದ್ದರು. ಈಗ ಅದೇ ಖಡ್ಗ 140 ಕೋಟಿ ರು.ಗೆ ಹರಾಜಾಗಿದೆ’ ಎಂದು ಇತಿಹಾಸ ಸಂಶೋಧಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಕೋಚಿಂಗ್ ಸೆಂಟರ್‌ಗಳಿಗೆ ಕೇಂದ್ರ ಸರ್ಕಾರದಿಂದ ಮೂಗುದಾರ; ಇನ್ಮುಂದೆ ಈ ರೂಲ್ಸ್ ಪಾಲಿಸಲೇಬೇಕು