ಅಮೆರಿಕದಲ್ಲಿ ಶವವಾಗಿ ಪತ್ತೆಯಾದ ಈ ಭಾರತೀಯ ಸುಂದರಿ ಯಾರು?

Published : May 19, 2023, 09:17 AM ISTUpdated : May 19, 2023, 09:41 AM IST
ಅಮೆರಿಕದಲ್ಲಿ ಶವವಾಗಿ ಪತ್ತೆಯಾದ ಈ ಭಾರತೀಯ ಸುಂದರಿ ಯಾರು?

ಸಾರಾಂಶ

ಅಮೆರಿಕಾದ ಟೆಕ್ಸಾಸ್‌ನಿಂದ ಕಾಣೆಯಾಗಿದ್ದ ಭಾರತೀಯ ಮೂಲದ ಟೆಕ್ಕಿ ಲಹರಿ ಪಥಿವಾಡಾ (Lahari Pathivada) ಶವವಾಗಿ ಪತ್ತೆಯಾಗಿದ್ದಾರೆ. ಮೇ.13 ರಂದು ಅವರ ಶವ ಸಮೀಪದ ಒಕ್ಲಹೋಮ್ ರಾಜ್ಯದಲ್ಲಿ ಟೆಕ್ಸಾಸ್‌ನಿಂದ ಸುಮಾರು 322 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ.

ನ್ಯೂಯಾರ್ಕ್‌: ಅಮೆರಿಕಾದ ಟೆಕ್ಸಾಸ್‌ನಿಂದ ಕಾಣೆಯಾಗಿದ್ದ ಭಾರತೀಯ ಮೂಲದ ಟೆಕ್ಕಿ ಲಹರಿ ಪಥಿವಾಡಾ (Lahari Pathivada) ಶವವಾಗಿ ಪತ್ತೆಯಾಗಿದ್ದಾರೆ. ಮೇ.13 ರಂದು ಅವರ ಶವ ಸಮೀಪದ ಒಕ್ಲಹೋಮ್ ರಾಜ್ಯದಲ್ಲಿ ಟೆಕ್ಸಾಸ್‌ನಿಂದ ಸುಮಾರು 322 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮೇ 13 ರದು ಲಹರಿ ಶವ ಪತ್ತೆಯಾಗಿದ್ದು, ಅವರು ಕೊನೆಯ ಬಾರಿ ಕಪ್ಪು ಟೊಯೋಟಾ ಗಾಡಿಯನ್ನು ಚಲಾಯಿಸಿಕೊಂಡು ಮೆಕಿನ್ನಿ ಉಪನಗರದಲ್ಲಿ ಕಾಣಿಸಿಕೊಂಡಿದ್ದರು. 

ಈ   ವಿಚಾರವನ್ನು ಟೆಕ್ಸಾಸ್‌ನ WOW ಗುಂಪು ಖಚಿತಪಡಿಸಿದ್ದು, ಈ WOW ಗುಂಪು ಆಕೆ ನಾಪತ್ತೆಯಾಗಿರುವ ವಿಚಾರವನ್ನು ಕೂಡ ಎಲ್ಲೆಡೆ ತಿಳಿಸಿತ್ತು. ಟೆಕ್ಸಾಸ್‌ನ (Texas) ಕಾಲಿನ್ಸ್ ಕೌಂಟಿಯ ಮೆಕಿನ್ನಿ (McKinney) ನಿವಾಸಿಯೊಬ್ಬರು ಲಹರಿ ಪತಿವಾಡ ಅವರನ್ನು ಕೊನೆಯದಾಗಿ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ನೋಡಿದ್ದರು. ಆದರೆ ಮೇ 12 ರಂದು ಕೆಲಸ ಮುಗಿಸಿ ಆಕೆ ಮನೆಗೆ ವಾಪಸ್ ಬಂದಿಲ್ಲ ಇದರಿಂದ ಅವರ ಕುಟುಂಬದವರು ಚಿಂತೆಗೀಡಾಗಿದ್ದರು.  ನಂತರ ಆಕೆಯ ಫೋನ್‌ ಟ್ರ್ಯಾಕ್ ಮಾಡಿದ ಪೊಲೀಸರು ಒಕ್ಲಹೋಮಾದಲ್ಲಿ ಅವರ ಫೋನ್ ಇರುವ ಬಗ್ಗೆ ತಿಳಿಸಿದ್ದರು.

.ಸ್ಟಾರ್‌ಬಕ್ಸ್‌ ಮುಂದೆ ಕೆನಡಾ ಪ್ರಜೆಯನ್ನು ಚಾಕುವಿನಿಂದ ಇರಿದು ಕೊಂದ ಭಾರತೀಯ

ಕಾನ್ಸಾಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಆಕೆ  ಬ್ಲೂ ವ್ಯಾಲಿ ವೆಸ್ಟ್‌ನಲ್ಲಿ ಹೈಸ್ಕೂಲ್ ಪೂರೈಸಿದ್ದರು. ನಂತರ ಓವರ್‌ಲ್ಯಾಂಡ್ ಪಾರ್ಕ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಈಕೆಯ ನಿಗೂಢ ಕಣ್ಮರೆ ಹಾಗೂ ಸಾವಿನಿಂದ ಆಕೆಯ ಕುಟುಂಬ ಕಂಗೆಟ್ಟಿದೆ. ಲಹಿರಿ ಶವ ಪತ್ತೆಯಾಗುವ ಮೊದಲು ನಾಪತ್ತೆಯ ಬಗ್ಗೆ ತನಿಖೆ ನಡೆಸಲು ಓಕ್ಲಹೋಮಾ ಸೇರಿದಂತೆ ಇತರ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಮೆಕಿನ್ನೆ ಪೊಲೀಸರು ತಿಳಿಸಿದ್ದರು.  ನಾಪತ್ತೆಯಾದ ಮಹಿಳೆಯ ಸಾವಿಗೇನು ಕಾರಣ ಎಂಬ ಬಗ್ಗೆ ಅಧಿಕಾರಿಗಳು ಇನ್ನೂ ಮಾಹಿತಿಯನ್ನು ಬಿಡುಗಡೆ ಮಾಡದ ಕಾರಣ ಲಹರಿ ಪತಿವಾಡ ನಾಪತ್ತೆಗೆ ಕಾರಣವಿನ್ನೂ ನಿಗೂಢವಾಗಿದೆ. 

ಅಮೆರಿಕಾದ ಗುರುದ್ವಾರದಲ್ಲಿ ಗುಂಡಿನ ದಾಳಿ: NRI ಸೇರಿ ಇಬ್ಬರಿಗೆ ಗಾಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ